ಇದು ಆಟೋನಾ ಇಲ್ಲ ಬಸ್ಸಾ? ಒಬ್ಬರಾದ್ಮೇಲೆ ಒಬ್ಬರಂತೆ ಇಳಿದಿದ್ದು ಎಷ್ಟು ಮಂದಿ ಗೊತ್ತಾ?

Published : Jun 18, 2026, 12:37 PM IST
Auto

ಸಾರಾಂಶ

ಸಾಮಾನ್ಯ ಆಟೋ ಒಂದು ಸದ್ಯ ಚರ್ಚೆ ವಿಷ್ಯವಾಗಿದೆ. ಆಟೋದಲ್ಲಿ ತುಂಬಿದ್ದ ಜನರನ್ನು ನೋಡಿ ಪೊಲೀಸರು ದಂಗಾಗಿದ್ದಾರೆ. ಆಟೋದಲ್ಲಿದ್ದ ಜನರೆಷ್ಟು, ಹೇಗೆ ಕುಳಿತಿದ್ರು ಎಂಬ ಮಾಹಿತಿ ಇಲ್ಲಿದೆ. 

ಒಂದು ಆಟೋದಲ್ಲಿ ಅಬ್ಬಬ್ಬ ಅಂದ್ರೆ ಎಷ್ಟು ಜನ ಓಡಾಡ್ಬಹುದು? ಡ್ರೈವರ್ ಪಕ್ಕದಲ್ಲಿ ಒಂದು ಸೀಟ್ ಲೆಕ್ಕ ಹಾಕಿ, ಒಬ್ಬರ ಮೈ ಮೇಲೆ ಇನ್ನೊಬ್ಬರು ಕುಳಿತುಕೊಂಡ್ರೆ ಅಂತೂ 8 ಜನ ಹೋಗ್ಬಹುದು ಅಂತಿಟ್ಕೊಳ್ಳಿ. ಆದ್ರೆ ಈ ಆಟೋದಲ್ಲಿ ಒಬ್ಬರಾದ್ಮೇಲೆ ಒಬ್ಬರು ಇಳಿತಿದ್ದಂತೆ ಲೆಕ್ಕ ಹಾಕ್ತಿದ್ದ ಪೊಲೀಸರಿಗೆ ತಲೆ ತಿರುಗಿದೆ.

ಆಟೋದಲ್ಲಿದ್ದಿದ್ದು 19 ಮಂದಿ !

ರಸ್ತೆಯಲ್ಲಿ ಹೋಗ್ತಿದ್ದ ಸಾಮಾನ್ಯ ಆಟೋ ಈಗ ಚರ್ಚೆಗೆ ಬಂದಿದೆ. ಘಟನೆ ನಡೆದಿದ್ದು ಉತ್ತರ ಪ್ರದೇಶದ ಕನ್ನೌಜ್ ನಲ್ಲಿ. ಟ್ರಾಫಿಕ್ ಪೊಲೀಸರು ಎಂದಿನಂತೆ ತಮ್ಮ ಕೆಲ್ಸ ಮಾಡ್ತಿದ್ದರು. ಈ ಟೈಂನಲ್ಲಿ ಒಂದ್ಕಡೆ ಓರೆಯಾಗಿ ಬರ್ತಿದ್ದ ಆಟೋ ಕಣ್ಣಿಗೆ ಬಿದ್ದಿದೆ. ಸಾಮರ್ಥ್ಯಕ್ಕಿಂತ ಹೆಚ್ಚು ಜನ ಇದ್ದಾರೆ ಎನ್ನುವ ಅನುಮಾನದ ಮೇಲೆಯೇ ಪೊಲೀಸರು ಆಟೋ ನಿಲ್ಲಿಸಿದ್ದಾರೆ.

ಶಾಲಾ ಆಡಳಿತಗಳಿಗೆ ತಲೆನೋವಾದ ಲಿಪ್​ಸ್ಟಿಕ್ಸ್​: ಸ್ಕೂಲ್​ ಕ್ಯಾಂಪಸ್​ಗಳಲ್ಲಿ

ಆರಂಭದಲ್ಲಿ ಪೊಲೀಸರು ಆಟೋದಲ್ಲಿ 10 ಮಂದಿ ಇರ್ಬಹುದು ಅಂತಾ ಅಂದಾಜಿಸಿದ್ದರು. ಆದ್ರೆ ಕೊನೆಯಲ್ಲಿ ಇಳಿದ ಜನರ ಸಂಖ್ಯೆ ನೋಡಿ ಶಾಕ್ ಆಗಿದ್ದಾರೆ. ಮೊದಲು ಮುಂದಿದ್ದ ಪ್ರಯಾಣಿಕರು ಇಳಿದ್ರು. ಅದ್ರ ನಂತ್ರ ಹಿಂದಿದ್ದವರು ಇಳಿದ್ರು. ನಂತ್ರ ಮಕ್ಕಳು ಇಳಿದ್ರು. ಲೆಕ್ಕ ಹಾಕಿದಾಗ 10 ಅಲ್ಲ 19 ಮಂದಿ ಆಟೋದಲ್ಲಿ ಪ್ರಯಾಣ ಮಾಡ್ತಿದ್ದರು.

