
Incognito Mode ಅನ್ನೋದು ಇಲ್ಲಿ ನಿಮ್ಮ ಯಾವುದೇ ಸರ್ಚ್ ಹಿಸ್ಟರಿ ಸೇವ್ ಆಗಲ್ಲ. Incognito Modeನಿಂದ ಹೊರ ಬರುತ್ತಿದ್ದಂತೆ ನೀವು ಮೊಬೈಲ್‌ನಲ್ಲಿ ಏನು ಸರ್ಚ್ ಮಾಡಿದ್ದೀರಿ ಅನ್ನೋದು ಯಾರಿಗೂ ಗೊತ್ತಾಗಲ್ಲ ಎಂಬ ನಂಬಿಕೆ ಬಹುತೇಕ ಎಲ್ಲ ಬಳಕೆದಾರರಲ್ಲಿದೆ. Incognito Mode ಅನ್ನೋದು ಬಳಕೆದಾರರ ಪ್ರೈವೇಸಿಯನ್ನು ಕಾಪಾಡುತ್ತದೆ. Incognito Mode ಬಳಕೆಯಿಂದ ನಿಮ್ಮ ಎಲ್ಲಾ ಆನ್‌ಲೈನ್ ಹಿಸ್ಟರಿ ಅಥವಾ ನಿಮ್ಮ ಬ್ರೌಸರ್ ಎಲ್ಲವೂ ಅಳಿಸಿ ಹೋಗುತ್ತದೆ ಅನ್ನೋದು ಸುಳ್ಳು. ಆದ್ರೆ ಕೆಲವು ಸರ್ಚ್ ಹಿಸ್ಟರಿ ನಿಮ್ಮ ಸಿಸ್ಟಮ್ DNS ಕ್ಯಾಶ್ ಅಥವಾ ಅಪ್ಲಿಕೇಶನ್ ಸ್ಟೋರೇಜ್‌ನಲ್ಲಿ ಕೆಲವೊಮ್ಮೆ ಉಳಿದಿರೋ ಸಾಧ್ಯತೆಗಳಿರುತ್ತವೆ. ಹಾಗಾಗಿ ಸೆಟ್ಟಿಂಗ್ಸ್‌ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇದರಿಂದ ಸರ್ಚ್ ಹಿಸ್ಟರಿ ಸೇವ್ ಆಗಿರಲ್ಲ.
Incognito ಅನ್ನೋದು ಪ್ರೈವೇಟ್ ಮೋಡ್ ಆಗಿದೆ. Google Chrome, Safari, Mozilla Firefox ಮತ್ತು Microsoft Edge ಸೇರಿದಂತೆ ಹಲವು ಸರ್ಚ್ ಎಂಜಿನ್‌ಗಳಲ್ಲಿ Incognito ಮೋಡ್ ಆಯ್ಕೆಯನ್ನು ನೀಡಲಾಗಿದೆ. ಈ ಮೋಡ್ ಬಳಕೆಯಿಂದಾಗಿ ಬ್ರೌಸರ್‌ನಲ್ಲಿ ಬ್ರೌಸಿಂಗ್ ಹಿಸ್ಟರಿ, ಕುಕೀಸ್ ಮತ್ತು ಸೈಟ್ ಡೇಟಾ ಸೇರಿದಂಝತೆ ಫಾರ್ಮ್ ಇನ್‌ಪುಟ್ ಮತ್ತು ಆಟೋಫಿಲ್ ಡೇಟಾ ಸೇವ್ ಮಾಡೋದನ್ನು ನಿಲ್ಲಿಸುತ್ತದೆ. Incognito ಮೋಡ್ ಬಳಕೆ ಒಂದೆಡೆ ನಿಮ್ಮೆಲ್ಲಾ ಡೇಟ್ ಸೇವ್ ಆಗೋದನ್ನು ತಡೆಯುತ್ತದೆ. ಆದ್ರೂ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೆಲ ಸೆಟ್ಟಿಂಗ್ಸ್‌ಗಳನ್ನು ಬದಲಾವಣೆ ಮಾಡಿಕೊಳ್ಳೋದು ಉತ್ತಮ.
Androidನಲ್ಲಿ ಪ್ರೈವೇಟ್ ಸರ್ಚ್ ಹಿಸ್ಟರಿ ಡಿಲೀಟ್ ಮಾಡೋದು ಹೇಗೆ?
ಆಂಡ್ರಾಯ್ಡ್ ಡಿವೈಸ್‌ನಲ್ಲಿ Incognito ಮೋಡ್ ಬಳಕೆ ಮಾಡುವ ಸಂದರ್ಭದಲ್ಲಿ ಕೆಲ ಬ್ರೌಸಿಂಗ್ ಹಿಸ್ಟರಿ ಆಪ್ ಸ್ಟೋರೇಜ್ ಮತ್ತು DNS ಕ್ಯಾಶ್‌ನಲ್ಲಿ ಸೇವ್ ಆಗಿರುತ್ತದೆ. ಈ ರೀತಿ ಸೇವ್ ಅಗೋದನ್ನು ತಡೆಯಲು ಈ ಸೆಟಿಂಗ್ಸ್ ಬದಲಿಸಿಕೊಳ್ಳಿ.
1.ಬ್ರೌಸ್ ಡೇಟಾ ಕ್ಲಿಯರ್ ಮಾಡುವ ವಿಧಾನ
ಇದನ್ನೂ ಓದಿ: ಕೇವಲ ಒಂದು ಸಣ್ಣ ಸೆಟಿಂಗ್‌ನಿಂದ ಸ್ಮಾರ್ಟ್‌ಫೋನ್‌ನಲ್ಲಿ ಪಡೆದುಕೊಳ್ಳಿ ಸೂಪರ್‌ಫಾಸ್ಟ್ 5G ಇಂಟರ್‌ನೆಟ್
2.ಆಪ್ ಡೇಟಾ ಡಿಲೀಟ್ ಮಾಡುವ ವಿಧಾನ
3.DNS ಕ್ಯಾಶ್ ಕ್ಲಿಯರ್ ಮಾಡುವ ವಿಧಾನ
ಇದನ್ನೂ ಓದಿ: ಇಂಟರ್‌ನೆಟ್ ಇಲ್ಲದೇ ಯುಟ್ಯೂಬ್‌ನಲ್ಲಿ ವಿಡಿಯೋ ನೋಡುವ ಸೂಪರ್ ಟ್ರಿಕ್ಸ್
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.