ಪಕ್ಷಿ ಹೋಯ್ತು ನಾಯಿ ಬಂತು: ಟ್ವಿಟ್ಟರ್‌ನ ಬದಲಾದ ಲೋಗೋಗೆ ಅಸಲಿ ಕಾರಣ ಇಲ್ಲಿದೆ..

By BK Ashwin  |  First Published Apr 4, 2023, 12:23 PM IST

ನೀಲಿ ಪುಟ್ಟ ಪಕ್ಷಿಯ ಲೋಗೋ ಬದಲು ಡಾಗ್‌ಕಾಯಿನ್‌ ಕ್ರಿಪ್ಟೋಕರೆನ್ಸಿಯ ಲೋಗೋ ನಾಯಿಯನ್ನು ಟ್ವಿಟ್ಟರ್‌ನ ಲೋಗೋವನ್ನಾಗಿ ಬದಲಾಯಿಸಿದ್ದಾರೆ. ಸದ್ಯ, ವೆಬ್‌ ಆವೃತ್ತಿಯಲ್ಲಿ ಈ ಹೊಸ ಲೋಗೋ ಹೋಮ್ ಬಟನ್ ಆಗಿ ಕಾರ್ಯನಿರ್ವಹಿಸುತ್ತಿದೆ.


ವಾಷಿಂಗ್ಟನ್ (ಏಪ್ರಿಲ್‌ 4, 2023): ಟ್ವಿಟ್ಟರ್‌ ಅನ್ನು ಜಗತ್ತಿನ ನಂ. 1 ಶ್ರೀಮಂತ ವ್ಯಕ್ತಿ ಎಲೋನ್‌ ಮಸ್ಕ್‌  ಖರೀದಿ ಮಾಡಿದಾಗಿನಿಂದ ಸಾಕಷ್ಟು ಬದಲಾವಣೆಗಳಾಗುತ್ತಿದೆ. ಟ್ವಿಟ್ಟರ್‌ ಸಂಸ್ಥೆಯ ಉದ್ಯೋಗಿಗಳ ಕಡಿತ, ಬ್ಲೂ ಟಿಕ್‌ಗೆ ಹಣ, ಟ್ವೀಟ್‌ ಮಾಡಲು ಅಕ್ಷರಗಳ ಸಂಖ್ಯೆ ಹೆಚ್ಚಳ ಸೇರಿದಂತೆ ನಾನಾ ಬದಲಾವಣೆಗಳನ್ನು ಮಾಡುವ ಎಲೋನ್‌ ಮಸ್ಕ್‌, ಈಗ ಮೈಕ್ರೋ-ಬ್ಲಾಗಿಂಗ್ ಸೈಟ್‌ಗೆ ಮತ್ತೊಂದು ನವೀಕರಣ ಮಾಡಿದ್ದಾರೆ. ಈ ಬಾರಿ ಅವರು ಟ್ವಿಟ್ಟರ್‌ನ ಐಕಾನಿಕ್‌ ಎನಿಸಿಕೊಂಡಿದ್ದ ಲೋಗೋವನ್ನೇ ಬದಲಾಯಿಸಿದ್ದಾರೆ.

ನೀಲಿ ಪುಟ್ಟ ಪಕ್ಷಿಯ ಲೋಗೋ ಬದಲು Dogecoin ಕ್ರಿಪ್ಟೋಕರೆನ್ಸಿಯ ಲೋಗೋ ನಾಯಿಯನ್ನು ಟ್ವಿಟ್ಟರ್‌ನ ಲೋಗೋವನ್ನಾಗಿ ಬದಲಾಯಿಸಿದ್ದಾರೆ. ಸದ್ಯ, ವೆಬ್‌ ಆವೃತ್ತಿಯಲ್ಲಿ ಈ ಹೊಸ ಲೋಗೋ ಹೋಮ್ ಬಟನ್ ಆಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಮೊಬೈಲ್‌ ಅಪ್ಲಿಕೇಷನ್‌ಗಳಲ್ಲಿ ಇದು ಬದಲಾಗಿಲ್ಲ. ಈ ಬದಲಾದ ಲೋಗೋ ನೋಡಿದ ಟ್ವಿಟ್ಟರ್‌ ಬಳಕೆದಾರರು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಅಲ್ಲದೆ, ಹಲವರು #TwitterLogo ಎಂಬ ಹ್ಯಾಶ್‌ಟ್ಯಾಗ್‌ ಬಳಸಿಕೊಂಡು ಇದನ್ನು ಟ್ರೋಲ್‌ ಮಾಡುತ್ತಿದ್ದಾರೆ. 

