12 ವರ್ಷದ ಬಾಲಕಿಯ ಕ್ಯಾನ್ಸರ್ ಪತ್ತೆ ಹಚ್ಚಿದ ಆಪಲ್ ವಾಚ್!

By Suvarna News  |  First Published Oct 24, 2022, 2:51 PM IST

*ಆಪಲ್ ಸ್ಮಾರ್ಟ್‌ವಾಚ್ ತನ್ನ ಹೆಲ್ತ್ ಫೀಚರ್‌ ಸಾಮರ್ಥ್ಯದಿಂದ ಹಲವರಿಗೆ ಉಪಯೋಗವಾಗಿದೆ
*12 ವರ್ಷದ  ಬಾಲಕಿಯಲ್ಲಿನ ಕ್ಯಾನ್ಸರ್ ಪತ್ತೆ ಹಚ್ಚಲು ಈ ಆಪಲ್ ವಾಚ್‌ನಿಂದ ಸಾಧ್ಯವಾಗಿದೆ
*ಈ ಹಿಂದೆ ಮಹಿಳೆಯೊಬ್ಬಳು ಗರ್ಭವತಿಯಾಗಿರುವುದನ್ನು ಪತ್ತೆ ಮಾಡಿದ್ದ ಆಪಲ್ ವಾಚ್


ಆಪಲ್‌ನ ತಾಂತ್ರಿಕ ಆವಿಷ್ಕಾರಗಳು ಹಲವಾರು ಬಾರಿ ಜೀವಗಳನ್ನು ಉಳಿಸಿವೆ. ಈ ಸಾಲಿಗೆ 12 ವರ್ಷದ ಬಾಲಕಿಯೊಬ್ಬಳು ಸೇರಿದ್ದಾಳೆ. ಆಪಲ್ ವಾಚ್‌ನಿಂದಾಗಿ ಆಕೆ ದೊಡ್ಡ ಆನಾರೋಗ್ಯಕಾರಿ ಗಂಡಾಂತರದಿಂದ ಪಾರಾಗಿದ್ದಾಳೆ. ಹಾಗಾಗಿ, ಬಾಲಕಿಯ ಕುಟುಂಬವು ಆಪಲ್ ವಾಚ್‌ನ ಸಾಮರ್ಥ್ಯಕ್ಕೆ ಧನ್ಯವಾದ ತಿಳಿಸಿದ್ದಾರೆ. ಯುವಜನರಲ್ಲಿ ಅಸಾಮಾನ್ಯವಾದ ಕ್ಯಾನ್ಸರ್ ಅನ್ನು ಕಂಡುಹಿಡಿಯಲು ಸಾಧ್ಯವಾಗಿಸುವ ಮೂಲಕ ತನ್ನ ಜೀವವನ್ನು ಉಳಿಸಿದೆ ಎಂದು ಆ ಬಾಲಕಿಯು ಹೇಳಿದ್ದಾಳೆ. ಆಪಲ್ ವಾಚ್‌ನಲ್ಲಿನ ಹೃದಯ ಬಡಿತ (ಹಾರ್ಟ್ ಬೀಟ್ ಮಾನಿಟರಿಂಗ್) ಅಧಿಸೂಚನೆಗಳ ಕಾರ್ಯ ಫೀಚರ್, ವಾಚ್ ಎಸ್‌ಇ, ವಾಚ್ 7 ಮತ್ತು ಇತ್ತೀಚೆಗೆ ಬಿಡುಗಡೆಯಾದ ವಾಚ್ 8 ಮತ್ತು ವಾಚ್ ಅಲ್ಟ್ರಾದಲ್ಲಿ ಕಾಣಬಹುದಾಗಿದೆ.

