
ಪಾಟ್ನಾ (ಜೂ.18) ಸೀರೆಯುಟ್ಟ ಸ್ಟಂಟ್ ಸೇರಿದಂತೆ ಹಲವು ಕಸರತ್ತು ಮಾಡಿರುವ ವಿಡಿಯೋಗಳು ವೈರಲ್ ಆಗಿದೆ. ಇದೀಗ ಸೀರೆಯುಟ್ಟ ಮನೆಗೆಲಸ ಮಾಡುತ್ತಿದ್ದ ಮಹಿಳೆ ದಿಢೀರ್ ಮೈಕಲ್ ಜ್ಯಾಕ್ಸನ್ ಡ್ಯಾನ್ಸ್ ಸ್ಟೆಪ್ಸ್ ಹಾಕಿ ಗಮನಸೆಳೆದಿದ್ದಾರೆ. ಪಾಪ್ ಸಿಂಗರ್ ಮೈಕಲ್ ಜ್ಯಾಕ್ಸನ್ ಅವರ ಹಲವು ಸಿಗ್ನೇಚರ್ ಸ್ಟೆಪ್ಸ್ ಸರಳವಾಗಿ ಮಾಡಿದ್ದಾರೆ. ಸೀರೆಯಲ್ಲಿ ಮಹಿಳೆಯ ಅದ್ಭುತ ಡ್ಯಾನ್ಸ್ ಮೂವ್ಸ್ ಇದೀಗ ಭಾರಿ ವೈರಲ್ ಆಗಿದೆ.
ಬಿಹಾರ ಮೂಲದ ಕಂಟೆಂಟ್ ಕ್ರಿಯೇಟರ್ ಈ ವಿಡಿಯೋ ಹಂಚಿಕೊಂಡಿದ್ದಾರೆ. ಮೈಕಲ್ ಜ್ಯಾಕ್ಸನ್ ಅವರ ಕಠಿಣ ಸ್ಟೆಪ್ಸ್‌ನ್ನು ಮಹಿಳೆ ಸೀರೆಯುಟ್ಟು ಅದ್ಭುತವಾಗಿ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಮನೆಯ ಸಣ್ಣ ಕೋಣೆಯಲ್ಲಿ ಮಹಿಳೆ ತಮ್ಮ ಡ್ಯಾನ್ಸ್ ಪ್ರತಿಭೆ ತೋರಿಸಿದ್ದಾರೆ. ಈಕೆಯ ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ಭರ್ಜರಿ ಲೈಕ್ಸ್ ಸಿಕ್ಕಿದೆ. ಸುಲಭವಾಗಿ ಮಹಿಳೆ ಸೀರೆಯುಟ್ಟ ಡ್ಯಾನ್ಸ್ ಮಾಡಿದ್ದಾರೆ. ಹಲವರು ಸೀರೆಯುಟ್ಟು ನಿರ್ವಹಣೆ ಮಾಡಲು ಕಷ್ಟಪಡುವ ಕಾಲದಲ್ಲಿ ಈಕೆ ಯಾವುದೇ ಸಮಸ್ಯೆ ಇಲ್ಲದೆ ಅತ್ಯಂತ ಸುಲಭವಾಗಿ ಡ್ಯಾನ್ಸ್ ಮಾಡಿದ್ದಾಳೆ.
ಸೀರೆಯುಟ್ಟ ಅದ್ಭುತವಾಗಿ ಮೈಕಲ್ ಜ್ಯಾಕ್ಸನ್ ಡ್ಯಾನ್ಸ್ ಸ್ಟೆಪ್ಸ್ ಹಾಕಿದ ಮಹಿಳೆ ವಿಡಿಯೋಗೆ ಭರ್ಜರಿ ಲೈಕ್ಸ್ ಬಂದಿದೆ. ಹಲವರು ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡಿದ್ದಾರೆ. ಮಹಿಳೆ ಸೀರೆಯುಟ್ಟ ಈ ಕಸರತ್ತು ಮಾಡುತ್ತಿದ್ದಾರೆ. ಉತ್ತಮವಾಗಿ ಡ್ಯಾನ್ಸ್ ಮಾಡಿದ್ದಾರೆ, ಅಭಿನಂದನೆಗಳು ಎಂದು ಹಲವರು ಪ್ರಶಂಸಿದ್ದಾರೆ. ಇದೇ ವೇಳೆ ಕೆಲವರು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಲು ಸೂಚಿಸಿದ್ದಾರೆ. ರಿಯಾಲಿಟಿ ಶೋನಲ್ಲಿ ಇದೇ ಡ್ಯಾನ್ಸ್ ಮಾಡಿದರೆ ಸಾಕು, ದೇಶದಲ್ಲೆ ಜನಪ್ರಿಯವಾಗುತ್ತೀರಿ ಎಂದು ಹಲವರು ಸಲಹೆ ನೀಡಿದ್ದಾರೆ.
ಮತ್ತೆ ಕೆಲವರು ಸಿನಿಮಾದಲ್ಲಿ ಅವಕಾಶ ಸಿಗುವ ಸಾಧ್ಯತೆಗಳಿವೆ ಎಂದು ಸೂಚಿಸಿದ್ದಾರೆ. ಹಲವು ಈ ವಿಡಿಯೋ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೀಗ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.