
ಹೈದರಾಬಾದ್: ಹಣಕ್ಕಾಗಿ ಕೆಲವರು ಎಂತಹ ಹಂತಕ್ಕೂ ಇಳಿಯಲು ಸಿದ್ಧರಿರುತ್ತಾರೆ. ಇದಕ್ಕೊಂದು ಉದಾಹರಣೆ ಹೈದರಾಬಾದ್‌ನಲ್ಲಿ ನಡೆದ ಈ ಘಟನೆ. ವಿವಾಹಿತ ಜೋಡಿಯೊಂದು ಹಣಕ್ಕಾಗಿ ಮುಖಕ್ಕೆ ಮಾಸ್ಕ್ ಧರಿಸಿ ಕಾಮ*ಕೇಳಿಯಲ್ಲಿ ತೊಡಗಿಸಿಕೊಂಡಿದ್ದು, ಈ ದೃಶ್ಯಗಳನ್ನು ಲೈವ್ ಸ್ಟ್ರೀಮಿಂಗ್(ನೇರ ಪ್ರಸಾರ) ಮಾಡಿದ ವಿಚಿತ್ರ ಘಟನೆ ಮುತ್ತಿನ ನಗರಿಯಲ್ಲಿ ನಡೆದಿದೆ. 2 ಸಾವಿರ ರೂಪಾಯಿಗಾಗಿ ಈ ಜೋಡಿ ತಮ್ಮ ಖಾಸಗಿಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್ ಸ್ಟ್ರೀಮ್ ಮಾಡಿದ್ದು, ಈ ಸಂಬಂಧ ಪೊಲೀಸರು ಈ ದಂಪತಿಯನ್ನು ಬಂಧಿಸಿದ್ದಾರೆ.
ರಾಸಲೀಲೆಯ ಲೈವ್ ಸ್ಟ್ರೀಮಿಂಗ್
ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಈ ಕೃತ್ಯವೆಸಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 41 ವರ್ಷದ ವ್ಯಕ್ತಿ ಹಾಗೂ ಆತನ 37 ವರ್ಷದ ಪತ್ನಿಯನ್ನು ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ. ಹಣಕ್ಕಾಗಿ ಈ ಜೋಡಿ ಮೊಬೈಲ್ ಆಪ್ ಒಂದರಲ್ಲಿ ತಮ್ಮ ದೈಹಿಕ ಸಂಬಂಧ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿ ಲೈವ್ ಸ್ಟ್ರೀಮ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಕೃತ್ಯ
ಈ ಜೋಡಿ ಹೈದರಾಬಾದ್‌ನ ಅಂಬೆರ್‌ಪೇಟ್‌ನ ಮಲ್ಲಿಕಾರ್ಜುನ್ ನಗರದಲ್ಲಿ ವಾಸ ಮಾಡುತ್ತಿದ್ದರು. ಹೈದರಾಬಾದ್‌ನ ಕಾರ್ಯಪಡೆ ಪೊಲೀಸರು ಈ ದಂಪತಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಈ ಕೃತ್ಯಕ್ಕೆ ಬಳಸುತ್ತಿದ್ದ ಹೆಚ್‌ಡಿ ಕ್ಯಾಮರಾಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಪ್ರಕಾರ, ಬಂಧಿಸಲ್ಪಟ್ಟ ವ್ಯಕ್ತಿ ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದ. ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಈ ಕೃತ್ಯವೆಸಗಿದ್ದಾಗಿ ಈ ಜೋಡಿ ಪೊಲೀಸರ ಮುಂದೆ ಒಪ್ಪಿಕೊಂಡಿದೆ.
ಮೊಬೈಲ್ ಆಪ್‌ನಲ್ಲಿ ಲೈವ್ ಸ್ಟ್ರೀಮಿಂಗ್
ತಮ್ಮ ದೈಹಿಕ ಸಂಬಂಧದ ಚಟುವಟಿಕೆಗಳನ್ನು ವೀಡಿಯೋ ಮಾಡಿ, ಅಥವಾ ಲೈವ್ ಸ್ಟ್ರೀಮಿಂಗ್ ಮೂಲಕ ಈ ಜೋಡಿ ಅದಕ್ಕೆ ಸಂಬಂಧಿಸಿದ ಮೊಬೈಲ್ ಆಪ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. ಈ ಮೊಬೈಲ್ ಆಪ್ ಬಳಕೆದಾರರು ಬಹುತೇಕ ಯುವ ತರುಣರೇ ಆಗಿದ್ದು, ಅವರು ಇಂತಹ ಅಸಹ್ಯವಾದ ವೀಡಿಯೋ ಕಂಟೆಂಟ್‌ಗಳಿಗೆ ಹಣ ನೀಡಲು ಸಿದ್ಧರಿರುತ್ತಿದ್ದರು. ಇವ ದೈಹಿಕ ಸಂಬಂಧದ ಚಟುವಟಿಕೆಯ ಲೈವ್ ವೀಡಿಯೋಗೆ 2000 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು. ಹಾಗೆಯೇ ರೆಕಾರ್ಡ್ ಮಾಡಿದ ವೀಡಿಯೋಗೆ 500 ರೂಪಾಯಿ ದರ ನಿಗದಿಯಾಗಿತ್ತು.
ಮುಖಕ್ಕೆ ಮಾಸ್ಕ್ ಧರಿಸಿ ಸರಸ ಸಲ್ಲಾಪ
ಗಂಡನೊಬ್ಬನೇ ಕ್ಯಾಬ್ ಚಾಲಕನಾಗಿ ಕೆಲಸ ಮಾಡಿ ದುಡಿಯುವುದಕ್ಕಿಂತ ಹೆಚ್ಚು ಹಣವನ್ನು ಈ ಕೃತ್ಯಗಳಿಂದ ದಂಪತಿ ಗಳಿಕೆ ಮಾಡುತ್ತಿದ್ದರು. ತಮ್ಮ ಗುರುತು ಪರಿಚಯ ಬೇರೆಯವರಿಗೆ ಸ್ಥಳೀಯರಿಗೆ ತಿಳಿಯದಂತೆ ಮರೆ ಮಾಚುವುದಕ್ಕಾಗಿ ಈ ಜೋಡಿ ತಮ್ಮ ಮುಖಕ್ಕೆ ಮಾಸ್ಕ್ ಧರಿಸುತ್ತಿದ್ದರು. ತಮ್ಮ ಈ ಕೃತ್ಯಗಳಿಗೆ ಅವರು ಹೆಚ್‌ಡಿ ಕ್ಯಾಮರಾವನ್ನು ಬಳಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪೂರ್ವ ವಲಯ ಕಾರ್ಯಪಡೆ ಗುರುವಾರ ಈ ದಂಪತಿ ಮನೆ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ(Information Technology Act) ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.