ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ; ಟ್ವಿಟರ್ ಇಂಡಿಯಾ MD ವಿರುದ್ಧ ದೂರು ದಾಖಲು!

By Suvarna NewsFirst Published Nov 22, 2020, 10:31 PM IST
Highlights

ಹಿಂದೂ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂಬ ಆರೋಪದಡಿ, ಅತೀ ದೊಡ್ಡ ಸಾಮಾಜಿಕ ಮಾಧ್ಯಮ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ವಿರುದ್ಧ ದೂರು ದಾಖಲಾಗಿದೆ.

ಮಧ್ಯ ಪ್ರದೇಶ(ನ.22):  ಸಾಮಾಜಿಕ ಮಾಧ್ಯಮ ವಿರುದ್ಧವೇ ಆರೋಪಗಳು ಕೇಳಿಬರುತ್ತಿರುವುದು ಮೊದಲೇನಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲಾಗುತ್ತಿದೆ ಅನ್ನೋ ಆರೋಪಗಳು ಹಲವು ಬಾರಿ ಕೇಳಿ ಬಂದಿದೆ. ಆದರೆ ಇದೀಗ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಜಾಲತಾಣದ ವಿರುದ್ಧವೇ ದೂರು ದಾಖಲಾಗಿದೆ.  ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ವಿರುದ್ಧ ಮಧ್ಯಪ್ರದೇಶದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಟ್ವಟರ್‌ಗೆ ಮತ್ತೊಂದು ಸಂಕಟ ತಂದ ಹಾಸ್ಯನಟ, ನ್ಯಾಯಾಂಗ ನಿಂದಿಸಿ ಧಿಮಾಕು!.

Latest Videos

ಹಿಂದೂ ಸಂಸ್ಕೃತಿಯನ್ನು ಬಿಂಬಿಸುವ, ಹಿಂದೂ ಸಂಸ್ಕೃತಿಯ ಸಂಪ್ರದಾಯ ಹಾಗೂ ಮಹತ್ವ ಸಾರ ಹೇಳುವ ಟ್ರುಇಂಡೋಲಜಿ ಅನ್ನೋ ಟ್ವಿಟರ್ ಖಾತೆಯನ್ನು ಯಾವುದೇ ಮಾಹಿತಿ ನೀಡಿದೆ ಡಿಲೀಟ್ ಮಾಡಲಾಗಿದೆ. ಯಾವುದೇ ತಪ್ಪು ಮಾಹಿತಿ ನೀಡದ, ದ್ವೇಷವಿಲ್ಲದೆ ಮಾಹಿತಿ ನೀಡುತ್ತಿದ್ದ ಖಾತೆಯನ್ನು ಡಿಲೀಟ್ ಮಾಡಲಾಗಿದೆ ಎಂದು ಶ್ರೀಕಾಂತ್ ಶರ್ಮಾ, ಮನೀಶ್ ಮಹೇಶ್ವರಿ ವಿರುದ್ಧ ದೂರು ದಾಖಲಿಸಿದ್ದಾರೆ.

 

FIR lodged against MD by Mr Shrikant Sharma at for suppressing FoE by arbitrarily suspending n imposing radical views pic.twitter.com/V1vmza9hlY

— Legal Rights Observatory- LRO (@LegalLro)

ದೀಪಾವಳಿ ಕುರಿತು ಪೋಸ್ಟ್‌ ಸಂಬಂಧಿಸಿ ಟ್ರುಇಂಡೋಲಜಿ ಖಾತೆಯನ್ನು ಡಿಲೀಟ್ ಮಾಡಲಾಗಿದೆ. ಈ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದು ಶ್ರೀಕಾಂತ್ ಶರ್ಮಾ ದೂರಿನಲ್ಲಿ ಆರೋಪಿಸಿದ್ದಾರೆ. ಕೊಟ್ವಾಲಿ ಪೊಲೀಸ್ ಠಾಣೆ ವಿರೇಂದ್ರ ಜಾ ದೂರು ದಾಖಲಿಸಿಕೊಂಡಿದ್ದಾರೆ. ಇದೀಗ ಎಡಪಂಥೀಯ ಒತ್ತಡಕ್ಕೆ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಈ ರೀತಿ ಕ್ರಮ ಕೈಗೊಂಡಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದೆ.

click me!