ಓಪನ್ ಎಐ ಸಂಸ್ಥೆಯಲ್ಲಿ ಅತಿ ಹೆಚ್ಚು ಷೇರು ಹೊಂದಿರುವ ಮೈಕ್ರೋಸಾಫ್ಟ್ ಸಂಸ್ಥೆಯ ಸಿಇಒ ಸತ್ಯ ನಾದೆಲ್ಲ, ಸ್ಯಾಮ್ ಆಲ್ಟ್‌ಮನ್‌ಗೆ ಬೆಂಬಲ ಸೂಚಿಸಿದ್ದಾರೆ. ಅವರು ಮತ್ತೊಮ್ಮೆ ಸಿಇಒ ಆಗಿ ನೇಮಕವಾಗುವ ಸಾಧ್ಯತೆಗಳು ದಟ್ಟವಾಗಿದೆ ಎಂದು ವರದಿ ತಿಳಿಸಿದೆ.
ನವದೆಹಲಿ (ನವೆಂಬರ್ 20, 2023): ಕೃತಕ ಬುದ್ದಿಮತ್ತೆಯ ಮುಖ ಎಂದೇ ಪ್ರಖ್ಯಾತರಾಗಿರುವ ತಂತ್ರಜ್ಞ ಸ್ಯಾಮ್ ಆಲ್ಟ್‌ಮನ್ ಮತ್ತೊಮ್ಮೆ ಓಪನ್ ಎಐ ಸಂಸ್ಥೆಯ ಸಿಇಒ ಆಗಿ ನೇಮಕವಾಗುವ ಸಾಧ್ಯತೆಗಳಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಶನಿವಾರ ಇದ್ದಕ್ಕಿದ್ದಂತೆ ಅವರನ್ನು ಸಂಸ್ಥೆಯ ನಿರ್ದೇಶಕ ಮಂಡಳಿ ವಜಾಗೊಳಿಸಿತ್ತು.
ಆದರೆ ಇದರ ಬೆನ್ನಲ್ಲೇ ಸಾಕಷ್ಟು ಬೆಳವಣಿಗೆಗಳು ನಡೆದಿದೆ. ಓಪನ್ ಎಐ ಸಂಸ್ಥೆಯಲ್ಲಿ ಅತಿ ಹೆಚ್ಚು ಷೇರು ಹೊಂದಿರುವ ಮೈಕ್ರೋಸಾಫ್ಟ್ ಸಂಸ್ಥೆಯ ಸಿಇಒ ಸತ್ಯ ನಾದೆಲ್ಲ, ಸ್ಯಾಮ್ ಆಲ್ಟ್‌ಮನ್‌ಗೆ ಬೆಂಬಲ ಸೂಚಿಸಿದ್ದಾರೆ. ಅವರು ಮತ್ತೊಮ್ಮೆ ಸಿಇಒ ಆಗಿ ನೇಮಕವಾಗುವ ಸಾಧ್ಯತೆಗಳು ದಟ್ಟವಾಗಿದೆ ಎಂದು ವರದಿ ತಿಳಿಸಿದೆ.
ಇದನ್ನು ಓದಿ: ಚಾಟ್ ಜಿಪಿಟಿಯ ಮೂಲ ಕಂಪನಿ ಓಪನ್ ಎಐ ಸಹ ಸಂಸ್ಥಾಪಕ ಸ್ಯಾಮ್ ಆಲ್ಟ್‌ಮನ್ ಕಂಪನಿಯಿಂದಲೇ ವಜಾ!
ಮೈಕ್ರೋಸಾಫ್ಟ್ ಓಪನ್ ಎಐ ಸಂಸ್ಥೆಯಲ್ಲಿ ಶೇ.49ರಷ್ಟು ಷೇರು ಹೊಂದಿದ್ದು, ಮೈಕ್ರೋಸಾಫ್ಟ್ ಸೇರಿದಂತೆ ಎಲ್ಲಾ ಷೇರುದಾರರು ಆಲ್ಟ್‌ಮನ್‌ರನ್ನು ಮರು ನೇಮಕ ಮಾಡುವಂತೆ ನಿರ್ದೇಶಕ ಮಂಡಳಿಯ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಚಾಟ್‌ಜಿಪಿಟಿ ಬಿಡುಗಡೆ ಮೂಲಕ ವಿಶ್ವಾದ್ಯಂತ ಓಪನ್ ಎಐ ಕಂಪನಿ ಗಮನಸೆಳೆದಿತ್ತು.
