ಗೂಗಲ್‌ನ ವಿಡಿಯೋ ಕಾಲ್ ಮತ್ತು ಆನ್‌ಲೈನ್ ಕಾನ್ಫರೆನ್ಸಿಂಗ್ ವೇದಿಕೆಗಳಾದ ಕ್ರಮವಾಗಿ ಗೂಗಲ್ ಡ್ಯೂಯೋ, ಮೀಟ್‌ಗಳನ್ನು ಬಳಕೆದಾರರು ಗರಿಷ್ಠ ಪ್ರಮಾಣದಲ್ಲಿ ಬಳಸಿದ್ದಾರೆ. ಪರಿಣಾಮ, ಈ ವರ್ಷ ಗೂಗಲ್‌ನಲ್ಲಿ ಒಂದು ಲಕ್ಷ ಕೋಟಿ ನಿಮಿಷಗಳಷ್ಟು ವಿಡಿಯೋ ಕರೆಗಳು ದಾಖಲಾಗಿದ್ದು, ಇದೊಂದು ದಾಖಲೆಯಾಗಿದೆ.
ಕೊರೋನಾ ಸೋಂಕು ಹರಡುವುದನ್ನು ತಪ್ಪಿಸಲು ಜಗತ್ತಿನಾದ್ಯಂತ ಎಲ್ಲ ಸರಕಾರಗಳು ತಮ್ಮ ತಮ್ಮ ರಾಷ್ಟ್ರಗಳಲ್ಲಿ ತಿಂಗಳುಗಟ್ಟಲೇ ಲಾಕ್‌ಡೌನ್ ವಿಧಿಸಿದವು. ಪರಿಣಾಮ ಬಹಳಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಮಾಡಲು ಹೇಳಿದವು. ಆಗ ನಿತ್ಯದ ಕಮ್ಯುನಿಕೇಷನ್ ನೆರವಾಗಿದ್ದೇ ಈ ‘ವಿಡಿಯೋ ಕಾಲ್‌ಗಳು’. ವಿಡಿಯೋ ಕಾಲ್‌ಗಳಿಂದಾಗಿ ಕಂಪನಿಗಳು ತಮ್ಮ ಎಂದಿನ ಕಾರ್ಯನಿರ್ವಹಣೆಯನ್ನು ರಿಯಲ್‌ಟೈಮ್‌ನಲ್ಲಿ ಮಾಡಲು ಸಾಧ್ಯವಾಯಿತು. ಜೊತೆಗ ಮೀಟಿಂಗ್‌ಗಳು, ಚರ್ಚೆಗಳಿಗೆ ಈ ಆನ್‌ಲೈನ್ ವಿಡಿಯೋ ಕಾಲಿಂಗ್, ಕಾನ್ಫ್‌ರೆನ್ಸಿಂಗ್ ಡಿಜಿಟಲ್ ವೇದಿಕೆಗಳು ಬೇಕಾದವು. ಹಾಗಾಗಿ, 2020 ವರ್ಷ ಪೂರ್ತಿ ವಿಡಿಯೋ ಕಾಲಿಂಗ್‌ನಲ್ಲಿ ಕಳೆದು ಹೋಯಿತು ಎಂದು ಹೇಳಬಹುದು.
ಇದಕ್ಕೆ ಸಾಕ್ಷಿಯಾಗಿ ಗೂಗಲ್ ಡೇಟಾ ಬಿಡುಗಡೆ ಮಾಡಿದ್ದು, ಅದು ನಿಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತದೆ. 2020 ಇಸ್ವಿಯಲ್ಲಿ ಜಾಗತಿಕವಾಗಿ ಗೂಗಲ್‌ನಲ್ಲಿ ಒಟ್ಟು ಒಂದು ಲಕ್ಷ ಕೋಟಿ ನಿಮಿಷಗಳಷ್ಟು ವಿಡಿಯೋ ಕಾಲ್‌ಗಳು ದಾಖಲಾಗಿವಯಂತೆ! ಹೌದು ಈ ಸುದ್ದಿ ನಂಬಲು ಕಷ್ಟವಾದರೂ ನಿಜ. ಒಂದು ಲಕ್ಷ ಕೋಟಿ ನಿಮಿಷಗಳು ಎಂದರೆ, 1800 ಕೋಟಿ ಗಂಟೆಗಳಿಗೂ ಹೆಚ್ಚು! ಗೂಗಲ್‌ನ ವಿಡಿಯೋ ಕಾಲಿಂಗ್ ವೇದಿಕೆಗಳಾದ ಗೂಗಲ್ ಡ್ಯೂಯೋ ಮತ್ತು ಗೂಗಲ್ ಮೀಟ್ ಆಪ್‌ಗಳು ಇಷ್ಟೊಂದು ಪ್ರಮಾಣದ ವಿಡಿಯೋ ಕಾಲ್‌ಗಳಿಗೆ ಆತಿಥ್ಯವಹಿಸಿವೆ ಎಂದು ಗೂಗಲ್ ಹೇಳಿದೆ.
