ಸೂಕ್ಷ್ಮ ಮಾಹಿತಿ ಹ್ಯಾಕ್, ಐಫೋನ್ ಬಳಕೆದಾರರಿಗೆ ಕೇಂದ್ರ ಸರ್ಕಾರದ ಹೈರಿಸ್ಕ್ ವಾರ್ನಿಂಗ್!

By Suvarna NewsFirst Published Dec 16, 2023, 12:20 PM IST
Highlights

ಸ್ಯಾಮ್‌ಸಂಗ್ ಬಳಕೆದಾರರಿಗೆ ಈಾಗಾಗಲೇ ಕೇಂದ್ರ ಸರ್ಕಾರ ರಿಸ್ಕ್ ವಾರ್ನಿಂಗ್ ನೀಡಿದೆ. ಇದರ ಬೆನ್ನಲ್ಲೇ ಅತೀ ಸುರಕ್ಷಿತ ಎಂದೇ ಗುರುತಿಸಿಕೊಂಡಿರುವ ಆ್ಯಪಲ್ ಐಫೋನ್ ಬಳಕೆದಾರರಿಗೂ ಹ್ಯಾಕ್ ಭೀತಿ ಎದುರಾಗಿದೆ. ಐಫೋನ್ ಬಳಕೆದಾರರ ಅತೀ ಸೂಕ್ಷ್ಮ ಮಾಹಿತಿ ಹ್ಯಾಕ್ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಎಚ್ಚರಿಸಿದೆ. 
 

ನವದೆಹಲಿ(ಡಿ.16) ದೇಶದಲ್ಲೀಗ ಸೂಕ್ಷ್ಮ ಮಾಹಿತಿ ಸೋರಿಕೆ, ಮಹತ್ವದ ದಾಖಲೆ ಸೇರಿದಂತೆ ಡೇಟಾ ಕಳವು ಆತಂಕ ಹೆಚ್ಚಾಗುತ್ತಿದೆ. ಸ್ಯಾಮ್‌ಸಂಗ್ ಬಳಕೆದಾರರಿಗೆ ಕೇಂದ್ರ ಸರ್ಕಾರ ರಿಸ್ಕ್ ವಾರ್ನಿಂಗ್ ನೀಡಿದ ಬೆನ್ನಲ್ಲೇ ಇದೀಗ ಐಫೋನ್ ಬಳಕೆದಾರರಿಗೂ ಹೈರಿಸ್ಕ್ ವಾರ್ನಿಂಗ್ ನೀಡಲಾಗಿದೆ. ಕೇಂದ್ರ ಭದ್ರತಾ ಸಲಹೆ ಕೇಂದ್ರವಾಗಿರುವ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ(CERT-In) ಇದೀಗ ಮತ್ತೊಂದು ವಾರ್ನಿಂಗ್ ನೀಡುವ ಮೂಲಕ ಬಳಕೆದಾರರ ಸುರಕ್ಷತೆಗೆ ಮುನ್ನಚ್ಚೆರಿಕೆ ವಹಿಸುವಂತೆ ಸೂಚಿಸಿದೆ. ಕೆಲ ಲೋಪದೋಷಗಳನ್ನು ಬಳಸಿಕೊಂಡು ಹ್ಯಾಕರ್ಸ್, ಅತೀ ಸುರಕ್ಷಿತ ಎಂದೇ ಗುರುತಿಸಿಕೊಂಡಿರುವ ಐಫೋನ್ ಅತೀ ಸಾಕ್ಷ್ಮ ಮಾಹಿತಿಯನ್ನು ಕದಿಯುವ ಸಾಧ್ಯತೆ ಹೆಚ್ಚಿದೆ ಎಂದಿದೆ.

ಆ್ಯಪಲ್ ಉತ್ಪನ್ನವಾಗಿರುವ ಐಫೋನ್ ಟಾರ್ಗೆಟ್ ಮಾಡಿರುವ ಹ್ಯಾಕರ್ಸ್, ಸುಲಭವಾಗಿ ಐಫೋನ್ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಪ್ರಮುಖವಾಗಿ ಆರ್ಬಿಟರಿ ಕೋಡ್, ಬೈಪಾಸ್ ಸೆಕ್ಯೂರಿಟಿ ರಿಸ್ಟ್ರಿಕ್ಷನ್, ಕಾಸ್ ಡಿನೈಲ್ ಸರ್ವೀಸ್(DoS) ಕಂಡೀಷನ್, ಬೈಪಾಸ್ ಅಥೆಂಟಿಕೇಶನ್, ದೈನ್ ಎಲಿವೇಟೆಡ್ ಪ್ರಿವಿಲೇಜ್ ಸೇರಿದಂತೆ ಪ್ರಮುಖ ಭದ್ರತಾ ನಿಯಂತ್ರಕಗಳ ಮೇಲೆ ದಾಳಿ ಮಾಡಿ ಅತೀ ಸೂಕ್ಷ್ಮ ಮಾಹಿತಿ ಹ್ಯಾಕ್ ಮಾಡುವ ಸಾಧ್ಯತೆಯನ್ನು CERT-In ಎಚ್ಚರಿಸಿದೆ.

