Book Uber Ride on WhatsApp: ಊಬರ್ ರೈಡ್ ಹೊಸ ಫೀಚರ್‌ : ಈಗ ವಾಟ್ಸಪ್‌ನಲ್ಲೂ ಕ್ಯಾಬ್ ಬುಕ್ಕಿಂಗ್!

By Suvarna News  |  First Published Dec 2, 2021, 11:49 AM IST

*ವಾಟ್ಸಪ್‌ ಮೂಲಕ ಉಬರ್‌ ರೈಡ್‌ ಬುಕ್‌
*ಉಬರ್ ಚಾಟ್‌ಬಾಟ್ ಮೂಲಕ ಮಾಹಿತಿ
*ಲಖನೌದಲ್ಲಿ  ಫೀಚರ್ ಮೊದಲ ಲಾಂಚ್‌!
*ನಂತರ ಭಾರತದ ಇತರ ನಗರಗಳಿಗೆ ವಿಸ್ತರಣೆ


ನವದೆಹಲಿ(ಡಿ. 02): ವಾಟ್ಸಪ್‌ ಬಳಸಿ ಊಬರ್‌ ಕ್ಯಾಬ್‌ ಬುಕ್‌ ಮಾಡಲು (Book an Uber Ride on WhatsAp) ಊಬರ್‌ ಮತ್ತು ಮೆಟಾ (Meta) ಒಡೆತನದ ವಾಟ್ಸಪ್‌ ಸೇರಿ ಹೊಸದೊಂದು ಫೀಚರ್‌ ಲಾಂಚ್‌ ಮಾಡುತ್ತಿವೆ. ವಾಟ್ಸಾಪ್ ಮೂಲಕ ಕ್ಯಾಬ್ ಬುಕ್ (Cab Book) ಮಾಡಲು ಬಳಕೆದಾರರಿಗೆ ಅವಕಾಶ ನೀಡುವುದಾಗಿ ಕಂಪನಿ ಘೋಷಿಸಿದೆ.  WhatsApp ಮಾತೃ ಸಂಸ್ಥೆ ಮೇಟಾ ಮತು ಊಬರ್ ಕಂಪನಿಯು ರೈಡ್ ಬುಕಿಂಗ್ ಸೇವೆಗಳನ್ನು‌ ಸುಲಭವಾಗಿಸಲು ಮೆಸೇಜಿಂಗ್ ಅಪ್ಲಿಕೇಶನ್‌ಗ ವಾಟ್ಸಪ್‌ ಬಳಕೆಗಾಗಿ ಕೈಜೋಡಿಸಿವೆ. WhatsApp ಮೂಲಕ Uber ಬುಕಿಂಗ್ ಮಾಡುವ ಫೀಚರ್ ಮೊದಲು  ಲಖನೌದಲ್ಲಿ (Lucknow) ಲಾಂಚ್‌ ಆಗುತ್ತಿದೆ. ನಂತರ ಭಾರತದ ಇತರ ಪ್ರಮುಖ ನಗರಗಳಿಗೆ  ಕಂಪನಿ ಈ ಯೋಜನೆಯನ್ನು ವಿಸ್ತರಿಸಲಿದೆ.

