5ಜಿ ಇಂಟರ್ನೆಟ್‌ಗಾಗಿ ಮುಂದಿನ ವರ್ಷದವರೆಗೆ ಕಾಯಲೇಬೇಕು?

Suvarna News   | Asianet News
Published : Feb 10, 2021, 01:45 PM IST
5ಜಿ ಇಂಟರ್ನೆಟ್‌ಗಾಗಿ ಮುಂದಿನ ವರ್ಷದವರೆಗೆ ಕಾಯಲೇಬೇಕು?

ಸಾರಾಂಶ

ಪ್ರಸಕ್ತ ವರ್ಷದ ಮಧ್ಯಂತದಲ್ಲೇ ಭಾರತೀಯರಿಗೆ 5ಜಿ ಸೇವೆ ದೊರೆಯಲಿದೆ ಎಂದು ಭಾವಿಸಲಾಗಿತ್ತು. ಟೆಲಿಕಾಂ ಸೇವೆ ಪೂರೈಸುವ ಕಂಪನಿಗಳು ಕೂಡ ಇದೇ ಮಾತನ್ನು ಹೇಳಿದ್ದವು. ಆದರೆ, 5ಜಿ ಸೇವೆ ಒದಗಿಸಲು ಬೇಕಾಗುವ ಪೂರ್ವ ಸಿದ್ಧತೆಯನ್ನು ಸರಿಯಾಗಿ ಮಾಡಿಕೊಂಡಿಲ್ಲ ಎಂಬ ಲೋಪವನ್ನು ಸಂಸತ್ ಸ್ಥಾಯಿ ಸಮಿತಿ ಪತ್ತೆ ಹಚ್ಚಿದೆ.

ಈ ವರ್ಷದ ಮಧ್ಯಂತದಲ್ಲಿ ಭಾರತದಲ್ಲಿ 5ಜಿ ಸೇವೆ ದೊರೆಯಲಿದೆ ಎಂದು ಹಲವು ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಗಳು ಹೇಳಿಕೊಂಡಿದ್ದವು. ಆದರೆ, ಭಾರತದಲ್ಲಿ 5ಜಿ ಸೇವೆ ಬಹುಶಃ ಈ ವರ್ಷ ದೊರೆಯಲಿಕ್ಕಿಲ್ಲ. 2022 ಆರಂಭದವರೆಗೆ ನಾವು ಕಾಯಬೇಕಾಗಬಹುದು ಎನ್ನುತ್ತಿದೆ ವರದಿಯೊಂದು.

ಆ್ಯಂಡ್ರಾಯ್ಡ್ 12 ಬಿಡುಗಡೆಗೆ ಸಿದ್ಧವಾಗುತ್ತಿದೆಯಾ ಗೂಗಲ್?

ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ನೀಡಿದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಈ ವರದಿಯ ಪ್ರಕಾರ 5ಜಿ ಸೇವೆ ಒದಗಿಸಲು ಬೇಕಾಗುವ ಸಿದ್ಧತೆಯನ್ನು ಭಾರತ ಇನ್ನೂ ಸರಿಯಾಗಿ ಮಾಡಿಕೊಂಡಿಲ್ಲ. ಇದಕ್ಕೆ ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿ ಕಾರಣವಾಗಿದೆ ಎಂಬುದು ವರದಿಯಲ್ಲಿ ದೋಷಿಸಲಾಗಿದೆ.

