ದ್ವೇಷ ಪೂರಿತ ಪೋಸ್ಟ್ ನಿಯಂತ್ರಿಸುವಲ್ಲಿ ಫೇಸ್‌ಬುಕ್ ವಿಫಲ; ದಿಲ್ಲಿ ಸಮಿತಿಯಿಂದ ಸಮನ್ಸ್!

By Suvarna News  |  First Published Sep 13, 2020, 5:30 PM IST

ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್ ಪೋಸ್ಟ್‌ಗಳು ದೇಶದಲ್ಲಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದೆ. ಫೇಸ್‌ಬುಕ್ ಪೋಸ್ಟ್‌ನಿಂದ ದೊಂಬಿ, ಗಲಭೆಗಳು ನಡೆದಿದೆ. ಕೋಮು ಸೌಹಾರ್ಧಕ್ಕೆ ಧಕ್ಕೆಯಾದ ಊದಾಹರಣೆಗಳಿವೆ. ಹಲವು ದೂರುಗಳನ್ನು ಆಧರಿಸಿ ಇದೀಗ ದೆಹಲಿ ವಿಧಾನಸಭೆ ಸಮಿತಿ ಫೇಸ್‌ಬುಕ್ ಇಂಡಿಯಾಗೆ ಸಮನ್ಸ್ ಜಾರಿ ಮಾಡಿದೆ.


ನವದೆಹಲಿ(ಸೆ.13): ಭಾರತದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಬಲ ಅಸ್ತ್ರವಾಗಿದೆ. ರಾಜಕೀಯ, ಉದ್ಯಮ, ವ್ಯವಹಾರ, ಶಿಕ್ಷಣ, ಸಂಪರ್ಕ, ಸಂವಹನ ಸೇರಿದಂತೆ ಎಲ್ಲವೂ ಸಾಮಾಜಿಕ ಜಾಲತಾಣಗಳನ್ನೇ ಅವಲಂಬಿಸಿದೆ. ಅದರಲ್ಲೂ ಫೇಸ್‌ಬುಕ್ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಇದರೊಂದಿಗೆ ಅಷ್ಟೇ ಆತಂಕ ಸೃಷ್ಟಿ ಮಾಡುತ್ತಿದೆ. ಫೇಸ್‌ಬುಕ್ ಪೋಸ್ಟ್‌ನಿಂದ ಹಲವು ಆವಾಂತರಗಳು, ಗಲಭೆಗಳು ನಡೆದಿದೆ. ಇದೀಗ ದೆಹಲಿ ವಿಧಾನಸಭೆ ಸಮಿತಿ ಫೇಸ್‌ಬುಕ್ ಇಂಡಿಯಾದ ಉಪಾಧ್ಯಕ್ಷ ಅಜಿತ್ ಮೋಹನ್‌ಗೆ ಸಮನ್ಸ್ ನೀಡಿದೆ.

'ಪೋಸ್ಟ್ ಮಾಡುವ ಮುನ್ನ ಎಚ್ಚರ' ಫೇಸ್‌ಬುಕ್‌ನಿಂದ ಬಿಜೆಪಿ ಶಾಸಕನಿಗೆ ಗೇಟ್ ಪಾಸ್!.

Tap to resize

Latest Videos

undefined

ಭಾರತದಲ್ಲಿ ಫೇಸ್‌ಬುಕ್ ಪಕ್ಷಪಾತ ನೀತಿ ಅನುಸರಿಸುತ್ತಿದೆ. ಉದ್ದೇಶ ಪೂರ್ವಕವಾಗಿ ದ್ವೇಷಪೂರಿತ ಭಾಷಣಗಳನ್ನು ಫೇಸ್‌ಬುಕ್ ನಿಯಂತ್ರಿಸುತ್ತಿಲ್ಲ. ಇದರಿಂದ ಕೋಮು ಸಹೌರ್ಧಕ್ಕೆ ಧಕ್ಕೆಯಾಗಿದೆ. ಶಾಂತಿ ಕದಡುವಲ್ಲಿ ಫೇಸ್‌ಬುಕ್ ಕಾರಣಾಗುತ್ತಿದೆ ಎಂದು ದೆಹಲಿ ವಿಧಾನಸಭೆ ಶಾಂತಿ ಹಾಗೂ ಸೌಹಾರ್ಧ ಸಮಿತಿ ಫೇಸ್‌ಬುಕ್ ಇಂಡಿಯಾಗೆ ಸಮನ್ಸ್ ಜಾರಿ ಮಾಡಿದೆ. ಸೆಪ್ಟೆಂಬರ್ 15 ರಂದು 12 ಮಧ್ಯಾಹ್ನ 12ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡ ದೆಹಲಿ ವಿಧಾನಸಭಾ ಶಾಂತಿ ಮತ್ತು ಸೌಹಾರ್ಧ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ಸಮಿತಿ ವಿಚಾರಣೆ ಎದುರಿಸುವಂತೆ ಸಮನ್ಸ್ ನೀಡಿದೆ. ದ್ವೇಷಪೂರಿತ ಭಾಷಣ, ಬರಹ, ಫೋಟೋ, ವಿಡಿಯೋಗಳನ್ನು ಫೇಸ್‌ಬುಕ್ ನಿರ್ಬಂಧಿಸಲಿದೆ. ಫೇಸ್‌ಬುಕ್ ನಿಯಮ ಮೀರಿದರೆ ಖಾತೆಗಳನ್ನು ನಿರ್ಬಂಧಿಸಲಾಗುವುದು ಎಂದು ಕಳೆದ ತಿಂಗಳು ಫೇಸ್‌ಬುಕ್ ಇಂಡಿಯಾ ಹೇಳಿತ್ತು.
 

click me!