ತಪ್ಪು ಮಾಹಿತಿ ನೀಡಿದ 167 ಮಿಲಿಯನ್ ಫೇಸ್‌ಬುಕ್ ಬಳಕೆದಾರರ ಖಾತೆ ಕಪ್ಪು ಪಟ್ಟಿಗೆ!

By Suvarna News  |  First Published Nov 21, 2020, 3:52 PM IST

ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಿದಾಡುತ್ತಿರುವುದು ಹೊಸದೇನಲ್ಲ. ಆದರೆ ಇದೀಗ ತಪ್ಪು ಮಾಹಿತಿಗಳನ್ನು ಪೋಸ್ಟ್ ಮಾಡಿ ಜನರ ದಾರಿ ತಪ್ಪಿಸುವ ಪರಿಪಾಠಕ್ಕೆ ಕಡಿವಾಣ ಹಾಕಲು ಎಲ್ಲಾ ಸಾಮಾಜಿಕ ಮಾಧ್ಯಮಗಳು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಇದೇ ರೀತಿ ತಪ್ಪು ಮಾಹಿತಿ ನೀಡಿದ ಫೇಸ್‌ಬುಕ್ ಬಳಕೆದಾರರಿಗೆ ಸಂಕಷ್ಟ ಎದುರಾಗಿದೆ.


ನವದೆಹಲಿ(ನ.21): ಫೇಸ್‌ಬುಕ್ ಕೇವಲ ಸಾಮಾಜಿಕ ಮಾಧ್ಯಮವಾಗಿ ಮಾತ್ರ ಉಳಿದುಕೊಂಡಿಲ್ಲ. ಇದೀಗ ಫೇಸ್‌ಬುಕ್ ಅತೀ ದೊಡ್ಡ ಡಿಜಿಟಲ್ ಮಾರ್ಕೆಟಿಂಗ್ ತಾಣ ಕೂಡ ಹೌದು. ವಾಣಿಜ್ಯ ವ್ಯವಹಾರಗಳ ವೇದಿಕೆ ಕೂಡ ಆಗಿದೆ. ಹೀಗಾಗಿ ಫೇಸ್‌ಬುಕ್ ತನ್ನ ನಿಯಮಗಳನ್ನು ಕಠಿಣಗೊಳಿಸುತ್ತಾ ಹೋಗುತ್ತಿದೆ. ಇದೀಗ ಫೇಸ್‌ಬುಕ್ ಮೂಲಕ ತಪ್ಪು ಮಾಹಿತಿ ನೀಡುತ್ತಿದ್ದ ಬರೋಬ್ಬರಿ 167 ಮಿಲಿಯನ್ ಬಳಕೆದಾರರ ಖಾತೆ ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

 ದ್ವೇಷ ಪೂರಿತ ಪೋಸ್ಟ್ ನಿಯಂತ್ರಿಸುವಲ್ಲಿ ಫೇಸ್‌ಬುಕ್ ವಿಫಲ; ದಿಲ್ಲಿ ಸಮಿತಿಯಿಂದ ಸಮನ್ಸ್!

Latest Videos

undefined

ಕಳೆದ ಮಾರ್ಚ್ ತಿಂಗಳಿನಿಂದ ಕೊರೋನಾ ವೈರಸ್ ಕುರಿತು ತಾ ಮುಂದು ತಾಮುಂದು ಎಂದು ಹಲವರು ಹಲವು ಪೋಸ್ಟ್ ಮಾಡಿದ್ದಾರೆ. ಸುಳ್ಳು ಸುದ್ದಿಗಳನ್ನು ತಾವೇ ಮುತುವರ್ಜಿ ವಹಿಸಿ ಪೋಸ್ಟ್ ಮಾಡಿದ ಊದಾಹರಣೆಗಳು ಇವೆ. ಹೀಗೆ ಕೊರೋನಾ ವೈರಸ್ ಕುರಿತು ಸುಳ್ಳು ಸುದ್ದಿ ಪೋಸ್ಟ್ ಮಾಡಿದ 167 ಮಿಲಿಯನ್ ಬಳೆದಾರರಿಗೆ ಸಂಕಷ್ಟ ಎದುರಾಗಿದೆ.

'ಪೋಸ್ಟ್ ಮಾಡುವ ಮುನ್ನ ಎಚ್ಚರ' ಫೇಸ್‌ಬುಕ್‌ನಿಂದ ಬಿಜೆಪಿ ಶಾಸಕನಿಗೆ ಗೇಟ್ ಪಾಸ್!..

167 ಮಿಲಿಯನ್ ಫೇಸ್‌ಬುಕ್ ಬಳಕೆದಾರರ ಪೈಕಿ 12 ಮಿಲಿಯನ್ ಬಳಕೆದಾರರ ಸುಳ್ಳು ಪೋಸ್ಟ್‌ನ್ನು ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಂನಿಂದ ತೆಗೆದುಹಾಕಿದೆ. 167 ಮಿಲಿಯನ್ ಬಳಕೆದಾರರು ಮತ್ತೆ ತಪ್ಪು ಮಾಡಿದರೆ, ಖಾತೆ ಬ್ಲಾಕ್ ಆಗಲಿದೆ. ಹೀಗಾಗಿ ಎಚ್ಚರ ವಹಿಸುವುದು ಅಗತ್ಯ.

ಫೇಸ್‌ಬುಕ್ ಈಗಾಗಲೇ ದ್ವೇಷದ ಭಾಷಣ, ಆಕ್ರಮಣಕಾರಿ ಹೇಳಿಕೆಗಳಿಗೆ ಕಡಿವಾಣ ಹಾಕಿದೆ. ಹೀಗೆ ಫೇಸ್‌ಬುಕ್ ನಿಯಮ ಉಲ್ಲಂಘಿಸಿ ಪೋಸ್ಟ್ ಮಾಡಿದ್ದ 22.1 ಮಿಲಿಯನ್ ಪೋಸ್ಟ್‌ಗಳನ್ನು ಫೇಸ್‌ಬುಕ್ ಡಿಲೀಟ್ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವಾಗ ಎಚ್ಚರ ವಹಿಸುವುದು ಅಗತ್ಯ.
 

click me!