ಭಾರತದಲ್ಲಿ 5ಜಿ ಸೇವೆಗಳನ್ನು ಒದಗಿಸಲು ಬೇಕಾಗುವ ಅಗತ್ಯ ಎಲ್ಲ ಪೂರ್ವ ಸಿದ್ಧತೆಗಳನ್ನು ಕೈಗೊಂಡಿಲ್ಲ. ಈ ವಿಷಯದಲ್ಲಿ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದವು ಸಾಧಾರಣ ಆರಂಭದ ಹಂತವನ್ನೂ ಮೀರಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜಾಗತಿಕವಾಗಿ 2ಜಿ ಸೇವೆ 1991ರಲ್ಲೇ ಆರಂಭವಾದರೂ ಭಾರತದಲ್ಲಿ 1995ರ ಬಳಿಕವಷ್ಟೇ ಸೇವೆಯನ್ನು ಒದಗಿಸಲು ಸಾಧ್ಯವಾಯಿತು. ಅದೇ ರೀತಿ,  1998ರಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು 3ಜಿ ಸೇವೆಯನ್ನು ಪಡೆಯುತ್ತಿದ್ದವು. ನಾವು ಇದಾದ ಹತ್ತು ವರ್ಷದ ಬಳಿಕ 3ಜಿ ಸೇವೆಯನ್ನುಆರಂಭಿಸಿದೆವು. ಅಂದರೆ, 2008ರಲ್ಲಿ ಈ ಸೇವೆ ದೊರೆಯಿತು. ಹಾಗೆಯೇ, 4ಜಿ ಸೇವೆ ಜಾಗತಿಕವಾಗಿ ಆರಂಭವಾದ  ಏಳು ವರ್ಷದ ಬಳಿಕ ಭಾರತದಲ್ಲಿ ಆರಂಭಿಸಿದೆವು. ಇದು ಟೆಲಿಕಾಂ ಸೇವೆ ಪೂರೈಕೆಯಲ್ಲಿ ನಮ್ಮ ಅತ್ಯಂತ ಕನಿಷ್ಠ ಸಿದ್ಧತೆಯನ್ನು ಇದು ತೋರಿಸುತ್ತದೆ. ಇದೀಗ ವಿಶ್ವದ ಬಹುತೇಕ ರಾಷ್ಟ್ರಗಳು 5ಜಿ ಸೇವೆಯಲ್ಲಿ ದಾಪುಗಾಲು ಹಾಗುತ್ತಿರುವಾಗ ನಾವು ಇನ್ನೂ ಈ ವರ್ಷದ ಅಂತ್ಯದಲ್ಲಿ ಇಲ್ಲವೇ 2022ರ ಆರಂಭದಲ್ಲಿ  ಭಾರತದ ಕೆಲವೇ ಭಾಗಗಳಲ್ಲಿ ಈ ಸೇವೆಯನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಇದಕ್ಕೂ ಮೊದಲು ಟೆಲಿಕಾಂ ಇಲಾಖೆಯು 5ಜಿ ಸೇವೆಯ ಪ್ರರೀಕ್ಷೆಯನ್ನು 2019ರಲ್ಲಿ ಆರಂಭಿಸಿ 2020-21ರ ಸಾಲಿನಲ್ಲಿ ಅಧಿಕೃತವಾಗಿ ಸೇವೆ ಒದಗಿಸುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ, ಯೋಜನೆಯಂತೆ ನಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಗಡುವು ಮೀರುವ ಅನಿವಾರ್ಯತೆ ಸೃಷ್ಟಿಯಾಯಿತು.

