MIUI 13 Unveiled: ಸುಧಾರಿತ ಪ್ರೈವಸಿ ವೈಶಿಷ್ಟ್ಯಗಳೊಂದಿಗೆ ಶಾಓಮಿಯ ಹೊಸ ಆಂಡ್ರಾಯ್ಡ್ ಸ್ಕಿನ್ ಬಿಡುಗಡೆ!

By Suvarna News  |  First Published Dec 29, 2021, 9:48 AM IST

Xiaomi 12 ಸರಣಿಯ ಜೊತೆಗೆ ಶಾಓಮಿ ಡಿಸೆಂಬರ್‌ 28ರಂದು ಸ್ಮಾರ್ಟ್‌ಫೋನ್‌ಗಳಿಗಾಗಿ ಅದರ ಇತ್ತೀಚಿನ ಕಸ್ಟಮ್ ರ‍್ಯಾಮ್‌  MIUI 13 ಅನ್ನು ಅನಾವರಣಗೊಳಿಸಿದೆ. ಜತೆಗೆ ಟ್ಯಾಬ್ಲೆಟ್‌ಗಳಿಗಾಗಿ MIUI 13 Pad ಅನ್ನು ಕೂಡ ಪರಿಚಯಿಸಿದೆ.


Tech Desk: Xiaomi ಡಿಸೆಂಬರ್ 28 ರಂದು ಚೀನಾದಲ್ಲಿ Xiaomi 12 ಸರಣಿಯ ಇತ್ತೀಚಿನ ಪ್ರಮುಖ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಸರಣಿಯಲ್ಲಿ  Xiaomi 12, Xiaomi 12 Pro, ಮತ್ತು Xiaomi 12X ಅನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. Xiaomi 12 ಸರಣಿಯ ಜೊತೆಗೆ ಶಾಓಮಿ ಕಂಪನಿಯು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗಾಗಿ ಅದರ ಇತ್ತೀಚಿನ ಕಸ್ಟಮ್ ರ‍್ಯಾಮ್‌  (Custom Ram) MIUI 13 ಅನ್ನು ಅನಾವರಣಗೊಳಿಸಿದೆ. ಹೊಸ MIUI ಆವೃತ್ತಿಯು MIUI 12.5 ಅಪ್ಡೇಟ್ ಆವೃತ್ತಿಯಾಗಿದ್ದು ಉತ್ತಮ ಬಳಕೆದಾರ ಅನುಭವವನ್ನು‌ (User Experience) ನೀಡುತ್ತದೆ ಎಂದು ಹೇಳಲಾಗಿದೆ.

MIUI 13 ಬಳಕೆದಾರರಿಗೆ ಮೂರು ಹೊಸ ಗೌಪ್ಯತೆ-ಕೇಂದ್ರಿತ (Privacy) ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. ಫೇಸ್‌ ವೇರಿಫೀಕೆಶನ್‌ ಪ್ರೋಟೆಕ್ಶನ್, ಪ್ರೈವಸಿ ವಾಟರ್‌ ಮಾರ್ಕಿಂಗ್ ಮತ್ತು ಎಲೆಕ್ಟ್ರಾನಿಕ್ ಫ್ರಾಡ್ ರಕ್ಷಣೆಯನ್ನು ನೀಡುತ್ತಿದೆ. ಇದು iOS 15 ತರಹದ ಅನುಭವವನ್ನು ತರುವ ವಿಜೆಟ್‌ಗಳನ್ನು ಸಹ ಒಳಗೊಂಡಿದೆ. Xiaomi ಮುಂದಿನ ವರ್ಷ ಲಭ್ಯವಾಗುವ ಸ್ಮಾರ್ಟ್‌ವಾಚ್‌ಗಳು, ಸ್ಮಾರ್ಟ್ ಹೋಮ್ ಸಾಧನಗಳು ಮತ್ತು ಟೆಲಿವಿಷನ್‌ಗಳಿಗಾಗಿ MIUIಅನ್ನು ಕಸ್ಟಮ್ ಸ್ಕಿನ್ ಎಂದು ಘೋಷಿಸಿದೆ.

Tap to resize

Latest Videos

undefined

MIUI 13 ಆಂಡ್ರಾಯ್ಡ್ ಸ್ಕಿನ್!