ಹತ್ತು ಜನ ಇಳಿತಿದ್ದಂತೆ ಜನರ ಕುತೂಹಲ ಹೆಚ್ಚಾಗಿತ್ತು. ಒಂದಿಷ್ಟು ಮಂದಿ ಮೊಬೈಲ್ ತೆಗೆದು ವಿಡಿಯೋ ಮಾಡಲು ಶುರು ಮಾಡಿದ್ರು. ಮತ್ತೊಂದಿಷ್ಟು ಮಂದಿ, ಇನ್ನೆಷ್ಟು ಜನ ಇಳಿತಾರೆ ಅಂತ ಕುತೂಹಲದಿಂದ ನೋಡ್ತಿದ್ರು. ಮಕ್ಕಳು, ಮಹಿಳೆ ಪುರುಷರು ಸೇರಿ ಒಂದು ಮಿನಿ ಬಸ್ ನಲ್ಲಿದ್ದಷ್ಟು ಜನರು ಆಟೋದಲ್ಲಿದ್ರು.

82ರ ಪ್ರಾಯದಲ್ಲೂ 12 ಗಂಟೆ ದುಡಿಯುವ ತಾತ; ಫುಟ್‌ಪಾತ್‌ನಲ್ಲಿ ತಿಂಡಿ ಮಾರಾಟ

ಕೆಲವರು ಸೀಟ್ ಮೇಲಿದ್ರೆ ಮತ್ತೊಂದಿಷ್ಟು ಮಂದಿ ಆಟೋ ಸೈಡ್ ನಲ್ಲಿ ಹಾಕಿದ್ದ ರಾಡ್ ಮೇಲೆ ಕುಳಿತಿದ್ರು. ಮಕ್ಕಳ ಪಾಲಕರ ತೊಡೆ ಮೇಲಿದ್ರು. ಇಷ್ಟು ಜನರನ್ನು ತುಂಬಿಕೊಂಡಿದ್ರೂ ಆಟೋ ಡ್ರೈವರ್ ಮಾತ್ರ ಕೂಲ್ ಆಗಿ ಆಟೋ ಓಡಿಸ್ತಿದ್ದ. ಗ್ರಾಮೀಣ ಪ್ರದೇಶದಲ್ಲಿ ಓವರ್ ಲೋಡ್ ಆಟೋ ಸಾಮಾನ್ಯ. ಆದ್ರೆ ಇಷ್ಟೊಂದು ಜನರನ್ನು ತುಂಬಿದ್ದು ಇದೇ ಮೊದಲು ಅಂತಾರೆ ಜನರು.

ಇಷ್ಟಾದ್ರೂ ಆಟೋ ಚಾಲಕ ಲೆಕ್ಕ ನೀಡಿದ್ದು 15 ಮಂದಿಯನ್ನು ಮಾತ್ರ. ಉಳಿದವರು ಮಕ್ಕಳು ಅಂತ ಆಟೋ ಚಾಲಕ ಹೇಳಿದ್ದಾನೆ. ಬೇರೆ ಯಾವುದೇ ವ್ಯವಸ್ಥೆ ಇರಲಿಲ್ಲ ಹಾಗಾಗಿ ಎಲ್ಲರೂ ಆಟೋ ಹತ್ತಿದ್ರು ಎಂದಿದ್ದಾನೆ. ಆಟೋ ಸೀಜ್ ಮಾಡಲಾಗಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.

PREV
Read more Articles on
click me!

Recommended Stories

ಪ್ಯಾಂಟ್ ಕೆಳಗಿಳಿಸಿ ವಿಕೃತಿ; ಹೊಸ ಫ್ಲಾಟ್‌ನಲ್ಲಿ ಯುವತಿಗೆ ಎದುರಾದ ಭಯಾನಕ ಅನುಭವ!
82ರ ಪ್ರಾಯದಲ್ಲೂ 12 ಗಂಟೆ ದುಡಿಯುವ ತಾತ; ಫುಟ್‌ಪಾತ್‌ನಲ್ಲಿ ತಿಂಡಿ ಮಾರಾಟ, ದಿನಕ್ಕೆ ₹300 ಗಳಿಕೆ!