ಮದುವೆ ಅಂದ ಮೇಲೆ ಅಲ್ಲಿ ಹಾಡು, ಕುಣಿತ ಎಲ್ಲವೂ ಸಾಮಾನ್ಯ. ಪ್ರತಿಯೊಬ್ಬರೂ ಇಂತಹದೊಂದು ಸಮಾರಂಭಕ್ಕಾಗಿಯೇ ಕಾಯುತ್ತಿರುತ್ತಾರೆ. ವಧು-ವರರ ಕುಟುಂಬಗಳ ಆಪ್ತರು, ಬಂಧುಬಳಗ ಮತ್ತು ಸಂಬಂಧಿಕರು ಎಲ್ಲರೂ ಒಂದೆಡೆ ಸೇರಿ ವಿವಾಹ ಸಂಭ್ರಮವನ್ನು ಸಂಭ್ರಮಿಸುತ್ತಾರೆ. ಇತ್ತೀಚಿನ ದಿನಗಳಲ್ಲಿಯಂತೂ ವಧು-ವರ ಎರಡೂ ಕಡೆಯ ಜನರು ಒಟ್ಟಾಗಿ ಸಂಗೀತ ಸಮಾರಂಭವನ್ನು ಆಯೋಜಿಸುವ ಮೂಲಕ ಮತ್ತು ವಿಭಿನ್ನ ಹಾಡುಗಳಿಗೆ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಈ ಕ್ಷಣವನ್ನು ಸ್ಮರಣೀಯವಾಗಿಡಲು ಇಷ್ಟಪಡುತ್ತಾರೆ. ಅಂದಹಾಗೆ ಇತ್ತೀಚೆಗೆ ವಿವಾಹ ಸಂಗೀತ ಸಮಾರಂಭದಲ್ಲಿ ವರನ ಸಹೋದರ ಮತ್ತು ವಧುವಿನ ಸಹೋದರಿ ವೇದಿಕೆಯಲ್ಲಿ ತಮ್ಮ ನೃತ್ಯದ ಮೂಲಕ ಸೆನ್ಸೇಶನಲ್ ಕ್ರಿಯೇಟ್ ಮಾಡಿದ್ದು, ಅವರ ನೃತ್ಯದ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ರಾ.ಒನ್ ಸಿನಿಮಾದ ಹಿಟ್ ಹಾಡು 'ಚಮ್ಮಕ್ ಚಲ್ಲೊ' ಹಾಡಿಗೆ ಯುವಕ-ಯುವತಿ ನೃತ್ಯ ಮಾಡುತ್ತಿರುವುದು ನೋಡಬಹುದು. ವರನ ಸಹೋದರ ಸೂಟ್ ಧರಿಸಿದ್ದರೆ, ವಧುವಿನ ಸಹೋದರಿ ನೇರಳೆ ಬಣ್ಣದ ಲೆಹೆಂಗಾ ಧರಿಸಿದ್ದಾಳೆ. ವಿಡಿಯೋಗೆ 'POV ವಧುವಿನ ಸಹೋದರಿ ಮತ್ತು ವರನ ಸಹೋದರ ವೇದಿಕೆಯ ಮೇಲೆ ಬಂದಾಗ' ಎಂದು ಶೀರ್ಷಿಕೆ ಬರೆಯಲಾಗಿದೆ. ಈ ವಿಡಿಯೋವನ್ನು wedding dreamco Instagram ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 8.6 ಮಿಲಿಯನ್ ವೀಕ್ಷಣೆಗಳು ಮತ್ತು 902K ಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ.
ಈ ಇಬ್ಬರ ನೃತ್ಯವನ್ನು ನೋಡಿದ ನಂತರ ಇನ್ಸ್ಟ್ರಾಗ್ರಾಮ್ ಬಳಕೆದಾರರು ಕಾಮೆಂಟ್‌ಗಳ ಮಹಾಪೂರವನ್ನೇ ಹರಿಸಿದ್ದಾರೆ. ಕೆಲವರು "ಕಥೆಯಲ್ಲಿ ತಿರುವಿದೆ. ಅವರು ಈಗಾಗಲೇ ಡೇಟಿಂಗ್ ಮಾಡುತ್ತಿದ್ದು, ಹೆತ್ತವರನ್ನು ಮನವೊಲಿಸಲು ತಮ್ಮ ಅಣ್ಣ ಅಕ್ಕಂದಿರ ಮದುವೆಯನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ" ಎಂದರೆ, ಮತ್ತೆ ಕೆಲವರು, "ಈ ಹುಡುಗಿ ಅದ್ಭುತವಾಗಿ ನೃತ್ಯ ಮಾಡುತ್ತಿದ್ದಾಳೆ" "ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಅವನು ಒಮ್ಮೆಯೂ ಹುಡುಗಿಯನ್ನು ಮುಟ್ಟದೆ ಹೆಜ್ಜೆ ಹಾಕಿರುವುದು ನಿಜಕ್ಕೂ ವ್ಹಾವ್" ಎಂದಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ
ವಧು-ವರರ ಒಡಹುಟ್ಟಿದವರು ಮದುವೆಗಳಲ್ಲಿ ಅಬ್ಬರಿಸುತ್ತಿರುವುದು ಇದೇ ಮೊದಲಲ್ಲ. ಈ ವಿವಾಹ ಸಮಾರಂಭಗಳ ನೃತ್ಯ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತವೆ. ಈ ವಿಡಿಯೋ ನೋಡಿದ ನಂತರ ನಿಮಗೆ ಅವರ ನೃತ್ಯ ನೋಡಿ ಏನನಿಸಿತು ಎಂದು ನಮಗೆ ಕಾಮೆಂಟ್ ವಿಭಾಗದಲ್ಲಿ ತಿಳಿಸಿ.
