ಅಮೆರಿಕದಲ್ಲಿ ಒಂದು ಹಲ್ಲು ಕೀಳಿಸಲು 2.37 ಲಕ್ಷ ರೂಪಾಯಿ; ಭಾರತದ ದರ ಕೇಳಿ NRI ಶಾಕ್

Published : Sep 02, 2026, 04:21 PM IST
us dental cost

ಸಾರಾಂಶ

ಅಮೆರಿಕದಲ್ಲಿ ವೈದ್ಯಕೀಯ ಖರ್ಚು ವೆಚ್ಚುಗಳು ಎಷ್ಟು ದುಬಾರಿ ಅನ್ನೋದನ್ನು ಎನ್‌ಆರ್‍‌ಐ ಒಬ್ಬರು ಬಿಚ್ಚಿಟ್ಟಿದ್ದಾರೆ. ಹಲ್ಲು ಕೀಳಿಸಲು ಹೋದ NRI ಬಿಲ್ ಕೇಳಿ ದಂಗಾಗಿ ಹೋಗಿದ್ಯಾಕೆ? ಈ ಕುರಿತ ಮಾಹಿತಿ ಇಲ್ಲಿದೆ.

ವಿದೇಶದಲ್ಲಿ ನೆಲೆಸುವುದು ಎಂದರೆ ಕೇವಲ ಡಾಲರ್‌ಗಳಲ್ಲಿ ಸಂಪಾದಿಸುವುದು ಮಾತ್ರವಲ್ಲ, ಅಲ್ಲಿನ ಖರ್ಚು-ವೆಚ್ಚಗಳು ಕೂಡ ಅಷ್ಟೇ ಬೆಚ್ಚಿಬೀಳಿಸುವಂತಿರುತ್ತವೆ. ಅಮೆರಿಕದಲ್ಲಿ 15 ವರ್ಷಗಳಿಂದ ವಾಸಿಸುತ್ತಿರುವ ನಿತಿನ್ ಮಲ್ಹೋತ್ರಾ ಎಂಬುವವರು ಇತ್ತೀಚೆಗೆ ಶೇರ್ ಮಾಡಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಮೆರಿಕದ ದುಬಾರಿ ವೈದ್ಯಕೀಯ ಸೇವೆ ಹಾಗೂ ಭಾರತದ ಅತ್ಯುತ್ತಮ ಚಿಕಿತ್ಸಾ ವೆಚ್ಚದ ನಡುವಿನ ವ್ಯತ್ಯಾಸವನ್ನು ಈ ವಿಡಿಯೋ ಎತ್ತಿ ತೋರಿಸಿದೆ.

ಏನಿದು ಘಟನೆ?

ಅನಿವಾಸಿ ಭಾರತೀಯ (NRI) ನಿತಿನ್ ಮಲ್ಹೋತ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಅಮೆರಿಕದ ಡೆಂಟಲ್ ಕ್ಲಿನಿಕ್‌ನಲ್ಲಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಸಾಮಾನ್ಯ ಹಲ್ಲು ನೋವಿಗಾಗಿ ವೈದ್ಯರ ಬಳಿ ಹೋದಾಗ ಕೇವಲ ಒಂದು ಹಲ್ಲನ್ನು ಕೀಳಲು (Tooth Extraction) ಅವರಿಗೆ ನೀಡಿದ ಅಂದಾಜು ಬಿಲ್ ಕೇಳಿ ಅವರು ಶಾಕ್ ಆದರು.

ಲಕ್ಷಗಳಲ್ಲಿ ಬಿಲ್!

ನಿತಿನ್ ಅವರ ಬಳಿ ಆಕ್ಟಿವ್ ಹೆಲ್ತ್ ಇನ್ಶೂರೆನ್ಸ್ (ಆರೋಗ್ಯ ವಿಮೆ) ಇದ್ದರೂ ಸಹ ಕೇವಲ ಒಂದು ಹಲ್ಲು ಕೀಳಲು ಡೆಂಟಿಸ್ಟ್ ಬರೋಬ್ಬರಿ 2,500 ಡಾಲರ್ ಚಾರ್ಜ್ ಮಾಡಿದ್ದಾರೆ. ಇದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ಸರಿಸುಮಾರು 2.37 ಲಕ್ಷ ರೂಪಾಯಿಗಳಾಗುತ್ತದೆ!

