ಟ್ವಿಟರ್‌ನಲ್ಲಿ ಮಹತ್ತರ ಬದಲಾವಣೆ ಮಾಡಿದ ಎಲಾನ್ ಮಸ್ಕ್, ಟ್ವೀಟ್ ವೀಕ್ಷಿಸಲು ಸೈನ್ ಇನ್ ಕಡ್ಡಾಯ!

By Suvarna News  |  First Published Jul 1, 2023, 6:47 PM IST

ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಹತ್ತು ಹಲವು ಬದಲಾವಣೆಗಳಾಗಿದೆ. ಇದೀಗ ಮತ್ತೊಂದು ಮಹತ್ತರ ಬದಲಾವಣೆ ಮಾಡಲಾಗಿದೆ. ಇದೀಗ ಯಾವುದೇ ಟ್ವೀಟ್ ನೋಡಲು, ಅದರಲ್ಲಿರುವ ವಿಷಯ ಓದಲು ಕಡ್ಡಾಯವಾಗಿ ಟ್ವಿಟರ್‌ಗೆ ಸೈನ್ ಇನ್ ಆಗಬೇಕು. ಈ ಬದಲಾವಣೆ ಕುರಿತ ಸಂಪೂರ್ಣ ವಿವರ ಇಲ್ಲಿದೆ.


ನವದೆಹಲಿ(ಜು.01) ಟ್ವಿಟರ್ ಈಗಾಗಲೇ ಹಲವು ಬದಲಾವಣೆ ಕಂಡಿದೆ. ಉದ್ಯಮಿ ಎಲಾನ್ ಮಸ್ಕ್ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಟ್ವಿಟರ್ ಖರೀದಿಸಿದ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಪ್ರಮುಖವಾಗಿ ಬ್ಲೂ ಟಿಕ್ ಚಂದಾದಾರಿಕೆ, ಟ್ವೀಟ್ ಎಡಿಟ್ ಸೇರಿದಂತೆ ಹಲವು ನೀತಿಗಳು ಬದಲಾಗಿದೆ. ಇದೀಗ ಮತ್ತೊಂದು ಚೇಂಜಸ್ ಮಾಡಲಾಗಿದೆ. ಇನ್ನು ಮುಂದೆ ಬಳಕೆದಾರರು ಟ್ವೀಟ್ ವೀಕ್ಷಿಸಲು ಸೈನ್ ಇನ್ ಕಡ್ಡಾಯವಾಗಿದೆ. ಇಷ್ಟು ದಿನ ಯಾವುದೇ ಟ್ವೀಟ್ ನೋಡಲು ಅಥವಾ ಅದರಲ್ಲಿನ ಕಂಟೆಂಟ್ ಓದಲು ಸೈನ್ ಇನ್ ಆಗುವ ಅಗತ್ಯವಿರಲಿಲ್ಲ. ಯಾರು ಟ್ವೀಟ್ ಮಾಡಿದ್ದಾರೋ ಅವರ ಖಾತೆ ಅಥವಾ ಟ್ವೀಟ್ ನೋಡಲು ಸಾಧ್ಯವಾಗುತ್ತಿತ್ತು. ಇನ್ಮುಂದೆ ಇದು ಸಾಧ್ಯವಿಲ್ಲ. ಯಾವುದೇ ಟ್ವೀಟ್ ವೀಕ್ಷಿಸಲು ಮೊದಲು ಬಳಕೆದಾರರು ಸೈನ್ ಇನ್ ಆಗಲೇಬೇಕು.

ಬಳಕೆದಾರರು ತಮ್ಮ ಟ್ವಿಟರ್ ಖಾತೆಗೆ ಲಾಗಿನ್ ಆಗದೇ ಇತರರ ಟ್ವೀಟ್ ವೀಕ್ಷಿಸುವ ಅವಕಾಶವಿತ್ತು. ಆದರೆ ಬದಲಾದ ನಿಯಮದಲ್ಲಿ ಇದು ಸಾಧ್ಯವಿಲ್ಲ. ಬಳಕೆದಾರರು ಮೊದಲು ತಮ್ಮ ಖಾತೆಗೆ ಸೈನ್ ಇನ್ ಆಗಬೇಕು. ಬಳಿಕವಷ್ಟೇ ಯಾವುದೇ ಟ್ವೀಟ್ ವೀಕ್ಷಣೆ ಸಾಧ್ಯ. ಇದು ತಾತ್ಕಾಲಿಕ ತುರ್ತು ಕ್ರಮವಾಗಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. 

