ಗೂಗಲ್‌ಗೆ 1,338 ಕೋಟಿ ರೂ ದಂಡ, ಭಾರತದ CCI ನಿರ್ಧಾರಕ್ಕೆ ಬಿಚ್ಚಿಬಿದ್ದ ಆಲ್ಫಾಬೆಟ್ ಇಂಕ್!

By Suvarna News  |  First Published Oct 20, 2022, 9:53 PM IST

ಗೂಗಲ್ ಸಂಸ್ಥೆಗೆ ಭಾರತದಲ್ಲಿ ಬರೋಬ್ಬರಿ 1,338 ಕೋಟಿ ರೂಪಾಯಿ ದಂಡ ವಿಧಿಸಿದೆ. ಇಷ್ಟೇ ಅಲ್ಲ ನಿಗದಿತ ಸಮಯದೊಳಗೆ ನಡವಳಿಕೆ ಹಾಗೂ ಅಭ್ಯಾಸ ಬದಲಾಯಿಸುವಂತೆ ಖಡಕ್ ಸೂಚನೆ ನೀಡಿದೆ. 


ನವದೆಹಲಿ(ಅ.20):  ಡಿಜಿಟಲ್ ಯುಗದಲ್ಲಿ ಗೂಗಲ್ ಪಾತ್ರ ಅತೀ ದೊಡ್ಡದು. ಅಂತರ್ಜಾಲದಲ್ಲಿ ಗೂಗಲ್ ದೊಡ್ಡಪ್ಪ. ಆದರೆ ಗೂಗಲ್ ಆದಾಯ, Android ಮೊಬೈಲ್ ಸಾಧನಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ವಿರೋಧಿ ಅಭ್ಯಾಸಗಳನ್ನು ನಡೆಸುತ್ತಿರುವ ಗೂಗಲ್‌ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ ಬರೋಬ್ಬರಿ 1,337.76 ಕೋಟಿ ರೂಪಾಯಿ ದಂಡ ವಿಧಿಸಿದೆ. ಇಷ್ಟೇ ಅಲ್ಲ ಸೂಚಿಸಿರುವ ಸಮಯದೊಳಗೆ ಗೂಗಲ್ ತನ್ನ ನಡವಳಿಕೆ ಹಾಗೂ ಅಭ್ಯಾಸಗಳನ್ನು ಮಾರ್ಪಡಿಸಬೇಕು ಎಂದು ಖಡಕ್ ಸೂಚನೆ ನೀಡಿದೆ. Android ಮೊಬೈಲ್‌ಗಳ ಸ್ಮಾರ್ಟ್  ವ್ಯವಸ್ಥೆಯಲ್ಲಿ ಬಹು ಮಾರುಕಟ್ಟೆಗಳಲ್ಲಿ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವುದಕ್ಕಾಗಿ Googleಗೆ ದಂಡ ವಿಧಿಸಿದೆ ಭಾರತೀಯ ಸ್ಪರ್ಧಾತ್ಮಕ ಆಯೋಗ ಹೇಳಿದೆ  

ಗೂಗಲ್ ತನ್ನ ಬಳಕೆಗಾರರ ಹೆಚ್ಚಿಸಲು ನಿಯಮ ಬಾಹಿರ ಮಾರ್ಗ ಅನುಸರಿಸುತ್ತಿದೆ ಎಂದು  ಭಾರತೀಯ ಸ್ಪರ್ಧಾತ್ಮಕ ಆಯೋಗ(CCI) ತನ್ನ ವಿಚಾರಣೆಯಲ್ಲಿ ಹೇಳಿದೆ. ಗ್ರಾಹಕ ಯಾವುದಾದರು ವಸ್ತು ಅಥವಾ ಉತ್ಪನ್ನವನ್ನು ಗೂಗಲ್ ಮೂಲಕ ಹುಡುಕಿದರೆ, ಮತ್ತೆ ಅದೇ ಉತ್ಪನ್ನದ ಜಾಹೀರಾತುಗಳು ಗ್ರಾಹಕರನಿಗೆ ಕಾಣಸಿಗುತ್ತೆ. ಆನ್‌ಲೈನ್ ಹುಡುಕಾಟವು ನೇರವಾಗಿ Google ನಿಂದ ಆನ್‌ಲೈನ್ ಜಾಹೀರಾತು ಸೇವೆಗಳ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾರತೀಯ ಸ್ಪರ್ಧಾತ್ಮಕ ಆಯೋಗ ಹೇಳಿದೆ.