12 ವರ್ಷ ವಯಸ್ಸಿನ ಇಮಾನಿ ಮೈಲ್ ಅವರ ಆಪಲ್ ವಾಚ್ ಒಂದು ಸಂಜೆ ಅಸಾಮಾನ್ಯವಾಗಿ ಹೆಚ್ಚಿನ ಹೃದಯ ಬಡಿತದ ಬಗ್ಗೆ ಎಚ್ಚರಿಸಲು ಪ್ರಾರಂಭಿಸಿತು. ಆಗ ಎಚ್ಚೆತ್ತುಕೊಂಡ ಮೈಲ್ ಅನ್ನು ಆಕೆಯ ತಾಯಿ ಜೆಸ್ಸಿಕಾ ಕಿಚನ್ ಆಸ್ಪತ್ರೆಗೆ ಕರೆದೊಯ್ದರು. ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಆಕೆಗೆ  ಅಪೆಂಡಿಸೈಟಿಸ್  ಇರುವ ರೋಗನಿರ್ಣಯವನ್ನು ಮಾಡಲಾಯಿತು. ರೋಗನಿರ್ಣಯದ ಪ್ರಕ್ರಿಯೆಯಲ್ಲಿ  ಮತ್ತೊಂದು ಗೊತ್ತಾದ ಸಂಗತಿ ಬೆಚ್ಚಿಬೀಳುವಂತೆ ಮಾಡಿತು. ಬಾಲಕಿಯ ಅಪೆಂಡಿಕ್ಸ್‌ನಲ್ಲಿ ನ್ಯೂರೋಎಂಡೋಕ್ರೈನ್ ಗಡ್ಡೆ(ಕ್ಯಾನ್ಸರ್) ಇರುವುದನ್ನು ವೈದ್ಯರು ಪತ್ತೆ ಹಚ್ಚಿದರು.  ಚಿಕ್ಕ ವಯಸ್ಸಿನಲ್ಲಿ ಕಂಡು ಬರುವ ವಿರಳ ಗಡ್ಡೆ ಇದು ಎಂದು ವೈದ್ಯರು ತಿಳಿಸಿದರು. ಈ ಕ್ಯಾನ್ಸರ್ ಈಗಾಗಲೇ ಮೈಲ್ ದೇಹದ ಇತರ ಭಾಗಗಳಿಗೆ ಹರಡಿದೆ ಎಂಬುದನ್ನು ವೈದ್ಯರು ಪತ್ತೆ ಹಚ್ಚಿದರು. ತಕ್ಷಣವೇ ಕ್ಯಾನ್ಸರ್ ಅನ್ನು ತೊಡೆದು ಹಾಕಲು ವೈದ್ಯರು ಸಿಎಸ್ ಮೋಟ್ ಚಿಡ್ರೆನ್ಸ್  ಶಸ್ತ್ರಚಿಕಿತ್ಸೆ ಕೈಗೊಂಡರು.

USB ಟೈಪ್-C ಚಾಲಿತ ಸಿರಿ ರಿಮೋಟ್‌ನೊಂದಿಗೆ Apple TV 4K 2022 ಲಾಂಚ್

Tap to resize

Latest Videos

undefined

ಈ ಬಗ್ಗೆ ಅವರ್ ಡೆಟ್ರಾಯಿಟ್ (Hour Detroit) ವರದಿ ಮಾಡಿದೆ. ಒಂದು ವೇಳೆ 12 ವರ್ಷದ ಬಾಲಕಿಯು ಆಪಲ್ ಕೈ ಗಡಿಯಾರವನ್ನು ಹೊಂದಿಲ್ಲದಿದ್ದರೆ, ತೀವ್ರ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತಿತ್ತು ಎಂದು ಆ ವರದಿಯಲ್ಲಿ ವಿವರಿಸಲಾಗಿದೆ.

