ಆ್ಯಪಲ್ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ದೇಶದಲ್ಲಿ ಮಾರಾಟ ಮಾಡುವ ಐಫೋನ್‌ಗಳಿಂದ ಮೆಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್ ಥ್ರೆಡ್ಸ್ ಎರಡೂ ಆ್ಯಪ್‌ಗಳನ್ನು ತೆಗೆದುಹಾಕಿದೆ. ಇಷ್ಟೇ ಅಲ್ಲ ಬಳಕೆದಾರರಿಗೆ ಡೌನ್ಲೋಡ್ ಮಾಡಲು ಸಾಧ್ಯವಿಲ್ಲ.
ಬೀಜಿಂಗ್(ಏ.19) ಗರಿಷ್ಠ ಮಂದಿ ಇದೀಗ ಆ್ಯಪಲ್ ಐಫೋನ್ ಉಪಯೋಗಿಸಲು ಬಯಸುತ್ತಿದ್ದಾರೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಐಫೋನ್ ಲಭ್ಯವಿದೆ. ಬೆಲೆ ಕೊಂಚ ದುಬಾರಿಯಾದರೂ ಗುಣಮಟ್ಟ, ಸುರಕ್ಷತೆ ವಿಚಾರದಲ್ಲಿ ರಾಜಿ ಇಲ್ಲ. ಹೀಗಾಗಿ ಐಫೋನ್ ಹಲವರ ನೆಚ್ಚಿನ ಫೋನ್ ಆಗಿ ಹೊರಹೊಮ್ಮಿದೆ. ಆದರೆ ಇದೀಗ ಆ್ಯಪಲ್ ತನ್ನ ಐಫೋನ್‌ಗಳಿಂದ ಮೆಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್ ಹಾಗೂ ಥ್ರೆಡ್ಸ್ ಆ್ಯಪ್ ತೆಗೆದು ಹಾಕಿದೆ. ಇದು ಚೀನಾ ಸರ್ಕಾರದ ಆದೇಶದ ಬಳಿಕ ಇಂದು ಆ್ಯಪಲ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಚೀನಾದಲ್ಲಿನ ಐಫೋನ್ ಬಳಕೆದಾರರು ವ್ಯಾಟ್ಸ್ಆ್ಯಪ್ ಹಾಗೂ ಥ್ರೆಡ್ಸ್ ಬಳಕೆ ಮಾಡುವಂತಿಲ್ಲ.
ಚೀನಾದ ಇಂಟರ್ನೆಟ್ ರೆಗ್ಯುಲೇಟರ್ ಸೈಬರ್‌ಸ್ಪೇಸ್ ಅಡ್ಮಿನಿಸ್ಟ್ರೇಶನ್ ಇಲಾಖೆ ಮಹತ್ವದ ಅಧಿಸೂಚನೆ ಹೊರಡಿಸಿದೆ. ಚೀನಾದಲ್ಲಿ ಮಾರಾಟವಾಗುವ ಎಲ್ಲಾ ಐಫೋನ್‌ಗಳಿಂದ ಮೇಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್ ಹಾಗೂ ಥ್ರೆಡ್ಸ್ ಆ್ಯಪ್ ತೆಗೆದು ಹಾಕವಂತೆ ಸೂಚಿಸಿದೆ. ಚೀನಾ ಐಫೋನ್ ಆ್ಯಪಲ್ ಸ್ಟೋರ್‌ನಲ್ಲಿ ಈ ಎರಡು ಆ್ಯಪ್‌ಗಳು ಲಭ್ಯವಿರುವುದಿಲ್ಲ. ಬಳಕೆದಾರರಿಗೆ ಡೌನ್ಲೋಡ್ ಮಾಡಲು ಸಾಧ್ಯವಿಲ್ಲ.
undefined
ಐಫೋನ್ ನೀರಿನಲ್ಲಿ ಮುಳುಗಿದರೆ ಅಕ್ಕಿಯೊಳಗಿಡಬೇಡಿ, ಆ್ಯಪಲ್‌ನಿಂದ ಸಿಂಪಲ್ ಟಿಪ್ಸ್!
