5ಜಿ ಸೇವೆ ದೊರತೆರೆ ಎಷ್ಟು ಕೋಟಿ ಜನರು ಇಂಟರ್ನೆಟ್ ಸಂಪರ್ಕ ಪಡೆಯಬಹುದು?

By Suvarna News  |  First Published May 14, 2021, 1:56 PM IST

ಈಗಾಗಲೇ ಹಲವು ರಾಷ್ಟ್ರಗಳಲ್ಲಿ 5ಜಿ ಸೇವೆ ಆರಂಭವಾಗಿದೆ. ಆದರೆ, ಭಾರತದಲ್ಲಿ ಇನ್ನೂ 5ಜಿ ಸೇವೆ ದೊರೆಯುತ್ತಿಲ್ಲ. ಈಗ ಆರು ತಿಂಗಳ ಕಾಲು ಪ್ರಯೋಗಕ್ಕೆ ಅವಕಾಶ ನೀಡಲಾಗಿದೆ. ಒಂದೊಮ್ಮೆ ಸಂಪೂರ್ಣವಾಗಿ ಬಳಕೆಗೆ 5ಜಿ ಸೇವೆ ದೊರತರೆ, ಭಾರತದಲ್ಲಿ ಮೊದಲ ವರ್ಷದಲ್ಲೇ ಕನಿಷ್ಠ 40 ಮಿಲಿಯನ್ ಅಂದರೆ 4 ಕೋಟಿ ಜನರು ಸಂಪರ್ಕ ಪಡೆಯಲಿದ್ದಾರೆಂದು ವರದಿಯೊಂದು ತಿಳಿಸಿದೆ.


ಭಾರತದಲ್ಲಿ 5ಜಿ ಟೆಲಿಕಾಂ ಸೇವೆ ಆರಂಭವಾದ ವರ್ಷದಲ್ಲಿ ಕನಿಷ್ಠ 4 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರು 5ಜಿ ಸಂಪರ್ಕ ಪಡೆಯಲಿದ್ದಾರೆ! ಎನ್ನುತ್ತಿದೆ ಸಂಶೋಧನಾ ವರದಿ.

ಸದ್ಯದ ಮಟ್ಟಿಗೆ ಭಾರತದಲ್ಲಿ ಇನ್ನೂ 5ಜಿ ತಂತ್ರಜ್ಞಾನವನ್ನು ಸಾಮಾನ್ಯರ ಬಳಕೆಗೂ ಅವಕಾಶ ಮಾಡಿಕೊಟ್ಟಿಲ್ಲ. ಈಗ ದೇಶದಲ್ಲಿ 4ಜಿ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಆದರೆ, ಈಗಾಗಲೇ 5ಜಿ ಸೇವೆಯನ್ನು ಪೂರೈಸುವ ಸಂಬಂಧ ಹಲವು ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಗಳು ಭರವಸೆ ನೀಡುತ್ತಿವೆ. ಹಾಗೆಯೇ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್‌ಫೋನ್ ಕಂಪನಿಗಳು, 5ಜಿ ತಂತ್ರಜ್ಞಾನಕ್ಕೆಸಪೋರ್ಟ್ ಮಾಡಬಲ್ಲ ಅನೇಕ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿವೆ.

Tap to resize

Latest Videos

undefined

ಗೂಗಲ್ ಮ್ಯಾಪ್ಸ್‌ನಲ್ಲೇ ಲಭ್ಯ ಬೆಡ್, ಆಮ್ಲಜನಕ ಲೊಕೇಷನ್ ಮಾಹಿತಿ!

ಅಮೆರಿಕ, ಚೈನಾ, ದಕ್ಷಿಣ ಕೊರಿಯಾ ಮತ್ತು ಇಂಗ್ಲೆಂಡ್ ಸೇರಿದಂತೆ 26 ಮಾರುಕಟ್ಟೆಗಳಲ್ಲಿ 5ಜಿ ಸೇವೆಗೆ ಸಂಬಂಧಿಸಿದಂತೆ ಗ್ರಾಹಕರ ಭಾವನೆ ಮತ್ತು ಅವರ ಗ್ರಹಿಕೆಯನ್ನು ಆಧರಿಸಿ ಎರಿಕ್‌ಸನ್ ಫೈವ್ ವೇಸ್ ಟು ಬೆಟರ್ 5ಜಿ ಎಂಬ ಕಂನ್ಸೂಮರ್ ಆಧರಿತ ವರದಿಯನ್ನು ಸಿದ್ಧಪಡಿಸಿದೆ.