ಪ್ಲೇಸ್ಟೋರ್‌ನಲ್ಲಿ ಟೆಲಿಗ್ರಾಮ್ ಡೌನ್‌ಲೋಡ್ ನಾಗಾಲೋಟ

2ಜಿ, 3ಜಿ ಮತ್ತು 4ಜಿ ಸೇವೆಯನ್ನು ಭಾರತದಲ್ಲಿ ನೀಡಲು ನಾವು ತೀವ್ರ ಹಿನ್ನಡೆಯನ್ನು ಅನುಭವಿಸಿದ್ದೆವು. ಆದರೆ, 5ಜಿ ವಿಷಯದಲ್ಲಿ ಹಾಗಾಗುವುದಿಲ್ಲ. ಮೇಡ್ ಇನ್ ಇಂಡಿಯಾ ಪ್ರಕ್ರಿಯೆಯೊಡನೆ ಜಗತ್ತಿನಕ್ಕಿಂತಲೂ ವೇಗವಾಗಿ ನಾವು 5ಜಿ ಸೇವೆ ಒದಗಿಸಲಿದ್ದೇವೆ. ಈಗಾಗಲೇ ಈ ಬಗ್ಗೆ ಪರೀಕ್ಷೆ ನಡೆಸಲಾಗಿದ್ದು, ಶೀಘ್ರವೇ ಒಪ್ಪಿಗೆ ನೀಡಲಿದ್ದೇವೆ ಮತ್ತು ಕೋರ್ ನೆಟ್ವರ್ಕ್ ಮಾತ್ರ ಸಂಪೂರ್ಣ ಭಾರತದ್ದೇ ಆಗಿರುತ್ತದೆ ಎಂದು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರು ನ್ಯಾಷನಲ್ ಇನ್ಫಾರ್ಮೆಟಿಕ್ ಸೆಂಟರ್ ಸರ್ವೀಸ್ ಇನ್‌ಕಾರ್ಪೊರೇಟ್(ಎನ್ಐಸಿಎಸ್ಐ)ನ ಸಮಾರಂಭದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಕಳೆದ ಜನವರಿ 28ರಂದು ಕೂಡ ಸಚಿವ ಪ್ರಸಾದ್ ಅವರು, 5ಜಿ ಸೇವೆಗೆ ಸಂಬಂಧಿಸಿದಂತೆ ಪರೀಕ್ಷೆ ಸಿದ್ಧವಾಗಿದೆ. ಮುಂದಿನ ತಲೆಮಾರಿನ ಈ ಸೇವೆಯನ್ನು ಭಾರತೀಯ ಉಪಕರಣಗಳ ಮೂಲಕವೇ ನೀಡಲಾಗುವುದು ಮತ್ತು ಶೀಘ್ರವೇ 5ಜಿ ಸೇವೆಗೆ ಸರ್ಕಾರ ಒಪ್ಪಿಗೆ ನೀಡಲಿದೆ ಎಂದೂ ಹೇಳಿದ್ದರು.

ಒಂದೊಮ್ಮೆ 5ಜಿ ಸೇವೆ ಆರಂಭವಾದರೂ ಅದು ಭಾರತದ ಎಲ್ಲ ಕಡೆಯೂ ದೊರೆಯುವುದಿಲ್ಲ. ಮೊದಲಿಗೆ ಮೆಟ್ರೋ ನಗರಗಳಲ್ಲಿ ಮಾತ್ರವೇ ಈ ಸೇವೆ ದೊರೆಯಲಿದೆ. ಬಹುಶ 2022ರ ಆರಂಭದ ಹೊತ್ತಿಗೆ ಈ ಸೇವೆಯನ್ನು ನೀಡಬಹುದು ಎಂದು ಸರ್ಕಾರದ ಅಧಿಕಾರಿಗಳೂ ಅಭಿಪ್ರಾಯಪಡುತ್ತಿದ್ದಾರೆ.

ಒಟ್ಟಾರೆಯಾಗಿ 2021ರಲ್ಲಂತೂ 5ಜಿ ಸೇವೆ ಆರಂಭವಾಗುವ ಸಾಧ್ಯತೆಗಳು ಬಹಳ ಕ್ಷೀಣವಾಗಿವೆ. ಪರಿಪೂರ್ಣ ಸೇವೆ ನಿಮಗೆ ಮುಂದಿನ ವರ್ಷವೇ ಸಿಗಲಿದ್ದು ಅಲ್ಲಿವರೆಗೂ ಕಾಯಬೇಕಷ್ಟೇ.

ಪವರ್‌ಫುಲ್ ಬ್ಯಾಟರಿ ಇರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಬಿಡುಗಡೆ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್