Facebook Profile Lock: ಫೇಸ್‌ಬುಕ್ ಪ್ರೊಫೈಲ್ ಲಾಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

By Suvarna NewsFirst Published Dec 30, 2021, 2:44 PM IST
Highlights

*ಫೇಸ್‌ಬುಕ್ ಪ್ರೊಫೈಲ್ ಲಾಕ್ ಮಾಡುವುದರಿಂದ ನಿಮ್ಮ ಮಾಹಿತಿಯನ್ನು ಸಂರಕ್ಷಿಸಿಕೊಳ್ಳಬಹುದು
*ಲಾಕ್ ಆಗಿರದಿದ್ದರೆ ಖಾಸಗಿ ಮಾಹಿತಿ, ಫೋಟೋ, ವಿಡಿಯೋಗಳನ್ನು ದುರುಪಯೋಗವಾಗಬಹುದು
*ಮೊಬೈಲ್ ಹಾಗೂ ಡೆಸ್ಕ್‌ಟಾಪ್‌ಗಳಲ್ಲಿ  ಬೇರೆ ಬೇರಿ ರೀತಿಯಲ್ಲಿ ಪ್ರೊಫೈಲ್ ಲಾಕ್ ಮಾಡಬಹುದು

Tech Desk: ಮೆಟಾ (Meta) ಒಡೆತನದ ಫೇಸ್‌ಬುಕ್ (Facebook) ಸಾಮಾಜಿಕ ಜಾಲತಾಣವನ್ನು ಎಲ್ಲರೂ ಬಳಸುತ್ತಾರೆ. ವಾಸ್ತವದಲ್ಲಿ ಫೇಸ್‌ಬುಕ್ ಎಂಬುದು ನಮ್ಮ ಬದುಕಿನ ಭಾಗವೇ ಆಗಿದೆ. ಹಾಗಾಗಿ, ಒಂದಿಲ್ಲ ಒಂದು ರೀತಿಯಲ್ಲಿ ನಾವು ಫೇಸ್‌ಬುಕ್ ಪ್ರಭಾವಕ್ಕೆ ಒಳಗಾಗಿಯೇ ಇರುತ್ತೇವೆ. ಫೇಸ್‌ಬುಕ್‌ನಿಂದ ಎಷ್ಟು  ಲಾಭವಿದೆಯೋ ಅಷ್ಟೇ ಅಪಾಯವೂ ಇದೆ. ನಮ್ಮ ವೈಯಕ್ತಿ ಬದುಕಿನ ಕ್ಷಣಗಳನ್ನು, ಫೋಟೋಗಳನ್ನು ಅದರಲ್ಲಿ ಹಂಚಿಕೊಳ್ಳುತ್ತೇವೆ. ಆದರೆ, ದುಷ್ಕರ್ಮಿಗಳು ಅಥವಾ ಅಪರಿಚಿತರು ನಮ್ಮ ಪ್ರೊಫೈಲ್‌ನಲ್ಲಿರುವ ಎಲ್ಲ ಖಾಸಗಿ ಮಾಹಿತಿಯನ್ನು, ಫೋಟೋಗಳನ್ನು, ವಿಡಿಯೋಗಳನ್ನು ಬಳಸಿಕೊಂಡು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಈ ನಷ್ಟವನ್ನು ತಪ್ಪಿಸುವುದಕ್ಕಾಗಿಯೇ ಬಹಳ ದಿನಗಳ ಹಿಂದೆಯೇ ಫೇಸ್‌ಬುಕ್, ಲಾಕ್ ಯುವರ್ ಪ್ರೊಫೈಲ್ (Lock  your profile) ಎಂಬ ಆಪ್ಷನ್ ಜಾರಿಗೆ ತಂದಿದೆ. ಆದರೆ, ಈ ಆಯ್ಕೆಯನ್ನು ಬಳಸುವುದು ಎಂಬುದು ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ. ಹಾಗಾಗಿ, ನಾವು ಇಲ್ಲಿ ನಿಮಗೆ ಫೇಸ್‌ಬುಕ್ ಪ್ರೊಫೈಲ್ ಹೇಗೆ ಲಾಕ್ ಮಾಡುವುದು ಎಂಬುದರ ಬಗ್ಗ ತಿಳಿಸಿಕೊಟ್ಟಿದ್ದೇವೆ.

