Meta Safety Hub : ಆನಲೈನ್‌ನಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸೇಫ್ಟಿ ಹಬ್ ಪ್ರಾರಂಭಿಸಿದ ಫೇಸ್‌ಬುಕ್!

By Suvarna News  |  First Published Dec 3, 2021, 12:26 PM IST

*ಫೇಸ್‌ಬುಕ್‌ನಲ್ಲಿ ಅಶ್ಲೀಲ ಚಿತ್ರ ಪೋಸ್ಟ್‌ ಮಾಡಿದರೆ ರಿಪೋರ್ಟ್
*StopNCII.org ಮೂಲಕ  ಫೋಟೊಗಳ ಗುರುತಿಸುವಿಕೆ 
*ಫೇಸ್‌ಬುಕ್ ಮಾತೃ ಸಂಸ್ಥೆ ಮೆಟಾದಿಂದ ಹೊಸ ಯೋಜನೆ!


ಯುಎಸ್‌ಎ(ಡಿ. 03): ವ್ಯಕ್ತಿಯ ಅನುಮತಿ ಇಲ್ಲದೇ ಅವರ ಖಾಸಗಿ ಅಥವಾ ಅಶ್ಲೀಲ ಪೋಟೋ ವಿಡಿಯೋಗಳನ್ನು ಮೆಟಾ ಒಡೆತನದ ಯಾವುದೇ ಸಾಮಾಜಿಕ ಜಾಲತಣಾದಲ್ಲಿ ಶೇರ್ ಮಾಡುವುದನ್ನು ತಪ್ಪಿಸಲು ಮೆಟಾ ಹೊಸ ಯೋಜನೆಯೊಂದು ಜಾರಿಗೆ ತಂದಿದೆ. ಮೆಟಾ ( ಫೇಸ್‌ಬುಕ್ - Meta Facebook) ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮಹಿಳಾ ಬಳಕೆದಾರರನ್ನು ರಕ್ಷಿಸಲು (Women Users) ಹಲವಾರು ಕ್ರಮಗಳನ್ನು ಗುರುವಾರ ಘೋಷಿಸಿದೆ. ಭಾರತದಲ್ಲಿ StopNCII.org ಅನ್ನು ಪ್ರಾರಂಭಿಸುವುದು ಸೇರಿದಂತೆ, ಒಪ್ಪಿಗೆಯಿಲ್ಲದ ಖಾಸಗಿ ಚಿತ್ರಗಳ (NCII Non-consensual intimate images) ಹರಡುವಿಕೆಯನ್ನು ತಡೆಯುವ ಗುರಿಯನ್ನು ಫೇಸ್‌ಬುಕ್ ಹೊಂದಿದೆ. ಜತೆಗ ಮೆಟಾ (ಫೇಸ್‌ಬುಕ್) ಮಹಿಳಾ ಸುರಕ್ಷತಾ ಹಬ್ (Women Saftey Hub) ಅನ್ನು ಸಹ ಪ್ರಾರಂಭಿಸಿದೆ.

ಇದು ಹಿಂದಿ ಮತ್ತು 11 ಇತರ ಭಾರತೀಯ ಭಾಷೆಗಳಲ್ಲಿ (Indian Languages) ಲಭ್ಯವಿರಲಿದೆ. ಇದು ಭಾರತದಲ್ಲಿ ಹೆಚ್ಚಿನ ಮಹಿಳಾ ಬಳಕೆದಾರರಿಗೆ  ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಸಹಾಯ ಮಾಡುವ ಉಪಕರಣಗಳು ಮತ್ತು ಸಂಪನ್ಮೂಲಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಮಹಿಳೆಯರು ಸಾಮಾಜಿಕ ಜಾಲತಾಣದ (Social Media) ವಿವಿಧ ಮಾಹಿತಿಯನ್ನು ಪಡೆಯಲು 12 ಭಾಷೆಯಗಳಲ್ಲಿ ಇದು ಲಭ್ಯವಿದೆ. ಹಾಗಾಗಿ ಮಾಹಿತಿ ಪಡೆಯಲು ಭಾಷೆಯ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಮೆಟಾ ಪ್ಲಾಟ್‌ಫಾರ್ಮ್‌ಗಳ  ನಿರ್ದೇಶಕಿ (ಜಾಗತಿಕ ಸುರಕ್ಷತಾ ನೀತಿ) ಕರುಣಾ ನಾಯ್ನ್ (Karuna Nain) ಸುದ್ದಿಗಾರರಿಗೆ ತಿಳಿಸಿದ್ದಾರೆ.

Tap to resize

Latest Videos

undefined

ಮಹಿಳೆಯರಿಗೆ ಸುರಕ್ಷತೆ ಒದಗಿಸಲು ಹಲವು ಕ್ರಮ!

"ಮಹಿಳೆಯರಿಗೆ ಸುರಕ್ಷತೆ ಒದಗಿಸಲು ಮೆಟಾದ ಎಲ್ಲ ಪ್ಲ್ಯಾಟ್‌ಫಾರ್ಮ್‌ಗಳಾದ್ಯಂತ ಹಲವು ಕ್ರಮ ಕೈಗೊಂಡಿದೆ ಮತ್ತು ಈ ನಿಟ್ಟಿನಲ್ಲಿ ಮೆಟಾ ಬದ್ಧವಾಗಿದೆ.  ಜತೆಗೆ ಕಂಪನಿಯು ಆನ್‌ಲೈನ್‌ನಲ್ಲಿ ಬಳಕೆದಾರರನ್ನು ರಕ್ಷಿಸಲು ಹಲವಾರು  ಪ್ರಮುಖ ಕ್ರಮಗಳನ್ನು ಪರಿಚಯಿಸಿದೆ. ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ನಮ್ಮ ಪ್ರಯತ್ನವನ್ನು ಮತ್ತಷ್ಟು ಹೆಚ್ಚಿಸುತ್ತಾ, ನಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಮಹಿಳೆಯರ ಆನ್‌ಲೈನ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಹಲವಾರು ಉಪಕ್ರಮಗಳನ್ನು ತರುತ್ತಿದ್ದೇವೆ ಎಂದು ಕರುಣಾ ಹೇಳಿದ್ದಾರೆ.

