ಗ್ರಾಹಕರನ್ನು ಸೆಳೆಯಲು ಹಲವು ಆಫರ್‌ಗಳನ್ನು ಘೋಷಿಸುತ್ತಿರುವ ಬಿಸ್ಸೆನ್ನೆಲ್ ತನ್ನ ಎರಡು ದೀರ್ಘಾವಧಿಯ ಪ್ರಿಪೇಡ್ ಪ್ಲ್ಯಾನ್‌ಗಳನ್ನು ಪರಿಷ್ಕರಣೆ ಮಾಡಿತ್ತು. ಇದೀಗ 599 ರೂ. ಪ್ರಿಪೇಡ್ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಆಶ್ಚರ್ಯಕರ ಎಂಬ ರೀತಿಯಲ್ಲಿ ಆಫರ್ ಒದಗಿಸುತ್ತಿದೆ.
ಬಿಎಸ್ಸೆನ್ನೆಲ್‌ನ 599 ರೂ. ರಿಚಾರ್ಜ್ ಪ್ರಿಪೇಡ್ ಪ್ಲ್ಯಾನ್ ತುಂಬಾ ಆಫರ್ ನೀಡುತ್ತಿದ್ದು, ನಿತ್ಯ 5 ಜಿಬಿ ಡೇಟಾ ಪಡೆದುಕೊಳ್ಳಬಹುದಾಗಿದೆ. ಈ ಪ್ಲ್ಯಾನ್ ವಾಲಿಡಿಟಿ 84 ದಿನಗಳಾಗಿದೆ.
ಈ ಬಗ್ಗೆ ವರದಿ ಮಾಡಿರುವ ಟೆಲಿಕಾಮ್ ಟಾಕ್, ಇಷ್ಟೇ ಪ್ರಮಾಣದ ಆಫರ್ ನೀಡುವ ಏರ್ಟೆಲ್, ಜಿಯೋ ಮತ್ತು ವಿಐ ಪ್ರೀಪೆಡ್‌ಗೆ 600 ರೂ. ರಿಚಾರ್ಜ್ ಮಾಡಬೇಕಾಗುತ್ತದೆ. ಸರ್ಕಾರಿ ಸ್ವಾಮ್ಯದ ಕಂಪನಿಯಾಗಿರುವ ಬಿಎಸ್ಸೆನ್ನೆಲ್, ಈ ಡೇಟಾ ಲಾಭದ ಆಫರ್‌ಗಳಿಂದ ಹೊರಗಿದ್ದು, 5,99 ರೂ. ಪ್ಲ್ಯಾನ್‌ನಲ್ಲಿ ನೀಡಲಾಗುವ ನಿತ್ಯದ 5ಜಿಬಿ ಡೇಟಾ 2ಜಿ ಅಥವಾ 3ಜಿ ಆಗಿರುತ್ತದೆ. ಒಂದೊಮ್ಮೆ ಗ್ರಾಹಕನು 4ಜಿ ನೆಟ್ವರ್ಕ್ ಸಕ್ರಿಯವಾಗಿರುವ ಪ್ರದೇಶದೊಳಗೆ ಹೋದರೆ ಅದು 4ಜಿ ಕನ್ವರ್ಟ್ ಆಗುತ್ತದೆ. ಯಾಕೆಂದರೆ, ಈಗಾಗಲೇ ಬಿಎಸ್ಸೆನ್ನೆಲ್, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಕರ್ನಾಟಕ ಮತ್ತು ಮಧ್ಯ ಪ್ರದೇಶಗಳಲ್ಲಿ 4ಜಿ ನೆಟ್ವರ್ಕ್ ಸೇವೆ ಆರಂಭಿಸಿದೆ ಎಂಬುದನ್ನು ನೀವು ಗಮನಿಸಬಹುದು.