undefined
Realme Watch S ಮತ್ತು Watch S Pro ಬಿಡುಗಡೆ, ಮಾರಾಟ ಶುರು
ಬಳಕೆದಾರರ ಜಿಮೇಲ್ ಖಾತೆಯಿಂದ ಮೀಟ್ ಕರೆಗಳು ಮಾರ್ಚ್ 31, 2021ರವರೆಗೆ ಅನಿಯಂತ್ರಿತವಾಗಿವೆ. ಹಾಗಾಗಿ, ಯಾವುದೇ ಅಡ್ಡಿಗಳಿಲ್ಲದೇ ಕುಟುಂಬ ಸದಸ್ಯರು ತಮ್ಮ ರಜಾದಿನಗಳನ್ನು ಸಂಪ್ರದಾಯಗಳೊಂದಿಗೆ ಕಳೆಯಬಹುದು ಎಂದು ಗೂಗಲ್ ಹೇಳಿದೆ. 2020ರಲ್ಲಿ ಗೂಗಲ್ ತನ್ನ ಜಿಮೇಲ್‌ನಲ್ಲಿ ಮೀಟ್ ಟ್ಯಾಬ್ ಸೇರಿಸಿತ್ತು. ಕೇವಲ ಒಂದು ಟ್ಯಾಪ್ ಮೂಲಕ ಬಳೆಕದಾರರು ಜಿಮೇಲ್‌ನಿಂದ ವಿಡಿಯೋ ಕಾಲ್‌ಗೆ ಜಾಯಿನ್ ಆಗುವ ಸೌಲಭ್ಯವನ್ನು ಗೂಗಲ್ ಒದಗಿಸಿತ್ತು. ಇದರಿಂದಾಗಿ ಬಳಕೆದಾರರಿಗೆ ಬಹಳಷ್ಟು ಅನುಕೂಲವಾಯಿತು. ವಿಶೇಷವಾಗಿ ಮನೆಯಿಂದ ಕೆಲಸ ಮಾಡೋರಿಗೆ ಹೆಚ್ಚಿನ ಲಾಭವಾಯಿತು ಎಂದು ಹೇಳಬಹುದು.
ನೆಸ್ಟ್ ಹಬ್ ಮ್ಯಾಕ್ ಮತ್ತು ಕ್ರೋಮ್‌ಕಾಸ್ಟ್‌ಗಳಿಗೂ ನಾವು ಗೂಗಲ್ ಮೀಟ್ ಸೇವೆಯನ್ನು ವಿಸ್ತರಿಸಿದ್ದೇವೆ. ಇದರಿಂದ ಜನರಿಗೆ ಸಹಾಯವಾಗಿದೆ. ಮನೆಯಲ್ಲೇ ಯಾವುದೇ ತಾಪತ್ರಯಗಳಿದಲ್ಲೇ ಜನರು ವಿಡಿಯೋ ಕಾಲ್ ಮಾಡಲು ಇದು ನೆರವು ಒದಗಿಸಿದೆ ಎಂದು ಗೂಗಲ್ ಡ್ಯುಯೋ ಮತ್ತು ಗೂಗಲ್ ಮೀಟ್‌ನ ಪ್ರಾಡಕ್ಟ್ ಮ್ಯಾನೇಜರ್ ಡೈರೆಕ್ಟರ್ ಡೇವ್ ಸಿಟ್ರಾನ್ ಅವರು ಹೇಳಿದ್ದಾರೆ.
ಗೂಗಲ್ ಮೀಟ್ ಮತ್ತು ಗೂಗಲ್ ಡ್ಯುಯೋ ವೇದಿಕೆಗಳನ್ನು ಖಾಸಗಿ ಮತ್ತು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿ ಸಿದ್ಧಪಡಿಸಲಾಗಿದೆ. ನಿಮ್ಮ ಕರೆಗಳು, ಮೀಟಿಂಗ್‌ಗಳು ಮತ್ತು ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿಡುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬಿಬಿಸಿ ಪ್ರಕಾರ, ಗೂಗಲ್ ಅಪ್ಲಿಕೇಶನ್ ಪ್ರತಿದಿನ 10 ಕೋಟಿ ಬಳಕೆದಾರರನ್ನು ದಾಟಿದೆ ಮತ್ತು ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಅದರ ದೈನಂದಿನ ಬಳಕೆದಾರರ ಸಂಖ್ಯೆ 23.5 ಕೋಟಿ ಗರಿಷ್ಠ ಮಟ್ಟವನ್ನು ತಲುಪಿದೆ.
