Google Chrome New Logo: ಎಂಟು ವರ್ಷಗಳ ಬಳಿಕ ಲೋಗೋ ಬದಲಾಯಿಸುತ್ತಿರುವ ಟೆಕ್‌ ದೈತ್ಯ!

By Contributor Asianet  |  First Published Feb 7, 2022, 11:00 AM IST

ಹೊಸ ಲೋಗೋವಿನಲ್ಲಿನ ಬದಲಾವಣೆಗಳು ಸಾಕಷ್ಟು ಸೂಕ್ಷ್ಮವಾಗಿದ್ದರೂ ಕ್ರೋಮ್ 2014ರ ನಂತರ ಮೊದಲ ಬಾರಿಗೆ ತನ್ನ ಲೋಗೋವನ್ನು ಬದಲಾಯಿಸುತ್ತಿದೆ


Tech Desk: ಟೆಕ್‌ ದೈತ್ಯ ಗೂಗಲ್‌ ತನ್ನ ಬ್ರೌಸರ್‌ ಗೂಗಲ್‌ ಕ್ರೋಮ್‌ನ ಲೋಗೋ (Google Chrome) 8 ವರ್ಷಗಳ ಬಳಿಕ ಬದಲಾಯಿಸಿದೆ. ಹೊಸ ಲೋಗೋವಿನಲ್ಲಿನ ಬದಲಾವಣೆಗಳು ಸಾಕಷ್ಟು ಸೂಕ್ಷ್ಮವಾಗಿದ್ದರೂ ಕ್ರೋಮ್ 2014ರ ನಂತರ ಮೊದಲ ಬಾರಿಗೆ ತನ್ನ ಲೋಗೋವನ್ನು ಬದಲಾಯಿಸುತ್ತಿದೆ. ದಿ ವರ್ಜ್ ವರದಿ ಪ್ರಕಾರ, ಪ್ರತಿ ಬಣ್ಣದ ನಡುವಿನ ಅಂಚಿನಲ್ಲಿದ್ದ ನೆರಳುಗಳನ್ನು ಬದಲಾಯಿಸಿ, ಕೆಂಪು, ಹಳದಿ ಮತ್ತು ಹಸಿರು  ಬಣ್ಣಗಳನ್ನು ಈಗ ಸರಳವಾಗಿ ಸಮತಟ್ಟಾಗಿ ಡಿಸೈನ್‌ ಮಾಡಲಾಗಿದೆ.  ಈ ಬದಲಾವಣೆಗಳಿಂದಾಗಿ, ಮಧ್ಯದಲ್ಲಿರುವ ನೀಲಿ ವೃತ್ತವು ದೊಡ್ಡದಾಗಿದೆ. ಲೋಗೋದಲ್ಲಿನ ಬಣ್ಣಗಳು ಹೆಚ್ಚು ರೋಮಾಂಚಕವಾಗಿ (Vibrant) ಕಾಣುತ್ತಿವೆ. 

ಮೇನ್‌ ಕ್ರೋಮ್ ಲೋಗೋ ಎಲ್ಲಾ ಸಿಸ್ಟಂಗಳಲ್ಲಿಯೂ ಒಂದೇ ರೀತಿ ಕಾಣಿಸುವುದಿಲ್ಲ. ChromeOS ನಲ್ಲಿ, ಇತರ ಸಿಸ್ಟಂ ಐಕಾನ್‌ಗಳಿಗೆ ಪೂರಕವಾಗಿ ಲೋಗೋ ಹೆಚ್ಚು ವರ್ಣರಂಜಿತವಾಗಿ ಕಾಣುತ್ತದೆ. ಆದರೆ MacOS ನಲ್ಲಿ, ಲೋಗೋ ಸಣ್ಣ ನೆರಳನ್ನು ಹೊಂದಿರುತ್ತದೆ, ಅದು ಲೋಗೊದಿಂದ ಹೊರಬಂದಂತೆ  (popping out) ಗೋಚರಿಸುತ್ತದೆ. , Windows 10 ಮತ್ತು 11 ಆವೃತ್ತಿಯು ಹೆಚ್ಚು ಡ್ರಾಮೆಟಿಕ್ ಗ್ರೇಡಿಯಂಟನ್ನು ಹೊಂದಿದ್ದು ಅದು ಇತರ ವಿಂಡೋಸ್ ಐಕಾನ್‌ಗಳ ಶೈಲಿಯೊಂದಿಗೆ ಹೊಂದಿಕೊಳ್ಳುತ್ತದೆ.

