ಡೇಟಾ ಸಂರಕ್ಷಣೆ: ಸಂಸತ್ತಿನ ಜಂಟಿ ಸಮಿತಿ ಮುಂದೆ ಹಾಜರಾಗಲು ಅಮೇಜಾನ್ ನಕಾರ!

By Suvarna NewsFirst Published Oct 23, 2020, 6:29 PM IST
Highlights

ಹಬ್ಬದ ಸಂದರ್ಭದಲ್ಲಿ ಭರ್ಜರಿ ಆಫರ್ ಮೂಲಕ ಸುದ್ದಿಯಾಗುವ ಇ ಕಾಮರ್ಸ್ ದೈತ್ಯ ಅಮೇಜಾನ್ ಇದೀಗ  ಬೇರೆ ಕಾರಣಕ್ಕೆ ಸುದ್ದಿಯಾಗಿದೆ. ಸಂಸತ್ತಿನ ಜಂಟಿ ಸಮಿತಿ ಮುಂದೆ ಹಾಜರಾಗಲು ಅಮೇಜಾನ್ ನಿರಾಕರಿಸಿದೆ. ಇದಕ್ಕೆ ಅಮೇಜಾನ್ ಭಾರಿ ದಂಡ ತೆರಬೇಕಾದ ಸಾಧ್ಯತೆ ಇದೆ.
 

ನವದೆಹಲಿ(ಅ.23): ಭಾರತದಲ್ಲಿ  ಇ ಕಾಮರ್ಸ್ ಜನರ ಭಾಗವಾಗಿದೆ. ಎಲ್ಲಾ ವ್ಯವಹಾರಗಳು ಇದೀಗ ಅನ್‌ಲೈನ್ ಮೂಲಕವೇ ನಡೆಯುತ್ತಿದೆ. ಅದರಲ್ಲಿ ಪ್ರಮಖವಾಗಿ ಆನ್‌ಲೈನ್ ಶಾಂಪಿಂಗ್. ಇ ಕಾಮರ್ಸ್ ದೈತ್ಯ ಅಮೇಜಾನ್ ಗ್ರಾಹಕರಿಗೆ ವಿಶೇಷ ಆಫರ್, ಕ್ಯಾಶ್ ಬ್ಯಾಕ್ ಸೇರಿದಂತೆ ಹಲವು ಕೊಡುಗೆಗಳನ್ನು ನೀಡುತ್ತಾ ಸುದ್ದಿಯಾಗಿದೆ. ಆದರೆ ಇದೀಗ ಡೇಟಾ ಸಂರಕ್ಷಣಾ ಮಸೂದೆ ಕುರಿತು ಸಂಸತ್ತಿನ ಜಂಟಿ ಸಮಿತಿ ಮುಂದೆ ಹಾಜರಾಗುವುದಿಲ್ಲ ಅನ್ನೋ ಅಮೇಜಾನ್ ಹೇಳಿ ಸರ್ಕಾರದ ಕಣ್ಣು ಕೆಂಪಾಗಿಸಿದೆ.

ದ್ವೇಷ ಪೂರಿತ ಪೋಸ್ಟ್ ನಿಯಂತ್ರಿಸುವಲ್ಲಿ ಫೇಸ್‌ಬುಕ್ ವಿಫಲ; ದಿಲ್ಲಿ ಸಮಿತಿಯಿಂದ ಸಮನ್ಸ್

ದತ್ತಾಂಶ ಸಂರಕ್ಷಣಾ ಮಸೂದೆಗೂ ಕುರಿತು ಸಂಸತ್ತಿನ ಜಂಟಿ ಸಮಿತಿಯ ಮುಂದೆ ಹಾಜರಾಗಲು ಇ-ಕಾಮರ್ಸ್ ದೈತ್ಯ ಅಮೆಜಾನ್ ನಿರಾಕರಿಸಿದೆ. ನೊಟೀಸ್ ಪ್ರಕಾರ ಅಮೇಜಾನ್ ಅಕ್ಟೋಬರ್ 28 ರಂದು ಸಂಸತ್ತಿನ ಜಂಟಿ ಸಮಿತಿ ಮುಂದೆ ಹಾಜರಾಗಬೇಕಿದೆ. ಆದರೆ ಅಮೇಜಾನ್ ಇಂಡಿಯಾ ತದ್ವಿರುದ್ಧ ಹೇಳಿಕೆ ನೀಡಿದೆ. ಇದು  ನಿಯಮ ಉಲ್ಲಂಘನೆಯಾಗಿದೆ  ಎಂದು  ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.

