Indian OS for Mobiles: ಮೊಬೈಲ್‌ಗಳಿಗೆ ಸ್ವದೇಶಿ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿ!

By Suvarna News  |  First Published Mar 17, 2022, 6:50 PM IST

* ಐಟಿ ಕ್ಷೇತ್ರದಲ್ಲಿ ವಿನ್ಯಾಸ ಮತ್ತು ಆವಿಷ್ಕಾರ ವ್ಯವಸ್ಥೆ ಬಲಪಡಿಸುವ ಪ್ರಯತ್ನದ ಭಾಗವಾಗಿ ಸ್ವದೇಶಿ ಒಎಸ್ 
* ಈಗ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಸಾಫ್ಟ್‌ವೇರ್‌ನದ್ದೇ ಸಿಂಹಪಾಲು
* ಸಂಸತ್ತಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್


ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಭಾರತವು ಸ್ವಾವಲಂಬನೆಯಾಗುವತ್ತ ದಾಪುಗಾಲು ಇಟ್ಟಿದೆ. ಸಾಕಷ್ಟು ಸ್ವದೇಶಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮೂಲಕ ಅನ್ಯ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದೆ.  ಹಾಗೆಯೇ, ಮಾಹಿತಿ ತಂತ್ರಜ್ಞಾನ (Information and Technology) ಕ್ಷೇತ್ರದಲ್ಲಿ ಭಾರತವನ್ನ ಸ್ವಾವಲಂಬನೆಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಮುಂದಾಗಿದೆ ಎಂದು ಹೇಳಲು ಕಾರಣವಿದೆ. ಯಾಕೆಂದರೆ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫಾರ್ಮೇಶನ್ ಟೆಕ್ನಾಲಜಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರು ಈ ಸಂಬಂಧ ಬುಧವಾರ ಸಂಸತ್ತಿಗೆ ಮಾಹಿತಿ ನೀಡಿ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಕ್ಷೇತ್ರದಲ್ಲಿ ವಿನ್ಯಾಸ ಮತ್ತು ಆವಿಷ್ಕಾರ ವ್ಯವಸ್ಥೆಯನ್ನು ಬಲಪಡಿಸುವ ಪ್ರಯತ್ನದ ಭಾಗವಾಗಿ ಭಾರತ ಸರ್ಕಾರವು ಆಪರೇಟಿಂಗ್ ಸಿಸ್ಟಮ್ (Operating System)  ಅಭಿವೃದ್ಧಿಪಡಿಸುವ ಬಗ್ಗೆ ಯೋಚಿಸತ್ತಿದೆ ಎಂದು ಹೇಳಿದ್ದಾರೆ.  ಸಚಿವರ ಈ ಹೇಳಿಕೆಯು ಭಾರತವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಬಗ್ಗೆ ಯೋಜನೆ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, ಭಾರತೀಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಲು ಸರ್ಕಾರದಿಂದ ಯಾವುದೇ ಹಣವನ್ನು ಇನ್ನೂ ನಿಗದಿಪಡಿಸಲಾಗಿಲ್ಲ ಎಂದು ಹೇಳಿದರು. 

Tap to resize

Latest Videos

undefined

BSNL New Plan: 329 ರೂ. ಭಾರತ ಫೈಬರ್ ಎಂಟ್ರಿ ಮಂತ್ಲಿ ಪ್ಲ್ಯಾನ್, ಇಂಟರ್ನೆಟ್ ವೇಗ ಎಷ್ಟು, ಏನೆಲ್ಲ ಸಿಗುತ್ತೆ?

ಯಂತ್ರಾಂಶದೊಂದಿಗೆ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಲ್ಲಿ ಅಪ್ಲಿಕೇಶನ್‌ಗಳನ್ನು ಒಟ್ಟಿಗೆ ಮಾಡುವಲ್ಲಿ ಆಪರೇಟಿಂಗ್ ಸಿಸ್ಟಮ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ಪ್ರಸ್ತುತ ಮಾರುಕಟ್ಟೆಯು ಮೊಬೈಲ್ ಸಾಧನಗಳ ವಿಭಾಗದಲ್ಲಿ ಗೂಗಲ್‌ (Google) ನ ಆಂಡ್ರಾಯ್ಡ್ (Android) ಅಥವಾ ಆಪಲ್‌ (Apple) ನ ಐಒಎಸ್ (iOS) ಆಪರೇಟಿಂಗ್ ಸಿಸ್ಟಮ್ ಮತ್ತು ವೈಯಕ್ತಿಕ ಕಂಪ್ಯೂಟರ್ ವಿಭಾಗದಲ್ಲಿ ಮೈಕ್ರೋಸಾಫ್ಟ್ ವಿಂಡೋಸ್‌ (Microsoft Window) ಪ್ರಾಬಲ್ಯವನ್ನು ಹೊಂದಿವೆ.