undefined
New Sensation: ವಾಟ್ಸಾಪ್ ಹಿಂದಿಕ್ಕುವ ಸಿಗ್ನಲ್
599 ರೂ. ಪ್ರಿಪೇಡ್ ಪ್ಲ್ಯಾನ್‌ನಲ್ಲಿ ಬಹಳಷ್ಟು ಆಫರ್‌ಗಳು ದೊರೆಯುತ್ತವೆ. ವಾಯ್ಸ್ ಕಾಲಿಂಗ್, ಎಸ್ಸೆಮ್ಮೆಸ್, ಡೇಟಾ ಇತ್ಯಾದಿ ಪ್ರಯೋಜನಗಳಿವೆ. ಈ ಯೋಜನೆಯಲ್ಲಿ ಗ್ರಾಹಕರು ನಿತ್ಯ 5ಜಿಬಿ ಡೇಟಾ ಪಡೆದುಕೊಳ್ಳುತ್ತಾರೆ. 84 ದಿನಗಳ ವಾಲಿಡಿಟಿ ಹೊಂದಿರುವ ಈ ಪ್ಲ್ಯಾನ್‌ನಲ್ಲಿ ಒಟ್ಟು ಗ್ರಾಹಕರು 420 ಜಿಬಿ ಡೇಟಾ ಪಡೆದುಕೊಳ್ಳಬಹುದು.
ಭಾರತದೊಳಗೇ ಬಿಎಸ್ಸೆನ್ನೆಲ್ ನೆಟ್ವರ್ಕ್‌ನಿಂದ ಅನಿಯಂತ್ರಿತ ವಾಯ್ಸ್ ಕಾಲಿಂಗ್ ಸೇವೆ ಇದೆ. ಆದರೆ, ಬಿಎಸ್ಸೆನ್ನೆಲ್ ಜಾಲತಾಣದ ಪ್ರಕಾರ, 250 ನಿಮಿಷಗಳ ಮಿತಿ ಇದೆ ಹೇಳುತ್ತದೆ. ಆ ಬಗ್ಗೆ ಗ್ರಾಹಕರು ಗಮನಹರಿಸಬೇಕು. 599 ರೂ. ಪ್ಲ್ಯಾನಲ್ಲಿ ಗ್ರಾಹಕರು ನಿತ್ಯ 100 ಎಸ್ಸೆಮ್ಮೆಸ್ ಮತ್ತು ಝಿಂಗ್ ಆಪ್‌ಗೆ ಸಬ್ಸ್‌ಕ್ರಿಪ್ಷನ್‌ಗೆ ದೊರೆಯುತ್ತದೆ ಎಂದು ಟೆಲಿಕಾಂ ತನ್ನ ವರದಿಯಲ್ಲಿ ತಿಳಿಸಿದೆ.
ಬಿಸ್ಸೆನ್ನೆಲ್‌ನ ಎರಡು ದೀರ್ಘಾವಧಿ ಪ್ಲ್ಯಾನ್‌ಗಳು ಪರಿಷ್ಕರಣೆ
ಬಿಎಸ್ಸೆನ್ನೆಲ್ ತನ್ನ ದೀರ್ಘಾವಧಿಯ ಎರಡು ಪ್ರಿಪೇಡ್ ಪ್ಲ್ಯಾನ್‌ಗಳನ್ನು ಪರಿಷ್ಕರಣೆ ಮಾಡುತ್ತಿದೆ. ಪರಿಷ್ಕರಣೆ ಅನ್ವಯ ಈ ಪ್ಲ್ಯಾನ್‌ಗಳ ವ್ಯಾಲಿಡಿಟಿ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ.1,999 ರೂ. ಪ್ರಿಪೇಡ್ ಪ್ಲ್ಯಾನ್ ವ್ಯಾಲಿಡಿಟಿ ಅವಧಿಯನ್ನು 21 ದಿನಗಳವರೆಗೆ ಹೆಚ್ಚಿಸಿದೆ. ಅಂದರೆ, ನೀವು ಈ ಪ್ಲ್ಯಾನ್ ಖರೀದಿಸಿದರೆ ವ್ಯಾಲಿಡಿಟಿಯು 386 ದಿನಗಳವರೆಗೂ ಇರಲಿದೆ. ಇದೊಂದು ಸೀಮಿತ ಅವಧಿಯ ಆಫರ್ ಆಗಿದ್ದು, ಜನವರಿ 10ರಿಂದ ಆರಂಭವಾಗಿ, ಜನವರಿ 31ಕ್ಕೆ ಮುಕ್ತಾಯಗೊಳ್ಳಲಿದೆ. ಹಾಗಾಗಿ, ಹೆಚ್ಚುವರಿ 21 ದಿನಗಳ ವ್ಯಾಲಿಡಿಟಿ ಬೇಕಿದ್ದರೆ ಈ ಪ್ಲ್ಯಾನ್ ಖರೀದಿಗೆ ತ್ವರೆ ಮಾಡಿದೆ.