ಮೊಬೈಲ್‌ನಲ್ಲಿ ಫೇಸ್‌ಬುಕ್ ಪ್ರೊಫೈಲ್ ಲಾಕ್ ಮಾಡಲು ಹೀಗೆ ಮಾಡಿ

ಮೊದಲಿಗೆ ಫೇಸ್‌ಬುಕ್ (Facebook) ಆಪ್ ಓಪನ್ ಮಾಡಿ ಮತ್ತು ನಿಮ್ಮ ಪ್ರೊಫೈಲ್ ಮೇಲೆ ಟ್ಯಾಪ್ ಮಾಡಿ. ಬಳಿಕ ಆಡ್ ಸ್ಟೋರಿ ಪಕ್ಕದಲ್ಲಿರುವ ಮೆನು ಐಕಾನ್‌ನ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ. ಆಗ ನಿಮಗೆ ಲಾಕ್ ಪ್ರೊಫೈಲ್ ಆಪ್ಷನ್ ಕಾಣಿಸುತ್ತದೆ ಮತ್ತು ಅದರ ಮೇಲೆ ಟ್ಯಾಪ್ ಮಾಡಿ. ಆಗ ತೆರೆದುಕೊಳ್ಳುವ ಪುಟದಲ್ಲಿ ಪ್ರೊಫೈಲ್ ಲಾಕ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಮಾಹಿತಿಯನ್ನು ನೀಡಲಾಗಿರುತ್ತದೆ. ಜೊತೆಗೆ ಪುಟದ ಕೆಳಭಾಗದಲ್ಲಿ ಲಾಕ್ ಯುವರ್ ಪ್ರೊಫೈಲ್ (Lock Your Profile) ಆಯ್ಕೆಯನ್ನು ನೀಡಲಾಗಿರುತ್ತದೆ ಮತ್ತು ಅದರ ಮೇಲೆ ಟ್ಯಾಪ್ ಮಾಡಿ. ಆಗ ನಿಮಗೆ ಪಾಪ್ ಅಪ್ ಒಂದು ಕಾಣಿಸಿಕೊಳ್ಳುತ್ತದೆ ಮತ್ತು ಅದರಲ್ಲಿ ಯು ಲಾಕ್ಡ್ ಯುವರ್ ಪ್ರೊಫೈಲ್ ಎಂಬ ಆಪ್ಷನ್ ಇರುವುದನ್ನ ಗಮನಿಸಿ, ಮತ್ತು ಓಕೆ ಮೇಲೆ ಟ್ಯಾಪ್ ಮಾಡಿ. ಇಲ್ಲಿಗೆ ಮೊಬೈಲ್‌ನಲ್ಲಿ ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಲಾಕ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. 

ಡೆಸ್ಕ್‌ಟಾಪ್‌(Desktop)ನಲ್ಲಿ ಫೇಸ್‌ಬುಕ್ ಪ್ರೊಫೈಲ್ ಲಾಕ್ ಮಾಡುವುದು ಹೇಗೆ?
ಇದಕ್ಕಾಗಿ ನೀವು ಮೊದಲು ಬ್ರೌಸರ್‌ನಲ್ಲಿ https://www.facebook.com/  ಎಂದು ಟೈಪ್ ಮಾಡಿ ಎಂಟರ್ ಪ್ರೆಸ್ ಮಾಡಿ. ಯುಆರ್‌ಎಲ್ ಕಾಣಿಸಿಕೊಳ್ಳುವ ನಿಮ್ಮ ಪ್ರೊಫೈಲ್ ಐಕಾನ್ ಕ್ಲಿಕ್ ಮಾಡಿ ಮತ್ತು  www ಅನ್ನು m ನೊಂದಿಗೆ ರಿಪ್ಲೇಸ್ ಮಾಡಿ. ಹೀಗೆ ಮಾಡುವುದರಿಂದ ಯುಆರ್‌ಎಲ್ m.facebook.com/yourprofilename ಎಂದು ರೀಡ್ ಮಾಡುತ್ತದೆ. ಅಂದರೆ, ಡೆಸ್ಕ್‌ಟಾಪ್‌ನಲ್ಲಿ ಫೇಸ್‌ಪುಕ್ ಮೊಬೈಲ್ ಆವೃತ್ತಿಯಲ್ಲಿ ಓಪನ್ ಆಗುತ್ತದೆ.