ಇದೇ ರೀತಿಯ ಘಟನೆಯೊಂದು ಈ ತಿಂಗಳ ಆರಂಭದಲ್ಲಿ ವರದಿಯಾಗಿತ್ತು. ಮಹಿಳೆಗೆ ತಾನು ಗರ್ಭವತಿಯಾಗಿರುವುದು ಗೊತ್ತೇ ಇರಲಿಲ್ಲ. ಆಕೆಗೆ ಗೊತ್ತಾಗುವ ಮುಂಚೆಯೇ ಆ ಬಗ್ಗೆ ಆಪಲ್ ವಾಚಿನಿಂದ ಆ ಬಗ್ಗೆ ಸುಳಿವು ನೀಡಿತ್ತು. ರೆಡ್ಡಿಟ್ ಥ್ರೆಡ್ ( Reddit thread) ಈ ಬಗ್ಗೆ ವರದಿ ಮಾಡಿದೆ. 34 ವರ್ಷದ ಮಹಿಳೆಯೊಬ್ಬರು ಕ್ಲಿನಿಕಲ್ ಪರೀಕ್ಷೆಗೆ (Clinical Test) ಒಳಗಾಗುವ ಮೊದಲೇ ಗರ್ಭಧಾರಣೆಯನ್ನು ಗುರುತಿಸಲು ತನ್ನ ಆಪಲ್ ವಾಚ್ ಹೇಗೆ ಸಹಾಯ ಮಾಡಿತು ಎಂಬುದನ್ನು ಈ ವರದಿಯಲ್ಲಿ ತಿಳಿಸಿದ್ದಾರೆ. ದಿನಗಟ್ಟಲೆ ಸ್ಮಾರ್ಟ್ ವಾಚ್ (Smart Watch) ತನ್ನ ವಿಶಿಷ್ಟವಾದ ಹೃದಯ ಬಡಿತವನ್ನು ತೋರಿಸಲಾರಂಭಿಸಿತು. ಇಲ್ಲಿ ಏನೋ ಎಡವಟ್ಟಾಗಿದೆ ಎಂದು ತನಗೆ ಅನಿಸಲಾರಂಭಿಸಿತು ಎಂದು ಆಕೆ ಹೇಳಿದ್ದಾಳೆ.

ಭಾರತದಲ್ಲಿ Moto E22s ಬಿಡುಗಡೆ, ಕಡಿಮೆ ಬೆಲೆಗೆ ಸಖತ್ ಫೋನ್
 
ನನ್ನ ರೆಸ್ಟಿಂಗ್ ಹಾರ್ಟ್ ಬೀಟ್ (Heart Beat) ಸಾಮಾನ್ಯವಾಗಿ 57. ಆದರೆ, ಆಪಲ್ ವಾಚಿನಲ್ಲಿ ಅದು 72 ತೋರಿಸುತ್ತಿತ್ತು. ಇದು ಅಂಥ ಸಿಕ್ಕಾಪಟ್ಟೆ ಹೆಚ್ಚಳವಲ್ಲದಿದ್ದರೂ, ಅದೇ ಸ್ಥಿತಿ ಸುಮಾರು 15 ದಿನಗಳವರೆಗೆ ಮುಂದುವರಿಯಿತು. ಆಗ ಸ್ವಲ್ಪ ಗಾಬರಿ ಎನಿಸಲಾರಂಭಿಸಿತು. ಹಾಗಾಗಿ, ಯಾಕೆ ಈ ರೀತಿ ಹೃದಯವು ಅಸಾಮಾನ್ಯವಾಗಿ ಬಡಿದುಕೊಳ್ಳುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಮುಂದಾದೆ. ಬಹುಶಃ ಕೋವಿಡ್ ಸೋಂಕಿನಿಂದ (Covid Infection) ಈ ರೀತಿಯಾಗಿರಬಹುದು ಎಂದುಕೊಂಡೆ. ಆದರೆ, ಕೋವಿಡ್ ಪರೀಕ್ಷೆ ರಿಸಲ್ಟ್ ನೆಗೆಟಿವ್ ಆಗಿತ್ತು ಎಂದು ಮಹಿಳೆ ತಿಳಿಸಿದ್ದಾಳೆ. ಆ ಬಳಿಕ, ಪರಿಕ್ಷೆಗೆ ನಡೆಸಿದಾಗ ಗರ್ಭವತಿಯಾಗಿರುವುದು ಪತ್ತೆಯಾಗಿದೆ. ಅಸಹಜ ಹೃದಯ ಬಡಿತವನ್ನು ಆಪಲ್ ವಾಚ್ ಡಿಟೆಕ್ಟ್ ಮಾಡಿದ್ದರಿಂದ ಇದೆಲ್ಲವೂ ಸಾಧ್ಯವಾಗಿದೆ.

click me!