ದೇಶದಲ್ಲಿ 5ಜಿ ಸೇವೆ ಪೂರೈಸುವ ಸಂಬಂಧ ಕನಿಷ್ಠ 6 ತಿಂಗಳವರೆಗೆ ಪ್ರಯೋಗ ನಡೆಸಲು ಒಪ್ಪಿಗೆ ನೀಡಲಾಗಿದೆ. ಎರಿಕ್ಸನ್ ಕನ್ಸೂಮರ್ ಲ್ಯಾಬ್‌ನ ವರದಿಯ ಪ್ರಕಾರ, ಭಾರತೀಯ ಗ್ರಾಹಕರು ಹಲವು ಡಿಜಿಟಲ್ ಸೇವೆಗಳನ್ನು ಹೊಂದಿರುವ 5ಜಿ ಸೇವೆಯನ್ನುಪಡೆಯಲು ಶೇ.50ರಷ್ಟು ಪಾವತಿಸಲು ಸಿದ್ಧರಿದ್ದಾರೆ. 4ಜಿಯಿಂದ 5ಜಿಗೆ ಅಪ್‌ಗ್ರೇಡ್ ಆಗಲು ಭಾರತದಲ್ಲಿ ದೊಡ್ಡ ಸಂಖ್ಯೆಯ ಬಳಕೆದಾರರು ಸಿದ್ಧರಾಗಿದ್ದಾರೆ. ಒಂದೊಮ್ಮೆ 5ಜಿ ಸೇವೆ ಲಭ್ಯವಾದರೆ ಶೇ.67ರಷ್ಟು ಮುಂದಿ ಅಪ್‌ಗ್ರೇಡ್ ಆಗಲು ತಯಾರಿ ಮಾಡಿಕೊಂಡಿದ್ದಾರೆ. 2019ರಿಂದ ಈ ಅಪ್‌ಗ್ರೇಡ್ ಆಗಲು ಸಿದ್ದ ಎನ್ನುವವರ ಪ್ರಮಾಣದಲ್ಲಿ ಶೇ.14ರಷ್ಟು ಏರಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

5ಜಿ  ಸೇವೆಯನ್ನು ಅಳವಡಿಸಿಕೊಳ್ಳುವ ಆರಂಭಿಕ 10 ಜನರ ಪೈಕಿ 7 ಜನರು 4 ಜಿಗಿಂತ ಹೆಚ್ಚಿನ ವೇಗವನ್ನು ನಿರೀಕ್ಷಿಸುತ್ತಾರೆ ಮತ್ತು 10 ಜನರ ಪೈಕಿ 6 ಜನರು ಕುಟುಂಬ ಸದಸ್ಯರ ನಡುವೆ ಅಥವಾ ಸಾಧನಗಳಾದ್ಯಂತ 5 ಜಿ ಡೇಟಾ ಹಂಚಿಕೆಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆಯನ್ನು ಹೊಂದಿದ್ದಾರೆ ಭಾರತದಲ್ಲಿ 5 ಜಿ-ಸಿದ್ಧ ಸ್ಮಾರ್ಟ್‌ಫೋನ್ ಬಳಕೆದಾರರು ಈಗಾಗಲೇ ವರ್ಧಿತ ವಿಡಿಯೋ ಮತ್ತು ಮಲ್ಟಿಪ್ಲೇಯರ್ ಮೊಬೈಲ್ ಗೇಮಿಂಗ್‌ಗಾಗಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮೇ 15ರ ನಂತರ ವಾಟ್ಸಾಪ್ ಚಾಟ್‌ಗೆ ಸಿಗಲಿಕ್ಕಿಲ್ಲ! ಗೊಂದಲಕ್ಕೆ ಇಲ್ಲಿವೆ ಉತ್ತರ

