6G Mobile Technology: 6ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿರುವ ಚೀನಾ, 2030ಕ್ಕೆ ಸೇವೆಗೆ!

By Suvarna News  |  First Published Jan 12, 2022, 11:22 AM IST

*6G ಮೊಬೈಲ್ ಟೆಕ್ನಾಲಜಿ 5Gಗಿಂತಲೂ 100 ಪಟ್ಟು ವೇಗ ಹೆಚ್ಚಿರಲಿದೆ!
*ಈ ಅತಿವೇಗದ ಮೊಬೈಲ್ ಟೆಕ್ನಾಲಜಿಯನ್ನು ಚೀನಾ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
*ಭಾರತದಲ್ಲಿ ಈ ವರ್ಷ ಕೆಲವು ಆಯ್ದ ನಗರಗಳಲ್ಲಿ 5ಜಿ ಸೇವೆಯನ್ನು ನಿರೀಕ್ಷಿಸಬಹುದಾಗಿದೆ.


Tech Desk: ಅಮೆರಿಕ (USA) ಸೇರಿ  ಕೆಲವೇ ಕೆಲವು ರಾಷ್ಟ್ರಗಳನ್ನು ಹೊರತಪಡಿಸಿದರೆ ಜಗತ್ತಿನ ಯಾವ ಭಾಗದಲ್ಲೂ 5ಜಿ ಮೊಬೈಲ್ ತಂತ್ರಜ್ಞಾನ ಇನ್ನೂ ಬಳಕೆಯಾಗುತ್ತಿಲ್ಲ. ಇದಕ್ಕೆ ಭಾರತ(India)ವೂ ಹೊರತಲ್ಲ. ಈ ವರ್ಷವಷ್ಟೇ ಬೆಂಗಳೂರು (Bengaluru) ಸೇರಿದಂತೆ ಆಯ್ದ ಕೆಲವು ನಗರಗಳಲ್ಲಿ 5ಜಿ ಸೇವೆ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ,  ಚೀನಾದಿಂದ ಮಾತ್ರವೇ ಬೇರೆಯದ್ದೇ ಸುದ್ದಿ ಬರುತ್ತಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (South China Morning Post)  ವರದಿಯ ಪ್ರಕಾರ, 6G ಮೊಬೈಲ್ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿರುವುದಾಗಿ ಚೀನಾ ಹೇಳಿಕೊಂಡಿದೆ. ಚೀನಾದ ತಜ್ಞರು ಪ್ರತಿ ಸೆಕೆಂಡಿಗೆ 206.25 ಗಿಗಾಬಿಟ್‌ಗಳ ವಿಶ್ವ-ದಾಖಲೆಯ ವೈರ್‌ಲೆಸ್ ಟ್ರಾನ್ಸ್‌ಮಿಷನ್ ವೇಗವನ್ನು ಸಾಧಿಸಿದ್ದಾರೆ. ಈ ಮೂಲಕ ಹೊಸ ದಾಖಲೆಯನ್ನು  ಬರೆದಿದ್ದಾರೆ. ಇದು 6G ತಂತ್ರಜ್ಞಾನವು ಬಂದಾಗ, ಐದನೇ ತಲೆಮಾರಿನ ವೈರ್‌ಲೆಸ್ ಮೊಬೈಲ್ ನೆಟ್‌ವರ್ಕ್ 5G ಗಿಂತ 100 ಪಟ್ಟು ವೇಗವಾಗಿರುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.  

ಈ ಹೊಸ ತಂತ್ರಜ್ಞಾನದಿಂದ 206.25 ಗಿಗಾಬಿಟ್‌ (Gigabits) ಗಳ ವೇಗವು ಸಾಕಷ್ಟು ಹೆಚ್ಚು, ಮತ್ತು ಇದು ಗ್ರಾಹಕರಿಗೆ ಕೇವಲ 16 ಸೆಕೆಂಡುಗಳಲ್ಲಿ 4K ಯಲ್ಲಿ ಮಾರ್ವೆಲ್ ಸಿನೆಮ್ಯಾಟಿಕ್ ಯೂನಿವರ್ಸ್ ಚಲನಚಿತ್ರಗಳ ಸಂಪೂರ್ಣ 59.5-ಗಂಟೆಗಳ ಸಂಗ್ರಹವನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಇದು ಅತ್ಯಂತ ವೇಗದ ಡೌನ್‌ಲೋಡ್ ಆಗಿದೆ ಎಂದು ಹೇಳಬಹುದು. ದಕ್ಷಿಣ ಕೊರಿಯಾ (South Korean) ದ ಸುದ್ದಿ ಮೂಲದ ಲೇಖನದ ಪ್ರಕಾರ, ಟೆಲಿಕಾಂ ಸಲಕರಣೆ ಪೂರೈಕೆದಾರರು 6G ತಂತ್ರಜ್ಞಾನವು 2030 ರ ಸುಮಾರಿಗೆ ಮಾರುಕಟ್ಟೆಗೆ ಬರಲಿದೆ ಎಂದು ಅಂದಾಜಿಸಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: Twitter Features: ಟಿಕ್ ಟಾಕ್, ಇನ್‌ಸ್ಟಾ ರೀತಿಯಲ್ಲೇ ಫೋಟೋ, ವಿಡಿಯೋದೊಂದಿಗೆ ಟ್ವೀಟ್‌ಗೆ ಪ್ರತಿಕ್ರಿಯಿಸಿ!