MIUI 13ರ ಸ್ಥಿರ ಆವೃತ್ತಿಯು (Stable Version) ಚೀನಾದಲ್ಲಿ Xiaomi 11 Pro, Xiaomi 11, ಮತ್ತು Xiaomi 11 Ultra ಜತೆಗೆ ಜನವರಿ 2022 ರ ಅಂತ್ಯದ ವೇಳೆಗೆ ಲಭ್ಯವಿರಲಿದೆ. ಹೊಸ ಆವೃತ್ತಿಯು Xiaomi 12, Xiaomi 12 Pro ಮತ್ತು Xiaomi 12X ನಲ್ಲಿ ಪೂರ್ವ ಸ್ಥಾಪಿತವಾಗಿ ಬರಲಿದೆ.

Xiaomi 12 Series: ಟ್ರಿಪಲ್ ರಿಯರ್ ಕ್ಯಾಮೆರಾದೊಂದಿಗೆ ಶಾಓಮಿಯ ಮೂರು ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ!

ಚೀನಾ ಬಿಡುಗಡೆ ಜತೆಗೆ ಜಾಗತಿಕ ಬಳಕೆದಾರರು 2022 ರ ಮೊದಲ ತ್ರೈಮಾಸಿಕದಲ್ಲಿ MIUI 13 ಅಪ್‌ಡೇಟ್‌ಗಳನ್ನು ಸ್ವೀಕರಿಸುತ್ತಾರೆ ಎಂದು ಶಾಓಮಿ ದೃಢಪಡಿಸಿದೆ. MIUI 13 ಜೊತೆಗೆ, MIUI 13 ಪ್ಯಾಡ್ ಅನ್ನು ಬಿಡುಗಡೆ ಮಾಡಲಾಗಿದೆ ಅದು ಜನವರಿ ಅಂತ್ಯದ ವೇಳೆಗೆ Mi Pad 5 Pro ಮತ್ತು Mi Pad 5 ಗೆ ಲಭ್ಯವಿರಲಿದೆ. ಈ ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲು ಅಪ್‌ಡೇಟ್ ಸ್ವೀಕರಿಸಲಿವೆ ಎಂದು ಕಂಪನಿಯು ತನ್ನ ಜಾಗತಿಕ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

Mi 11, Mi 11 Ultra, Mi 11i, Mi 11X Pro, Mi 11X, Redmi 10, Redmi 10 Prime, Xiaomi 11 Lite 5G NE, Xiaomi 11 Lite NE, Redmi Note 8 (2021), Xiaomi 11T Pro, Xiaomi 11T, Redmi Note 10 Pro, Redmi Note 10 Note Pro Max, Redmi Note 10 Pro Max, 11 Lite 5G, Mi 11 Lite, ಮತ್ತು Redmi Note 10 JE.

MIUI 13 Features

MIUI 13 ಅನ್ನು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗಾಗಿ ಶಾಓಮಿನ ಅತ್ಯಾಧುನಿಕ ಕಸ್ಟಮ್ ಸ್ಕಿನ್ ಆಗಿ ವಿನ್ಯಾಸಗೊಳಿಸಲಾಗಿದೆ. ಸಾಫ್ಟ್‌ವೇರ್ ಬಳಕೆದಾರರು ತಮ್ಮ ಹೋಮ್‌ಸ್ಕ್ರೀನ್‌ನಲ್ಲಿ ಇರಿಸಬಹುದಾದ ಮತ್ತು ವಿವಿಧ ಗಾತ್ರಗಳಲ್ಲಿ ಕಸ್ಟಮೈಸ್ ಮಾಡಬಹುದಾದ ಯೂನಿಕ್ ವಿಜೆಟ್‌ಗಳಿಗೆ ಬೆಂಬಲದೊಂದಿಗೆ ಬರಲಿದ್ದೂ ಇದು iOS 15 ನಲ್ಲಿನ ವಿಜೆಟ್‌ ಗಳನ್ನು ಹೋಲುತ್ತದೆ. ಇದರಲ್ಲಿ ಹೊಸ ಸಿಸ್ಟಮ್ ಫಾಂಟ್ 'MiSans' ಸಹ ಇದ್ದೂ, ಇದು ಒಂದು ಕ್ಲೀನ್‌ ವೀಷನ್ ಜತೆಗೆ ಆರಾಮದಾಯಕ ಓದುವ ಅನುಭವ ನೀಡಲಿದೆ. ಇದಲ್ಲದೆ, MIUI 13 ವೈಯಕ್ತೀಕರಣವನ್ನು ಹೆಚ್ಚಿಸಲು ಪೂರ್ವ ಲೋಡ್ ಮಾಡಲಾದ ಡೈನಾಮಿಕ್ ವಾಲ್‌ಪೇಪರ್‌ಗಳು ಮತ್ತು ಥೀಮ್‌ಗಳನ್ನು ತರಲಿದೆ. 