Tap to resize

Latest Videos

undefined

 

ಭಾರತದ ಡಿಜಿಟಲ್‌ ಭವಿಷ್ಯಕ್ಕೆ ಗೂಗಲ್‌ ಬದ್ಧ: Sundar Pichai

ಆಪಲ್‌ನ ವ್ಯವಹಾರವು ನೇರವಾಗಿ ಸಂಯೋಜಿತ ಸ್ಮಾರ್ಟ್ ವ್ಯವಸ್ಥೆ ಆಧರಿಸಿದೆ. ಇಷ್ಟೇ ಅಲ್ಲ ಅತ್ಯಾಧುನಿಕ ಸಾಫ್ಟ್‌ವೇರ್ ಘಟಕಗಳೊಂದಿಗೆ ಉನ್ನತ-ಮಟ್ಟದ ಸ್ಮಾರ್ಟ್ ಸಾಧನಗಳ ಮಾರಾಟವನ್ನು ಕೇಂದ್ರೀಕರಿಸುತ್ತದೆ. ಹೀಗಾಗಿ ಅಗತ್ಯ ಮಾರುಕಟ್ಟೆ ತಿದ್ದುಪಡಿ, ಅಗತ್ಯವಿರುವ ಹಣಕಾಸಿನ ವಿವರ ಹಾಗೂ ಇತರ ದಾಖಲೆಗಳನ್ನು ಒದಗಿಸಲು ಗೂಗಲ್‌ಗೆ 30 ದಿನಗಳ ಸಮಯವಕಾಶ ನೀಡಲಾಗಿದೆ. 

CCI ವಿಚಾರಣೆಯಲ್ಲಿ ಕೆಲ ಮಹತ್ವದ ಅಂಶಗಳನ್ನು ಉಲ್ಲೇಖಿಸಿದೆ. ಗೂಗಲ್ ಆ್ಯಂಡ್ರಾಯ್ಡ್ OS ನಿರ್ವಹಿಸುತ್ತದೆ. ಜೊತೆಗೆ ಇತರ ಆ್ಯಪ್ಲಿಕೇಶನ್‌ಗಳಿಗೆ ಅನುಮತಿ ನೀಡುತ್ತದೆ. OEMಗಳು, ಆಪರೇಟಿಂಗ್ ಸಿಸ್ಟಮ್(OS) ಮತ್ತು Google ನ ಅಪ್ಲಿಕೇಶನ್‌ಗಳನ್ನು ತಮ್ಮ ಸ್ಮಾರ್ಟ್ ಮೊಬೈಲ್ ಸಾಧನಗಳಲ್ಲಿ ಬಳಸುತ್ತವೆ. 

YouTube Vanced: ಗೂಗಲ್‌ ಕಾನೂನು ಕ್ರಮ: ಯುಟ್ಯೂಬ್ ಜಾಹೀರಾತು ನಿರ್ಬಂಧಿಸುತ್ತಿದ್ದ ಆ್ಯಪ್ ಸ್ಥಗಿತ!