ಆ ಕಂಪನಿಗೆ ಸ್ಯಾಮ್ ಆಲ್ಪ್‌ಮನ್ ಅವರು ಸಹಸಂಸ್ಥಾಪಕರಾಗಿದ್ದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ಶನಿವಾರ ಇದ್ದಕ್ಕಿದ್ದಂತೆ ವಜಾ ಮಾಡಿದ್ದು, ಟೆಕ್ ಉದ್ಯಮವನ್ನು ಆಘಾತಕ್ಕೆ ದೂಡಿತ್ತು.
ಇದನ್ನೂ ಓದಿ: ಚಾಟ್ ಜಿಪಿಟಿಯಿಂದ ನೌಕರಿ ನಷ್ಟ ಸಂಭವ : ಸಿಇಒ ಸ್ಯಾಮ್!
ಚಾಟ್‌ಜಿಪಿಟಿಯ ಹಿಂದಿರುವ ಕಂಪನಿಯಾದ ಓಪನ್‌ಎಐ ಸಹ-ಸಂಸ್ಥಾಪಕ ಮತ್ತು ಸಿಇಒ ಸ್ಯಾಮ್ ಆಲ್ಟ್‌ಮ್ಯಾನ್ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ. ಮಂಡಳಿಗೆ ಇನ್ನು ಮುಂದೆ ಅವರ ಸಾಮರ್ಥ್ಯದ ಮೇಲೆ ವಿಶ್ವಾಸವಿಲ್ಲ, ಆದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು OpenAI ಕಂಪನಿ ತಿಳಿಸಿತ್ತು ಎಂದು ಶುಕ್ರವಾರ ವರದಿಯಾಗಿದೆ.
ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಮೀರಾ ಮುರತಿ ಈಗ ಹಂಗಾಮಿ ಸಿಇಒ ಪಾತ್ರವನ್ನು ವಹಿಸಲಿದ್ದಾರೆ. ಕಂಪನಿಯು ಕಾಯಂ ಸಿಇಒಗಾಗಿ ಹುಡುಕಾಟವನ್ನು ಮುಂದುವರಿಸಲಿದೆ. ಹೆಚ್ಚುವರಿಯಾಗಿ, ಕಂಪನಿಯ ಅಧ್ಯಕ್ಷ ಗ್ರೆಗ್ ಬ್ರಾಕ್‌ಮನ್ ಸಹ ರಾಜೀನಾಮೆ ನೀಡಲಿದ್ದಾರೆ.
ಓಪನ್ ಎಐ ಕುರಿತಾಗಿ ಚರ್ಚೆ ಮಾಡಲು ನಡೆದಿದ್ದ ಗೂಗಲ್ ಮೀಟ್‌ನಲ್ಲಿ ಸ್ಯಾಮ್ ಆಲ್ಟ್‌ಮನ್‌ಗೆ ಹುದ್ದೆಯಿಂದ ಕೆಳಗಿಳಿಯುವಂತೆ ಮಂಡಳಿ ಸೂಚನೆ ನೀಡಿತ್ತು ಎನ್ನಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಓಪನ್ ಎಐ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸುವ ಖಾಸಗಿ ಸಂಶೋಧನಾ ಪ್ರಯೋಗಾಲಯವಾಗಿದೆ. ಇದನ್ನು 2015 ರಲ್ಲಿ ಆಲ್ಟ್‌ಮನ್, ಎಲಾನ್ ಮಸ್ಕ್ (ಇವರು ಓಪನ್ ಎಐ ಮಂಡಳಿಯಲ್ಲಿಲ್ಲ) ಮತ್ತು ಇತರರು ಲಾಭರಹಿತ ಸಂಸ್ಥೆಯಾಗಿ ಸ್ಥಾಪಿಸಿದರು.