Parle-G Biscuit Controversy: ಪಾರ್ಲೆ-ಜಿ ಪ್ಯಾಕೇಟ್​ನಲ್ಲಿರೋ ಮಗು ಇವಳದ್ದಂತೆ! ರಸ್ತೆ ಬದಿಯಲ್ಲಿ ನಿಂತು ಈಕೆ ಹೇಳ್ತಿರೋದೇನು ಕೇಳಿ...

Published : Jun 10, 2025, 01:39 PM ISTUpdated : Jun 10, 2025, 02:20 PM IST
 Woman claims the picture on the Parle G pack is her daughter

ಸಾರಾಂಶ

ಪಾರ್ಲೆ-ಜಿ ಪ್ಯಾಕೇಟ್​ನಲ್ಲಿರೋ ಮುದ್ದು ಮೊಗದ ಮಗು ತನ್ನದೇ ಎಂದು ಸಾರಿ ಸಾರಿ ಹೇಳುತ್ತಿದ್ದಾಳೆ ಈ ಮಹಿಳೆ. ಇವಳ ವಾದ ಏನು ನೋಡಿ!

ಪಾರ್ಲೆ-ಜಿ ಎಂದರೆ ಸಾಕು... ಇಂದಿನ ವಯೋವೃದ್ಧರೂ ತಮ್ಮ ಬಾಲ್ಯದ ನೆನಪಿಗೆ ಜಾರಿಬಿಡುತ್ತಾರೆ. ಏಕೆಂದರೆ ಬಿಸ್ಕೆಟ್​ಗಳೇ ಇರದ ಅಂದಿನ ದಿನಗಳಲ್ಲಿ ಇದನ್ನು ತಿಂದೇ ಬದುಕಿದವರು ಅದೆಷ್ಟೋ ಮಂದಿ. 1939ರಲ್ಲಿ ಆರಂಭವಾಗಿದ್ದ ಪಾರ್ಲೆ ಗ್ಲುಕೋ ಕೊನೆಗೆ ಪಾರ್ಲೆ-ಜಿ ಎಂದೇ ಫೇಮಸ್​ ಆಗಿದೆ. ಇದೀಗ ಮಾರುಕಟ್ಟೆಗೆ ಸಹಸ್ರಾರು ವಿಧದ ಬಿಸ್ಕೆಟ್​ಗಳು ಲಭ್ಯವಿದ್ದರೂ ಕಡಿಮೆ ದರದಲ್ಲಿ ಹೆಚ್ಚು ರುಚಿ ಕೊಡುವ ಬಿಸ್ಕೆಟ್​ ಎಂದೇ ಹಲವರು ಪಾರ್ಲೆ-ಜಿಯನ್ನು ಇಷ್ಟಪಡುವುದು ಇದೆ. ಇದೀಗ, ಈ ಬಿಸ್ಕೆಟ್​ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿರುವುದಕ್ಕೆ ಕಾರಣ, ಗಾಜಾದ ಜನತೆ. ಯುದ್ಧಪೀಡಿತ ಗಾಜಾದಲ್ಲಿ ಪಾರ್ಲೆ-ಜಿ ತಿಂದು ಜನರು ಹೊಟ್ಟೆತುಂಬಿಸಿಕೊಳ್ಳುತ್ತಿದ್ದಾರೆ. ಆದರೆ ಇದು ಸದ್ದು ಮಾಡುವುದಕ್ಕೆ ಕಾರಣ ಏನೆಂದರೆ, ಕೇವಲ 5 ರೂಪಾಯಿಗಳಿಗೆ ಲಭ್ಯವಿರುವ ಪಾರ್ಲೆ-ಜಿ ಬಿಸ್ಕತ್ತು ಗಾಜಾದಲ್ಲಿ 2400 ರೂಪಾಯಿಗಳವರೆಗೆ ಮಾರಾಟವಾಗುತ್ತಿದ್ದು, ಇದರ ವಿಡಿಯೋಗಳು ಸೋಷಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇದು, ಗಾಜಾದ ಮಾತಾದರೆ, ಇನ್ನೊಂದು ಇಂಟರೆಸ್ಟಿಂಗ್​ ವಿಷ್ಯವೊಂದು ಇದೀಗ ಹರಿದಾಡುತ್ತಿದೆ. ಅದೇನೆಂದರೆ, ಪಾರ್ಲೆ-ಜಿ ಬಿಸ್ಕೆಟ್​ನಲ್ಲಿ ಮಗುವೊಂದರ ಚಿತ್ರವಿದೆ. ಅದು ಮೊದಲಿನಿಂದಲೂ ಇರುವ ಚಿತ್ರವೇ. ಆದರೆ ಈ ಮಗು ತನ್ನ ಮಗಳು ಎಂದು ಮಹಿಳೆ ಪುಕಾರು ತೆಗೆದಿದ್ದಾಳೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರೋ ಮಹಿಳೆ, ತನ್ನ 11 ವರ್ಷದ ಮಗಳನ್ನು ನಿಲ್ಲಿಸಿಕೊಂಡು, ಈಕೆ ಆರು ತಿಂಗಳು ಇರುವಾಗ ಈ ಫೋಟೋ ತೆಗೆಯಲಾಗಿದ್ದು, ಅದು ಇವಳೇ ಎನ್ನುವುದು ಆಕೆಯ ವಾದ. ಈ ಮೂಲಕ ಪ್ರಚಾರದ ಜೊತೆ ಹಣವನ್ನೂ ಮಾಡುವ ಯೋಚನೆ ಈಕೆಗೆ ಇದ್ದಂತಿದೆ. ಆ ಪತ್ರಕರ್ತ, ಅದ್ಹೇಗೆ ಸಾಧ್ಯನಮ್ಮಾ? ಈ ಮಗುವಿನ ಚಿತ್ರ ಹಾಕಿ 50-60 ವರ್ಷಗಳ ಮೇಲಾಗಿದೆ. ನಿಮ್ಮ ಮಗಳಿಗೆ 11 ವರ್ಷ. ಅವಳು ಇದೇ ಮಗು ಆಗಿರಲು ಸಾಧ್ಯ ಹೇಗೆ ಎಂದು ಪ್ರಶ್ನಿಸಿದರೂ ಅದಕ್ಕೆ ಮಹಿಳೆ ಬಳಿ ಉತ್ತರವಿಲ್ಲ. ಆ ಬಾಲಕಿ ಸುಮಾರಾಗಿ ಅಲ್ಲಿರೋ ಮಗುವನ್ನೇ ಹೋಲುತ್ತಿರುವ ಕಾರಣ, ಅವಳು ಇವಳೇ ಎಂದು ವಾದ ಮಾಡುತ್ತಿದ್ದಾಳೆ!