Google Android OS ಅನ್ನು ನಿರ್ವಹಿಸುತ್ತದೆ ಮತ್ತು ನಿರ್ವಹಿಸುತ್ತದೆ ಮತ್ತು ಅದರ ಇತರ ಸ್ವಾಮ್ಯದ ಅಪ್ಲಿಕೇಶನ್‌ಗಳಿಗೆ ಪರವಾನಗಿ ನೀಡುತ್ತದೆ ಮತ್ತು OEM ಗಳು ಈ OS ಮತ್ತು Google ನ ಅಪ್ಲಿಕೇಶನ್‌ಗಳನ್ನು ತಮ್ಮ ಸ್ಮಾರ್ಟ್ ಮೊಬೈಲ್ ಸಾಧನಗಳಲ್ಲಿ ಬಳಸುತ್ತವೆ ಎಂಬುದನ್ನು ಗಮನಿಸಬೇಕು. ಈ ಮೂಲಕ ಗೂಗಲ್  ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ. 

ಬೆಂಗಳೂರು ಸ್ಟಾರ್ಟಪ್‌ನ .11 ಲಕ್ಷ ಶುಲ್ಕ ಮನ್ನಾ ಮಾಡಿದ ಗೂಗಲ್‌ 
ತಾಂತ್ರಿಕ ಸಮಸ್ಯೆಯಿಂದ ಉಂಟಾಗಿದ್ದ .11 ಲಕ್ಷ ಶುಲ್ಕವನ್ನು ಮನ್ನಾ ಮಾಡುವ ಮೂಲಕ ಬೆಂಗಳೂರಿನ ಜಯನಗರ 4ನೇ ಬ್ಲಾಕ್‌ನಲ್ಲಿ ನೂತನವಾಗಿ ಸಣ್ಣ ಪ್ರಮಾಣದಲ್ಲಿ ಆರಂಭವಾಗಿರುವ ‘ಜಸ್ಟ್‌ ಪಿಕ್‌’ ಸ್ಟಾರ್ಟಪ್‌ಗೆ ಸಚ್‌ರ್‍ ಎಂಜಿನ್‌ ‘ಗೂಗಲ್‌’ ಸಹಾಯಹಸ್ತ ಚಾಚಿದೆ. ಉತ್ಸಾಹ, ಆಸಕ್ತಿ ಕೇಂದ್ರಿತ ಸಾಮಾಜಿಕ ನೆಟ್‌ವರ್ಕ್ ಆಗಿರುವ ಜಸ್ಟ್‌ ಪಿಕ್‌ನ ಬೀಟಾ ಆವೃತ್ತಿಯ ಅಪ್ಲಿಕೇಷನ್‌ ಪರೀಕ್ಷೆ ಮತ್ತು ಸಮಸ್ಯೆಗಳ ಪರಿಹಾರ ಕಾರ್ಯದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಬರೋಬ್ಬರಿ .13 ಲಕ್ಷ ಬಿಲ್‌ ಬಂದಿತ್ತು. ಇದರಿಂದ ಆತಂಕಗೊಂಡ ಜಸ್ಟ್‌ ಪಿಕ್‌ ತಂಡ, ಗೂಗಲ್‌ ಸಂಪರ್ಕಿಸಿ ಸಮಸ್ಯೆ ನಿವೇದಿಸಿಕೊಂಡಾಗ, ಗೂಗಲ್‌ ತಂಡ ಇಷ್ಟೂಮೊತ್ತ ಮನ್ನಾ ಮಾಡಿದೆ. ‘ಸ್ಟಾರ್ಟಪ್‌ಗಳಿಗೆ ಪ್ರಾರಂಭದಲ್ಲಿ ತಾಂತ್ರಿಕ ತೊಂದರೆ ಉಂಟಾಗುವುದು ಸಹಜ. ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಿ. ಸ್ಟಾರ್ಟಪ್‌ಗಳಿಗೆ ಗೂಗಲ್‌ ಬೆಂಬಲ ನೀಡಲಿದೆ’ ಎಂದು ಅಧಿಕಾರಿ ಬಿಯಾಂಕಾ ತಿಳಿಸಿದ್ದಾರೆ.
 

click me!