ಊಬರ್ ಚಾಟ್‌ಬಾಟ್ ಮೂಲಕ ಮಾಹಿತಿ

Tap to resize

Latest Videos

undefined

WhatsApp ಬಳಕೆದಾರರಿಗೆ ರೈಡ್ ಬುಕಿಂಗ್ ಊಬರ್ ಚಾಟ್‌ಬಾಟ್ (Uber Chat Bot) ಮೂಲಕ ಲಭ್ಯವಿರಲಿದೆ. ಇದು ಬಳಕೆದಾರರ ಖಾತೆಯ ವಿವರಗಳು, ಅವರು ಹೋಗು ಬಯಸುವ ಲೊಕೇಶನ್ (Destination), ಪಿಕ್-ಅಪ್ ಲೊಕೇಶನ್ (Pick-up Location) ಮತ್ತು‌ ಇತರ ವಿವರಗಳನ್ನು ಮೆಸೇಜ್ (Message) ಮೂಲಕ ಕೇಳಲಿದೆ. ಬುಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಬಳಕೆದಾರರು ಚಾಟ್‌ಬಾಟ್‌ನೊಂದಿಗೆ ಸಂಭಾಷಣೆಯನ್ನು ಪ್ರಾರಂಭಿಸಬೇಕಾಗುತ್ತದೆ. ರೈಡ್ ಬುಕ್ ಮಾಡಿದ ನಂತರ ಗ್ರಾಹಕರು ಚಾಲಕನ ಹೆಸರು, ವಾಹನದ ಲೈಸೆನ್ಸ್ ಪ್ಲೇಟ್ ಸಂಖ್ಯೆ ಮತ್ತು ಪಿಕಪ್ ಪಾಯಿಂಟ್‌ಗೆ ಹೋಗುವ ಸ್ಥಳ ಸೇರಿದಂತೆ ಎಲ್ಲಾ ವಿವರಗಳನ್ನು ವಾಟ್ಸಾಪ್ ಸಂದೇಶದ ಮೂಲಕ ಪಡೆಯುತ್ತಾರೆ ಎಂದು ಉಬರ್ ಹೇಳಿದೆ. ಸುರಕ್ಷತಾ ವೈಶಿಷ್ಟ್ಯಗಳು ಮತ್ತು ವಿಮಾ ರಕ್ಷಣೆ ನೀತಿಗಳು (insurance protection policies) WhatsApp ಬುಕಿಂಗ್‌ಗಳಿಗೆ ಅನ್ವಯಿಸುತ್ತವೆ.

WhatsApp Accounts Ban: ಅಕ್ಟೋಬರ್‌ನಲ್ಲಿ 20 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಪ್‌!

"ಎಲ್ಲಾ ಭಾರತೀಯರಿಗೆ ಊಬರ್ ರೈಡ್ ಬುಕ್‌ ಸಾಧ್ಯವಾದಷ್ಟು ಸುಲಭಗೊಳಿಸಲು ನಾವು ಬಯಸುತ್ತೇವೆ ಮತ್ತು ಅದನ್ನು ಮಾಡಲು ನಾವು  ಗ್ರಾಹಕರಿಗೆ ಅನುಕೂಲಕರವಾದ ವೇದಿಕೆಗಳಲ್ಲಿ ಸೇವೆಗಳನ್ನು ನೀಡಬೇಕಿದೆ" ಎಂದು ಉಬರ್‌ನ ವ್ಯವಹಾರ ಅಭಿವೃದ್ಧಿಯ ಹಿರಿಯ ನಿರ್ದೇಶಕಿ ನಂದಿನಿ ಮಹೇಶ್ವರಿ (Nandini Maheshwari) ಹೇಳಿದ್ದಾರೆ.

ಭಾರತದಲ್ಲಿ 487 ಮಿಲಿಯನ್ ವಾಟ್ಸಪ್ ಬಳಕೆದಾರರು!

ಇತ್ತಿಚೆಗೆ ರಿಲಯನ್ಸ್ ಜಿಯೋದಿಂದ ಆನ್‌ಲೈನ್ ಹೈಪರ್‌ಲೋಕಲ್ ಮಾರ್ಕೆಟ್ ಸೇವೆಯನ್ನು ಕೂಡ ವಾಟ್ಸಪ್‌ ಮೂಲಕ ಬುಕ್‌ ಮಾಡುವ ಫೀಚರ್‌ ಲಾಂಚ್ ಮಾಡಲಾಗಿತ್ತು. ಜಿಯೋಮಾರ್ಟ್‌ನ ಸಹಭಾಗಿತ್ವದಲ್ಲಿ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ವಾಟ್ಸಪ್ ಕಂಪನಿಯ ಇನ್-ಆಪ್ ಕಿರಾಣಿ ಶಾಪಿಂಗ್‌ ( in-app grocery shopping) ಬಿಡುಗಡೆಯಾಗಿತ್ತು. ಸಂಶೋಧನಾ ಸಂಸ್ಥೆ ಸ್ಟ್ಯಾಟಿಸ್ಟಾ ಅಂದಾಜಿನ ಪ್ರಕಾರ WhatsApp ತನ್ನ ಅತಿದೊಡ್ಡ ಮಾರುಕಟ್ಟೆಯಾದ ಭಾರತದಲ್ಲಿ 487 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಹಾಗಾಗಿ ವಾಟ್ಸಪ ಮೂಲಕ ಸೇವೆ ನೀಡಿದರೆ ಕಂಪನಿಗಳು ಹೆಚ್ಚಿನ ಗ್ರಾಹಕರನ್ನು ತಲುಪಬಹುದು.