15 ವರ್ಷಗಳಿಂದ ಅಮೆರಿಕದಲ್ಲಿದ್ದೇನೆ, ಈಗ ಇಲ್ಲಿನ ಅಸಲಿ ಸತ್ಯವನ್ನು ಬಯಲು ಮಾಡುತ್ತೇನೆ ಎಂದು ನಿತಿನ್ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.

ಭಾರತದ ಜೊತೆ ಹೋಲಿಕೆ

ಇದೇ ಚಿಕಿತ್ಸೆಯ ಬಗ್ಗೆ ಮಾತನಾಡುತ್ತಾ ನಿತಿನ್, ಭಾರತದಲ್ಲಿ ಇದೇ ಕೆಲಸವನ್ನು ಕೇವಲ 15,000 ದಿಂದ 20,000 ರೂಪಾಯಿಗಳಲ್ಲಿ ಮಾಡಿಸಬಹುದು. ಆದರೆ ಇಲ್ಲಿ ವಿಮೆ ಇದ್ದರೂ ಇಷ್ಟೊಂದು ದೊಡ್ಡ ಮೊತ್ತ ಪಾವತಿಸಬೇಕು. ಇದು ಎನ್ಆರ್‌ಐ ಜೀವನದ ಕರಾಳ ಮುಖ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಮೆರಿಕದಲ್ಲಿ ಸಂಪಾದನೆ ಮಾಡುವುದು ಒಳ್ಳೆಯದು, ಆದರೆ ಚಿಕಿತ್ಸೆಗಾಗಿ ಭಾರತವೇ ಬೆಸ್ಟ್. ಮೆಕ್ಸಿಕೋಗೆ ಹೋಗಿ ಚಿಕಿತ್ಸೆ ಪಡೆಯುವುದು ಕೂಡ ಲಾಭದಾಯಕ ಎಂದಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, ನಾನು ರೂಟ್ ಕೆನಾಲ್ ಚಿಕಿತ್ಸೆಗಾಗಿ ಭಾರತಕ್ಕೆ ಹೋಗಿದ್ದೆ. ಅಲ್ಲಿ ನನಗೆ ಕೇವಲ 100 ಡಾಲರ್ (ಸುಮಾರು ₹8,500) ಖರ್ಚಾಯಿತು. ಆದರೆ ಅಮೆರಿಕದಲ್ಲಿ ನನಗೆ 3,500 ಡಾಲರ್ (ಸುಮಾರು ₹2.95 ಲಕ್ಷ) ಬಿಲ್ ನೀಡಲಾಗಿತ್ತು! ಎಂದು ಬರೆದುಕೊಂಡಿದ್ದಾರೆ.

ಈ ಘಟನೆಯು ಅಮೆರಿಕದಂತಹ ಮುಂದುವರಿದ ದೇಶಗಳಲ್ಲಿ ಸಾಮಾನ್ಯ ಜನರಿಗೆ ಆರೋಗ್ಯ ಸೇವೆ ಎಷ್ಟು ದುಬಾರಿಯಾಗಿದೆ ಎಂಬುದನ್ನು ತೋರಿಸುತ್ತದೆ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಅನೇಕ ಅನಿವಾಸಿ ಭಾರತೀಯರು ವೈದ್ಯಕೀಯ ಚಿಕಿತ್ಸೆಗಾಗಿ ತಾಯ್ನಾಡಿಗೆ (Medical Tourism) ಮರಳುತ್ತಿರುವುದು ಕಂಡುಬರುತ್ತಿದೆ.

PREV
Read more Articles on
click me!

Recommended Stories

ಆದಾಯದಲ್ಲಿ ನಂಬರ್‌ 1 ಈ ರೈಲು ನಿಲ್ದಾಣ; ವರ್ಷಕ್ಕೆ ₹3,337 ಕೋಟಿ! ನಿಮ್ಮ ಊರಿನ ಸ್ಟೇಷನ್‌ ಯಾವ ಸ್ಥಾನದಲ್ಲಿದೆ?
Success Story: ಸೇವೆಯಿಂದ ವಜಾ, 20 ವರ್ಷ ಸಾಧು ಅವತಾರ; ಸುದೀರ್ಘ ಕಾನೂನು ಹೋರಾಟ ಗೆದ್ದು ಮತ್ತೆ ಸೈನಿಕನಾದ ಯೋಧ!