Messenger Screenshot Detection: ಇನ್ಮುಂದೆ ಮೇಸೆಜ್ ಸ್ಕ್ರೀನ್‌ಶಾಟ್ ತೆಗೆದರೆ ಫೇಸ್‌ಬುಕ್ ನೋಟಿಫಿಕೇಶನ್!

By Suvarna News  |  First Published Jan 29, 2022, 12:30 PM IST

ಮೆಸೆಂಜರ್ ಬಿಡುಗಡೆ ಮಾಡಿರುವ ಹೊಸ ವೈಶಿಷ್ಟ್ಯಗಳಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್, ಸ್ಕ್ರೀನ್‌ಶಾಟ್ ಡಿಟೆಕ್ಟರ್, ಸಂದೇಶ ಪ್ರತಿಕ್ರಿಯೆಗಳು, ಟೈಪಿಂಗ್ ಇಂಡಿಕೇಟರ್ ಸೇರಿವೆ


Tech Desk: ಮೆಟಾ ಒಡೆತನದ ಫೇಸ್‌ಬುಕ್ ಮೆಸೆಂಜರ್ ಇತ್ತೀಚೆಗೆ ಹಲವಾರು ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. ಮೆಸೆಂಜರ್ ಸ್ವೀಕರಿಸಿದ ಹೊಸ ವೈಶಿಷ್ಟ್ಯಗಳಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್, ಸ್ಕ್ರೀನ್‌ಶಾಟ್ ಡಿಟೆಕ್ಟರ್, ಸಂದೇಶ ಪ್ರತಿಕ್ರಿಯೆಗಳು, ಟೈಪಿಂಗ್ ಇಂಡಿಕೇಟರ್ ಸೇರಿವೆ. ಮೆಸೆಂಜರ್‌ನ ಆಪ್ಟ್-ಇನ್ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳಿಗಾಗಿ ವೈಶಿಷ್ಟ್ಯಗಳನ್ನು ಹೊರತರಲಾಗಿದೆ. ಬಹಳ ಸಮಯದಿಂದ ವಾಟ್ಸಾಪ್‌ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾದ  ಸ್ಕ್ರೀನ್‌ಶಾಟ್ ಡಿಟೆಕ್ಷನ್ ಫೀಚರ್ ಮತ್ತು ಮೆಸೇಜ್ ರಿಯಾಕ್ಷನ್ಸ್ ಫೀಚರ್ ಈಗ ಮೇಸೆಂಜರ್‌ನಲ್ಲಿ ಬಿಡುಗಡೆಯಾಗಿದೆ. ಇದೀಗ ಫೇಸ್‌ಬುಕ್ ಮೆಸೆಂಜರ್‌ಗೆ ವೈಶಿಷ್ಟ್ಯಗಳನ್ನು ಲಭ್ಯಗೊಳಿಸಿದ್ದು, ಶೀಘ್ರದಲ್ಲೇ ಅವುಗಳನ್ನು ವಾಟ್ಸಾಪ್‌ನಲ್ಲಿಯೂ ಅನಾವರಣಗೊಳಿಸುವ ಸಾಧ್ಯತೆಗಳಿವೆ.

ಎಲ್ಲ ಚಾಟ್ ಎಂಡ್ ಟು ಎಂಡ್ ಎನ್‌ಕ್ರಿಪ್ಟ್: ಹೊಸ ಅಪ್ಡೇಟ್‌ ಮೂಲಕ ಮೆಸೆಂಜರ್ ಚಾಟ್‌ಗಳು ಈಗ ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿವೆ. ಫೇಸ್‌ಬುಕ್ ಕಳೆದ ವರ್ಷ ಧ್ವನಿ ಮತ್ತು ವೀಡಿಯೊ ಕರೆಗಳನ್ನು ಒಳಗೊಂಡಂತೆ ಗ್ರೂಪ್ ಚಾಟ್‌ಗಳಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನನ್ನು ಪರೀಕ್ಷಿಸಲು ಪ್ರಾರಂಭಿಸಿತು. ಆದರೆ ಈಗ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ವೈಶಿಷ್ಟ್ಯವು ಎಲ್ಲ ಚಾಟ್‌ಗಳಿಗೂ ಲಭ್ಯವಿದೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಚಾಟನ್ನು ಸುರಕ್ಷಿತ ಮತ್ತು ಖಾಸಗಿಯನ್ನಾಗಿ ಮಾಡುತ್ತದೆ. ಸಂದೇಶ ಕಳುಹಿಸುವವರು ಮತ್ತು ಸ್ವೀಕರಿಸುವವರನ್ನು ಹೊರತುಪಡಿಸಿ, ಫೇಸ್‌ಬುಕ್ ಒಳಗೊಂಡಂತೆ ಯಾರೂ ಚಾಟ್‌ಗಳಿಗೆ ಪ್ರವೇಶವನ್ನು ಹೊಂದಿರುವುದಿಲ್ಲ. ಮೆಟಾ-ಮಾಲೀಕತ್ವದ  ವಾಟ್ಸಾಪ್‌ ಕೂಡ ಎಂಡ್-ಟು-ಎಂಡ್ ಎನ್‌ಕ್ರಿಪ್ಶನನ್ನು ಹೊಂದಿದೆ.