FUP ಮಿತಿ ಕೈ ಬಿಟ್ಟ ಬಿಎಸ್ಸೆನ್ನೆಲ್, ನಾಳೆಯಿಂದ ಹೊಸ ಪ್ಲಾನ್, ಆಫರ್ ಏನಿದೆ?
ಇಷ್ಟು ಮಾತ್ರವಲ್ಲದೇ 2,399 ರೂಪಾಯಿಯ ಲಾಂಗ್ ಟರ್ಮ್ ಪ್ಲ್ಯಾನ್ ಕೂಡ ಪರಿಷ್ಕರಣೆಯಾಗಿದೆ. ಸದ್ಯಕ್ಕೆ ಈ ಪ್ಲ್ಯಾನ್ ನಿಮಗೆ 600 ದಿನಗಳ ವ್ಯಾಲಿಡಿಟಿ ಸಿಗುತ್ತಿದೆ. ಒಮ್ಮೆ ಪರಿಷ್ಕೃತ ಪ್ಲ್ಯಾನ್ ಸಕ್ರಿಯಗೊಂಡರೆ, ನಿಮಗೆ ಕೇವಲ 365 ದಿನಗಳ ವ್ಯಾಲಿಡಿಟಿ ಸಿಗುತ್ತದೆ. 72ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಬಿಎಸ್ಸೆನ್ನೆಲ್ ಹೆಚ್ಚುವರಿ 72 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ. ಅಂದರೆ ಒಟ್ಟು 437 ದಿನಗಳ ವ್ಯಾಲಿಡಿಟಿಯೊಂದಿಗೆ 2,399 ರೂ. ಹೆಚ್ಚುವರಿ 72 ದಿನಗಳು ಪ್ರಚಾರದ ಆಫರ್ ಆಗಿದೆ. ಈ ಆಫರ್ ಕೂಡ ಜನವರಿ 31ರವರೆಗ ಮಾತ್ರವೇ ಇರಲಿದೆ.
1999 ರೂ. ಪ್ರಿಪೇಡ್ ಪ್ಲ್ಯಾನ್‌ನಲ್ಲಿ ನಿತ್ಯ 3ಜಿಬಿ ಡೇಟಾ, ಎಲ್ಲ ನೆಟ್ವರ್ಕ್‌ಗಳಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್, ನಿತ್ಯ 100 ಎಸ್ಸೆಮ್ಮೆಸ್ ದೊರೆಯುತ್ತವೆ. ಜೊತೆಗೆ, ಬಿಎಸ್ಸೆನ್ನೆಲ್ ಟ್ಯೂನ್‌ಗಳನ್ನು ಪಡೆಯಬಹುದು ಮತ್ತು ಎಷ್ಟು ಬಾರಿಯಾದರೂ ಸಕ್ರಿಯಗೊಳಿಸಬಹುದು. 365 ದಿನಗಳಿಗೆ ಇರೋಸ್ ನೌ ಸಬ್ಸ್‌ಕ್ರಿಪ್ಷನ್ ಹಾಗೂ ಎರಡು ತಿಂಗಳವರೆಗೆ ಲಾಕ್‌ಡುನ್ ಪಡೆದುಕೊಳ್ಳಬಹುದು. ಇನ್ನು 2,399 ರೂ. ಪ್ರಿಪೇಡ್ ಪ್ಲ್ಯಾನ್‌ನಲ್ಲಿ ಬಿಎಸ್ಸೆನ್ನೆಲ್ ಗ್ರಾಹಕರು ಎಲ್ಲ ನೆಟ್ವರ್ಕ್‌ಗಳಿಗೆ ಅನಿಯಂತ್ರಿತ ವಾಯ್ಸ್ ಕಾಲ್ ಜೊತೆಗೆ ಎಫ್‌ಯುಪಿ ಮಿತಿ ಇರುವುದಿಲ್ಲ ಎಂದು ಹಲವು ಸುದ್ದಿ ಜಾಲತಾಣಗಳು ವರದಿ ಮಾಡಿವೆ.
ಲಾವಾದಿಂದ ಜಗತ್ತಿನ ಮೊದಲ ಕಸ್ಟಮೈಸಡ್ ಸ್ಮಾರ್ಟ್‌ಫೋನ್