ಭಾರತದ 20 ವರ್ಷದ ವಿದ್ಯಾರ್ಥಿನಿಯಿಂದ ವಿನೂತನ ಆ್ಯಪ್ ಅಭಿವೃದ್ಧಿ, ಆ್ಯಪಲ್ ಸಿಇಓ ಮೆಚ್ಚುಗೆ ಸುರಿಮಳೆ!

By Suvarna News  |  First Published Jun 10, 2023, 6:46 PM IST

20 ವರ್ಷದ ವಿದ್ಯಾರ್ಥಿನಿ ಆಸ್ಮಿ ಜೈನ್ ವಿನೂತನ ಆ್ಯಪ್ ಸಿದ್ಧಪಡಿಸಿದ್ದಾರೆ. ಆದರೆ ಈ ವಿದ್ಯಾರ್ಥಿನಿಯ ವಿನೂತನ ಆ್ಯಪ್‌ಗೆ ಆ್ಯಪಲ್ ಸಿಇಒ ಟಿಮ್ ಕುಕ್ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಟಿಮ್ ಕುಕ್ ಆಕೆ ಜಗತ್ತಿನ ಮೇಲೆ ಪ್ರಭಾವ ಬೀರಲು ಈಗಲೇ ಸಿದ್ಧವಾಗಿದ್ದಾಳೆ ಎಂದಿದ್ದಾರೆ.


ಇಂದೋರ್(ಜೂ.10): ಭಾರತದ 20 ವರ್ಷದ ವಿದ್ಯಾರ್ಥಿನಿ ಆಸ್ಮಿ ಜೈನ್ ಇದೀಗ ವಿಶ್ವದಲ್ಲೇ ಭಾರಿ ಸದ್ದು ಮಾಡಿದ್ದಾಳೆ. ಮೆಡಿ ಕ್ಯಾಪ್ಸ್ ವಿಶ್ವವಿದ್ಯಾಲಯದ ಆಸ್ಮಿ ಜೈನ್ ವಿನೂತನ ಆ್ಯಪ್ ಅಭಿವೃದ್ಧಿಪಡಿಸಿದ್ದಾಳೆ. ವಿಶ್ವಾದ್ಯಂತ ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿ ಆ್ಯಪ್‌ಗಳ ಪೈಕಿ 375 ಆ್ಯಪ್ ಆಯ್ಕೆ ಮಾಡಲಾಗಿತ್ತು. ಈ ಪೈಕಿ ಆಸ್ಮಿ ಜೈನ್ ಆ್ಯಪ್, ಆ್ಯಪಲ್ ಸಿಇಒ ಟಿಮ್ ಕುಕ್ ಗಮನಸೆಳೆದಿದೆ.  ಆ್ಯಪಲ್ ಜಾಗತಿಕ ಆ್ಯಪ್ ಡೆವಲಪ್ಪರ್ ಕಾನ್ಫರೆನ್ಸ್‌ನಲ್ಲಿ ಆಸ್ಮಿ ಜೈನ್ ಜೊತೆ ಮಾತನಾಡಿದ ಟಿಮ್ ಕುಕ್, ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ.ಜನರ ಆರೋಗ್ಯಕ್ಕೆ ನೆರವಾಗುವ ಮೂಲಕ ಈಕೆ ವಿಶ್ವದ ಮೇಲೆ ಆಳವಾದ ಪ್ರಭಾವ ಬೀರಲು ಈಗಾಗಲೇ ಸಜ್ಜಾಗಿದ್ದಾಳೆ ಎಂದು ಟಿಮ್ ಕುಕ್ ಹೇಳಿದ್ದಾರೆ.

ಆಸ್ಮಿ ಜೈನ್ ಐ ಬಾಲ್ ಟ್ರಾಕ್ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಇದು ಜನರ ಐ ಬಾಲ್ ಮಸಲ್ಸ್ ಉತ್ತಮಪಡಿಸಲು ನೆರವಾಗುತ್ತದೆ. ಸರಳ ಹಾಗೂ ಸುಲಭ ಈ ಆ್ಯಪ್ ಆರೋಗ್ಯದ ದೃಷ್ಟಿಯಿಂದ ಅತೀ ಉತ್ತಮವಾಗಿದೆ. ಸಿಸ್ಟಮ್ ಕೆಲಸ, ಐಟಿ ಬಿಟಿ ಕೆಲಸ ಸೇರಿದಂತೆ ಹಲವು ಕೆಲಸಗಳಲ್ಲಿ ಕಣ್ಣು ಹೆಚ್ಚು ದಣಿಯುತ್ತದೆ. ಒಂದೇ ಕಡೆ ನೋಡುವುದು, ಒಂದೇ ಕಡೆ ಗಮನದಿಂದ ಕಣ್ಣಿನ ಗುಡ್ಡುಗಳು ಹೆಚ್ಚು ಆಯಾಸಗೊಳ್ಳುತ್ತದೆ. ಇದರ ಜೊತೆಗೆ ಕಣ್ಣಿನ ಮಸಲ್ಸ್ ಯಾವುದೇ ಚಲನೆ ಇಲ್ಲದಂತಾಗುತ್ತದೆ. ಈ ಎಲ್ಲಾ ಸಮಸ್ಯೆ ಪರಿಹರಿಸಲು ನೂತನ ಆ್ಯಪ್ ಅಭಿವೃದ್ಧಿಪಡಿಸಿದ್ದಾಳೆ. ಈ ಆ್ಯಪ್ ತೆರೆದ ತಕ್ಷಣ ಸಣ್ಣ ಬಾಲ್ ಸ್ಕ್ರೀನ್ ಸುತ್ತಲೂ ಓಡಾಡಲು ಆರಂಭಿಸುತ್ತದೆ. ಈ ಬಾಲ್ ಹೇಗೆ ಓಡುತ್ತೋ ಕಣ್ಣಿನ ಗುಡ್ಡಗಳು ಚಲಿಸುತ್ತದೆ. ಇದರಿಂದ ಕಣ್ಣಿನ ಮಸಲ್ಸ್ ದೃಢವಾಗುತ್ತದೆ. ಇದರ ಜೊತೆಗೆ ಆರೋಗ್ಯಕರ ಕಣ್ಣಿನ ವ್ಯಾಯಾಮಗಳು ಈ ಆ್ಯಪ್‌ನಲ್ಲಿದೆ.