ಇದನ್ನೂ ಓದಿ: Whatsapp New Feature: ವಾಟ್ಸಾಪ್‌ ಹೊಸ ಫೀಚರ್ಸ್ ಮೂಲಕ ಹತ್ತಿರದ ಹೊಟೇಲ್, ದಿನಸಿ, ಬಟ್ಟೆ ಅಂಗಡಿ ಹುಡುಕಿ!    

ಇಷ್ಟಾದ ಬಳಿಕ ನಿಮ್ಮ ಫೇಸ್‌ಬುಕ್ ಪುಟದ ಎಡಿಟ್ ಪ್ರೊಫೈಲ್ ಆಪ್ಷನ್ ಪಕ್ಕದಲ್ಲಿ ಮೂರು ಚುಕ್ಕೆಗಳಿರುವ ಮೇನು ಇದ್ದು, ಅದರಲ್ಲಿ ನೀವು ಲಾಕ್ ಪ್ರೊಫೈಲ್ ಆಪ್ಷನ್ ಅನ್ನು ಕಾಣಬಹುದಾಗಿದೆ. ಅದರ ಮೇಲೆ ಕ್ಲಿಕ್ ಮಾಡಿ. ಆಂಡ್ರಾಯ್ಡ್ ವರ್ಷನ್ ರೀತಿಯಲ್ಲೇ ನಂತರ ತೆರೆದುಕೊಳ್ಳುವ ಪುಟವು ಪ್ರೊಫೈಲ್ ಲಾಕ್ ಆಪ್ಷನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿಯನ್ನು ಒಳಗೊಂಡಿರುತ್ತದೆ ಮತ್ತು ಪುಟದ ಕೆಳಭಾಗದಲ್ಲಿ ಲಾಕ್ ಯುವರ್ ಪ್ರೊಫೈಲ್ (Lock Your Profile) ಆಪ್ಷನ್ ಇದ್ದು ಅದರ ಮೇಲೆ ಕ್ಲಿಕ್ ಮಾಡಿ. ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ನಿಮ್ಮ ಫೇಸ್‌ಪುಟದ ಪ್ರೊಫೈಲ್ ಲಾಕ್ ಆಗುತ್ತದೆ. 

ಇದನ್ನೂ ಓದಿ: Amazon's Best Phone: ಐಫೋನ್ 13 ಅಮೆಜಾನ್ ಗ್ರಾಹಕರ ಆಯ್ಕೆಯ ವರ್ಷದ ಅತ್ಯುತ್ತಮ ಸ್ಮಾರ್ಟ್‌ಫೋನ್!

ಅನ್‌ಲಾಕ್ ಮಾಡುವುದು ಹೇಗೆ?

ಒಂದು ವೇಳೆ ನಿಮ್ಮ ಫೇಸ್‌ಪುಕ್ ಪ್ರೊಫೈಲ್ ಅನ್‌ಲಾಕ್ ಮಾಡುವುದಿದ್ದರೆ, ಮೊಬೈಲ್ ಹಾಗೂ ಡೆಸ್ಕ್‌ಟಾಪ್‌ಗಳೆರಡಲ್ಲೂ ಒಂದೇ ರೀತಿಯ ಪ್ರಕ್ರಿಯೆಯನ್ನು ಅನುಸರಿಸರಿಸಬೇಕಾಗುತ್ತದೆ. ಪ್ರೊಫೈಲ್ ಲಾಕ್ ಕ್ರಿಯೆಯ ಹಂತಗಳನ್ನು ಅನ್‌ಲಾಕ್‌ಗೂ ಬಳಸಬಹುದು. ಲಾಕ್ ಯುವರ್ ಪ್ರೊಫೈಲ್ ಎಂಬ ಆಪ್ಷನ್ ಜಾಗದಲ್ಲಿ ಅನ್‌ಲಾಕ್ ಎಂಬ ಆಯ್ಕೆಯನ್ನು ನೀವು ಕಾಣಬಹುದು. ಈ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮ್ಮ ಪ್ರೊಫೈಲ್ ಅನ್‌ಲಾಕ್ ಆಗುತ್ತದೆ. 

click me!