Intel Unit In India: ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಪೂರಕ ಸ್ಪಂದನೆ

ಕಾರ್ಯಕ್ಷಮತೆ ಗಮನಿಸುವುದಾದರೆ, MIUI 13 ಒಟ್ಟಾರೆ ಸಿಸ್ಟಮ್ ಅಪ್ಲಿಕೇಶನ್‌ನಲ್ಲಿ 20 ರಿಂದ 26 ಪ್ರತಿಶತದಷ್ಟು ಸುಧಾರಣೆಯನ್ನು ನೀಡುತ್ತದೆ ಮತ್ತು MIUI 12.5 ಅಪ್ಡೇಟೆಡ್ ಆವೃತ್ತಿಯ ಮೇಲೆ ಥರ್ಡ ಪಾರ್ಟಿ  ಅಪ್ಲಿಕೇಶನ್‌ಗಳಲ್ಲಿ 15 ರಿಂದ 25 ಪ್ರತಿಶತದಷ್ಟು ಸುಧಾರಣೆಯನ್ನು ನೀಡುತ್ತದೆ.

ಸುಧಾರಿತ ಪ್ರೈವಸಿ ವೈಶಿಷ್ಟ್ಯಗಳು!

MIUI 13 ವರ್ಧಿತ ಪ್ರೈವಸಿ ರಕ್ಷಣೆಯೊಂದಿಗೆ ಪೂರ್ವ ಲೋಡ್ ಮಾಡಲ್ಪಟ್ಟಿದೆ. ಇದು ಸಿಸ್ಟಮ್-ಮಟ್ಟದ ಎಲೆಕ್ಟ್ರಾನಿಕ್ ವಂಚನೆ ಎಚ್ಚರಿಕೆ, ಮೋಸದ ಅಪ್ಲಿಕೇಶನ್ ಸ್ಥಾಪನೆಯನ್ನು ನಿರ್ಬಂಧಿಸುವುದು ಮತ್ತು ಫೇಸ್‌ ರೆಕಗ್ನಿಶನ್ ರಕ್ಷಣೆಯನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತಿದೆ. ನಿಮ್ಮ ಸ್ಕ್ಯಾನ್ ಮಾಡಿದ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳುವ ಮೊದಲು ಅವುಗಳನ್ನು ವಾಟರ್‌ಮಾರ್ಕ್ ಮಾಡಲು ಅನುಮತಿಸುವ ಗೌಪ್ಯತೆ ವಾಟರ್‌ಮಾರ್ಕ್ ಆಯ್ಕೆಯೂ ಇದರಲ್ಲಿರಲಿದೆ. ಇದು ಗುರುತಿನ ಮಾಹಿತಿಯನ್ನು (Identity Information) ಕದಿಯುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ.

Xiaomi MIUI 13 ನಲ್ಲಿ Mi ಸ್ಮಾರ್ಟ್ ಹಬ್ ಅನ್ನು ಒದಗಿಸಿದೆ, ಬಳಕೆದಾರರಿಗೆ ಹತ್ತಿರದ ಸಾಧನಗಳನ್ನು ಹುಡುಕಲು ಮತ್ತು ಸರಳವಾದ ಗೆಸ್ಚರ್‌ನೊಂದಿಗೆ  ಸಂಗೀತ, ಡಿಸ್ಪಲೇ ಮತ್ತು ಅಪ್ಲಿಕೇಶನ್‌ಗಳಂತಹ ಅನೇಕ ಸಾಧನಗಳಲ್ಲಿ ಶೇರ್‌ ಮಾಡುವ ಹಲವು ವೈಶಿಷ್ಟ್ಯಗಳನ್ನು ನೀಡಿದೆ. 

ಟ್ಯಾಬ್ಲೆಟ್‌ಗಳಿಗಾಗಿ MIUI 13 ಪ್ಯಾಡ್ ಬಿಡುಗಡೆ!