Latest Videos

undefined

ಭಾರತಕ್ಕೆ ಬಂದಿರುವ ಆಪಲ್ ಸಿಇಒ ಟಿಮ್ ಕುಕ್‌ಗೆ ವಡಾ ಪಾವ್‌ ಪಾರ್ಟಿ ಕೊಡಿಸಿದ ಮಾಧುರಿ ದೀಕ್ಷಿತ್; ಫೋಟೋ ವೈರಲ್

ಆ್ಯಪಲ್ ಡೆವಲಪ್ಪರ್ ವಿಡಿಯೋ ಕಾನ್ಫೆರೆನ್ಸ್‌ನಲ್ಲಿ ಮಾತನಾಡಿದ ಟಿಮ್ ಕುಕ್, ಆಸ್ಮಿ ಜೈನ್ ವಿನೂತನ ಆ್ಯಪ್ ಕೊಂಡಾಡಿದ್ದಾರೆ. ಜನರ ಆರೋಗ್ಯಕ್ಕೆ ಸಹಾಯ ಮಾಡುವ ಮೂಲಕ ಪ್ರಪಂಚದ ಮೇಲೆ ಆಳವಾದ ಪ್ರಭಾವ ಬೀರಲು ಆಸ್ಮಿ ಜೈನ್ ಈಗಾಗಲೇ ಸಿದ್ಧಳಾಗಿದ್ದಾಳೆ. ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಆ್ಯಪಲ್ ನೆರವು ನೀಡುತ್ತದೆ. ಯಾರು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ವಿನೂತನವಾಗಿ ಯೋಚಿಸಿ, ಅಭಿವೃದ್ಧಿಪಡಿಸಿ ಜೀವನದ ಭಾಗವಾಗಿಸಲು ಪ್ರಯತ್ನಿಸುವ ಯುವ ಪ್ರತಿಭೆಗಳಿಗೆ ಆ್ಯಪ್ ವೇದಿಕೆ ಒದಗಿಸಲಿದೆ. ಭಾರತದ ಐಒಎಸ್ ಡೆವಲಪ್ಪರ್ಸ್ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಅತೀವ ಸಂತಸವಾಗಿದೆ. ಅದರಲ್ಲೂ ಆಸ್ಮಿಯ ವಿನೂತನ ಪ್ರಯೋಗ ನಿಜಕ್ಕೂ ಹೆಮ್ಮೆಯಾಗುತ್ತಿದೆ. ಇದು ಪ್ರತಿಭಗೆ ಹಿಡಿದ ಕನ್ನಡಿಯಾಗಿದೆ.ಇದೀಗ ಆಸ್ಮಿ ಜೈನ್ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಮುಂದೆ ಆಸ್ಮಿ ಜೈನ್ ಅಭಿವೃದ್ಧಿಪಡಿಸುವ ಆ್ಯಪ್ ಕುರಿತು ನಾನು ತೀವ್ರ ಕುತೂಹಲವಾಗಿದ್ದೇನೆ ಎಂದು ಟಿಮ್ ಕುಕ್ ಹೇಳಿದ್ದಾರೆ.

ಸಚಿವ ರಾಜೀವ್ ಚಂದ್ರಶೇಖರ್ ಬೇಟಿಯಾದ ಕುಕ್, ಮೋದಿ ದೂರದೃಷ್ಟಿ ಪ್ರಶಂಸಿಸಿದ ಆ್ಯಪಲ್ ಸಿಇಒ!

ಆಸ್ಮಿ ಜೈನ್ ಐ ಬಾಲ್ ಟ್ರಾಕ್ ಆ್ಯಪ್ ಅಭಿವೃದ್ಧಿಪಡಿಸಲು ಒಂದು ಕಾರಣವಿದೆ. ಆಸ್ಮಿ ಜೈನ್ ಗೆಳೆಯ ಸಂಬಂಧಿಕರೊಬ್ಬರು ದಿಢೀರ್ ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿದ್ದರು. ಮೆದುಳಿನ ಸರ್ಜರಿ ಮಾಡಲಾಗಿತ್ತು. ಮುಖ ಪಾರ್ಶವಾಯು ಕಾರಣ ಕಣ್ಣಿನ ಚಲನೆ ಕಳೆದುಕೊಂಡರು. ಈ ಘಟನೆ ಆಸ್ಮಿ ಜೈನ್ ಆರೋಗ್ಯ ಕುರಿತು ಯೋಚಿಸುವಂತೆ ಮಾಡಿತು. ಅದರಲ್ಲೂ ಕಣ್ಣಿನ ಆರೋಗ್ಯದ ದೃಷ್ಟಿಯಿಂದ ವಿನೂತನ ಪ್ರಯೋಗಕ್ಕೆ ಇಳಿಯಬೇಕಾಯಿತು.
 

click me!