ಡಿಜಿಟಲ್ ಇಂಡಿಯಾ ವಾರ್ಷಿಕೋತ್ಸವ; Paytmನಿಂದ 50 ಕೋಟಿ ರೂ ಕ್ಯಾಶ್ ಬ್ಯಾಕ್ ಆಫರ್!

By Suvarna News  |  First Published Jul 2, 2021, 9:28 PM IST
  • 6 ವರ್ಷ ಪೂರೈಸಿದ ಡಿಜಿಟಲ್ ಇಂಡಿಯಾ ಅಭಿಯಾನ 
  • ವಾರ್ಷಿಕೋತ್ಸವದ ಪ್ರಯುಕ್ತ ಪೇಟಿಎಂನಿಂದ ಭರ್ಜರಿ ಆಫರ್
  • ಬರೋಬ್ಬರಿ 50 ಕೋಟಿ ರೂ ಕ್ಯಾಶ್ ಬ್ಯಾಕ್ ಆಫರ್

ನವದೆಹಲಿ(ಜು.02): ಆಧುನಿಕ ಜಗತ್ತಿನ ವೇಗಕ್ಕೆ ತಕ್ಕಂತೆ ಭಾರತ ಆಧುನೀಕರಣಗೊಂಡಿದೆ. ಇದಕ್ಕೆ  ಕೇಂದ್ರ ಸರ್ಕಾರ ಆರಂಭಿಸಿದಿ ಡಿಜಿಟಲ್ ಇಂಡಿಯಾ ಅಭಿಯಾನ ಮತ್ತಷ್ಟು ವೇಗ ನೀಡಿದೆ. ಈ ಡಿಜಿಟಲ್ ಇಂಡಿಯಾ ಅಭಿಯಾನ 6 ವರ್ಷ ಪೂರೈಸಿದೆ.  ಈ ವಾರ್ಷಿಕೋತ್ಸವದ ಅಂಗವಾಗಿ Paytm ಭರ್ಜರಿ ಆಫರ್ ನೀಡಿದೆ. ಪೆಟಿಎಂ ಬಳೆಕೆದಾರರು, ವ್ಯಾಪಾರಿಗಳಿಗೆ ಬರೋಬ್ಬರಿ 50 ಕೋಟಿ ರೂಪಾಯಿ ಕ್ಯಾಶ್ ಬ್ಯಾಕ್ ಆಫರ್ ನೀಡಿದೆ.

Paytm ಗ್ರಾಹಕರಿಗೆ ಗುಡ್‌ ನ್ಯೂಸ್: ಏನದು? ನೀವೇ ನೋಡಿ!.

Tap to resize

Latest Videos

undefined

Paytm ನೂತನ ಆಫರ್ ಪ್ರಕಾರ,  Paytm ಆ್ಯಪ್ ಮೂಲಕ ಮಾಡುವ ಪ್ರತಿ ಡಿಜಿಟಲ್ ವಹಿವಾಟಿಗೆ ಕ್ಯಾಶ್‌ಬ್ಯಾಕ್ ರೂಪದಲ್ಲಿ ಬಹುಮಾನಗಳನ್ನು ಸ್ವೀಕರಿಸುತ್ತಾರೆ.  Paytm QR ಕೋಡ್  ಸ್ಕ್ಯಾನ್ ಮಾಡುವ ಮೂಲಕ ನೀವು ಮಾಡುವ ಪ್ರತಿಯೊಂದು ವಹಿವಾಟಿಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.

50 ಕೋಟಿ ರೂಪಾಯಿ ಕ್ಯಾಶ್‌ಬ್ಯಾಕ್ ಆಫರ್ ಆರು ತಿಂಗಳ ಕಾಲ ಚಾಲ್ತಿಯಲ್ಲಿರಲಿದೆ. ಬಳಕೆದಾರರು, ವ್ಯಾಪಾರಿಗಳು, ಪೇಟಿಎಂ ಮೂಲಕ ಪ್ರತಿ ವಹಿವಾಟಿಗೆ ಕ್ಯಾಶ್‌ಬ್ಯಾಕ್ ಹಾಗೂ ಇತರ ಗಿಫ್ಟ್ ವೋಚರ್ ಪಡೆಯಲಿದ್ದಾರೆ. ಡಿಜಿಟಲ್ ಆರ್ಥಿಕ ಸಾಕ್ಷರತೆಯ ಬಗ್ಗೆ ಚಿಲ್ಲರೆ ವ್ಯಾಪಾರಿಗಳಿಗೆ ತರಬೇತಿ ನೀಡಲು ಕಂಪನಿಯು ತನ್ನ ಅಪ್ಲಿಕೇಶನ್‌ನ ಮೂಲಕ ಹೆಚ್ಚಿನ ಸಂಖ್ಯೆಯ ವಹಿವಾಟುಗಳನ್ನು ನಡಸಲು ಉತ್ತೇಜಿಸುತ್ತಿದೆ.
 

click me!