WhatsApp Limited Backup: ಅನ್‌ಲಿಮಿಟೆಡ್ ಗೂಗಲ್‌ ಡ್ರೈವ್ ಬ್ಯಾಕಪ್‌ಗೆ ಕಡಿವಾಣ?

By Suvarna News  |  First Published Jan 31, 2022, 4:09 PM IST

ಗೂಗಲ್ ಡ್ರೈವ್ ಬಹುತೇಕ ಭರ್ತಿಯಾದಾಗ ಮತ್ತು ಬ್ಯಾಕಪ್‌ಗಳನ್ನು ಸಂಗ್ರಹಿಸಲು ಸೀಮಿತ ಸ್ಥಳವನ್ನು ಹೊಂದಿರುವಾಗ ಬಳಕೆದಾರರು ನೋಟಿಫಿಕೇಶನ್ ಪಡೆಯಬಹುದು ಎಂದು ವಾಟ್ಸಾಪ್ ಕೋಡ್ ಮೂಲಕ ತಿಳಿದಿಬಂದಿದೆ


Tech Desk: ವಾಟ್ಸಾಪ್ ಬಳಕೆದಾರರು ಚಾಟ್ ಹಿಸ್ಟರಿ, ಚಿತ್ರಗಳು, ವೀಡಿಯೊಗಳು ಮತ್ತು ಇತರ ಯಾವುದೇ ಡೇಟಾವನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು  ಗೂಗಲ್ ಡ್ರೈವ್‌ನಲ್ಲಿ ಬ್ಯಾಕಪ್‌ ಮಾಡಬಹುದು.  ಫೋನ್‌ನಲ್ಲಿ ಕಡಿಮೆ ಸ್ಥಳಾವಕಾಶವಿರುವದರಿಂದ ಬ್ಯಾಕಪ್‌ಗಳು ಅವಶ್ಯಕ. ಬಳಕೆದಾರರು ತಮ್ಮ ಮೊಬೈಲ್‌ ಬದಲಿಸಿದಾಗ ಅಥವಾ  ತಮಗೆ ಬೇಕಾದಾಗ ತಮ್ಮ ಗೂಗಲ್ ಖಾತೆಯ ಮೂಲಕ ಈ ವಾಟ್ಸಾಪ್ ಬ್ಯಾಕಪ್‌ಗಳನ್ನು ಪಡೆಯಹುದು. ಆದರೆ ವಾಟ್ಸಾಪ್‌ ಚಾಟ್‌ ಗೂಗಲ್‌ ಡ್ರೈವ್ ಬ್ಯಾಕ್‌ಅಪ್‌ ಮಾಡಲು ಮೆಸೇಂಜಿಗ್‌ ಪ್ಲಾಟ್‌ಫಾರ್ಮ್ ಈಗ ಸ್ಟೋರೆಜ್ ಮಿತಿಯನ್ನು ಹಾಕಲಿದೆ ಎಂದು ವರದಿಗಳು ತಿಳಿಸಿವೆ.  

ಆಂಡ್ರಾಯ್ಡ್ ಸಾಧನಗಳಿಗೆ ಬಿಡುಗಡೆಯಾಗಲಿರುವ ಬ್ಯಾಕಪ್‌ಗಳ ಮಿತಿ  ಬಗ್ಗೆ ಆನ್‌ಲೈನ್‌ನಲ್ಲಿ ಕೆಲವು ಉಲ್ಲೇಖಗಳು ಕಾಣಿಸಿಕೊಂಡಿರುವುದರಿಂದ ಗೂಗಲ್ ಡ್ರೈವ್‌ನಲ್ಲಿ ವಾಟ್ಸಾಪ್ ಬ್ಯಾಕಪ್‌ಗಳು ಭವಿಷ್ಯದಲ್ಲಿ ಅನಿಯಮಿತ ಸಂಗ್ರಹಣೆಯನ್ನು (unlimited storage) ಹೊಂದಿರುವುದಿಲ್ಲ ಎಂದು ತಿಳಿದುಬಂದಿದೆ.  ಐಫೋನ್‌ನಲ್ಲಿ ವಾಟ್ಸಾಪ್‌ ಬಳಕೆದಾರರು ಈಗಾಗಲೇ iCloudನಲ್ಲಿ ಬ್ಯಾಕಪ್‌ಗಳಿಗಾಗಿ ಸೀಮಿತ ಸಂಗ್ರಹಣೆ ಹೊಂದಿದ್ದಾರೆ.