Tap to resize

Latest Videos

undefined

ಇದನ್ನೂ ಓದಿMeta Fastest Super Computer: ಫೇಸ್‌ಬುಕ್‌ನಿಂದ ವಿಶ್ವದ ಅತ್ಯಂತ ವೇಗದ ಸೂಪರ್ ಕಂಪ್ಯೂಟರ್!

ಸ್ಕ್ರೀನ್‌ಶಾಟ್ ಡಿಟೆಕ್ಟರ್: ಮೆಸೆಂಜರ್ ಸ್ವೀಕರಿಸಿದ ಇನ್ನೊಂದು ಆಸಕ್ತಿದಾಯಕ ವೈಶಿಷ್ಟ್ಯವೆಂದರೆ ಸ್ಕ್ರೀನ್‌ಶಾಟ್ ಪತ್ತೆ ವೈಶಿಷ್ಟ್ಯ. ಇದು ವಾಟ್ಸಾಪ್ ಬಳಕೆದಾರರು ಈ ಪೀಚರ್‌ ಬಹುಕಾಲದಿಂದ ನಿರೀಕ್ಷಿಸುತ್ತಿದ್ದಾರೆ. ಕಣ್ಮರೆಯಾಗುತ್ತಿರುವ ಸಂದೇಶದ ಸ್ಕ್ರೀನ್‌ಶಾಟನ್ನು ತೆಗೆದುಕೊಂಡರೆ ಮೆಸೆಂಜರ್ ಬಳಕೆದಾರರಿಗೆ ಈಗ ನೋಟಿಫೀಕೇಶನ್‌ ನೀಡಲಾಗುತ್ತದೆ. ಇದು ಮೆಸೆಂಜರ್‌ನ ವ್ಯಾನಿಶ್ ಮೋಡ್‌ನಲ್ಲಿ ನೀಡುವ ವೈಶಿಷ್ಟ್ಯವಾಗಿದೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳಲ್ಲಿ ಕಣ್ಮರೆಯಾಗುವ ಸಂದೇಶಗಳಿಗಾಗಿ ಮುಂದಿನ ಕೆಲವು ವಾರಗಳಲ್ಲಿ ಫೇಸ್‌ಬುಕ್ ಈಗ ಈ ನೋಟಿಫಿಕೇಶನ್ ಹೊರತರುತ್ತಿದೆ.

ಮೆಸೇಜ್ ರಿಯಾಕ್ಷನ್ಸ್ ಫೀಚರ್: ಇದರ ಜತೆಗೆ ಮೆಸೇಂಜರ್ ಮೆಸೇಜ್ ರಿಯಾಕ್ಷನ್ಸ್ ಫೀಚರನ್ನು ಸಹ ಸ್ವೀಕರಿಸಿದೆ. ಈ ವೈಶಿಷ್ಟ್ಯದೊಂದಿಗೆ ಬಳಕೆದಾರರು ತಮ್ಮ ಪ್ರತಿಕ್ರಿಯೆಯ ಆಯ್ಕೆಯನ್ನು ಮಾಡಲು ಸಂದೇಶವನ್ನು ಟ್ಯಾಪ್ ಮಾಡಿ  ಪ್ರತಿಕ್ರಿಯೆಗಳ ಟ್ರೇಯನ್ನು ಬಳಸಬಹುದು. ಬಳಕೆದಾರರು  "heart" ರಿಯಾಕ್ಶನ್‌ ನೀಡಲು ಸಂದೇಶವನ್ನು ಎರಡು ಬಾರಿ ಟ್ಯಾಪ್ ಮಾಡಬಹುದು. ಈ ವೈಶಿಷ್ಟ್ಯವು iMessage ನಲ್ಲಿ ಲಭ್ಯವಿದೆ ಮತ್ತು ಇದನ್ನು  ವಾಟ್ಸಪ್‌ನಲ್ಲಿ ಕೂಡ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಇದರೊಂದಿಗೆ, ಮೆಸೆಂಜರ್ ಬಳಕೆದಾರರು ತಮ್ಮ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳಲ್ಲಿ ನಿರ್ದಿಷ್ಟ ಸಂದೇಶಗಳಿಗೆ ಪ್ರತ್ಯುತ್ತರಿಸಲು ಲಾಂಗ್‌ ಪ್ರೆಸ್ ಮೂಲಕ ಅಥವಾ ಸ್ವೈಪ್ ಮಾಡುವ ಮೂಲಕ ಪ್ರತ್ಯುತ್ತರಿಸಲು ಸಾಧ್ಯವಾಗುತ್ತದೆ. ಇದೇ ಮಾದರಿಯಲ್ಲಿ ಸಂದೇಶವನ್ನು ಫಾರ್ವರ್ಡ್ ಮಾಡಬಹುದು.

