ಇನ್ಮುಂದೆ ಡಾಕ್ಯುಮೆಂಟ್ ಸ್ಕ್ಯಾನ್ ವ್ಯಾಟ್ಸಾಪ್‌ನಲ್ಲಿ ಮಾಡಿ, ಹೊಸ ಫೀಚರ್!

By Chethan Kumar  |  First Published Dec 24, 2024, 2:57 PM IST

ಯಾವುದೇ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಲು, ಪಿಡಿಎಫ್ ರೂಪದಲ್ಲಿ ಅಥವಾ ಇತರ ಮಾದರಿಯಲ್ಲಿ ಕಳುಹಿಸಲು ಬೇರ ಬೇರೆ ಆ್ಯಪ್ ಬಳಸುತ್ತಿದ್ದೀರಾ? ಇನ್ನುಮುಂದೆ ಇದರ ಅಗತ್ಯವಿಲ್ಲ. ನೀವು ವ್ಯಾಟ್ಸಾಪ್ ಕ್ಯಾಮೆರಾ ಮೂಲಕವೇ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಲು ಹೊಸ ಫೀಚರ್ ಪರಿಚಯಿಸಲಾಗಿದೆ.


ನವದೆಹಲಿ(ಡಿ.24) ಡಾಕ್ಯುಮೆಂಟ್ ಸ್ಕ್ಯಾನ್ ಮಾಡಲು ಹಲವರು ಬೇರೆ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿರುತ್ತಾರೆ. ಅಥವಾ ಅಗತ್ಯಬಿದ್ದಾಗ ಡೌನ್ಲೋಡ್ ಮಾಡಿ ಬಳಿಕ ಡಿಲೀಟ್ ಮಾಡುತ್ತಾರೆ. ಅನಗತ್ಯ ಆ್ಯಪ್‌ಗಳು ಅಥವಾ ಪ್ರತಿ ದಿನ ಬಳಕೆ ಮಾಡದ ಹಲವು ಆ್ಯಪ್‌ಗಳಿಂದ ಫೋನ್ ಸ್ಟೋರೇಜ್ ತುಂಬಿಹೋಗುವ ಸಾಧ್ಯತೆ ಹೆಚ್ಚು. ಈ ಎಲ್ಲಾ ಸಮಸ್ಯೆಗಳಿಗೆ ಇದೀಗ ವ್ಯಾಟ್ಸಾಪ್ ಉತ್ತರ ನೀಡಿದೆ. ವ್ಯಾಟ್ಸಾಪ್ ತನ್ನ ಬಳಕೆದಾರರಿಗೆ ಇದೀಗ ಮತ್ತೊಂದು ಫೀಚರ್ ಪರಿಚಯಿಸಿದೆ. ಇದು ಡಾಕ್ಯುಮೆಂಟ್ ಸ್ಕ್ಯಾನ್ ಫೀಚರ್. ಇನ್ಮುಂದೆ ಗ್ರಾಹಕರು ಬೇರೆ ಬೇರೆ ಆ್ಯಪ್ ಬಳಸುವ ಅಗತ್ಯವಿಲ್ಲ. ವ್ಯಾಟ್ಸಾಪ್ ಮೂಲಕವೇ ಎಲ್ಲವೂ ಸಾಧ್ಯ.

ವ್ಯಾಟ್ಸಾಪ್ ಹೊಸ ಅಪ್‌ಡೇಟ್ ಮಾಡಿದೆ. ಇದರಲ್ಲಿ ಸ್ಕ್ಯಾನ್ ಫೀಚರ್ ಪರಿಚಯಿಸಿದೆ. ಇತ್ತೀಚಿಗಿನ iOS ಅಪ್‌ಡೇಟ್( ವರ್ಶನ್ 24.25.80 ) ಮೂಲಕ ವ್ಯಾಟ್ಸಾಪ್ ತನ್ನ ಬಳಕೆದಾರರಿಗೆ ಡಾಕ್ಯುಮೆಂಟ್ ಸ್ಕ್ಯಾನ್ ಫೀಚರ್ ನೀಡಿದೆ. ತನ್ನ ಹೊಸ ಫೀಚರ್ ಕುರಿತು ವ್ಯಾಟ್ಸಾಪ್ WABetaInfo ಮೂಲಕ ಸ್ಪಷ್ಟಪಡಿಸಿದೆ.

