ವಾಟ್ಸಾಪ್‌ನಲ್ಲಿ ದೋಷ: ಗೂಗಲ್‌ನಲ್ಲಿ ಗ್ರೂಪ್ ಮಾಹಿತಿ ಸೋರಿಕೆ!

By Kannadaprabha News  |  First Published Jan 12, 2021, 7:33 AM IST

ನಿಮ್ಮ ವಾಟ್ಸಾಪ್‌ ಗ್ರೂಪ್‌ ಗೂಗಲ್‌ನಲ್ಲಿ ಲಭ್ಯ!| ಗ್ರೂಪ್ ‌ಚಾಟ್‌ ಇನ್ವೈಟ್‌ ಇಂಡೆಕ್ಸಿಂಗ್‌ ಸೋರಿಕೆ| ವಾಟ್ಸಾಪ್‌ನಲ್ಲಿನ ಮತ್ತೊಂದು ದೋಷ ಪತ್ತೆ


ನವದೆಹಲಿ(ಜ.12): ಸ್ನೇಹಿತರು, ಕುಟುಂಬ ಸದಸ್ಯರ ನಡುವಿನ ಖಾಸಗಿ ಮಾಹಿತಿ ವಿನಿಮಯಕ್ಕೆಂದು ಸ್ಥಾಪಿಸಲಾದ ಖಾಸಗಿ ವಾಟ್ಸಾಪ್‌ ಗ್ರೂಪ್‌ಗಳು ಗೂಗಲ್‌ ಸಚ್‌ರ್‍ನಲ್ಲಿ ಲಭ್ಯವಾಗುತ್ತಿದೆ ಎಂಬ ಕಳವಳಕಾರಿ ಮಾಹಿತಿ ಹೊರಬಿದ್ದಿದೆ. ವಾಟ್ಸಾಪ್‌ ತನ್ನ ಬಳಕೆದಾರರ ಮಾಹಿತಿಯನ್ನು ಮಾತೃಸಂಸ್ಥೆ ಫೇಸ್‌ಬುಕ್‌ ಜೊತೆ ಹಂಚಿಕೊಳ್ಳುವುದನ್ನು ಕಡ್ಡಾಯ ಮಾಡುತ್ತಿರುವ ಬೆನ್ನಲ್ಲೇ ಹೊರಬಿದ್ದ ಈ ಮಾಹಿತಿ ವಾಟ್ಸಾಪ್‌ನ ಸುರಕ್ಷತೆ ಬಗ್ಗೆ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.

ಗ್ರೂಪ್‌ಚಾಟ್‌ ಇನ್ವೈಟ್‌ಗಳ ಇಂಡೆಕ್ಸಿಂಗ್‌ ಗೂಗಲ್‌ನಲ್ಲಿ ಸೋರಿಕೆಯಾಗಿರುವ ಕಾರಣ, ಯಾವುದೇ ವ್ಯಕ್ತಿ ಇನ್ಯಾವುದೇ ಖಾಸಗಿ ವಾಟ್ಸಾಪ್‌ ಗ್ರೂಪ್‌ಗಳ ಇನ್ವೈಟ್‌ ಲಿಂಕ್‌ ಅನ್ನು ಕ್ಲಿಕ್‌ ಮಾಡುವ ಮೂಲಕ ಅದರಲ್ಲಿ ಸೇರಿಕೊಳ್ಳುವಂತಾಗಿದೆ. ಅಷ್ಟುಮಾತ್ರವಲ್ಲ ಬಳಕೆದಾರರ ಪ್ರೊಫೈಲ್‌, ಮೊಬೈಲ್‌ ನಂಬರ್‌, ಪ್ರೊಫೈಲ್‌ ಚಿತ್ರಗಳು ಕೂಡಾ ಗೂಗಲ್‌ ಹುಡುಕಾಟದಲ್ಲಿ ಲಭ್ಯವಿದೆ. ಹೀಗಾಗಿ ಯಾರು ಬೇಕಾದರೂ, ಗೂಗಲ್‌ ಸಚ್‌ರ್‍ನಲ್ಲಿ ಯಾವುದೇ ಖಾಸಗಿ ವಾಟ್ಸಾಪ್‌ ಗ್ರೂಪ್‌ಗಳಿಗಾಗಿ ಹುಡುಕಾಟ ನಡೆಸಿ ಇನ್ವೈಟ್‌ ಕ್ಲಿಕ್‌ ಮಾಡುವ ಮೂಲಕ ಗ್ರೂಪ್‌ ಸೇರಿಕೊಳ್ಳುವ ಅವಕಾಶ ಸಿಗುತ್ತಿದೆ.

Tap to resize

Latest Videos

2019ರಲ್ಲಿ ಕೂಡಾ ಇಂಥದ್ದೇ ಸೋರಿಕೆ ಬೆಳಕಿಗೆ ಬಂದು, ಅದನ್ನು ಸರಿಪಡಿಸಲಾಗಿತ್ತು. ಇದೀಗ ಮತ್ತೆ ಅಂಥದ್ದೇ ದೋಷ ಕಾಣಿಸಿಕೊಂಡಿದೆ. ವಾಟ್ಸಾಪ್‌ನಲ್ಲಿನ ಇಂಥದ್ದೊಂದು ದೋಷದ ಬಗ್ಗೆ ಸೈಬರ್‌ ತಜ್ಞ ರಾಜಶೇಖರ್‌ ರಾಜಾಹರಿಯಾ ಎಂಬುವವರು ಟ್ವೀಟರ್‌ನಲ್ಲಿ ಗಮನ ಸೆಳೆದಿದ್ದಾರೆ. ಅದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ವಾಟ್ಸಾಪ್‌, ಕೂಡಲೇ ಇಂಡೆಕ್ಸ್‌ನಿಂದಾಗಿ ಗೂಗಲ್‌ನಲ್ಲಿ ಆಗುತ್ತಿರುವ ಎಡವಟ್ಟು ಸರಿಪಡಿಸುವುದಾಗಿ ಭರವಸೆ ನೀಡಿದೆ.

click me!