Tap to resize

Latest Videos

undefined

ಇದನ್ನೂ ಓದಿ: Google- Bharti Airtel Deal: ಟೆಲಿಕಾಂ ಕಂಪನಿಯಲ್ಲಿ $1 ಬಿಲಿಯನ್‌ ಹೂಡಿಕೆ ಮಾಡಲಿರುವ ಟೆಕ್‌ ದೈತ್ಯ!

ಶೀಘ್ರದಲ್ಲೇ ಎಲ್ಲ ಆವೃತ್ತಿಗೂ ಬಿಡುಗಡೆ: ದಿ ವರ್ಜ್ ಪ್ರಕಾರ, ನೀವು ಕ್ರೋಮ್ ಕ್ಯಾನರಿ (Chrome Canary) - ಕ್ರೋಮ್‌ ನ ಡೆವಲಪರ್ ಆವೃತ್ತಿಯನ್ನು ಬಳಸಿದರೆ ಹೊಸ ಐಕಾನನ್ನು ಕಾಣಬಹುದು, ಆದರೆ ಮುಂದಿನ ಕೆಲವು ತಿಂಗಳುಗಳಲ್ಲಿ ಇದು ಎಲ್ಲ ಆವೃತ್ತಿಗಳಿಗೆ ಬಿಡುಗಡೆಯಾಗಲಿದೆ. 

 

Some of you might have noticed a new icon in Chrome’s Canary update today. Yes! we’re refreshing Chrome’s brand icons for the first time in 8 years. The new icons will start to appear across your devices soon. pic.twitter.com/aaaRRzFLI1

— Elvin 🌈 (@elvin_not_11)

 

ಕ್ರೋಮ್ ಲೋಗೋದ ಬೀಟಾ ಮತ್ತು ಡೆವಲಪರ್ ಆವೃತ್ತಿಗಳಿಗೆ ಕೆಲವು ಹೊಸ ಐಕಾನ್‌ಗಳು ಸಹ ಇವೆ, iOS ನಲ್ಲಿ ಬೀಟಾ ಅಪ್ಲಿಕೇಶನ್‌ಗಾಗಿ ಬ್ಲೂಪ್ರಿಂಟ್-ಶೈಲಿಯ ಐಕಾನ್ ಆಗಿರುವ ಅತ್ಯಂತ ಡ್ರಾಮೆಟಿಕ್ ಬದಲಾವಣೆ ಮಾಡಲಾಗಿದೆ.  2008 ರಿಂದ ಇಲ್ಲಿಯವರೆಗೆ, ಕ್ರೋಮ್ ಲೋಗೋ ಕ್ರಮೇಣ ಸರಳವಾಗುತ್ತಿದೆ. ಹೊಳೆಯುವ, ಮೂರು-ಆಯಾಮದ ಲಾಂಛನವಾಗಿ ಪ್ರಾರಂಭವಾದುದನ್ನು‌ ಪ್ರಸ್ತುತ 2D ಚಿಹ್ನೆಯಾಗಿ ಬದಲಾವಣೆ ಮಾಡಲಾಗಿದೆ. 

ಇದನ್ನೂ ಓದಿ: WhatsApp Limited Backup: ಅನ್‌ಲಿಮಿಟೆಡ್ ಗೂಗಲ್‌ ಡ್ರೈವ್ ಬ್ಯಾಕಪ್‌ಗೆ ಕಡಿವಾಣ?