ರಾಷ್ಟ್ರೀಯ ಭದ್ರತೆಗೆ ಈ ಎರಡು ಆ್ಯಪ್ ಅಪಾಯ ತಂದೊಡ್ಡುತ್ತಿದೆ. ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಚೀನಾ ಯಾವತ್ತೂ ರಾಜೀಮಾಡಿಕೊಳ್ಳುವುದಿಲ್ಲ. ಹೀಗಾಗಿ ತಕ್ಷಣದಿಂದಲೇ ಆ್ಯಪಲ್ ತನ್ನ ಐಫೋನ್‌ಗಳಿಂದ ವ್ಯಾಟ್ಸ್ಆ್ಯಪ್ ತೆಗೆದು ಹಾಕುವಂತೆ ಸೂಚಿಸಲಾಗಿದೆ. ಆದರೆ ಮೇಟಾ ಮಾಲೀಕತ್ವದ ಫೇಸ್‌ಬುಕ್, ಮೆಸೆಂಜರ್, ಇನ್‌ಸ್ಟಾಗ್ರಾಂ ಆ್ಯಪ್‌ಗಳು ಲಭ್ಯವಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆ್ಯಪಲ್, ಆ್ಯಪಲ್ ವಿಶ್ವದ ಹಲವು ದೇಶಗಳಲ್ಲಿ ಉತ್ಪಾದನೆ ಘಟಕ ಹೊಂದಿದೆ. ಇನ್ನು ಬಹುತೇಕ ರಾಷ್ಟ್ರಗಳಿಗೆ ಆ್ಯಪಲ್ ತನ್ನ ಐಫೋನ್ ಮಾರಾಟ ಮಾಡುತ್ತಿದೆ. ಆ್ಯಪಲ್ ಆಯಾ ದೇಶದ ಕಾನೂನು ಗೌರವಿಸುತ್ತದೆ. ಅದನ್ನು ಅಷ್ಟೇ ಗೌರವಿಂದ ಪಾಲಿಸುತ್ತದೆ. ಇದೀಗ ಚೀನಾ ಸರ್ಕಾರ, ರಾಷ್ಟ್ರೀಯ ಭದ್ರತೆ ವಿಚಾರದ ಕಾರಣ ವ್ಯಾಟ್ಸ್ಆ್ಯಪ್ ಹಾಗೂ ಥ್ರೆಡ್ ಆ್ಯಪ್ ನಿರ್ಬಂಧಿಸುವಂತೆ ಸೂಚಿಸಿತ್ತು. ಇದರಂತೆ ಆ್ಯಪಲ್ ತನ್ನ ಐಫೋನ್‌ಗಳಿಂದ ಈ ಎರಡು ಆ್ಯಪ್‌ಗೆ ನಿರ್ಬಂಧ ವಿಧಿಸಿದೆ ಎಂದಿದೆ.
iPhone 16 Update: ಐಫೋನ್ 16 ಸಿರೀಸ್‌ನ ಮೊಬೈಲ್ ಬಗ್ಗೆ ಬಿಗ್ಗೆಸ್ಟ್ ನ್ಯೂಸ್ ಲೀಕ್!
ಚೀನಾದಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಕುಸಿತ ಕಂಡಿದೆ. 2024ರಲ್ಲಿ ಚೀನಾ ನಿರೀಕ್ಷಿತ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಮಾಡಲು ಸಾಧ್ಯವಾಗಿಲ್ಲ. ಜೊತೆಗೆ ಚೀನಾದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಭಾರಿ ಪೈಪೋಟಿ ಎದುರಾಗಿದೆ. ಹೀಗಾಗಿ ಐಫೋನ್ ವಿತರಣೆಯಲ್ಲೂ ಕುಸಿತ ಕಂಡಿದೆ. ಶೇಕಡಾ 24 ರಷ್ಟು ಮಾರಾಟದಲ್ಲಿ ಕುಸಿತ ಕಂಡಿದೆ.