2010 ರ ದಶಕದ ಆರಂಭದಲ್ಲಿ (ಭಾರತದಲ್ಲಿ 2012 ರಲ್ಲಿ) 4G ಅನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು. ಆ ನಂತರ ವಿಶ್ವದ ಬಹುತೇಕ ರಾಷ್ಟ್ರಗಳು ಈ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿವೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಕೆಲವು ರಾಷ್ಟ್ರಗಳು 5ಜಿ ಬಳಸಲಾರಂಭಿಸಿವೆ. ಆದರೆ,  ಪ್ರಪಂಚದ ಬಹುಪಾಲು ಪ್ರದೇಶಗಳಲ್ಲಿ 5G ಅನ್ನು ಇನ್ನೂ ಸಾಧ್ಯವಾಗಿಲ್ಲ. ಈ ಹೀಗಿರುವಾಗಲೇ ಚೀನಾ ಆಗಲೇ 6ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ.  ಭಾರತದಲ್ಲೂ ಇನ್ನೂ 5ಜಿ ಸೇವೆ ಆರಂಭವಾಗಿಲ್ಲ. ಈ ವರ್ಷವಷ್ಟೇ ಕೆಲವು ಆಯ್ದ ನಗರಗಳಲ್ಲಿ ಸೇವೆ ಆರಂಭವಾಗುವ ಸಾಧ್ಯತೆ ಇದೆ.

4ಜಿ ನಂತರದ ಸ್ಥಾನದಲ್ಲಿ 5ಜಿ ನೆಟ್ವರ್ಕ್ ಬಳಕೆ ಸಾಧ್ಯವಾಗಲಿದೆ. ಆದರೆ, 5G ನೆಟ್ವರ್ಕ್ ನಿಯೋಜನೆಯು ನಿಧಾನವಾಗಿದೆ ಮತ್ತು ಇದು ಇನ್ನೂ ಪ್ರಪಂಚದ ಹೆಚ್ಚಿನ ಪ್ರದೇಶಗಳನ್ನು ತಲುಪಿಲ್ಲ ಎಂದು ಹೇಳಬಹುದು. ಭಾರತವು ಸೇರಿದಂತೆ ಜಗತ್ತಿನ ಕೆಲವು ರಾಷ್ಟ್ರಗಳಲ್ಲಿ 5ಜಿ ಮೊಬೈಲ್ ಟೆಕ್ನಾಲಜಿ ಅಳವಡಿಕೆ ವಿಳಂಬವಾಗಲು ಭಾಗಶಃ COVID-19 ಸಾಂಕ್ರಾಮಿಕ, ಮುಂದುವರಿದ ಪೂರೈಕೆ ಸರಪಳಿ ಸವಾಲುಗಳು ಮತ್ತು 5G ಸಲಕರಣೆಗಳ ಹೆಚ್ಚಿನ ವೆಚ್ಚದ ಕಾರಣವಾಗಿರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. 

ಇದನ್ನೂ ಓದಿ: China Space Station: ಬಾಹ್ಯಾಕಾಶದಲ್ಲಿ ಚೀನಾ ಪ್ರಭುತ್ವ, ಈ ವರ್ಷ ಬಾಹ್ಯಾಕಾಶ ನಿಲ್ದಾಣ ರೆಡಿ!

ಆನ್ಲೈನ್ ವರದಿಗಳ ಪ್ರಕಾರ, ಭಾರತದಲ್ಲಿ  5G ಸ್ಪೆಕ್ಟ್ರಮ್ ಹರಾಜನ್ನು ಜುಲೈಗೆ ನಿಗದಿ ಪಡಿಸಲಾಗಿದೆ. ಆದರೆ, ದೇಶದಲ್ಲಿ 5G ನೆಟ್ವರ್ಕ್ 2023 ರವರೆಗೆ ವಿಳಂಬವಾಗಲಿದೆ. ಏಕೆಂದರೆ ಟೆಲಿಕಾಂ ಕಂಪನಿಗಳು ಸ್ಪೆಕ್ಟ್ರಮ್ ಅನ್ನು ನಿಗದಿಪಡಿಸಿದ ನಂತರ ಗ್ರಾಹಕರಿಗೆ 5ಜಿ ಸೇವೆಯನ್ನು ಒದಗಿಸಲು ಕಂಪನಿಗಳಿಗೆ ಕನಿಷ್ಠ ಆರು ತಿಂಗಳಗಳಾದರೂ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಆಯ್ದ ಕೆಲವು ನಗರಗಳಲ್ಲಿ ಈ ವರ್ಷವೇ 5G ಸೇವೆಯನ್ನು ನಿರೀಕ್ಷಿಸಲಾಗಿತ್ತಾದರೂ ಅದು ವಿಳಂಬವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎನ್ನಬಹುದು. 

click me!