1.35 ಲಕ್ಷ ಆ್ಯಪ್ ಬ್ಯಾನ್ ಮಾಡಿದ ಆ್ಯಪಲ್, ನೀವು ಬಳಸುತ್ತಿದ್ದೀರಾ ಈ ಆ್ಯಪ್?

Published : Feb 21, 2025, 05:07 PM ISTUpdated : Feb 21, 2025, 05:27 PM IST
1.35 ಲಕ್ಷ ಆ್ಯಪ್ ಬ್ಯಾನ್ ಮಾಡಿದ ಆ್ಯಪಲ್, ನೀವು ಬಳಸುತ್ತಿದ್ದೀರಾ ಈ ಆ್ಯಪ್?

ಸಾರಾಂಶ

ಆ್ಯಪಲ್ ಇದುವರೆಗಿನ ಅತೀ ದೊಡ್ಡ ಕ್ರಮ ಕೈಗೊಂಡಿದೆ. ಬರೋಬ್ಬರಿ 1.35 ಲಕ್ಷ ಆ್ಯಪ್‌ಗಳನ್ನು ಆ್ಯಪಲ್ ಸ್ಟೋರ್‌ನಿಂದ ಬ್ಯಾನ್ ಮಾಡಿದೆ. ಆ್ಯಪಲ್ ಬ್ಯಾನ್ ಮಾಡಿದ ಆ್ಯಪ್ ನಿಮ್ಮ ಫೋನ್‌ನಲ್ಲಿದೆಯಾ? ನೀವು ಬಳಕೆ ಮಾಡುತ್ತೀದ್ದೀರಾ? ತಕ್ಷಣವೇ ಅನ್‌ಇನ್‌ಸ್ಟಾಲ್ ಮಾಡಿ

ನವದೆಹಲಿ(ಫೆ.21) ಸ್ಮಾರ್ಟ್‌ಫೋನ್‌ಗಳ ಪ್ಲೇ ಸ್ಟೋರ್ ಅಥಲಾ ಆ್ಯಪಲ್ ಸ್ಟೋರ್‌ನಲ್ಲಿ ಯಾವ ಆ್ಯಪ್ ಬೇಕಾದರೂ ಲಭ್ಯವಿದೆ. ತಮ್ಮ ತಮ್ಮ ಅಗತ್ಯಕ್ಕೆ ತಕ್ಕಂತೆ ಆ್ಯಪ್ ಡೌನ್ಲೋಡ್ ಮಾಡಿ ಬಳಕೆ ಮಾಡುತ್ತಾರೆ. ಆದರೆ ಅಧಿಕೃತವಲ್ಲದ ಅಥವ ಕೆಲ ಲೋಪದೋಷಗಳಿರುವ ಆ್ಯಪ್‌ ಕುರಿತು ಬಳಕೆದಾರರಿಗೆ ಯಾವುದೇ ಮಾಹಿತಿ ಇರುವುದಿಲ್ಲ. ಇದೀಗ ಆ್ಯಪಲ್ ಸುರಕ್ಷಿತವಲ್ಲದ ಆ್ಯಪ್‌ಗಳನ್ನು ಆ್ಯಪಲ್ ಸ್ಟೋರ್‌ನಿಂದ ಬ್ಯಾನ್ ಮಾಡಿದೆ. ಬರೋಬ್ಬರಿ 1.35 ಲಕ್ಷ ಆ್ಯಪ್‌ಗಳನ್ನು ಆ್ಯಪಲ್ ಬ್ಯಾನ್ ಮಾಡಿದೆ. ಇಲ್ಲೀವರೆಗೆ ಆ್ಯಪಲ್ ತೆಗೆದುಕೊಂಡು ಅತೀದೊಡ್ಡ ಹಾಗೂ ಅತ್ಯಂತ ಕಠಿಣ ಕ್ರಮ ಇದಾಗಿದೆ.

ಇದೇ ಮೊದಲ ಬಾರಿಗೆ ಲಕ್ಷಕ್ಕೂ ಅಧಿಕ ಆ್ಯಪ್‌ಗಳನ್ನು ಆ್ಯಪಲ್ ಬ್ಯಾನ್ ಮಾಡಿದೆ. ಪ್ರಮುಖವಾಗಿ ಇಯು ನಿಮಯವನ್ನು ಉಲ್ಲಂಘಿಸಿರುವ ಆ್ಯಪ್‌ಗಗಳನ್ನು ಆ್ಯಪಲ್ ಬ್ಯಾನ್ ಮಾಡಿದೆ. ಯಾವುದೇ ಆ್ಯಪ್‌ಗಳು ಬಳಕೆದಾರರು ಸುರಕ್ಷತೆಗೆ ಧಕ್ಕೆ ತರಬಾರದು. ಇಷ್ಟೇ ಅಲ್ಲ ಪ್ರತಿ ಆ್ಯಪ್‌ಗಳು ಟ್ರೇಡ್ ನಿಯಮದ ಪ್ರಕಾರ ಸೂಕ್ತ ಮಾಹಿತಿಯನ್ನು ಬಳಕೆದಾರರಿಗೆ ನೀಡಬೇಕು. ಹೀಗೆ ನಿಯಮ ಉಲ್ಲಂಘಿಸಿರುವ 1,35,000 ಆ್ಯಪ್‌ಗಳನ್ನು ಆ್ಯಪಲ್ ಬ್ಯಾನ್ ಮಾಡಿದೆ.