Tap to resize

Latest Videos

undefined

ಹೊಸ ವರ್ಷಕ್ಕೆ ಬಂಪರ್ ಕೊಡುಗೆ ಘೋಷಿಸಿದ ವ್ಯಾಟ್ಸಾಪ್, ಉಚಿತ ಫೀಚರ್‌ಗೆ ಅಪ್‌ಡೇಟ್ ಮಾಡಿ!

ಸಾಮಾನ್ಯವಾಗಿ ವ್ಯಾಟ್ಸಾಪ್ ಬಳಕೆದಾರರು ಡಾಕ್ಯುಮೆಂಟ್ ಸ್ಕ್ಯಾನ್‌ಗಾಗಿ ಬೇರೆ ಬೇರೆ ಆ್ಯಪ್ ಬಳಸಬೇಕಿತ್ತು. ಬಳಿಕ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಿ ವ್ಯಾಟ್ಸಾಪ್ ಮೂಲಕ ಕಳುಹಿಸಲಾಗಿತ್ತು. ಬೇರೆ ಆ್ಯಪ್ ಮೂಲಕ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಿ ಸೇವ್ ಮಾಡಿಕೊಳ್ಳಬೇಕಿತ್ತು. ಇದೀಗ ಇದೆಲ್ಲವೂ ಒಂದೇ ಆ್ಯಪ್ ವ್ಯಾಟ್ಸಾಪ್ ಮೂಲಕ ನಡೆಯಲಿದೆ. ಬಳಕೆದಾರರು ವ್ಯಾಟ್ಸಾಪ್ ಕ್ಯಾಮೆರಾ ಒನ್ ಮಾಡಿ, ಫೋಟೋ ಅಥವಾ ಸ್ಕ್ಯಾನ್ ಆಯ್ಕೆ ಕ್ಲಿಕ್ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ವ್ಯಾಟ್ಸಾಪ್ ಕ್ಯಾಮೆರಾ ಫೋಟೋ ಆಯ್ಕೆಯಲ್ಲಿರುತ್ತದೆ. ಆದರೆ ಡಾಕ್ಯುಮೆಂಟ್ ಸ್ಕ್ಯಾನ್ ಬೇಕಿದ್ದಲ್ಲಿ ಸ್ಕ್ಯಾನ್ ಆಯ್ಕೆ ಟ್ಯಾಪ್ ಮಾಡಿದರೆ ಸಾಕು. ಬಳಿಕ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಬಹುದು. ಸೇವ್ ಮಾಡುವಾಗ ಜೆಪಿಜಿ, ಪಿಡಿಎಫ್ ಅಥವಾ ಇತರ ಮಾದರಿ ಕೇಳಲಿದೆ. ಈ ವೇಳೆ ನಿಮ್ಮ ಆಯ್ಕೆ ಕೊಟ್ಟರೆ ಸ್ಕ್ಯಾನ್ ಕಾಪಿ ಸೇವ್ ಆಗಲಿದೆ. ಸೆಂಡ್ ನೀಡಿದರೆ ಈ ಕಾಪಿಯನ್ನು ವ್ಯಾಟ್ಸಾಪ್ ಮೂಲಕ ಕಳುಹಿಸಬಹುದು.

ಸ್ಕ್ಯಾನ್ ಡಾಕ್ಯುಮೆಂಟ್ ಎಡ್‌ಜಸ್ಟ್ ಮಾಡಲು ಸಾಧ್ಯವಿದೆ. ಅನಗತ್ಯ ಭಾಗಗಳನ್ನು ಕತ್ತರಿಸಿ ಡಾಕ್ಯುಮೆಂಟ್ ಸರಿಯಾಗಿ ಕಾಣುವಂತೆ ಮಾಡಲು ಸಾಧ್ಯವಿದೆ. ಇಷ್ಟೇ ಅಲ್ಲ ನಿಮ್ಮ ಡಾಕ್ಯುಮೆಂಟ್ ಮಡಚಿದ ಗುರುತು, ಪುಡಿಯಾಗಿರುವ ಗುರುತುಗಳಿದ್ದರೂ ಇಲ್ಲಿ ಎಲ್ಲವೂ ಸರಿಯಾಗಲಿದೆ. ಇಷ್ಟೇ ಅಲ್ಲ, ಅತ್ಯುತ್ತಮ ಗುಣಮಟ್ಟದ ಡಾಕ್ಯುಮೆಂಟ್ ಆಗಿ ಸೇವ್ ಆಗಲಿದೆ.  ಹೊಸ ಫೀಚರ್ ಬಳಸಿಕೊಳ್ಳಲು ಬಳಕೆದಾರರು ತಮ್ಮ ವ್ಯಾಟ್ಸಾಪ್ ಆಪ್‌ಡೇಟ್ ಮಾಡಿಕೊಳ್ಳಬೇಕು. ಈ ಮೂಲಕ ವ್ಯಾಟ್ಸಾಪ್ ಹೊಸ ಫೀಚರ್ ಪಡೆಯಬಹುದು. 

ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಕೆಲ ಮಹತ್ವದ ಅಪ್‌ಡೇಟ್ ಮಾಡಿದೆ. ಈ ಪೈಕಿ ಹಳೇ iOS  ವರ್ಶನ್ ಫೋನ್‌ಗಳಲ್ಲಿ ಸಪೋರ್ಟ್ ನಿಲ್ಲಿಸುತ್ತಿದೆ. 2025ರ ಮೇ ತಿಂಗಳಿನಿಂದ ಕೆಲ ಐಫೋನ್‌ಗಳಲ್ಲಿ ವ್ಯಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ. 15.1 ವರ್ಶನ್‌ಗಿಂತ ಹಳೇ  iOSಗಳಲ್ಲಿ ವ್ಯಾಟ್ಸಾಪ್ ಕೆಲಸ ಮಾಡುವುದಿಲ್ಲ. ಅಂದರೆ ಐಫೋನ್ 5ಎಸ್, ಐಫೋನ್ 6, ಐಫೋನ್ 6 ಪ್ಲಸ್ ಫೋನ್‌ಗಳಲ್ಲಿ 2025ರ ಮೇ ತಿಂಗಳಿನಿಂದ ವ್ಯಾಟ್ಸಾಪ್ ಕೆಲಸ ಮಾಡುವುದಿಲ್ಲ. ಈ ಫೋನ್‌ಗಳಲ್ಲಿ iOS 12.5.7. ಪರ್ಶನ್ ಹೊಂದಿದೆ. 10 ವರ್ಷಗಳ ಹಿಂದೆ ಈ ಫೋನ್ ಬಿಡುಗಡೆಯಾಗಿತ್ತು. ಸದ್ಯ ಈ ಫೋನ್ ಬಳಕೆ ಮಾಡುತ್ತಿರುವ ಗ್ರಾಹಕರಿಗೆ 5 ತಿಂಗಳ ಅವಧಿ ನೀಡಲಾಗಿದೆ. ಮೇ 2025ರಿಂದ ವ್ಯಾಟ್ಸಾಪ್ ಬೆಂಬಲ ಸ್ಥಗಿತಗೊಳ್ಳಲಿದೆ. 

ಇನ್ನು 5 ತಿಂಗಳಲ್ಲಿ ಈ ಐಫೋನ್‌ಗಳಲ್ಲಿ ವ್ಯಾಟ್ಸಾಪ್ ವರ್ಕ್ ಆಗಲ್ಲ, ನಿಮ್ಮ ಫೋನ್ ಇದೆಯಾ?

ವ್ಯಾಟ್ಸಾಪ್ ಕಾಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್ ನೀಡಲಿದೆ. ವ್ಯಾಟ್ಸಾಪ್ ಪ್ರೈವೈಸಿ, ಚಾಟ್ ಲಾಕ್, ವಾಯ್ಸ್ ಮೆಸೇಜ್ ರೀತಿ ವಿಡಿಯೋ ಮೆಸೇಜ್ ಸೇರಿದಂತೆ ಹಲವು ಫೀಚರ್ಸ್ ಈಗಾಗಲೇ ನೀಡಿದೆ. ಪ್ರತಿ ದಿನ ವ್ಯಾಟ್ಸಾಪ್ ತನ್ನ ಬಳಕೆದಾರರಿಗೆ ಉತ್ತಮ ಫೀಚರ್ ನೀಡವ ಮೂಲಕ ವಿಶ್ವದೆಲ್ಲೆಡೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. 
 

click me!