Twitterನಲ್ಲಿ ಕ್ಷಣಾರ್ಧದಲ್ಲಿ ಮಾಯವಾದ್ರು ಲಕ್ಷಾಂತರ ಫಾಲೋವರ್ಸ್‌, CEO ಪರಾಗ್ ಮೇಲೆ ಬಳಕೆದಾರ ಗರಂ!

"ಇದು ಆನಲೈನ್‌ ಮಾಧ್ಯಮದಲ್ಲಿ (Online Media) ತಮ್ಮ ಅನುಮತಿ ಇಲ್ಲದೆ ಖಾಸಗಿ (Private) ಅಥವಾ ಅಶ್ಲೀಲ ಫೋಟೋ ಅಥವಾ ವಿಡಿಯೋ ಶೇರ್‌ (Photo- Video Share) ಮಾಡಿದರೆ, ಮಹಿಳೆಯರಿಗೆ ಹೀಗಾಗದಂತೆ ತಡೆಯುವ ನಿಟ್ಟಿನಲ್ಲಿ ಹಲವು ಫೀಚರ್‌ಗಳನ್ನು (Features) ಸೇಫ್ಟಿ ಹಬ್ ನೀಡುತ್ತದೆ. ಜನರು ಈ ಪ್ಲಾಟ್‌ಫಾರ್ಮ್‌ಗೆ ಬರಬಹುದು, ಅವರ ಖಾಸಗಿ ವೀಡಿಯೊಗಳು ಮತ್ತು ಚಿತ್ರಗಳನ್ನು ಗುರುತಿಸಿ  ಸಂಸ್ಥೆಗೆ ತಿಳಿಸಬಹುದು ಎಂದು " ಎಂದು ನೈನ್ ಹೇಳಿದ್ದಾರೆ.

ಫೇಸ್‌ಬುಕ್ ನೀತಿಗಳನ್ನು ಉಲ್ಲಂಘಿಸಿದರೆ ಸೂಕ್ತ ಕ್ರಮ!

ಫೇಸ್‌ಬುಕ್ ಯಾವುದೇ ಫೋಟೋಗಳು ಮತ್ತು ವೀಡಿಯೊಗಳನ್ನು ಸ್ವೀಕರಿಸುವುದಿಲ್ಲ, ಬದಲಿಗೆ ಹ್ಯಾಶ್ (Hash) ಅಥವಾ  ಡಿಜಿಟಲ್ ಫಿಂಗರ್‌ಪ್ರಿಂಟ್ (Digital Finger Print) ಅಥವಾ ಯೂನಿಕ್ ಐಡೆಂಟಿಫೈಯರ್ (Unique Identifier) ಮೂಲಕ ವಿವಿಧ ಮಾಹಿತಿ ಪಡೆಯುತ್ತದೆ.  ಹಾಗಾಗಿ ಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿರುವ ವಿಡಿಯೋ ಮತ್ತು ಫೋಟೊಗಳನ್ನು ಸುಲಭವಾಗಿ ಪತ್ತೆ ಹಚ್ಚಲಾಗುತ್ತದೆ. "ನಾವು ನಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ  ಪೋಸ್ಟ್‌ ಮಾಡಿದ ವಿಷಯದ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ಅದನ್ನು ಒಮ್ಮೆ ಅಪ್‌ಲೋಡ್ ಮಾಡಿದ ನಂತರ, ನಮ್ಮ ಪರಿಶೀಲನಾ ತಂಡವು ನಿಜವಾಗಿಯೂ ಏನಾಗುತ್ತಿದೆ ಎಂಬುದನ್ನು ಪರಿಶೀಲಿಸುತ್ತದೆ ಮತ್ತು ಅದು ನಮ್ಮ ನೀತಿಗಳನ್ನು ಉಲ್ಲಂಘಿಸಿದರೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತದೆ" ಎಂದು ಅವರು ಹೇಳಿದರು.

Book Uber in Whatsapp: ಇನ್ನು ವಾಟ್ಸಾಪ್‌ನಲ್ಲೇ ಉಬರ್‌ ಕಾರ್‌ ಬುಕ್ಕಿಂಗ್‌

UK ರಿವೆಂಜ್ ಪೋರ್ನ್ ಹೆಲ್ಪ್‌ಲೈನ್‌ನ ( UK Revenge Porn Helpline) ಸಹಭಾಗಿತ್ವದಲ್ಲಿ, StopNCII.org ಮೆಟಾದ NCII ಕೆಲಸ ಮಾಡಲಿದೆ. ಇದು  ತೊಂದರೆಗೊಳಗಾಗುವವವರಿಗೆ ತಮ್ಮ ಖಾಸಗಿ ಚಿತ್ರಗಳನ್ನು ಪೂರ್ವಭಾವಿಯಾಗಿ ಹ್ಯಾಶ್ (ಗುರುತಿಸಿ ರಿಪೋರ್ಟ್‌ ಮಾಡಲು) ಮಾಡಲು ಅನುವು ಮಾಡಿಕೊಡುವ  ಕಾರ್ಯಕ್ರಮವಾಗಿದೆ.

click me!