ರಜೆ ಕೇಳಿದ ಮಹಿಳಾ ಉದ್ಯೋಗಿಗೆ ವಿಚಿತ್ರ ಬೇಡಿಕೆಯಿಟ್ಟ ಬಾಸ್; ಉಗಿದು ಉಪ್ಪಿನಕಾಯಿ ಹಾಕಿದ ನೆಟ್ಟಿಗರು

Published : Jun 25, 2025, 06:39 PM IST
viral

ಸಾರಾಂಶ

ಬಾಸ್‌ನ ಈ ಬೇಡಿಕೆಯ ಬಗ್ಗೆ ತನಗೆ ತುಂಬಾ ಬೇಸರವಾಗಿದೆ. ಆದ್ದರಿಂದ ತಮ್ಮ ಸ್ಥಳವನ್ನು ಹಂಚಿಕೊಳ್ಳಲಿಲ್ಲ ಎಂದು ಆಕೆ  ಸೋಶಿಯಲ್ ಮೀಡಿಯಾದಲ್ಲಿ   ಬರೆದುಕೊಂಡಿದ್ದಾಳೆ. 

ಉದ್ಯೋಗಿಗಳು ರಜೆ ತೆಗೆದುಕೊಳ್ಳುವುದು ವಿಶ್ರಾಂತಿ ಪಡೆಯಲು ಮತ್ತು ತಮಗಾಗಿ ಸಮಯ ಮೀಸಲಿಡಲು. ಆದರೆ ಆ ರಜೆಯ ಸಮಯದಲ್ಲಿ ನಿಮ್ಮ ಬಾಸ್ ಏನಾದರೂ ಕೇಳಲು ಪ್ರಾರಂಭಿಸಿದರೆ ಅದನ್ನು ರಜೆ ಎಂದು ಕರೆಯಬಹುದೇ ನೀವೇ ಊಹಿಸಿ?. ಹೌದು, ಇಂತಹ ಪ್ರಕರಣವೊಂದು ಮಲೇಷ್ಯಾದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿ ಮಹಿಳಾ ಉದ್ಯೋಗಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಬಾಸ್‌ನ ವಿಚಿತ್ರ ಬೇಡಿಕೆಯನ್ನು ಬಹಿರಂಗಪಡಿಸಿದ್ದಾರೆ.

ಆಗಿದ್ದಿಷ್ಟು…
ಸದ್ಯ ಮಹಿಳಾ ಉದ್ಯೋಗಿಗೆ ಬಾಸ್ ಇಟ್ಟ ಬೇಡಿಕೆ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಅಷ್ಟಕ್ಕೂ ಆ ಬಾಸ್ ಕೇಳಿದ್ದೇನು ಅಂತೀರಾ?, ಬಾಸ್, ಮಹಿಳಾ ಉದ್ಯೋಗಿಗೆ ರಜೆಯ ಮೇಲೆ ಹೊರಗೆ ಹೋದಾಗ, ಲೈವ್ ಲೋಕೇಶನ್ ಶೇರ್ ಮಾಡಬೇಕು ಎಂದು ಹೇಳಿದ್ದಾರೆ. ಇದು ಉದ್ಯೋಗಿಗಳು ನಿಜವಾಗಿಯೂ ರಜೆಯಲ್ಲಿದ್ದಾರೆ ಮತ್ತು ಬೇರೆಲ್ಲಿಯೂ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಸಾಬೀತುಪಡಿಸುತ್ತದೆ ಎಂದು ಬಾಸ್ ತಿಳಿಸಿದ್ದಾರೆ. ಆದರೆ ಮಹಿಳೆಗೆ ಇದು ಇಷ್ಟವಾಗಲಿಲ್ಲ. "ನನಗೆ ಶಾಕ್ ಆಯ್ತು, ಆದರೆ ಬಾಸ್ ಇದು ಹೊಸ ನಿಯಮ. ಒಂದು ವೇಳೆ ಹಾಗೆ ಮಾಡದಿದ್ದರೆ, ರಜೆಯನ್ನು ಪೆಂಡಿಂಗ್ ಇಡಲಾಗುತ್ತದೆ ಅಥವಾ ಗೈರುಹಾಜರಿ ಎಂದು ಮಾರ್ಕ್ ಮಾಡಲಾಗುತ್ತದೆ" ಎಂದರು ಎಂದು ಮಹಿಳೆ ಈ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಾಗ ಜನರು ಕೋಪ ವ್ಯಕ್ತಪಡಿಸಿದ್ದಲ್ಲದೆ, ಇದನ್ನು ಹುಚ್ಚುತನ ಎಂದು ಕರೆಯುತ್ತಿದ್ದಾರೆ.