Latest Videos

undefined

ಇದನ್ನು ಓದಿ: ಶೀಘ್ರದಲ್ಲೇ ಟ್ವಿಟ್ಟರ್‌ ಅಕ್ಷರ ಮಿತಿ 10,000ಕ್ಕೆ ಏರಿಕೆ: ಎಲಾನ್‌ ಮಸ್ಕ್‌ ಘೋಷಣೆ

ಸೋಮವಾರದ ಟ್ವಿಟ್ಟರ್‌ನ  ವೆಬ್ ಆವೃತ್ತಿಯಲ್ಲಿ 2013 ರಲ್ಲಿ ಜೋಕ್‌ನಂತೆ ರಚಿಸಲಾದ ಡಾಗ್‌ಕಾಯಿನ್ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿಯ ಲೋಗೋದ ಭಾಗವಾಗಿರುವ 'ಡಾಗ್' ಮೀಮ್ಸ್‌ ಅನ್ನು ಗಮನಿಸಿದ್ದಾರೆ. ಅಲ್ಲದೆ,ಈ ಸಂಬಂಧ ಎಲಾನ್‌ ಮಸ್ಕ್ ಅವರು ತಮ್ಮ ಖಾತೆಯಲ್ಲಿ ಮೀಮ್ಸ್‌ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಕಾರಿನಲ್ಲಿರುವ 'ಡಾಗ್' ಮೆಮೆ (ಶಿಬಾ ಇನುವಿನ ಮುಖವನ್ನು ಒಳಗೊಂಡಿರುತ್ತದೆ) ಮತ್ತು ತನ್ನ ಡ್ರೈವಿಂಗ್ ಲೈಸೆನ್ಸ್ ಅನ್ನು ನೋಡುತ್ತಿರುವ ಪೊಲೀಸ್ ಅಧಿಕಾರಿಗೆ ತನ್ನ ಫೋಟೋವನ್ನು ಬದಲಾಯಿಸಲಾಗಿದೆ ಎಂದು ಹೇಳುತ್ತದೆ.

ಬಿಟ್‌ಕಾಯಿನ್‌ನಂತಹ ಇತರ ಕ್ರಿಪ್ಟೋಕರೆನ್ಸಿಗಳನ್ನು ಅಪಹಾಸ್ಯ ಮಾಡಲು 2013 ರಲ್ಲಿ ಜೋಕ್‌ನಂತೆ ರಚಿಸಲಾದ ನಾಯಿಯ ಮುಖವುಳ್ಳ (ಶಿಬಾ ಇನು) ಡಾಗ್‌ಕಾಯಿನ್ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿಯ ಲೋಗೋ ಎಂದು ಈ ಲೋಗೋ ಪ್ರಸಿದ್ಧವಾಗಿತ್ತು. ಈ ಮಧ್ಯೆ, ಮಾರ್ಚ್ 26, 2022 ರ ಸ್ಕ್ರೀನ್‌ಶಾಟ್ ಅನ್ನು ಸಹ ಟ್ವಿಟ್ಟರ್‌ ಸಿಇಒ ಎಲೋನ್‌ ಮಸ್ಕ್‌ ಹಂಚಿಕೊಂಡಿದ್ದು, ಅವರ ಮತ್ತು ಚೇರ್‌ಮನ್‌ ಎಂಬ ಹೆಸರು ಹೊಂದಿರುವ ಖಾತೆಯ ನಡುವಿನ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಚೇರ್‌ಮನ್‌ ಎನ್ನುವವರು ಟ್ವಿಟ್ಟರ್‌ ಅನ್ನು ಖರೀದಿಸಿ, ಬಳಿಕ ಪಕ್ಷ ಲೋಗೋವನ್ನು ಡಾಗ್‌ ಲೋಗೋವನ್ನಾಗಿ ಬದಲಾಯಿಸುವಂತೆ ಕೇಳಿದ್ದಾರೆ.