Tap to resize

Latest Videos

undefined

ಆದರೆ  ಆಂಡ್ರಾಯ್ಡ್ ಬಳಕೆದಾರರಿಗೆ ಅವರ ಚಾಟ್ ಬ್ಯಾಕಪ್‌ಗಳನ್ನು ಇರಿಸಿಕೊಳ್ಳಲು ಗೂಗಲ್ ಡ್ರೈವ್‌ನಲ್ಲಿ ಇದುವರೆಗೆ ಅನಿಯಮಿತ ಸಂಗ್ರಹಣೆಯನ್ನು ಒದಗಿಸಲಾಗಿದೆ. ಆದರೆ ಶೀಘ್ರದಲ್ಲೇ ಇದು ಬದಲಾಗಲಿದೆ. ಆಂಡ್ರಾಯ್ಡ್‌ನಲ್ಲಿ ಬಳಕೆದಾರರು ತಮ್ಮ ಬ್ಯಾಕಪ್ ಮೀತಿಯನ್ನು ನಿರ್ವಹಿಸಲು ವಾಟ್ಸಾಪ್ ಕೆಲವು ಬದಲಾವಣೆಗಳನ್ನು ಪರಿಚಯಿಸಬಹುದು ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: WhatsApp Feature ಗ್ರೂಪ್ ಅಡ್ಮಿನ್‌ಗೆ ಸದಸ್ಯರ ಮೆಸೇಜ್ ಡಿಲೀಟ್ ಮಾಡಲು ಅನುಮತಿ
 
WABetaInfo ಮಾಹಿತಿ: ವಾಟ್ಸಾಪ್ ಬೀಟಾ ಟ್ರ್ಯಾಕರ್ WABetaInfo ವರದಿಯ ಪ್ರಕಾರ, ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್‌ನ ಕೋಡ್‌ನಲ್ಲಿ ಕೆಲವು ಸ್ಟ್ರಿಂಗ್‌ಗಳು ಕಾಣಿಸಿಕೊಂಡಿದ್ದು ಈ ಕೋಡ್‌ಗಳು ವಾಟ್ಸಾಪ್‌ ಹೊಸ ವೈಶಿಷ್ಟ್ಯದ ಬಗ್ಗೆ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿವೆ. WABetaInfo ಹಂಚಿಕೊಂಡಿರುವ ಸ್ಕ್ರೀನ್‌ಶಾಟ್ ಗೂಗಲ್ ಡ್ರೈವ್ ಬಹುತೇಕ ಭರ್ತಿಯಾಗಿರುವಾಗ ಮತ್ತು ನೀಡಲಾದ ಕೋಟಾವನ್ನು ತಲುಪುತ್ತಿರುವಾಗ ಬಳಕೆದಾರರಿಗೆ ತಿಳಿಸಲು ನೋಟೀಫಿಕೇಶನ್ ನೀಡುವ ಸ್ಟ್ರಿಂಗ್‌ಗಳನ್ನು ತೋರಿಸುತ್ತದೆ. 

ಬಳಕೆದಾರರು ತಮ್ಮ ಚಾಟ್‌ಗಳನ್ನು ವಾಟ್ಸಾಪ್‌ನಲ್ಲಿ ಬ್ಯಾಕಪ್ ಮಾಡಿದಾಗ ಈ ಎಚ್ಚರಿಕೆಗಳನ್ನು ನೀಡಬಹುದು. ಇದಲ್ಲದೆ, ಬಳಕೆದಾರರು ತಮ್ಮ ನಿರ್ದಿಷ್ಟ ಮಿತಿಯನ್ನು ತುಂಬುವುದನ್ನು ತಪ್ಪಿಸಲು ಬ್ಯಾಕಪ್ ಮಾಡುವುದರಿಂದ ಕೆಲವು ನಿರ್ದಿಷ್ಟ ಫೈಲ್‌ ಅಥವಾ ವಿಡಿಯೋ/ಫೋಟೋಗಳನ್ನು ಹೊರತುಪಡಿಸುವ ಆಯ್ಕೆಗಳನ್ನು ಕೂಡ ಒದಗಿಸಬಹುದು.