2020ರ ಅಂತ್ಯದ ವೇಳೆಗೆ, 5ಜಿ ಸೇವೆಯ ಬಗ್ಗೆ ಹೆಚ್ಚಿನ ಅರಿವು ಮತ್ತು ಮೌಲ್ಯದ ಪ್ರಯೋಜನಗಳ ಪರಿಣಾಮವಾಗಿ ಶೇಕಡಾ 22ರಷ್ಟು ಹೆಚ್ಚು ಸ್ಮಾರ್ಟ್‌ಫೋನ್ ಬಳಕೆದಾರರು 5 ಜಿ-ಸಿದ್ಧ ಹ್ಯಾಂಡ್‌ಸೆಟ್‌ಗಳನ್ನು 5 ಜಿ ಚಂದಾದಾರಿಕೆಗಳಿಗೆ ಅಪ್‌ಗ್ರೇಡ್ ಮಾಡಬಹುದೆಂದು  ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಭಾರತದಲ್ಲಿ ಫಿಕ್ಸೆಡ್ ವೈರ್‌ಲೆಸ್ ಅಕ್ಸೆಸ್(ಎಫ್‌ಡಬ್ಲ್ಯೂಎ) 5ಜಿ ಸೇವೆಗೆ ಹೆಚ್ಚಿನ ಅವಕಾಶವನ್ನು ಸೃಷ್ಟಿಸಲಿದೆ. ನಗರ ಪ್ರದೇಶಗಳಲ್ಲಿ ಇಂಟರ್ನೆಟ್ ಬಳಸುವ ಮೂರನೇ ಒಂದು ಭಾಗದಷ್ಟು ಜನರು 5ಜಿ ಹೋಮ್ ಬ್ರಾಡ್‌ಬಾಂಡ್ ಹೆಚ್ಚು ಸೂಕ್ತವಾಗಿ ಎಂದು ಭಾವಿಸುತ್ತಾರೆ. 5ಜಿ ಸೇವೆ ದೊರೆಯಲಾರಂಭಿಸಿದರೆ ಈಗಾಗಲೇ ಅಸ್ತಿತ್ವದಲ್ಲಿರುವ ಫಿಕ್ಸೆಡ್ ಬ್ರಾಡ್‌ಬಾಂಡ್ ಸೇವೆ ಪೂರೈಕೆದಾರರನ್ನು ತೊರೆಯಲು ಸಿದ್ಧರಾಗಿದ್ದಾರೆಂದು ವರದಿಯಲ್ಲಿ ತಿಳಿಸಲಾಗಿದೆ.

ಸೋಷಿಯಲ್ ಮೀಡಿಯಾ ಪೋಸ್ಟ್‌ ವ್ಯಂಗ್ಯ ಗುರುತಿಸಲು ಬಂದಿದೆ ಕೃತಕ ಬುದ್ಧಿಮತ್ತೆ ತಂತ್ರ!

5 ಜಿ ಮೊಬೈಲ್ ಸಂಪರ್ಕದ ಪ್ರಯೋಜನಗಳಿಂದಾಗಿ ಐದು 5 ಜಿ ಬಳಕೆದಾರರಲ್ಲಿ ಒಬ್ಬರು ಈಗಾಗಲೇ ತಮ್ಮ ಫೋನ್‌ಗಳಲ್ಲಿ ಮನೆಯೊಳಗೆ ವೈ-ಫೈ ಬಳಕೆಯನ್ನು ಕಡಿಮೆ ಮಾಡುತ್ತಿದ್ದಾರೆ. ಆರಂಭಿಕ ಅಳವಡಿಕೆದಾರರಿಗೆ 5ಜಿ ಸೇವೆಯು ತೃಪ್ತಿದಾಯಕ ಅನುಭವ ನೀಡಿದೆ. ವಿಶೇಷವಾಗಿ ವೇಗ ಅಥವಾ ಬ್ಯಾಟರಿ ಅವಧಿಗಿಂತ ಎರಡು ಪಟ್ಟು ಹೆಚ್ಚು ಮಹತ್ವದ್ದಾಗಿದೆ ಎಂದು ಸೂಚಿಸುತ್ತದೆ ಎಂದು ಇಂಡೋರ್ ಕವರೇಜ್ ಮೇಲೆ ಗಮನ ಕೇಂದ್ರೀಕರಿಸಿ ನಡೆಸಿದ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.

click me!