ಇನ್ನು ಪಾರ್ಲೆ ಜಿ ಬಿಸ್ಕತ್ ಇತಿಹಾಸದ ಕುರಿತು ವಿಕಿಪಿಡಿಯಾದಲ್ಲಿ ನೀಡಿರುವ ಮಾಹಿತಿಯಂತೆ ಹೇಳುವುದಾದರೆ, 1929 ರಲ್ಲಿ ಮುಂಬೈನಲ್ಲಿ ಮೋಹನ್ಲಾಲ್ ಚೌಹಾಣ್ ಸ್ಥಾಪಿಸಿದ ಮಿಠಾಯಿ ತಯಾರಕ ಕಂಪೆನಿಯಾಗಿ ಪ್ರಾರಂಭವಾಯಿತು. 1939 ರಲ್ಲಿ, ಕಂಪೆನಿಯು ಬಿಸ್ಕೆಟ್​ ತಯಾರಿಕೆಗೆ ಆರಂಭಿಸಿ ಪಾರ್ಲೆ ಗ್ಲುಕೋ (Parle Gluco) ಬಿಡುಗಡೆ ಮಾಡಿತು. 1947ರಲ್ಲಿ ಭಾರತ ಸ್ವತಂತ್ರವಾದಾಗ, ಕಂಪೆನಿಯ ತನ್ನ ಗ್ಲುಕೋ ಬಿಸ್ಕತ್ತುಗಳನ್ನು ಬ್ರಿಟಿಷ್ ಬಿಸ್ಕತ್ತುಗಳಿಗೆ ಪರ್ಯಾಯವಾಗಿ ಪ್ರದರ್ಶಿಸುವ ಜಾಹೀರಾತು ಪ್ರಚಾರವನ್ನು ಪ್ರಾರಂಭಿಸಿತು. 1980 ರವರೆಗೆ ಪಾರ್ಲೆ ಗ್ಲುಕೋ ಎಂದೇ ಇತ್ತು. ಬಳಿಕ ಅದನ್ನು 'ಜಿ ಫಾರ್ ಜೀನಿಯಸ್' ಎಂದು ಬ್ರಾಂಡ್ ಮಾಡಲಾಯಿತು.

2013ರಲ್ಲಿ ಪಾರ್ಲೆ-ಜಿ ಚಿಲ್ಲರೆ ಮಾರಾಟದಲ್ಲಿ ₹ 50 ಬಿಲಿಯನ್ ಗಡಿ ದಾಟಿದ ಭಾರತದ ಮೊದಲ ವೇಗವಾಗಿ ಚಲಿಸುವ ಗ್ರಾಹಕ ಸರಕುಗಳ ಬ್ರ್ಯಾಂಡ್ ಆಯಿತು. 2012ರಲ್ಲಿ ಒಂದೇ ವರ್ಷದಲ್ಲಿ ಚಿಲ್ಲರೆ ಮಾರಾಟದಲ್ಲಿ ₹ 5,000 ಕೋಟಿ ಮೀರಿದ ಭಾರತದ ಮೊದಲ ಎಫ್‌ಎಂಸಿಜಿ ಕಂಪನಿಯಾಗಿ ಇತಿಹಾಸ ನಿರ್ಮಿಸಿತು. ಇನ್ನು ಇದು ಭಾರತವನ್ನೂ ಮೀರಿ ಹೆಸರು ಗಳಿಸಿದೆ. ಇದೀಗ ಹಲವು ತಿಂಗಳುಗಳಿಂದ ಗಾಜಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ, ಅಲ್ಲಿನ ಪೂರೈಕೆ ಸರಪಳಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಗಡಿಗಳನ್ನು ಮುಚ್ಚಲಾಗಿದೆ. ಮಾರುಕಟ್ಟೆಗಳನ್ನು ಮುಚ್ಚಲಾಗಿದೆ. ಜನರಲ್ಲಿ ಹಣ ಅಥವಾ ಆಹಾರವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅಲ್ಲಿಗೆ ತಲುಪುವ ಯಾವುದೇ ಸಣ್ಣ ಸರಕುಗಳ ಬೆಲೆ ಗಗನಕ್ಕೇರುತ್ತಿದೆ. ಪಾರ್ಲೆ-ಜಿ ನಂತಹ ಮೂಲ ಬಿಸ್ಕತ್ತು 2400 ರೂ.ಗಳಿಗೆ ಮಾರಾಟವಾಗುತ್ತಿದೆ.

 

 

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್