
ವೈರಲ್ ಸುದ್ದಿ: ಬೀಚ್‌ನಲ್ಲಿ ಪರಸ್ಪರ ಕೈಹಿಡಿದು ನಡೆದು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಗೆಳತಿಗೆ ಸಿಡಿಲು ಬಡಿದು ದುರ್ಮರಣಕ್ಕೀಡಾದ ಘಟನೆ ಆಘಾತ ಹುಟ್ಟಿಸುವಂತಿದೆ.
ಈ ಘಟನೆ ಬ್ರೆಜಿಲ್‌ನ ಪಲ್ಹೋಕಾದಲ್ಲಿರುವ ಪ್ರಿಯಾ ಡ ಪಿನ್ಹೀರಾ ಬೀಚ್ ನಡೆದಿದೆ ಎನ್ನಲಾಗಿದೆ. ಆ ವಿಡಿಯೋ ಈ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಪಲ್ಸ್ ಬೀಚ್‌ನಲ್ಲಿ ನಡೆದುಹೋಗುತ್ತಿರುವುದು ದೂರದಿಂದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೇಳೆ ದಟ್ಟ ಮೋಡ, ಸುತ್ತಲಿನ ಹವಮಾನ ಕೆಟ್ಟದಾಗಿದೆ. ಇಂಥ ವೇಳೆ ಬೀಚ್‌ನಲ್ಲಿ ಯಾವುದೇ ಆತಂಕವಿಲ್ಲದೆ ನಡೆದುಹೋಗುವಾಗ ದಿಢೀರನೇ ಸಿಡಿಲು ಅಪ್ಪಳಿಸಿದೆ. ಸಿಡಿಲು ಬಡಿಯುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಸಿಡಿಲು ಬಡಿದು ಮಹಿಳೆ ಕುಸಿದುಬಿಳುತ್ತಾಳೆ. ಕೆಲವೇ ಸೆಕೆಂಡ್‌ನಲ್ಲಿ ನಡೆದ ಈ ಬದಲಾವಣೆಗೆ ವ್ಯಕ್ತಿ ಆಘಾತಕ್ಕೊಳಗಾಗುತ್ತಾನೆ.
ವರದಿಗಳ ಪ್ರಕಾರ, ಈ ಘಟನೆ ಆಗಸ್ಟ್ 28 ರ ಸಂಜೆ ನಡೆದಿದೆ. ವೀಡಿಯೊದಲ್ಲಿರುವ ಮಹಿಳೆಗೆ 39 ವರ್ಷ. ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಆಕೆಯನ್ನು ಬದುಕಿಸಲು ಪ್ರಯತ್ನಿಸಿದರು, ಆದರೆ ಆಗಸ್ಟ್ 29 ರ ಬೆಳಿಗ್ಗೆ ಮರಣವನ್ನಪ್ಪಿದರು.
ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟಿಜನ್ ಆಘಾತ ವ್ಯಕ್ತಪಡಿಸಿದ್ದಾರೆ. ಕೆಲವರು ದಟ್ಟ ಮೋಡವಿದ್ದಾಗ ಬೀಚ್ ಬಳಿ ಹೋಗಿದ್ದು ತಪ್ಪು ಎಂದರೆ, ಇನ್ನು ಕೆಲವರು ಇದೊಂದು ಭಯಾನಕ ದೃಶ್ಯ ಎಂದು ಗಾಬರಿಯಾಗಿದ್ದಾರೆ. ಕೆಲವರು ಮಹಿಳೆಯ ಸಾವಿಗೆ ಭಾವುಕರಾಗಿದ್ದಾರೆ.
Breaking : Disturbing visuals show LIGHTNING directly STRIKING and killing a woman at Pinheira Beach in Palhoça, Brazil few days ago. pic.twitter.com/5QdTYgyaKc
— World Updates (@Updatesofwworld) August 30, 2026