
ನವದೆಹಲಿ(ಜೂ.10): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಭಾರತದಲ್ಲಿ ಬಹುತೇಕ ಜನ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಒಬ್ಬರಿಗೊಬ್ಬರು ಭೇಟಿಯಾಗುತ್ತಿಲ್ಲ. ಇತ್ತ ಕುಟುಂಬಸ್ಥರು ಸಿಗುತ್ತಿಲ್ಲ. ಸ್ನೇಹಿತರೂ ಸಾಮಾಜಿಕ ಅಂತರ ಕಾಪಾಡಲೇ ಬೇಕಿದೆ. ಹೀಗಾಗಿ ಬಹುತೇಕರ ಝೂಮ್ ವಿಡಿಯೋ ಮೀಟಿಂಗ್ ಆ್ಯಪ್ ಮೊರೆಹೋಗಿದ್ದಾರೆ. ಇದೀಗ ಹಲವು ಕಂಪನಿಗಳು ಮೀಟಿಂಗ್ ಸೇರಿದಂತೆ ಎಲ್ಲವೂ ಝೂಮ್ ಆ್ಯಪ್‌ಗಳಲ್ಲೇ ನಡೆಯುತ್ತಿದೆ. ಇತ್ತ ಪ್ರಧಾನಿ ಮೋದಿ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಕರೆ ನೀಡಿದ್ದು ಮಾತ್ರವಲ್ಲ, ಸ್ವದೇಶಿ ನಿರ್ಮಿತ ಆ್ಯಪ್‌ಗೆ ಹೆಚ್ಚು ಒತ್ತು ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಭಾರತದ ಸ್ಟಾರ್ಟ್ ಅಪ್ ಕಂಪನಿ ಝೂಮ್ ವಿಡಿಯೋ ಮೀಟಿಂಗ್ ಆ್ಯಪ್‌ಗೆ ಪ್ರತಿಸ್ಪರ್ಧಿಯಾಗಿ ಸೇ ನಮಸ್ತೆ ಆ್ಯಪ್ ಬಿಡುಗಡೆ ಮಾಡಿದೆ.
ಭಾರತೀಯರ ಮಾಹಿತಿ ಕದಿಯಲು ಪಾಕ್‌ನಿಂದ ನಕಲಿ ಆರೋಗ್ಯ ಸೇತು!.
ಸೆಕ್ಯೂರಿಟಿ ಕಾರಣಗಳಿಂದ ಝೂಮ್ ಆ್ಯಪ್ ಬಳಕೆ ಸೂಕ್ತವಲ್ಲ ಎಂದು ಸರ್ಕಾರವೇ ಹೇಳಿದೆ. ಇಷ್ಟೇ ಅಲ್ಲ ಭಾರತದ ಸ್ಟಾರ್ಟ್ ಅಪ್ ಕಂಪನಿಗಳು ಸ್ವದೇಶಿ ನಿರ್ಮಿತ ಆ್ಯಪ್ ಡೆವಲಪ್ ಮಾಡಲು ಮೋದಿ ಕರೆ ನೀಡಿದ್ದರು. ಇದೀಗ ಮುಂಬೈನ ಇನ್ಸ್‌ಸ್ಕ್ರಿಪ್ಟ್ ಕಂಪನಿ ನೂತನ ಆ್ಯಪ್ ಲಾಂಚ್ ಮಾಡಿದೆ. ನಮಸ್ತೆ ವಿಡಿಯೋ ಮೀಟಿಂಗ್ ಆ್ಯಪ್ ಇದಾಗಿದ್ದು, ಒಂದೇ ಬಾರಿ ಗರಿಷ್ಠ 50 ಮಂದಿ ವಿಡೀಯೋ ಮೀಟಿಂಗ್‌ನಲ್ಲಿ ಪಾಲ್ಗೊಳ್ಳಬಹುದು.
ಭಾರತದ ಮಿತ್ರೊನ್ ಆ್ಯಪ್ ಡಿಲೀಟ್ ಮಾಡಿದ ಗೂಗಲ್ ; ಇದರ ಮೂಲ ಪಾಕಿಸ್ತಾನ!..
ಝೂಮ್ ಆ್ಯಪ್‌ಗಿಂತ ಸರಳವಾದ ಹಾಗೂ ಸುಲಭವಾದ ಈ ಆ್ಯಪ್ ಎಲ್ಲಾ ನಿಯಮಗಳನ್ನು ಪಾಲಿಸಿದೆ. ಹೀಗಾಗಿ ಈ ಆ್ಯಪ್‌ನಲ್ಲಿ ಸೆಕ್ಯೂರಿಟಿ ಲೋಪವಿಲ್ಲ ಎಂದು ಕಂಪನಿ ಹೇಳಿದೆ. ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯವಿದೆ. ಇಷ್ಟೇ ಅಲ್ಲ 4.5 ರೇಟಿಂಗ್ ಪಡೆದುಕೊಂಡಿದೆ.
ನಮಸ್ತೆ ವೀಡಿಯೋ ಮೀಟಿಂಗ್ ಆ್ಯಪ್‌ನಲ್ಲಿ ಫೈಲ್ ಶೇರ್, ಸ್ಕ್ರೀನ್ ಶೇರ್, ವಿಡಿಯೋ ಫೈಲ್, ಮೀಟಿಂಗ್ ರೆಕಾರ್ಡ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ. ಈಗಾಗಲೇ 1 ಲಕ್ಷ ಜನ ಈ ನಮಸ್ತೆ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ ಎಂದು ಕಂಪನಿ ಸಿಇಒ ಅನೂಜ್ ಗರ್ಗ್ ಹೇಳಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.