'@_nnadrahhh' ಎಂಬ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಈ ಮಹಿಳೆ, "ಈ ಹೊಸ ನಿಯಮದ ಪ್ರಕಾರ, ಉದ್ಯೋಗಿಯೊಬ್ಬರು ತಮ್ಮ ಲೈವ್ ಲೋಕೇಶನ್ ಹಂಚಿಕೊಳ್ಳದಿದ್ದರೆ, ಅವರನ್ನು 'ಗೈರುಹಾಜರಿ' ಎಂದು ಪರಿಗಣಿಸಲಾಗುತ್ತದೆ. ಅವರು ರಜೆಗಾಗಿ ಅರ್ಜಿ ಸಲ್ಲಿಸಿದ್ದರೂ ಮತ್ತು ಅದನ್ನು ಅನುಮೋದಿಸಿದ್ದರೂ ಸಹ ಹೀಗೆ ಮಾಡಲಾಗುತ್ತೆ. ಉದ್ಯೋಗಿ ಸ್ಥಳ ಹಂಚಿಕೊಳ್ಳದವರೆಗೆ, ಬಾಸ್ ಅವರ ರಜೆ ಅರ್ಜಿಯನ್ನು ಬಾಕಿ ಇಡುತ್ತಾರೆ" ಎಂದು ಮಹಿಳೆ ಹೇಳಿದ್ದಾರೆ. ರಜೆಗಾಗಿ ಮಲೇಷ್ಯಾದ ಕರಾವಳಿಯ ಬಳಿಯ ದ್ವೀಪಕ್ಕೆ ಹೋಗಿದ್ದೆ ಎಂದು ಮಹಿಳೆ ಬಹಿರಂಗಪಡಿಸಿದ್ದು, ತಮ್ಮ ಕಂಪನಿ ಅಥವಾ ಬಾಸ್ ಹೆಸರನ್ನು ಬಹಿರಂಗಪಡಿಸಲಿಲ್ಲ. ಆದರೆ ಈ ಬೇಡಿಕೆಯಿಂದ ಕೋಪಗೊಂಡ ಮಹಿಳೆ ತಮ್ಮ ಲೈವ್ ಸ್ಥಳವನ್ನು ಬಾಸ್‌ಗೆ ಹೇಳಲು ನಿರಾಕರಿಸಿದರು.

ಸ್ಥಳ, ಫೋಟೋ ಪೋಸ್ಟ್ ಮಾಡಲಿಲ್ಲ!
ಬಾಸ್ ಲೈವ್ ಲೈವ್ ಲೋಕೇಶನ್ ಕೇಳಿದ ನಂತರ, ಮಹಿಳೆ ಕೊಡಲು ನಿರಾಕರಿಸಿದಳು, ಆದರೆ ಆಕೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೋ ಪೋಸ್ಟ್ ಮಾಡಿದಳು. ಫೋಟೋದಲ್ಲಿ ಆಕೆ ಬೀಚ್‌ನಲ್ಲಿ ಸಂತೋಷವಾಗಿ ಇರುವುದನ್ನು ಕಾಣಬಹುದು. ಬಾಸ್‌ನ ಈ ಬೇಡಿಕೆಯ ಬಗ್ಗೆ ತನಗೆ ತುಂಬಾ ಬೇಸರವಾಗಿದೆ. ಆದ್ದರಿಂದ ತಮ್ಮ ಸ್ಥಳವನ್ನು ಹಂಚಿಕೊಳ್ಳಲಿಲ್ಲ ಎಂದು ಆಕೆ ಬರೆದಿದ್ದಾಳೆ.