ಇದೇ ರೀತಿ ವೈರಲ್ ಆಗಿದ್ದ ಮದುವೆಯ ವಿಡಿಯೋ
ಆಗಾಗ್ಗೆ ಇಂತಹ ಯುವಕರ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಮೊನ್ನೆಯಷ್ಟೇ ನಡೆದ ವಿವಾಹ ಸಮಾರಂಭದಲ್ಲಿನ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ವೈರಲ್ ವೀಡಿಯೊದಲ್ಲಿ ವಧು-ವರರು ವೇದಿಕೆಯ ಮೇಲೆ ನಿಂತಿರುವುದು ಕಂಡುಬರುತ್ತದೆ. ನಂತರ ಬುರ್ಖಾ ಧರಿಸಿದವರೊಬ್ಬರು ವೇದಿಕೆಯ ಮೇಲೆ ಬಂದು ನೇರವಾಗಿ ವರನನ್ನು ಅಪ್ಪಿಕೊಳ್ಳಲು ಪ್ರಾರಂಭಿಸುತ್ತಾರೆ. ಇದನ್ನು ನೋಡಿ ವಧು ಶಾಕ್ ಆಗುತ್ತಾಳೆ. ಇನ್ನೇನು ಆಕೆ ಅಳುವುದೊಂದು ಬಾಕಿ. ಇತರರು ಬಂದು ಬುರ್ಖಾ ತೆಗೆಯುತ್ತಾರೆ. ಆಗ ಬುರ್ಖಾ ಧರಿಸಿರುವುದು ಹುಡುಗಿ ಇಲ್ಲ. ಮದುವೆಗೆ ಬಂದು ತಮಾಷೆ ಮಾಡುತ್ತಿದ್ದ ವರನ ಸ್ನೇಹಿತ ಎಂದು ಗೊತ್ತಾಗುತ್ತದೆ. ಸತ್ಯ ಬಹಿರಂಗವಾದ ನಂತರ ವರನ ಸ್ನೇಹಿತ ವಧುವಿಗೆ ಹೂಗುಚ್ಛವನ್ನು ನೀಡುತ್ತಾನೆ. ಇದನ್ನು ನೋಡಿ ವಧು ನಗುತ್ತಾಳೆ.
ಈ ವಿಡಿಯೋ ಕೂಡ ಹೆಚ್ಚು ವೈರಲ್ ಆಗುತ್ತಿದ್ದು, ಪೋಸ್ಟ್ ಮಾಡಿದಾಗಿನಿಂದ, ಲಕ್ಷಾಂತರ ಬಳಕೆದಾರರು ವೀಕ್ಷಿಸಿದ್ದಾರೆ. 88 ಸಾವಿರಕ್ಕೂ ಹೆಚ್ಚು ಬಳಕೆದಾರರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ತಮಾಷೆಯ ಕಾಮೆಂಟ್ ಸಹ ಮಾಡಿದ್ದಾರೆ. ಕೆಲವರು "ವಧು ಎಲ್ಲವೂ ಮುಗಿದುಹೋಗಿದೆ ಎಂದು ಭಾವಿಸಿದ್ದಳು" ಎಂದರೆ, ಮತ್ತೆ ಕೆಲವರು "ಸತ್ಯ ಹೊರಬರಲು ಸ್ವಲ್ಪ ಸಮಯ ತೆಗೆದುಕೊಂಡಿದ್ದರೆ, ವಧು ಕೋಮಾಗೆ ಹೋಗುತ್ತಿದ್ದಳು", "ದೇವರೇ...ನನ್ನ ಮದುವೆಯಲ್ಲಿ ನನ್ನ ಯಾವುದೇ ಸ್ನೇಹಿತರು ಇಂತಹ ಕೆಲಸ ಮಾಡಲು ಬಿಡಬೇಡಿ", "ಅದೃಷ್ಟವಶಾತ್ ವಧುವಿಗೆ ಹೃದಯಾಘಾತವಾಗಲಿಲ್ಲ ನಾನಾಗಿದ್ದರೆ ಈ ಸ್ನೇಹಿತನ ಕಿವಿಗೆ ಬಾರಿಸುತ್ತಿದೆ" ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನು ನೀವು ನೋಡಬಹುದು.