The most entertaining outcome is the most likely pic.twitter.com/BFPTV2NLfI

— Chairman (@WSBChairman)

ಇದನ್ನೂ ಓದಿ:  ಸೋಷಿಯಲ್‌ ಮೀಡಿಯಾ ಬಳಕೆದಾರರಿಗೆ ಹೊಸ ಅಸ್ತ್ರ: ಸಾಮಾಜಿಕ ಜಾಲತಾಣಗಳ ಏಕಪಕ್ಷೀಯ ನಿರ್ಧಾರ ಪ್ರಶ್ನೆಗೆ ಅವಕಾಶ

ಈ ಪೋಸ್ಟ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಎಲಾನ್‌ ಮಸ್ಕ್, "ಭರವಸೆ ನೀಡಿದಂತೆ" ಎಂದು ಬರೆದುಕೊಂಡಿದ್ದಾರೆ. 44 ಬಿಲಿಯನ್‌ ಡಾಲರ್ ವ್ಯವಹಾರದಲ್ಲಿ ಟ್ವಿಟ್ಟರ್‌ ಅನ್ನು ಖರೀದಿಸಿದ ಎಲೋನ್‌ ಮಸ್ಕ್‌, ಈ ಮೀಮ್ಸ್‌ನ ಪ್ರಸಿದ್ಧ ಸೂಪರ್ ಫ್ಯಾನ್ ಆಗಿದ್ದಾರೆ. ಇನ್ನೊಂದೆಡೆ, ಟ್ವಿಟ್ಟರ್‌ ಲೋಗೋವನ್ನು ವೆಬ್‌ನಲ್ಲಿ ಬದಲಾಯಿಸಿದ ನಂತರ  Dogecoin ನ ಮೌಲ್ಯವು ಶೇಕಡಾ 20 ಕ್ಕಿಂತ ಹೆಚ್ಚು ಏರಿಕೆಯಾಗಿದೆ ಎನ್ನುವುದು ಗಮನಾರ್ಹ. 

As promised pic.twitter.com/Jc1TnAqxAV

— Elon Musk (@elonmusk)

ಟ್ವಿಟ್ಟರ್‌ ಅನ್ನು ಖರೀದಿಸುವ ಮೊದಲು ಮಾರ್ಚ್ 2022 ರಲ್ಲಿ ಟ್ವೀಟ್‌ ಮಾಡಿದ್ದ ಎಲೋನ್‌ ಮಸ್ಕ್, ಟ್ವಿಟ್ಟರ್‌ ವಾಕ್ ಸ್ವಾತಂತ್ರ್ಯದ ತತ್ವಗಳನ್ನು ಅನುಸರಿಸಲು ವಿಫಲವಾದರೆ ಮೂಲಭೂತವಾಗಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಇದಕ್ಕೆ ಏನು ಮಾಡಬೇಕು ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ @WSBCchairman ಟ್ವಿಟ್ಟರ್‌ ಅನ್ನು ಖರೀದಿಸಿ ಮತ್ತು ಪಕ್ಷ ಲೋಗೋವನ್ನು ನಾಯಿಗೆ ಬದಲಾಯಿಸಿ ಎಂದು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೂ ಮೊದಲು, ಫೆಬ್ರವರಿ 15 ರಂದು, ಎಲೋನ್‌ ಮಸ್ಕ್, ಡಾಗ್‌ಕಾಯಿನ್ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿ ಲೋಗೋದ ಫೋಟೋ ಪೋಸ್ಟ್‌ ಮಾಡಿದ್ದು, "ಟ್ವಿಟ್ಟರ್‌ನ ಹೊಸ ಸಿಇಒ ಅದ್ಭುತವಾಗಿದೆ" ಎಂಬ ಕ್ಯಾಪ್ಷನ್‌ ಹಂಚಿಕೊಂಡಿದ್ದರು. 

pic.twitter.com/wmN5WxUhfQ

— Elon Musk (@elonmusk)

ಇದನ್ನೂ ಓದಿ: ಟ್ವಿಟ್ಟರ್‌ ಕಚೇರಿ ಬಾಡಿಗೆ ಕಟ್ಟೋಕೂ ದುಡ್ಡಿಲ್ಲದೆ ಕಾಫಿ ಮೇಕರ್, ಲೋಗೋವನ್ನೂ ಹರಾಜಿಗೆ ಹಾಕಿದ ಎಲಾನ್‌ ಮಸ್ಕ್‌..!

click me!