8 ತಿಂಗಳ ಬಳಿಕ ಪ್ಲೇ ಸ್ಟೋರ್‌ನಲ್ಲಿ WHO Covid-19 Updates ಆ್ಯಪ್!
ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೋವಿಡ್-19 ಸೋಂಕು ತನ್ನ ಉತ್ತುಂಗಕ್ಕೆ ತಲುಪಿದ ಅವಧಿಯಲ್ಲಿ ಟೆಲಿಕಾನ್ಫೆರನ್ಸಿಂಗ್ ಸೇವೆಗೆ ಪ್ರತಿದಿನ 30 ಲಕ್ಷ ಹೊಸ ಬಳಕೆದಾರರು ಸೇರುತ್ತಾ ಬಂದರು. ಜನವರಿಯಿಂದ ಇಲ್ಲಿವರೆಗೆ ಕಂಪನಿ 30ಕ್ಕೂ ಅಧಿಕಪಟ್ಟು ಬಳಕೆಯನ್ನು ಕಂಡಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚ್ಚೈ ಇತ್ತೀಚೆಗಷ್ಟೇ ಹೇಳಿದ್ದರು.
ಝೂಮ್‌ನಿಂದ ಇ ಮೇಲ್ ಸೇವೆ?
ಅಮೆರಿಕ ಮೂಲದ ಝೂಮ್, ಇಮೇಲ್ ಸೇವೆ ಆರಂಭಿಸುವ ಮೂಲಕ ಗೂಗಲ್ ಮತ್ತು ಮೈಕ್ರೋಸಾಫ್ಟ್ ಕಂಪನಿ ಸೆಡ್ಡು ಹೊಡೆಯಲಿದೆಯಾ ಎಂಬ ಚರ್ಚೆ ನಡೆದಿದೆ. ಯಾಕೆಂದರೆ, ಇ ಮೇಲ್ ಸೇವೆ ಆರಂಭಿಸುವ ಬಗ್ಗೆ ಝೂಮ್ ನಿರ್ಧರಿಸಿದೆ ಎಂದು ದಿ ಇನ್ಫರ್ಮೇಷನ್ ವರದಿ ಮಾಡಿದೆ. ಆದರೆ, ಈ ಬಗ್ಗೆ ಝೂಮ್ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಕಂಪನಿ ಈಗಾಗಲೇ ಇ ಮೇಲ್ ಸೇವೆ ಒದಗಿಸುವ ಬಗ್ಗೆ ಕೆಲಸ ಮಾಡುತ್ತಿದೆ. ಮುಂದಿನ ವರ್ಷ ಈ ಹೊಸ ಉತ್ಪನ್ನದ ಟೆಸ್ಟಿಂಗ್ ಕೂಡ ನಡೆಯಲಿದ್ದು, ಇದು ವೆಬ್ ಮೇಲ್ ಆಗಿರಲಿದೆಂದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಕ್ಯಾಲೆಂಡರ್ ಆಪ್ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಅದರ ಬಗ್ಗೆ ಕೆಲಸ ಆರಂಭವಾಗಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಸಾಂಕ್ರಾಮಿಕ ಪರಿಸ್ಥಿತಿ ಮುಕ್ತಾಯವಾಗಿ ಜಗತ್ತು ಮೊದಲಿನ ಸ್ಥಿತಿಗೆ ಮರಳಿದರೆ, ವಿಡಿಯೋಕಾನ್ಫಿರೆನ್ಸಿಂಗ್ ಆಪ್‌ಗಳ ಬಳಕೆ ಕಡಿಮೆಯಾಗಲಿದೆ. ಹಾಗಾಗಿ, ಮುಂದಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಝೂಮ್ ಇ ಮೇಲ್ ಸೇವೆಗೂ ಮುಂದಾಗಿದೆ ಎನ್ನಲಾಗುತ್ತಿದೆ.
BSNLನಿಂದ 199 ರೂ. ಪ್ರಿಪೇಡ್ ಪ್ಲ್ಯಾನ್, ನಿತ್ಯ 2ಜಿಬಿ ಹೈಸ್ಪೀಡ್ ಇಂಟರ್ನೆಟ್!