ಮೇರಾ ರೇಷನ್ ಕಾರ್ಡ್ ಆಪ್‌ ಬಿಡುಗಡೆ: ಸಮೀಪದ ರೇಷನ್ ಅಂಗಡಿ ಎಲ್ಲಿದೆ ತಿಳಿಯಿರಿ

By Suvarna News  |  First Published Mar 14, 2021, 5:05 PM IST

ಒಂದು ದೇಶ ಒಂದು ಕಾರ್ಡ್ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿದೆ. ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಪಡಿತರವನ್ನು ಒದಗಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರವು ಇದೀಗ ‘ಮೇರಾ ರೇಷನ್ ಕಾರ್ಡ್’ ಎಂಬ ಆಪ್ ಅನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. ಈ ಆಪ್, ಪಡಿತರ ಪಡೆಯಲು ನೆರವು ನೀಡುತ್ತದೆ. ವಿಶೇಷವಾಗಿ ವಲಸಿಗ ಫಲಾನುಭವಿಗಳಿಗೆ ಹೆಚ್ಚಿನ ನೆರವು ದೊರೆಯಲಿದೆ.


ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಗೆ ಈಗ ತಂತ್ರಜ್ಞಾನದ ಬೆಂಬಲ ಸಿಕ್ಕಿದೆ. ದೇಶದ ಯಾವುದೇ ಭಾಗದಲ್ಲಿ ಪಡಿತರ ಪಡೆಯಲು ಜನರಿಗೆ ಅನುಕೂಲವಾಗುವ ಈ ಒನ್ ನೇಷನ್ ಒನ್ ರೇಷನ್ ಕಾರ್ಡ್‌ಗೆ ಸಂಬಂಧಿಸಿದ ಸ್ಮಾರ್ಟ್‌ಫೋನ್ ಆಪ್ ಅನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಸರ್ಕಾರ ಬಿಡುಗಡೆ ಮಾಡಿರುವ ಈ ಆಪ್ ಹೆಸರು, ಮೇರಾ ರೇಷನ್ ಕಾರ್ಡ್. ಅಂದರೆ, ನನ್ನ ಪಡಿತರ ಚೀಟಿ ಎಂದರ್ಥ. ಈ ಆಪ್ ಮೂಲಕ ಪಡಿತರ ಚೀಟಿದಾರರು ಇನ್ನು ಮುಂದೆ ತಮ್ಮ ರೇಷನ್ ಪಡೆದುಕೊಳ್ಳಲು ನೆರವು ದೊರೆಯಲಿದೆ.

Latest Videos

undefined

ಪ್ರಿಪೇಡ್ ಗ್ರಾಹಕರಿಗೆ Viನಿಂದ 4 ಹೊಸ ಪ್ಲ್ಯಾನ್; ಏನೆಲ್ಲ ಲಾಭಗಳಿವೆ ಪರೀಕ್ಷಿಸಿಕೊಳ್ಳಿ!

ಒಂದೇ ಪಡಿತರ ಚೀಟಿ ಇಟ್ಟುಕೊಂಡು ದೇಶದ ಯಾವುದೇ ಭಾಗದಲ್ಲಾದರೂ ರೇಷನ್ ಪಡೆಯಲು ಈ ಯೋಜನೆ ನೆರವು ನೀಡುತ್ತದೆ. ವಿಶೇಷವಾಗಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಗಳಿಗೆ ವಲಸೆ ಹೋಗುವ ಕಾರ್ಮಿಕರಿಗೆ ಈ ಯೋಜನೆಯಿಂದ ಭಾರಿ ಲಾಭವಾಗಲಿದೆ.

ಹೀಗೆ ವಲಸೆ ಹೋದ ಕಾರ್ಮಿಕರು ಈ ಮೇರಾ ರೇಷನ್ ಕಾರ್ಡ್ ಆಪ್ ಮೂಲಕವೇ  ತಮ್ಮ ಸಮೀಪದ ನ್ಯಾಯ ಬೆಲೆ ಗುರುತಿಸಿಕೊಂಡು ಅಲ್ಲಿಂದಲೇ ಪಡಿತರ ಧಾನ್ಯಗಳನ್ನು ಪಡೆಯಬಹುದಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಬಿಡುಗಡೆ; ಕೈಗೆಟಕುವ ಬೆಲೆಯ ಸ್ಮಾರ್ಟ್‌ಫೋನ್