Block Chain Technologyಯಲ್ಲಿ ಟೆಕ್‌ ದೈತ್ಯನ ಎಂಟ್ರಿ: ಪ್ರಪಂಚದಾದ್ಯಂತ ಬ್ಲಾಕ್‌ಚೈನ್ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಈ ಬೆನ್ನಲ್ಲೇ ಟೆಕ್‌ ದೈತ್ಯ ಗೂಗಲ್‌ ಕೂಡ ಬ್ಲಾಕ್‌ಚೈನ್ ತಂತ್ರಜ್ಞಾನ ಅಳವಡಿಸಿಕೊಳ್ಳಲು ಗೂಗಲ್ ಸಜ್ಜಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಕಂಪನಿಯು ಹೊಸ ಘಟಕವನ್ನು ಸ್ಥಾಪಿಸಿದೆ ಎಂದು ವರದಿಯಾಗಿದ್ದು ಇದು ಬ್ಲಾಕ್‌ಚೈನ್ ತಂತ್ರಜ್ಞಾನದ ಕಾರ್ಯಸಾಧ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ ಈ ಕ್ರಮದೊಂದಿಗೆ ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್ (Distributed Computing) ಮತ್ತು ಡೇಟಾ ಸಂಗ್ರಹಣೆ ತಂತ್ರಜ್ಞಾನಗಳಲ್ಲಿ ಮುನ್ನಡೆ ಸಾಧಿಸಲು ಗೂಗಲ್ ಸಿದ್ಧವಾಗುತ್ತಿದೆ. 

ಬ್ಲಾಕ್‌ಚೈನ್ ತಂತ್ರಜ್ಞಾನ ಗೂಗಲ್‌ಗೆ  ಅಥವಾ ಮಾರುಕಟ್ಟೆಗೆ ಹೊಸದೇನಲ್ಲ. ತಂತ್ರಜ್ಞಾನ ಸಂಸ್ಥೆಗಳು ತಮ್ಮ ಜಾಗದಲ್ಲಿ ಸೂಕ್ತವೆಂದು ತೋರುವ ಹಲವಾರು ಕಾರ್ಯಗಳಿಗಾಗಿ ಬ್ಲಾಕ್‌ಚೈನನ್ನು ಅಳವಡಿಸಿಕೊಳ್ಳಲು ಸಾಲುಗಟ್ಟಿ ನಿಂತಿವೆ. ಈ ದಿಕ್ಕಿನಲ್ಲಿ ಗೂಗಲ್‌ನ ಕೂಡ ಕಾರ್ಯನರ್ವಹಿಸುತ್ತಿದೆ ಎಂದು  ಬ್ಲೂಮ್‌ಬರ್ಗ್ ವರದಿಯಲ್ಲಿ ಕಂಪನಿಯ ಇಮೇಲ್ ಉಲ್ಲೇಖಿಸಿ ತಿಳಿಸಲಾಗಿದೆ. ಬ್ಲಾಕ್‌ಚೈನ್ ಮತ್ತು ಸಂಬಂಧಿತ ತಂತ್ರಜ್ಞಾನದಲ್ಲಿ ಕೆಲಸ ಮಾಡುವ ಹೊಸ ವಿಭಾಗವನ್ನು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.

ಭಾರತೀಯ ಶಿವಕುಮಾರ್ ವೆಂಕಟರಾಮ ನೇಮಕ: ಇಮೇಲ್‌ನ ಪ್ರಕಾರ, "ಬ್ಲಾಕ್‌ಚೈನ್ ಮತ್ತು ಇತರ next-gen ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್ ಮತ್ತು ಡೇಟಾ ಸಂಗ್ರಹಣೆ ತಂತ್ರಜ್ಞಾನಗಳ" ಮೇಲೆ ಕೇಂದ್ರೀಕರಿಸಿದ ಘಟಕವನ್ನು ಗೂಗಲ್ ಸ್ಥಾಪಿಸಿದೆ. ಇದಕ್ಕಾಗಿ ಕಂಪನಿಯು ಕಳೆದ 20 ವರ್ಷಗಳಿಂದ ಗೂಗಲ್‌ನ ಇಂಜಿನಿಯರಿಂಗ್ ಉಪಾಧ್ಯಕ್ಷ ಶಿವಕುಮಾರ್ ವೆಂಕಟರಾಮನ್ (Shivakumar Venkataraman) ಅವರನ್ನು ನೇಮಕ ಮಾಡಿದೆ. ವೆಂಕಟರಾಮನ್ ಈಗ ಘಟಕದ "founding leader" ಆಗಿರುತ್ತಾರೆ.

click me!