ವಿಶ್ವದಲ್ಲೇ ಗರಿಷ್ಠ ಮಾರಾಟವಾದ ಸ್ಮಾರ್ಟ್‌ಫೋನ್ ಯಾವುದು? ಇಲ್ಲಿದೆ ಲಿಸ್ಟ್

ಸದ್ಯ ಆ್ಯಪಲ್ ಬ್ಯಾನ್ ಮಾಡಿರುವ ಹೆಚ್ಚಿನ ಆ್ಯಪ್‌ಗಳು ಬಳಕೆದಾರರಿಗೆ ಸೂಕ್ತ ಮಾಹಿತಿ ನೀಡಿಲ್ಲ. ಆ್ಯಪ್ ಡೆವಲಪ್ಪರ್ಸ್ ಬಳಕೆದಾರರಿಗೆ ಆ್ಯಪ್ ಕುರಿತು ಮಾಹಿತಿ ನೀಡಿಲ್ಲ. ಪ್ರಮುಖವಾಗಿ ಇಮೇಲ್, ಫೋನ್ ನಂಬರ್, ವಿಳಾಸ ಮಾಹಿತಿಗಳನ್ನು ಬಳಕೆದಾರರಿಗೆ ನೀಡಿಲ್ಲ. ಇಷ್ಟೇ ಅಲ್ಲ ಆ್ಯಪ್ ಡೆವಲಪ್ಪರ್ಸ್ ಟ್ರೇಡ್ ಸ್ಟೇಟಸ್ ಕೂಡ ನೀಡಿಲ್ಲ. ಇದು ಇಯು ನಿಯಮ ಉಲ್ಲೇಂಘನೆಯಾಗಿದೆ. ಇಷ್ಟೇ ಅಲ್ಲ ಇದು ಬಳಕೆದಾರರ ಸುರಕ್ಷತೆಗೂ ಅಪಾಯ ತಂದೊಡ್ಡಲಿದೆ. ಹೀಗಾಗಿ ಇಂತಹ ಆ್ಯಪ್ ಗುರಿತಿಸಿದ ಆ್ಯಪಲ್ ಇದೀಗ ಬ್ಯಾನ್ ಮಾಡಿದೆ.

ಟ್ರೇಡ್ ನಿಯಮದ ಪ್ರಕಾರ, ಪ್ರತಿ ಆ್ಯಪ್ ಡೆವಲಪ್ಪರ್ಸ್ ಆ್ಯಪ್ ಕುರಿತು ಸಂಪೂರ್ಣ ಮಾಹಿತಿ, ಡೆವಲಪ್ಪರ್ಸ್ ವಿಳಾಸ, ಫೋನ್ ನಂಬರ್, ಇಮೇಲ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ತಿಳಿಸಬೇಕು. ಈ ಕುರಿತು ಈಗಗಾಲೇ ಆ್ಯಪಲ್ ಎಚ್ಚರಿಕೆ ಸಂದೇಶ ನೀಡಿತ್ತು. ಎಲ್ಲಾ ಆ್ಯಪ್‌ಗೆ ವಾರ್ನಿಂಗ್ ನೀಡಿದರೂ ಬಹುತೇಕರು ಸ್ಪಂದಿಸಿಲ್ಲ. ಫೆಬ್ರವರಿ 17 ಮಾಹಿತಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಆದರೆ 1,35 ಲಕ್ಷ ಆ್ಯಪ್ ಮಾಹಿತಿ ನೀಡುವಲ್ಲಿ ವಿಫಲವಾಗಿದೆ. ಹೀಗಾಗಿ ಈ ಆ್ಯಪ್‌ಗಳನ್ನು ಆ್ಯಪಲ್ ಬ್ಯಾನ್ ಮಾಡಿದೆ.

ಯಾವೆಲ್ಲಾ ಆ್ಯಪ್‌ಗಳನ್ನು ಆ್ಯಪಲ್ ಬ್ಯಾನ್ ಮಾಡಿದೆ ಅನ್ನೋ ಪಟ್ಟಿಯನ್ನು ಶೀಘ್ರದಲ್ಲೇ ಆ್ಯಪ್ ನೀಡಲಿದೆ. ಸದ್ಯ ಒಟ್ಟು ಸಂಖ್ಯೆಯನ್ನು ಮಾತ್ರ ಬಹಿರಂಗಪಡಿಸಿದೆ. 

ಐಫೋನ್ 16 ಪ್ರೋ ಮ್ಯಾಕ್ಸ್ ಒಳ್ಳೆದಾ? ಗ್ಯಾಲಕ್ಸಿ S25 ಅಲ್ಟ್ರಾ ಚೆನ್ನಾಗಿದೆಯಾ? ಗೊಂದಲಕ್ಕೆ ಇಲ್ಲಿದೆ ಉತ್ತರ
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?