ಭಾರತ ಸೇರಿದಂತೆ ವಿಶ್ವದಲ್ಲಿ Gmail ಬಳಕೆ ದಾರರು ಇಂದು(ಆ.20) ಸಮಸ್ಯೆ ಎದುರಿಸುತ್ತಿದ್ದಾರೆ. ಹಲವರಿಗೆ Gmail ಲಾಗ್ ಇನ್ ಆಗಲು ಸಾಧ್ಯವಾಗುತ್ತಿಲ್ಲ, ಇ ಮೇಲ್ ಸೆಂಡ್ ಆಗುತ್ತಿಲ್ಲ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕುರಿತು Google ಹೇಳುವುದೇನು?
ಕ್ಯಾಲಿಫೋರ್ನಿಯಾ(ಆ.20): Gmail ಬಳಕೆದಾರರು ದಿಢೀರ್ ಸಮಸ್ಯೆ ಎದುರಿಸುತ್ತಿದ್ದಾರೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಇದೇ ಸಮಸ್ಯೆ ಎದುರಿಸುತ್ತಿದೆ. ಇಂದು(ಆ.20) ತಮ್ಮ ತಮ್ಮ ಕೆಲಸ ಆರಂಭಿಸಿದ ಹಲವರಿಗೆ Gmail ಲಾನ್ ಇನ್ ಆಗಲು ಸಾಧ್ಯವಾಗಿಲ್ಲ. ಹಲವು ಭಾರಿ ಯತ್ನಿಸಿ ಲಾಗ್ ಇನ್ ಆದವರಿಗೆ ಯಾವುದೇ ಇ ಮೇಲ್ ಸೆಂಡ್ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವರು ಸಾಮಾಜಿಕ ಜಾಲತಾಣ ಸೇರಿದಂತೆ ಕೆಲ ವಿಧಾನದಲ್ಲಿ Gmail ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರು ಸಲ್ಲಿಸಿದ್ದಾರೆ. Gmail ಸಮಸ್ಯೆ ಕುರಿತು ತಕ್ಷಣವೇ Google ಪ್ರತಿಕ್ರಿಯೆ ನೀಡಿದೆ.
ಅಲಾರಾಂ ರೀತಿ ನಿಮ್ಮ G-Mail ಮೆಸೇಜ್ ಸ್ನೂಜ್ ಮಾಡಿ..!
Gmail ಡೌನ್ ಆಗಿರುವುದು ನಿಜ. ನಮ್ಮ ತಂಡ ಈ ಕುರಿತು ಕಾರ್ಯನಿರ್ವಹಿಸುತ್ತಿದೆ. ಕೆಲ ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಹಲವರಿಗೆ ಸದ್ಯ Gmail ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಇನ್ನೂ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ ಅನ್ನೋದು ಗಮನಕ್ಕೆ ಬಂದಿದೆ. ಆದಷ್ಟು ಬೇಗ ಸಮಸ್ಯೆ ಪರಿಹಾರವಾಗಲಿದೆ ಎಂದು ಗೂಗಲ್ ಪ್ರತಿಕ್ರಿಯೆ ನೀಡಿದೆ.
ನಮ್ಮ ತಂಡ ಈ ಕುರಿತು ತನಿಖೆ ನಡೆಸುತ್ತಿದೆ. ಸಂಬಂಧ ಶೀಘ್ರದಲ್ಲಿ ಮಾಹಿತಿಗಳನ್ನ ನೀಡಲಿದ್ದೇವೆ. ಸಮಸ್ಯೆಗೆ ಪರಿಹಾರವನ್ನು ನೀಡಲಿದ್ದೇವೆ. ನಿಮ್ಮ ಸಂಯಮಕ್ಕೆ ಧನ್ಯವಾದಗಳು ಎಂದು ಗೂಗಲ್ ಪ್ರತಿಕ್ರಿಯಿಸಿದೆ.
ಸಮಸ್ಯೆ ಕಂಡು ಬಂದ ಬೆನ್ನಲ್ಲೇ ಭಾರತದಲ್ಲಿ ಹಲವರು ಟ್ವಿಟರ್ ಮೂಲಕ ಪ್ರಶ್ನಿಸಿದ್ದಾರೆ. ಭಾರತದಲ್ಲಿ Gmail ಡೌನ್ ಆಗಿದೆಯಾ ಎಂದಿದ್ದಾರೆ. ಈ ಕುರಿತು ಗೂಗಲ್ ಉತ್ತರ ನೀಡಿದ್ದಾರೆ. ಭಾರತ ಮಾತ್ರವಲ್ಲ ಕೆಲ ರಾಷ್ಟ್ರಗಳಲ್ಲಿ Gmail, ಗೂಗಲ್ ಡ್ರೈವ್ ನಲ್ಲೂ ಸಮಸ್ಯೆಯಾಗಿದೆ ಎಂದು ಉತ್ತರಿಸಿದೆ. ಆಸ್ಟ್ರೇಲಿಯಾ, ಜಪಾನ್ ಸೇರಿದಂತೆ ಹಲವು ರಾಷ್ಟ್ರರದ Gmail ಬಳಕೆದಾರರು ಈ ಕುರಿತು ದೂರು ನೀಡಿದ್ದಾರೆ.
ಭಾರತದಲ್ಲಿ ಬೆಳಗ್ಗೆ 11 ಗಂಟಗೆ Gmail ಸಮಸ್ಯೆ ಕಾಣಿಸಿಕೊಂಡಿದೆ. ಶೇಕಡಾ 62 ರಷ್ಟ ಮಂದಿ Gmail ಬಳಕೆದಾರರು, ಇ ಮೇಲ್ ಕಳುಹಿಸಲು ಸಾಧ್ಯವಾಗಿಲ್ಲ. ಇನ್ನು ಶೇಕಡಾ 27 ರಷ್ಟು ಮಂದಿಗೆ Gmail ಖಾತೆಗೆ ಲಾಗ್ ಇನ್ ಆಗಲು ಸಾಧ್ಯವಾಗಿಲ್ಲ. ಶೇಕಡಾ 10 ರಷ್ಟು ತಮಗೆ Gmail ಮೇಲೆ ಬರುತ್ತಿಲ್ಲ. ಯಾವುದೇ ಇ ಮೇಲ್ ಸ್ವೀಕರಣೆಯಾಗುತ್ತಿಲ್ಲ ಎಂದು ದೂರು ಸಲ್ಲಿಸಿದ್ದಾರೆ.