ಈಗ ಬಿಡುಗಡೆಯಾಗಿರುವ ಮೇರಾ ರೇಷನ್ ಕಾರ್ಡ್ ಆಪ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ. ಶೀಘ್ರದಲ್ಲೇ ದೇಶದ 14 ಪ್ರಾದೇಶಿಕ ಭಾಷೆಗಳಲ್ಲಿ ಈ ಆಪ್‌ನ ಸೇವೆ ದೊರೆಯಲಿದೆ. ಸಾಮಾನ್ಯವಾಗಿ ವಲಸೆ ಹೋಗಿರುವ ಕಾರ್ಮಿಕರು, ಫಲಾನುಭವಿಗಳಿಗೆ ತಮ್ಮ ಮಾತೃಭಾಷೆ ಬಿಟ್ಟು ಬೇರೆ ಭಾಷೆ ಓದಲು ಮತ್ತು ಬರೆಯಲು ಬರುವುದಿಲ್ಲ. ಹಾಗಾಗಿ, ಮೇರಾ ರೇಷನ್ ಕಾರ್ಡ್ 14 ಪ್ರಾದೇಶಿಕ ಭಾಷೆಗಳಲ್ಲಿ ದೊರೆತರೆ ಇದರಿಂದ ಪಡಿತರ ಚೀಟಿದಾರರಿಗೆ ಹೆಚ್ಚು ಲಾಭವಾಗಲಿದೆ. ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲೇ ಇದ್ದರೆ ಈ ಆಪ್‌ನ ಬಳಕೆಯ ವ್ಯಾಪಕತೆ ಹೆಚ್ಚಾಗುವುದಿಲ್ಲ.  ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಾ, ವಲಸಿಗರು, ಕಾರ್ಮಿಕರು  ಹೆಚ್ಚು ಎಲ್ಲಿದ್ದಾರೆಂಬುದನ್ನು ಗುರುತಿಸಿ ಭಾಷೆಗಳನ್ನು ನಿರ್ಧರಿಸಲಾಗುವುದು ಎಂದು ಹೇಳಿದೆ.

ಹಿಂದಿ ಮತ್ತು ಇಂಗ್ಲಿಷ್ ಮಾತ್ರವಲ್ಲದೇ ಆಯಾ ಸ್ಥಳೀಯ ಭಾಷೆಯಲ್ಲಿ ಮೇರಾ ರೇಷನ್ ಕಾರ್ಡ್ ಆಪ್ ಸೇವೆ ದೊರೆತರೆ ಅದರ ಲಾಭ ಹೆಚ್ಚಿನ ಪ್ರಮಾಣದಲ್ಲಿ ಆಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಸರ್ಕಾರ ಬಿಡುಗಡೆ ಮಾಡಿರುವ ಮೇರಾ ರೇಷನ್ ಕಾರ್ಡ್ ಆಪ್‌ನಲ್ಲಿ ಹಲವು ಲಾಭಗಳಿವೆ. ನಿಮ್ಮ ಸಮೀಪದ ರೇಷನ್ ಅಂಗಡಿ ಎಲ್ಲಿದೆ ಎಂಬ ಮಾಹಿತಿಯನ್ನು ಈ ಆಪ್ ನೀಡುತ್ತದೆ. ಸಮೀಪದ ಅಂಗಡಿಗಳಲ್ಲಿ ಯಾವೆಲ್ಲ ಧಾನ್ಯಗಳು ಸಿಗಲಿವೆ ಎಂಬ ಮಾಹಿತಿಯನ್ನು  ಕೂಡ ಈ ಆಪ್‌ನಿಂದಲೇ ತಿಳಿದುಕೊಳ್ಳಬಹುದಾಗಿದೆ. ಇದರಲ್ಲಿ ಇತ್ತೀಚಿನ ವಹಿವಾಟು ಮಾಹಿತಿ ಜೊತೆಗೆ ಆಧಾರ್ ನಂಬರ್ ಸಂಯೋಜನೆಯೂ ಇರುತ್ತದೆ. ವಲಸಿಗರು ಈ ಆಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ವಿವರನ್ನು ದಾಖಲಿಸಬಹುದು.

ರಿಯಲ್‌ಮಿ 8 ಪ್ರೋ ಸ್ಮಾರ್ಟ್‌ಫೋನ್‌ ಮಾ.25ಕ್ಕೆ ಬಿಡುಗಡೆ?

ಏನಿದು ಒಂದು ದೇಶ ಒಂದು ರೇಷನ್ ಕಾರ್ಡ್?
ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ 81 ಕೋಟಿ ಜನರಿಗೆ ರಿಯಾಯ್ತಿ ದರದಲ್ಲಿ  ಆಹಾರ ಧಾನ್ಯಗಳನ್ನು ವಿತರಿಸುತ್ತದೆ. ಆದರೆ, ವಲಸೆ ಕಾರ್ಮಿಕರು ಅಥವಾ ಫಲಾನುಭವಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಥವಾ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೆಲಸಕ್ಕೆ ತೆರಳಿದಾಗ ಅವರು ಪಡಿತರು ಪಡೆಯಲು ಈಗಿರುವ ವ್ಯವಸ್ಥೆಯಲ್ಲಿ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲೇ ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಸರ್ಕಾರವು ಯಾವುದೇ ವಲಸಿಗ ವ್ಯಕ್ತಿ, ಕಾರ್ಮಿಕನು ದೇಶದ ಯಾವುದೇ ಪಡಿತರ ಅಂಗಡಿಯಿಂದ ಅಗತ್ಯವಿರುವ ಪಡಿತರ ಪಡೆಯಲು ಒಂದು ದೇಶ ಒಂದು ಪಡಿತರ ಯೋಜನೆಯನ್ನು ಜಾರಿಗೆ ತಂದೆ. ಈ ಯೋಜನೆಯನ್ನು ಹೆಚ್ಚು ತಾಂತ್ರಿಕ ಆಧರಿತ ಮತ್ತು ಆಪ್‌ ಆಧರಿತ ಮಾಡುವ ಮೂಲಕ ಅದರ ರೀಚ್ ಅನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ.

click me!