ಮಿತಿ ಮೀರಿ ಪ್ಲಾಸ್ಟಿಕ್‌ ಬಳಕೆ: ಅಮೆಜಾನ್‌, ಫ್ಲಿಪ್‌ಕಾರ್ಟ್‌ಗೆ ಕಂಟಕ!.

ಅಮೇಜಾನ್ ಉದ್ಧಟತಕ್ಕೆ ಸಂಸತ್ತಿನ ಜಂಟಿ ಸಮಿತಿ ಸರ್ವಾನುಮತದಿಂದ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚಿಸಬಹುದು. ಅಕ್ಟೋಬರ್ 28 ರಂದು ಅಮೇಜಾನ್ ಸಂಸತ್ತಿನ ಜಂಟಿ ಸಂಸತ್ತಿನ ಮುಂದೆ ಹಾಜರಾಗಬೇಕು. ಅಮೇಜಾನ್ ಪ್ರತಿನಿಧಿ ನಿಗದಿತ ದಿನಾಂಕದಂದೂ ಹಾಜರಾಗದಿದ್ದಲ್ಲಿ ನಿಯಮ ಉಲ್ಲಂಘನೆಯಾಗಲಿದೆ ಎಂದು ಮೀನಾಕ್ಷಿ ಲೇಖಿ ಎಚ್ಚರಿಸಿದ್ದಾರೆ.

ಗ್ರಾಹಕರ ವೈಯುಕ್ತಿಕ ಮಾಹಿತಿ ಸೇರಿದಂತೆ ಹಲವ ಡೇಟಾ ಸಂರಕ್ಷಣೆ ಕುರಿತು ಉತ್ತರಿಸಲು ಸಂಸತ್ತಿನ ಜಂಟಿ ಸಮಿತಿ ಅಮೇಜಾನ್ ಇಂಡಿಯಾಗೆ ಅಕ್ಟೋಬರ್ 28 ರಂದು ಹಾಜರಾಗಲು ಸೂಚಿಸಿತ್ತು. ಇದೇ ರೀತಿ ಫೇಸ್‌ಬುಕ್ ಇಂಡಿಯಾ, ಟ್ವಿಟರ್ ಇಂಡಿಯಾ, ಗೂಗಲ್ ಇಂಡಿಯಾ ಹಾಗೂ ಪೇಟಿಎಂಗೆ ಸೂಚಿಸಿದೆ.

ಫೇಸ್‌ಬುಕ್ ಇಂಡಿಯಾ ಮುಖ್ಯಸ್ಥ ಅಂಕಿತ್ ದಾಸ್ ಶುಕ್ರವಾರ(ಅ.23)ರಂದು ಸಂಸತ್ತಿನ ಜಂಟಿ ಸಮಿತಿ ಮುಂದೆ ಹಾಜರಾಗಿದ್ದರು. ಈ ವೇಳೆ ಕಠಿಣ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಇಷ್ಟೇ ಅಲ್ಲ, ಗ್ರಾಹಕರ ಸರ್ಚ್ ಮಾಡುವ ವಿಷಯಕ್ಕೆ ಅನುಸಾರ ಜಾಹೀರಾತು ನೀಡುವುದರ ಕುರಿತು ಜಂಟಿ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ. ಜಾಹೀರಾತುದಾರರ ವಾಣಿಜ್ಯ ಲಾಭಕ್ಕಾಗಿ ತನ್ನ ಬಳಕೆದಾರರ ಡೇಟಾದಿಂದ ನಿರ್ಣಯಗಳನ್ನು ತೆಗೆದುಕೊಳ್ಳಬಾರದು ಎಂದು ಸೂಚಿಸಿದೆ.

ಅಕ್ಟೋಬರ್ 28 ರಂದು  ಟ್ವಿಟರ್ ಮತ್ತು ಅಕ್ಟೋಬರ್ 29 ರಂದು ಗೂಗಲ್ ಹಾಗೂ ಪೇಟಿಎಂ ಅಧಿಕಾರಿಗಳನ್ನು ಸಮಿತಿ ಕರೆಸಿದೆ.
 

click me!