ಪರಿಣಾಮ ಏನಾಯ್ತು?
ಈ ನಿರ್ಧಾರದ ಪರಿಣಾಮವಾಗಿ ರಜೆಯಲ್ಲಿದ್ದರೂ, ಬಾಸ್‌ನಿಂದ ಅನೇಕ ಫೋನ್ ಕರೆಗಳನ್ನು ಎದುರಿಸಬೇಕಾಯಿತು. ಮಹಿಳೆಯ ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಾ, ಬಳಕೆದಾರರು, "ಇದು ಸಂಪೂರ್ಣವಾಗಿ ತಪ್ಪು. ನಿಮ್ಮ ಬಾಸ್ ಹುಚ್ಚುತನವನ್ನು ತೋರಿಸುತ್ತಿದ್ದಾರೆ.", "ನಿಮ್ಮ ವೈಯಕ್ತಿಕ ಜೀವನದಲ್ಲಿ ಈ ಹಸ್ತಕ್ಷೇಪ ಹೇಗೆ ಸರಿ? ಒಬ್ಬ ಉದ್ಯೋಗಿ ರಜೆಯ ಮೇಲೆ ಎಲ್ಲಿ ಬೇಕಾದರೂ ಹೋಗಬಹುದು" ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಹಾಗೆಯೇ "ಬಾಸ್ ಯಾವ ಕಾನೂನಿನ ಅಡಿಯಲ್ಲಿ ಲೈವ್ ಲೋಕೇಶನ್ ಕೇಳುತ್ತಿದ್ದಾರೆ" ಎಂದು ಕೇಳಿದಾಗ, ಮಹಿಳೆ, "ನನಗೆ ಗೊತ್ತಿಲ್ಲ. ಬಹುಶಃ ಅವರು ನನ್ನನ್ನು ಅವರ ಗುಲಾಮ ಎಂದು ಭಾವಿಸಿರಬಹುದು" ಎಂದು ಉತ್ತರಿಸಿದ್ದಾರೆ. ಮಹಿಳೆ ಮತ್ತೊಂದು ಶಾಕಿಂಗ್ ವಿಷಯವನ್ನು ಹಂಚಿಕೊಂಡಿದ್ದಾರೆ. ತನ್ನ ಕಂಪನಿಯು ರಜೆಯ ಸಮಯದಲ್ಲಿ ಮಾತ್ರವಲ್ಲದೆ, ಅನಾರೋಗ್ಯ ರಜೆ ಮತ್ತು ವೇತನ ರಹಿತ ರಜೆಯಲ್ಲೂ ಲೈವ್ ಲೋಕೇಶನ್ ಕೇಳುತ್ತದೆ ಎಂದು ತಿಳಿಸಿದ್ದಾರೆ. ಈಗ ಮಹಿಳೆ, ಕಂಪನಿಯು ತನ್ನ ಲೈವ್ ಲೋಕೇಶನ್ ಮತ್ತೆ ಕೇಳಿದರೆ, ಮಲೇಷ್ಯಾದ ಕಾರ್ಮಿಕ ಇಲಾಖೆಗೆ ಅದರ ಬಗ್ಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ.

ಕಾನೂನು ಏನು ಹೇಳುತ್ತದೆ?
ಮಲೇಷಿಯಾದ ಕಾನೂನಿನ ಪ್ರಕಾರ, ಪ್ರತಿಯೊಬ್ಬ ಉದ್ಯೋಗಿಗೆ ಒಂದು ವರ್ಷದಲ್ಲಿ ಕನಿಷ್ಠ ಎಂಟು ದಿನಗಳ ವೇತನ ಸಹಿತ ರಜೆ ತೆಗೆದುಕೊಳ್ಳುವ ಹಕ್ಕಿದೆ. ರಜೆಯ ಉದ್ದೇಶವು ಉದ್ಯೋಗಿಗೆ ವಿಶ್ರಾಂತಿ ಪಡೆಯಲು ಮತ್ತು ರಿಫ್ರೆಶ್ ಆಗಿ ಕೆಲಸಕ್ಕೆ ಮರಳಲು ಅವಕಾಶ ನೀಡುವುದಾಗಿದೆ. ರಜೆಯ ಮೇಲೆ ಹೋಗಿರುವ ಉದ್ಯೋಗಿಯ ಮೇಲೆ ಕಂಪನಿಯು ನಿಗಾ ಇಡಬಹುದು ಅಥವಾ ಅವನು ಎಲ್ಲಿದ್ದಾನೆ ಎಂದು ಕೇಳಬಹುದು ಎಂದು ಕಾನೂನು ಹೇಳುವುದಿಲ್ಲ. ಈ ಪ್ರಕರಣವು ಉದ್ಯೋಗಿಗಳ ಗೌಪ್ಯತೆ ಮತ್ತು ಬಾಸ್‌ನ ಹಕ್ಕುಗಳ ವ್ಯಾಪ್ತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಮಲೇಷ್ಯಾದ ಕಾರ್ಮಿಕ ಇಲಾಖೆ ಇದರ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಮತ್ತು ಇತರ ಕಂಪನಿಗಳು ಸಹ ಅಂತಹ ಬೇಡಿಕೆಗಳನ್ನು ಇಡುತ್ತವೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್