ಸ್ಮಾರ್ಟ್‌ಫೋನ್‌ಗಳಿಗಾಗಿ MIUI 13 ಜೊತೆಗೆ, Xiaomi ಟ್ಯಾಬ್ಲೆಟ್‌ಗಳಿಗಾಗಿ MIUI 13 ಪ್ಯಾಡ್ ಅನ್ನು ಕೂಡ ಪರಿಚಯಿಸಿದೆ. ಟ್ಯಾಬ್ಲೆಟ್ ಆವೃತ್ತಿಯು ಗೆಸ್ಚರ್ ಬೆಂಬಲ ಮತ್ತು ಸುಧಾರಿತ ಟಾಸ್ಕ್ ಬಾರ್ ಮೂಲಕ ಬರಲಿದೆ. ಮುಂಭಾಗದಲ್ಲಿ ಯಾವ ಅಪ್ಲಿಕೇಶನ್ ಚಾಲನೆಯಲ್ಲಿದ್ದರೂ ಸಹ. MIUI 13 ಪ್ಯಾಡ್ ಬಳಕೆದಾರರಿಗೆ ಅಪ್ಲಿಕೇಶನ್‌ನ ಮೂಲೆಯನ್ನು ಹಿಡಿದಿಟ್ಟುಕೊಳ್ಳಲು ಮತ್ತು ಒಂದೇ ಸ್ಕ್ರೀನ್‌ನಲ್ಲಿ ಅನೇಕ ಅಪ್ಲಿಕೇಶನ್‌ಗಳನ್ನು ತೆರೆಯಲು ಅನುಮತಿಸುತ್ತದೆ. ಜತೆಗೆ ಬಳಕೆದಾರರು ಗ್ಲೋಬಲ್ ಟಾಸ್ಕ್ ಬಾರ್ ಮೂಲಕ ಸಣ್ಣ ವಿಂಡೋಗಳಲ್ಲಿ ಅಪ್ಲಿಕೇಶನ್‌  ತೆರೆಯಬಹುದು ಎಂದು ಹೇಳಲಾಗಿದೆ.

Vivo S12, Vivo S12 Pro ಲಾಂಚ್: ಏನೆಲ್ಲ ವಿಶೇಷತೆಗಳಿವೆ, ಬೆಲೆ ಎಷ್ಟು?

MIUI 13 ಪ್ಯಾಡ್ Xiaomi ಟ್ಯಾಬ್ಲೆಟ್‌ಗಳಿಗೆ ಕೀಬೋರ್ಡ್ ಶಾರ್ಟ್‌ಕಟ್ ಬೆಂಬಲವನ್ನು ನೀಡಲಿದೆ. ಇದಲ್ಲದೆ iPhone ಮತ್ತು Mac ಅಥವಾ iPad ನಡುವೆ ಕ್ಲಿಪ್‌ಬೋರ್ಡ್ ಡೇಟಾವನ್ನು ಹೇಗೆ ಸಿಂಕ್ ಮಾಡುವಂತೆ ಹೊಸ ಸಾಫ್ಟ್‌ವೇರ್ MIUI 13 ಮತ್ತು MIUI 13 ಪ್ಯಾಡ್ ಸಾಧನಗಳ ನಡುವೆ ಕ್ಲಿಪ್‌ಬೋರ್ಡ್ ಡೇಟಾವನ್ನು ಸಿಂಕ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ.

Xiaomi MIUI ವಾಚ್, MIUI ಹೋಮ್, ಮತ್ತು MIUI ಟಿವಿಯನ್ನು ತನ್ನ ಹೊಸ ಆಪರೇಟಿಂಗ್ ಸಿಸ್ಟಮ್ ಆವೃತ್ತಿಗಳಾದ ಸ್ಮಾರ್ಟ್ ವಾಚ್‌ಗಳು, ಸ್ಮಾರ್ಟ್ ಹೋಮ್ ಸಾಧನಗಳು ಮತ್ತು ಸ್ಮಾರ್ಟ್ ಟಿವಿಗಳನ್ನು ಅನುಕ್ರಮವಾಗಿ ಬಿಡುಗಡೆ ಮಾಡಿದೆ. ಹೊಸ ಸಾಫ್ಟ್‌ವೇರ್ ಅನ್ನು ತರುವ ಉದ್ದೇಶವು "ಸಾಧನಗಳ ನಡುವೆ ತಡೆರಹಿತ ಮತ್ತು ನ್ಯಾಚುರಲ್‌ ಕಂಟೆಂಟ್‌ ಫ್ಲೋ ಸಾಧಿಸುವುದು" ಎಂದು ಕಂಪನಿ ಹೇಳಿದೆ. 3,000 ಕ್ಕೂ ಹೆಚ್ಚು ಎಂಜಿನಿಯರ್‌ಗಳನ್ನು ಹೊಂದಿರುವ  ಸಾಫ್ಟ್‌ವೇರ್ ವಿಭಾಗದಿಂದ ಹೊಸ ಅನುಭವ ಬರುತ್ತಿದೆ ಎಂದು Xiaomi ಹೇಳಿದೆ.

click me!