Google best apps 2021: ಗೂಗಲ್ ಪ್ರಕಾರ 2021ರ ಬೆಸ್ಟ್ ಆಪ್ ಯಾವುದು ಗೊತ್ತಾ?

ವಾಟ್ಸಾಪ್‌ನಲ್ಲಿ ರೈಡ್ ಬುಕಿಂಗ್ ಸೇವೆಯು ಆರಂಭದಲ್ಲಿ ಇಂಗ್ಲಿಷ್ ಭಾಷೆಯಲ್ಲಿ (English langauage) ಲಭ್ಯವಿರುತ್ತದೆ ಎಂದು ಉಬರ್ ಹೇಳಿದೆ. ಆದರೆ ಕಂಪನಿಯು ಇದನ್ನು ಹೆಚ್ಚಿನ ಭಾರತೀಯ ಭಾಷೆಗಳಿಗೆ ವಿಸ್ತರಿಸಲು ಯೋಜನೆ ಸಿದ್ಧಪಡಿಸುತ್ತಿದೆ. ಇದರರ್ಥ ನೀವು ಚಾಟ್‌ಬಾಟ್‌ನಿಂದ ಪ್ರತಿಕ್ರಿಯೆಗಳ ಜೊತೆಗೆ ನಿಮ್ಮ ಸಂದೇಶಗಳನ್ನು ಇಂಗ್ಲಿಷ್‌ನಲ್ಲಿ ಟೈಪ್ ಮಾಡಬೇಕಾಗುತ್ತದೆ. ನಿಮ್ಮ ರೈಡ್‌ಗಳನ್ನು ಬುಕ್ ಮಾಡಲು ನೀವು ಬಳಸಬೇಕಾದ ನಿಖರವಾದ ಕೀವರ್ಡ್‌ಗಳಂತಹ (Key Words) ನಿರ್ದಿಷ್ಟ ವಿವರಗಳು ಇದೀಗ ಸ್ಪಷ್ಟವಾಗಿಲ್ಲ. ಆದರೆ "ರೈಡ್ ಬುಕ್ (Ride Book)" ನಂತಹ ಸರಳ ಪದಗಳನ್ನು ಬಳಸಿ ಚಾಟ್‌ಬಾಟ್‌ನಿಂದ ಉಬರ್‌ ರೈಡ್‌ ಬುಕ್‌ ಮಾಡುವ ಫೀಚರ್‌ ನೀಡಬಹುದು ಎಂದು ಅಂದಾಜಿಸಲಾಗಿದೆ.

WhatsApp ಬಳಸಿಕೊಂಡು Uber ಅನ್ನು ಹೇಗೆ ಬುಕ್ ಮಾಡುವುದು ಹೇಗೆ?
 
WhatsApp ಬಳಕೆದಾರರು ಮೂರು ರೀತಿಯಲ್ಲಿ Uber ರೈಡ್ ಅನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ.

*Uber ನ ವ್ಯವಹಾರ ಖಾತೆ ಸಂಖ್ಯೆಗೆ (Business Account) ಸಂದೇಶ ಕಳುಹಿಸಬಹುದು.

*QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು.

*Uber WhatsApp ಚಾಟ್ ಅನ್ನು ತೆರೆಯಲು ನೇರವಾಗಿ ಲಿಂಕ್ ಅನ್ನು ಕ್ಲಿಕ್ ಮಾಡಬಹುದು

click me!