Tap to resize

Latest Videos

undefined

ವಿಶ್ವದ ಇತರ ದೇಶ​ಗ​ಳಿ​ಗಿಂತ ಭಾರತ ಭರ​ವ​ಸೆ​ದಾ​ಯ​ಕ: ಎಲಾನ್‌ ಮಸ್ಕ್

ಸೈನ್ ಇನ್ ಆಗದೇ ಟ್ವೀಟ್ ವೀಕ್ಷಿಸುವ ಅವಕಾಶದಿಂದ ಬಳಕೆದಾರರ ಅನುಭವದ ಮೇಲೆ ಪರಿಣಾಮ ಬೀರುವ ಡೇಟಾವನ್ನು ನಿಯಂತ್ರಿಸಲಾಗುತ್ತಿದೆ. ಹೀಗಾಗಿ ಸೈನ್ ಇನ್ ಕಡ್ಡಾಯ ಮಾಡಲಾಗಿದೆ. ಹಲವು ಸಂಸ್ಥೆಗಳು ಟ್ವಿಟರ್ ಡೇಟಾವನ್ನು ಸ್ಕ್ರಾಪ್ ಮಾಡುತ್ತಿದೆ. ಇದರು ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಈ ಸಮಸ್ಯೆ ನಿವಾರಿಸಲು ಸೈನ್ ಇನ್ ಕಡ್ಡಾಯ ಮಾಡಲಾಗಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

ವಿಶೇಷವಾಗಿ ಟ್ವೀಟ್‌ಗಳನ್ನು ಎಂಬೆಡ್ ಮಾಡಲಾಗುತ್ತದೆ. ಎಂಬೆಡ್ ಮಾಡಿದ ಟ್ವೀಟ್ ಇತರ ಯಾವುದೇ ವ್ಯಕ್ತಿಗೆ ವೀಕ್ಷಿಸಲು ಸಾಧ್ಯವಿತ್ತು. ಇದು ಟ್ವಿಟರ್ ಡೇಟಾದ ಮೇಲೆ ಪರಿಣಾಮ ಬೀರುತ್ತಿದೆ. ಸಂಸ್ಥೆಗಳ, ಉದ್ಯಮಿಗಳ, ಸೆಲೆಬ್ರೆಟಿಗಳ ಸೇರಿದಂತೆ ಹಲವರ ಟ್ವೀಟ್‌ಗಳನ್ನು ಎಂಬೆಡ್ ಮಾಡಲಾಗುತ್ತದೆ. ಈ ಎಂಬೆಡ್ ಟ್ವೀಟ್‌ಗಳನ್ನು ಸೈನ್ ಇನ್ ಆಗದೇ ಇರುವ ಬಳಕೆದಾರರು ನೋಡಲು ಸಾಧ್ಯವಾಗುತ್ತಿತ್ತು. ಆದರೆ ಇನ್ನು ಮುಂದೆ ಎಂಬೆಡ್ ಅಥವಾ ಯಾವುದೇ ಟ್ವೀಟ್ ವೀಕ್ಷಿಸಲು ಖಾತೆಗೆ ಸೈನ್ ಇನ್ ಆಗಲೇಬೇಕು. 

'ನೀವು ರೈತರಲ್ಲ, ಬಿಲಿಯನ್‌ ಡಾಲರ್‌ ಕಂಪನಿ, ಸರ್ಕಾರದ ನಿಯಮ ಪಾಲಿಸ್ಬೇಕು..' ಟ್ವಿಟರ್‌ಗೆ ಕರ್ನಾಟಕ ಹೈಕೋರ್ಟ್‌ ಎಚ್ಚರಿಕೆ!

ಇತ್ತೀಚೆಗೆ ಟ್ವಿಟರ್ ತನ್ನ ಬ್ಲ್ಯೂಟಿಕ್‌ ಚಂದಾದಾರರಿಗೆ ಸಿಹಿ ಸುದ್ದಿ ನೀಡಿದ್ದು, ಬರೆಯಲು ಅಕ್ಷರ ಮಿತಿಯನ್ನು 25 ಸಾವಿರಕ್ಕೆ ಏರಿಕೆ ಮಾಡಿದೆ. ಈ ನಿರ್ಧಾರ ವರ್ಷದಲ್ಲಿ 3ನೇ ಬಾರಿಯಾಗಿದ್ದು, ಮೊದಲಿಗೆ ಪದಗಳ ಸಂಖ್ಯೆಯನ್ನು 4 ಸಾವಿರಕ್ಕೆ ಬಳಿಕ 10 ಸಾವಿರಕ್ಕೆ ಏರಿಕೆ ಮಾಡಿತ್ತು. ಈಗ ಜನರು ಹೆಚ್ಚು ವಿಸ್ತಾರವಾಗಿ ಬರೆಯಲು ಅನುಕೂಲವಾಗುವಂತೆ ಪದಗಳ ಸಂಖ್ಯೆಯನ್ನು 25 ಸಾವಿರಕ್ಕೆ ಏರಿಕೆ ಮಾಡಿದೆ. ಮೊದಲಿಗೆ 2017ರಲ್ಲಿ 140 ಪದಗಳಿಂದ 280 ಪದಗಳಿಗೆ ವಿಸ್ತರಣೆ ಮಾಡಿತ್ತು. ಇದಕ್ಕೆ ಬಳಕೆದಾರರಿಂದ ಮಿಶ್ರ ಬಳಕೆ ವ್ಯಕ್ತವಾಗಿತ್ತು. ಬಳಿಕ ಟ್ವೀಟರ್‌ರನ್ನು ಎಲಾನ್‌ ಮಸ್‌್ಕ ಖರೀದಿ ಮಾಡಿದ ನಂತರ ಹಲವಾರು ಬದಲಾವಣೆಗಳನ್ನು ತರಲಾಗಿದೆ.

click me!