ಇದನ್ನೂ ಓದಿ: Traffic Rules Violation: ಸಿಗ್ನಲ್‌ ಜಂಪ್‌ ಮಾಡಿದ್ರೆ ವಾಟ್ಸಾಪಲ್ಲೇ ನೋಟಿಸ್‌

ಪ್ರಸ್ತುತ ಅನ್‌ಲಿಮಿಟೆಡ್‌ ಬ್ಯಾಕ್‌ಅಪ್:  ವಾಟ್ಸಾಪ್‌ ಬ್ಯಾಕಪ್‌ಗಳನ್ನು ಸಂಗ್ರಹಿಸಲು ಗೂಗಲ್ ನಿರ್ದಿಷ್ಟ ಕೋಟಾವನ್ನು ನೀಡುತ್ತದೆ ಎಂದು ವರದಿ ಮಾಡಲಾದ ಕೋಡ್ ಸೂಚಿಸುತ್ತದೆ. ಇದು ಗೂಗಲ್ ಡ್ರೈವ್‌ನಲ್ಲಿ ಪ್ರಸ್ತುತ ಲಭ್ಯವಿರುವ 15GB ಉಚಿತ ಸಂಗ್ರಹಣೆಗಿಂತ ಹೆಚ್ಚಿರಬಹುದು. ಪ್ರಸ್ತುತ ವಾಟ್ಸಾಪ್ ಬ್ಯಾಕಪ್‌ಗಳು ಬಳಕೆದಾರರಿಗೆ ಲಭ್ಯವಿರುವ ಗೂಗಲ್ ಡ್ರೈವ್ ಸಂಗ್ರಹಣೆ ಮಿತಿಯನ್ನು ಬಳಸುವುದಿಲ್ಲ ಎಂದು ಕಂಪನಿ ಸಫೋರ್ಟ್‌ ಪೇಜ್‌ ಹೇಳುತ್ತದೆ.

ಆದರೆ ಈ ಅಪ್ಡೇಟ್‌ ನಂತರ ಗೂಗಲ್‌ ಡ್ರೈವ್‌ನ ಸಂಗ್ರಹಣೆ ಮಿತಿಯನ್ನು ವಾಟ್ಸಾಪ್‌ ಸ್ಟೋರೇಜ್‌ ಮಿತಿಯಾಗಿ ಬಳಸುವ ಸಾಧ್ಯತೆಗಳಿವೆ. ಆಪಲ್ ವಾಟ್ಸಾಪ್ ಬ್ಯಾಕ್‌ಅಪ್‌ಗಳನ್ನು ತಮ್ಮ iCloud ಸಂಗ್ರಹಣೆಯ ಹಂಚಿಕೆಯ ಭಾಗವಾಗಿ ಪರಿಗಣಿಸುವುದರಿಂದ ಐಫೋನ್ ಬಳಕೆದಾರರು ಅನ್‌ಲಿಮಿಟೆಡ್‌ ಸ್ಟೋರೆಜ್  ಸವಲತ್ತು ಹೊಂದಿಲ್ಲ.

ಇನ್ನು ಗೂಗಲ್ ಫೋಟೋಗಳಿಗಾಗಿ ಬಳಕೆದಾರರಿಗೆ ನೀಡಲಾದ ಅನಿಯಮಿತ ಉಚಿತ ಶೇಖರಣಾ ಪ್ರಯೋಜನವನ್ನು ಕಂಪನಿಯು ಕಳೆದ ವರ್ಷ ಕೊನೆಗೊಳಿಸಿದ್ದರಿಂದ  ವಾಟ್ಸಾಪ್ ಬ್ಯಾಕಪ್‌ಗಳಿಗಾಗಿ ಅನಿಯಮಿತ ಸಂಗ್ರಹಣೆ ಹಂಚಿಕೆಯನ್ನು ಗೂಗಲ್ ಕೊನೆಗೊಳಿಸುವುದನ್ನು ನೋಡಿದರೆ ಆಶ್ಚರ್ಯವೇನಿಲ್ಲ.‌‌ ಭಾರತದಲ್ಲಿ ಬೇಸಿಕ್ 100GB ಕ್ಲೌಡ್ ಸ್ಟೋರೇಜ್ ಆಕ್ಸಸ್‌ಗಾಗಿ ತಿಂಗಳಿಗೆ ರೂ.130 (US ನಲ್ಲಿ $1.99) ನಿಂದ ಪ್ರಾರಂಭವಾಗುವ ಗೂಗಲ್‌ ಒನ್ Google One ಯೋಜನೆಗಳನ್ನು ಪಡೆಯಲು ಬಳಕೆದಾರರನ್ನು ಮನವೊಲಿಸುವ ಕ್ರಮವಾಗಿ ಈ ಬದಲಾವಣೆಯನ್ನು ಕಂಪನಿ ಬಿಡುಗಡೆ ಮಾಡುತ್ತಿರಬಹುದು ಎಂದು ಟೆಕ್ ವಿಶ್ಲೇಷಕರು ಹೇಳಿದ್ದಾರೆ. 

click me!