S23 ಸೇರಿ Samsung ಫೋನ್ ಬಳಕೆದಾರರಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ, ಡೇಟಾ ಕಳವು ಆತಂಕ!

iOS, ಐಪ್ಯಾಡ್OS,ಮ್ಯಾಕ್ OS, ಟಿವಿOS, ವಾಚ್OS ಹಾಗೂ ಸಫಾರಿ ಬ್ರೌಸರ್ ಮೇಲೆ ಹ್ಯಾಕರ್ಸ್ ದಾಳಿ ಮಾಡುವ ಸಾಧ್ಯತೆ ಇದೆ. ಬಳಕೆದಾರರಿಗೆ ಗೊತ್ತಿಲ್ಲದ ರೀತಿಯಲ್ಲಿ ಸೂಕ್ಷ್ಮ ಮಾಹಿತಿ, ಡೇಟಾಗಳು ಕಳುವಾಗಲಿದೆ.  ಈ ಕುರಿತು ಎಚ್ಚರವಹಿಸುವಂತೆ ಸೂತಿಸಿದೆ.  CERT-In ಎಚ್ಚರಿಕೆ ಕುರಿತು ಐಫೋನ್ ಯಾವುದೇ ಪ್ರತಿಕಕ್ರಿಯೆ ನೀಡಿಲ್ಲ. ಇಷ್ಟೇ ಅಲ್ಲ ಹ್ಯಾಕರ್ಸ್‌ನಿಂದ ಸುರಕ್ಷಿತವಾಗಿರಲು ಅಪ್‌ಡೇಟ್ ಸೇರಿದಂತೆ ಇತರ ಯಾವುದೇ ಸಲಹೆಯನ್ನು ಐಫೋನ್ ನೀಡಿಲ್ಲ.

ಐಫೋನ್ ಬಳಕೆದಾರರಿಗೆ ನೀಡಿರುವ ಎಚ್ಚರಿಕೆಯಂತೆ ಸ್ಯಾಮ್‌ಸಂಗ್ ಬಳಕೆದಾರರಿಗೂ ನೀಡಲಾಗಿದೆ.ಸ್ಯಾಮ್‌ಸಂಗ್‌ ಕಂಪನಿಯ ಗೆಲಾಕ್ಸಿ ಸರಣಿಯ ಮೊಬೈಲ್‌ ಫೋನ್‌ ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಈ ಫೋನ್‌ಗಳು ಹ್ಯಾಕ್‌ ಆಗುವ ಸಾಧ್ಯತೆ ಇರುವ ಕಾರಣ ತಕ್ಷಣವೇ ಮೊಬೈಲ್‌ ಆಪರೇಟಿಂಗ್ ಸಿಸ್ಟಂ ಅಪ್‌ಡೇಟ್‌ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರದ ‘ಭಾರತೀಯ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಂ’ (ಸಿಇಆರ್‌ಟಿ-ಇನ್‌) ಸಂಸ್ಥೆ ಕಟ್ಟೆಚ್ಚರ ಸಾರಿದೆ. ಹೊಸ ಹಾಗೂ ಹಳೆಯ ಗೆಲಾಕ್ಸಿ ಫೋನ್‌ಗಳಿಗೂ ಈ ಎಚ್ಚರಿಕೆ ಅನ್ವಯವಾಗಲಿದೆ.

ದಾಳಿಕೋರರು ಭದ್ರತಾ ನಿರ್ಬಂಧಗಳನ್ನು ಉಲ್ಲಂಘಿಸಿ, ಬಳಕೆದಾರರ ರಹಸ್ಯ ಮಾಹಿತಿಗಳನ್ನು ಗಳಿಸುವ ಹಲವಾರು ಅಪಾಯಗಳು ಗೋಚರವಾಗಿವೆ. ಸ್ಯಾಮ್‌ಸಂಗ್‌ನ ಆ್ಯಂಡ್ರಾಯ್ಡ್‌ ಆವೃತ್ತಿಗಳಾದ 11, 12, 13 ಹಾಗೂ 14ರಲ್ಲಿ ಇದು ಕಂಡುಬಂದಿದೆ ಎಂದು ಸಂಸ್ಥೆ ತಿಳಿಸಿದೆ.
 

click me!