ಎಲೆಕ್ಟ್ರಾನಿಕ್ಸ್ ಮತ್ತು ಇನ್ಫಾರ್ಮೇಷನ್ ಟೆಕ್ನಾಲಜಿ ಕ್ಷೇತ್ರದಲ್ಲಿ ವೈಬ್ರೆಂಟ್ ಡಿಸೈನ್ ಮತ್ತು ಇನ್ನೋವೇಷನ್ ಈಕೋಸಿಸ್ಟಮ್‌ ರಚಿಸುವ ಸರ್ಕಾರದ ಪ್ರಯತ್ನಗಳ ಭಾಗವಾಗಿಯೇ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿಪಡಿಸುವತ್ತ ಸರ್ಕಾರ ಮುಂದಾಗಿದ ಎಂದು ಚಂದ್ರಶೇಖರ್ ಅವರು ಹೇಳಿದ್ದಾರೆ. ಭಾರತದಲ್ಲಿ ಮಾತ್ರ ಆಪರೇಟಿಂಗ್ ಸಿಸ್ಟಮ್ ಲಭ್ಯವಿರುತ್ತದೆಯೇ ಎಂದು ಕಾಂಗ್ರೆಸ್ ಸಂಸದ ಕಾರ್ತಿ ಪಿ ಚಿದಂಬರಂ (Karti P Chidambaram) ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಚಂದ್ರಶೇಖರ್ ಅವರು, ಭಾರತದ ಹೊರಗೆ ಭಾರತೀಯ ಸಾಫ್ಟ್‌ವೇರ್ ಉತ್ಪನ್ನಗಳ ರಫ್ತು ಮತ್ತು ಬಳಕೆಯನ್ನು ನಿರ್ಬಂಧಿಸುವ ಯಾವುದೇ ನೀತಿ ಸರ್ಕಾರದಲ್ಲಿ ಇಲ್ಲ ಎಂದು ಹೇಳಿದರು. ಗೂಗಲ್‌ನ ಆಂಡ್ರಾಯ್ಡ್ (Android) ಮತ್ತು ಆಪಲ್‌ನ ಐಒಎಸ್‌ (iOS)ಗೆ ಪರ್ಯಾಯವಾಗಿ ಸ್ಥಳೀಯ ಆಪರೇಟಿಂಗ್ ಸಿಸ್ಟಮ್ ಅನ್ನು ರಚಿಸಲು ಉದ್ಯಮಕ್ಕೆ ಪರಿಸರ ವ್ಯವಸ್ಥೆಯನ್ನು ಸುಗಮಗೊಳಿಸುವ ನೀತಿಯನ್ನು ತರಲು ಸರ್ಕಾರ ಯೋಜಿಸುತ್ತಿದೆ ಎಂದು ಸಚಿವರು ಜನವರಿಯಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಈಗಾಗಲೇ ಹೇಳಿದಂತೆ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇಂಟರ್ನೆಟ್ ದೈತ್ಯ ಕಂಪನಿ ಅಭಿವೃದ್ಧಿಪಡಿಸಿರುವ ಆಂಡ್ರಾಯ್ಡ್ ಮತ್ತು ಸ್ಮಾರ್ಟ್‌ಫೋನ್‌ನಲ್ಲಿ ಸಾಕಷ್ಟು ಕ್ರಾಂತಿಗೆ ಕಾರಣವಾದ ಆಪಲ್  ಐಒಎಸ್ ಆಪರೇಟಿಂಗ್ ‌ಸಿಸ್ಟಮ್ ಮುಖ್ಯವಾಗಿ ಚಾಲ್ತಿಯಲ್ಲಿದೆ. ಈ ಎರಡೂ ಒಎಸ್‌ಗಳು ವಲಯದಲ್ಲಿ ಸಾಕಷ್ಟು ಪಾಲನ್ನು ಪಡೆದುಕೊಂಡಿವೆ. ವಿಶೇಷವಾಗಿ ಮೊಬೈಲ್ ಹಾಗೂ ಇತರ ಗ್ಯಾಜೆಟ್‌ಗಳಲ್ಲಿ ಸಾಧನದಲ್ಲಿ ಆಂಡ್ರಾಯ್ಡ್ ಅಥವಾ ಒಎಸ್ ಆಪರೇಟಿಂಗ್ ಸಿಸ್ಟಮ್ ಬಳಕೆಯಾಗುವುದನ್ನು ಕಾಣಬಹುದು. ಹಾಗೆಯೇ, ಕಂಪ್ಯೂಟರ್‌ಗಳ ವಿಷಯದಲ್ಲಿ ಮೈಕ್ರಾಸಾಫ್ಟ್‌ನ ವಿಂಡೋಸ್ (Windows) ಹೆಚ್ಚಿನ ಪಾಲು ಬಳಕೆಯಲ್ಲಿದೆ. ಹಾಗಾಗಿ, ಭಾರತವು ಸರ್ಕಾರ (Indian Government) ವು ತನ್ನದೇ ಆಪರೇಟಿಂಗ್ ಸಿಸ್ಟಮ್ (OS) ಅಭಿವೃದ್ಧಿಪಡಿಸುತ್ತಿರುವುದು ಎಲ್ಲ ದೃಷ್ಟಿಯಿಂದಲೂ ಉತ್ತಮವೇ ಎನ್ನಬಹುದು.

iQoo Z6 5G ಸ್ಮಾರ್ಟ್‌ಫೋನ್ ಲಾಂಚ್, ಬೆಲೆ ಎಷ್ಟಿದೆ? ಕ್ಯಾಮೆರಾ ಹೇಗಿದೆ? ಏನೆಲ್ಲ ಫೀಚರ್ಸ್?

click me!