ಇದರ ಹೊರತಾಗಿ, ಅಧಿಕೃತ ಮತ್ತು ನಕಲಿ ಖಾತೆಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಜನರಿಗೆ ಸಹಾಯ ಮಾಡಲು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳು ಪರಿಶೀಲಿಸಿದ ಬ್ಯಾಡ್ಜನ್ನು ಸಹ ಪಡೆಯುತ್ತವೆ. ಮುಂಬರುವ ವಾರಗಳಲ್ಲಿ ವೈಶಿಷ್ಟ್ಯಗಳನ್ನು ಮೆಸೆಂಜರ್‌ಗೆ ಬಿಡುಗಡೆಯಾಗಲಿವೆ.

ಇದನ್ನೂ ಓದಿ: Facebook Profile Lock: ಫೇಸ್‌ಬುಕ್ ಪ್ರೊಫೈಲ್ ಲಾಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಸೇಫ್‌ ಮೇಸೆಜಿಂಗ್:  ಮೆಸೆಂಜರ್‌ಗಾಗಿ ಹೊಸ ವೈಶಿಷ್ಟ್ಯಗಳನ್ನು ಪ್ರಾರಂಭಿಸುವ ಕುರಿತು ಮಾತನಾಡುತ್ತಾ “ನಿಮ್ಮ ಸಂದೇಶ ಅನುಭವವನ್ನು ಸುಧಾರಿಸಲು ಇಂದು, ನಾವು ಮೆಸೆಂಜರ್‌ನ ಆಪ್ಟ್-ಇನ್ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳಿಗೆ ಸಹಾಯ ಮಾಡುವ ನವೀಕರಣಗಳನ್ನು ಪ್ರಕಟಿಸುತ್ತಿದ್ದೇವೆ. ಸುರಕ್ಷಿತ ಮತ್ತು ಮೋಜುಭರಿತ ಸಂವಾದಾತ್ಮಕ ವೈಶಿಷ್ಟ್ಯಗಳನ್ನು ನಿರ್ಮಿಸಲು ಸಮಯ ತೆಗೆದುಕೊಳ್ಳುತ್ತದೆ ಮತ್ತು ನಮ್ಮ ಎಂಜಿನಿಯರ್‌ಗಳು ತಾಂತ್ರಿಕ ಸವಾಲುಗಳನ್ನು ಆವಿಷ್ಕರಿಸಲು ಮತ್ತು ಪರಿಹರಿಸಲು ಅಗತ್ಯವಿರುತ್ತದೆ, ಆದ್ದರಿಂದ ನಾವು ನಮ್ಮ ಸೇವೆಗಳನ್ನು ಸುಧಾರಿಸುತ್ತಿರುವುದರಿಂದ ಇದು ಉತ್ಪನ್ನ ನವೀಕರಣಗಳ ಸರಣಿಯ ಭಾಗವಾಗಿದೆ. ಸೈಬರ್ ಕ್ರೈಮ್ ಮತ್ತು ಹ್ಯಾಕಿಂಗ್ ಹೆಚ್ಚುತ್ತಿರುವಾಗ, ಖಾಸಗಿ ಮತ್ತು ಸುರಕ್ಷಿತ ಸಂವಹನಗಳ ಮೂಲಕ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ಮಾರ್ಗಗಳನ್ನು ಕಂಡುಹಿಡಿಯುವುದು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ" ಎಂದು ಮೆಸೆಂಜರ್‌ನ ಉತ್ಪನ್ನ ನಿರ್ವಾಹಕರಾದ ತಿಮೋತಿ ಬಕ್ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

click me!