ಆಲೂಗಡ್ಡೆ ಕರಿ ಮಾಡಲು ಅಡುಗೆಮನೆಗೆ ಹೋದ ಹುಡುಗರು ಇಡೀ ಕೋಣೆಗೇ ಬೆಂಕಿ ಹಚ್ಚೋದಾ?

Published : Jul 04, 2025, 04:54 PM ISTUpdated : Jul 05, 2025, 11:15 AM IST
viral video

ಸಾರಾಂಶ

ಇಬ್ಬರು ಹುಡುಗರು ಒಟ್ಟಿಗೆ ಅಡುಗೆ ಮಾಡುವುದರಲ್ಲಿ ನಿರತರಾಗಿದ್ದರೆ, ಮೂರನೇ ಹುಡುಗ ಕತ್ತರಿಸಿದ ಆಲೂಗಡ್ಡೆಯೊಂದಿಗೆ ಹತ್ತಿರದಲ್ಲಿ ನಿಂತಿದ್ದಾನೆ. ಆಮೇಲೇನಾಯ್ತು ನೋಡಿ…

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ವಿಷಯವಾಗಲೀ ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ. ಯಾರಾದರೂ ಏನನ್ನಾದರೂ ನೋಡಿದರೆ ಸಾಕು ಮೊಬೈಲ್ ಕ್ಯಾಮೆರಾವನ್ನು ತಕ್ಷಣ ಆನ್ ಮಾಡಿ, ಆ ಕ್ಷಣವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ. ವಿಡಿಯೋದಲ್ಲಿ ಏನಾದರೂ ವಿಭಿನ್ನವಾದದ್ದು ಕಂಡುಬಂದರೆ ಜನರು ಅದನ್ನು ಲೈಕ್ ಮಾಡುವುದಕ್ಕಾಗಲೀ, ಶೇರ್ ಮಾಡಲು ಮತ್ತು ಕಾಮೆಂಟ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಇದೇ ರೀತಿಯ ವಿಡಿಯೋವೊಂದು ಅಂತರ್ಜಾಲದಲ್ಲಿ ತುಂಬಾ ವೈರಲ್ ಆಗುತ್ತಿದೆ. ಜನರು ಅದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಹಾಗಾದರೆ ಈ ವಿಡಿಯೋದಲ್ಲಿ ಅಂಥದ್ದೇನಿದೆ ನೋಡೋಣ...

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯ್ತು ವಿಡಿಯೋ
ಈ ವಿಡಿಯೋ ಒಂದು ಸಾಮಾನ್ಯ ಅಡುಗೆಮನೆಯ ವಿಡಿಯೋ ಆಗಿದ್ದು, ಇಲ್ಲಿ ಮೂವರು ಯುವಕರು ಅಡುಗೆ ಮಾಡುತ್ತಿದ್ದಾರೆ. ಇಬ್ಬರು ಹುಡುಗರು ಒಟ್ಟಿಗೆ ಅಡುಗೆ ಮಾಡುವುದರಲ್ಲಿ ನಿರತರಾಗಿದ್ದರೆ, ಮೂರನೇ ಹುಡುಗ ಕತ್ತರಿಸಿದ ಆಲೂಗಡ್ಡೆಯೊಂದಿಗೆ ಹತ್ತಿರದಲ್ಲಿ ನಿಂತಿದ್ದಾನೆ. ಅಡುಗೆಮನೆಯಲ್ಲಿರುವ ಪಾತ್ರೆಯಲ್ಲಿ ಎಣ್ಣೆ ಬಿಸಿಯಾಗುತ್ತಿದೆ. ಕೆಲವೇ ಸೆಕೆಂಡುಗಳಲ್ಲಿ, ಮೂರನೇ ಹುಡುಗ ಒಂದು ಹಿಡಿ ಆಲೂಗಡ್ಡೆಯನ್ನು ತೆಗೆದುಕೊಂಡು ಬಿಸಿ ಎಣ್ಣೆಯಲ್ಲಿ ಹಾಕುತ್ತಾನೆ. ಆಲೂಗಡ್ಡೆ ಎಣ್ಣೆಗೆ ಬಿದ್ದ ತಕ್ಷಣ, ಪಾತ್ರೆಯಿಂದ ದೊಡ್ಡ ಬೆಂಕಿ ಜ್ವಾಲೆಗಳು ಮೇಲೇರುತ್ತವೆ. ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಈಗ ಈ ವಿಡಿಯೋ ಇಷ್ಟು ವೇಗವಾಗಿ ವೈರಲ್ ಆಗಲು ಇದೇ ಕಾರಣ.

 

ಹೀಗಿದೆ ನೆಟ್ಟಿಗರ ಪ್ರತಿಕ್ರಿಯೆ
ಈ ಅಚ್ಚರಿಯ ವಿಡಿಯೋವನ್ನು @Ritiksam21 ಎಂಬ ಬಳಕೆದಾರರು ಸಾಮಾಜಿಕ ಮಾಧ್ಯಮ ವೇದಿಕೆ 'X' ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವಿಡಿಯೋಗೆ "ನಮ್ಮಲ್ಲಿ ಬಹಳಷ್ಟು ಪ್ರತಿಭೆಗಳಿವೆ" ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 16 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, ಜನರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. "ಸ್ನೇಹಿತ.. ಹುಡುಗರು ವಿಭಿನ್ನರು" ಎಂದು ಬರೆದರೆ, ಮತ್ತೆ ಕೆಲವು ಬಳಕೆದಾರರು "ಅವರು ನಿಜವಾಗಿಯೂ ಒಳ್ಳೆಯ ಪ್ರತಿಭೆ ಹೊಂದಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಯಾರೋ ಆಶ್ಚರ್ಯದಿಂದ ಏನಿದು ಎಂದು ಪ್ರಶ್ನಿಸಿದರೆ, "ವಾವ್, ಎಂಥ ಟ್ಯಾಲೆಂಟ್ ", "ಈ ಜನರು ಪ್ಲಾಟ್‌ಫಾರ್ಮ್‌ಗೆ ಬೆಂಕಿ ಹಚ್ಚುತ್ತಾರೆ" ಎಂದೆಲ್ಲಾ ಹೇಳಿದ್ದಾರೆ.

ನಗುವನ್ನು ತಡೆಯಲಾಗುತ್ತಿಲ್ಲ
ಸಣ್ಣ ವಿಡಿಯೋ ಸಹ ಸ್ವಲ್ಪ ವಿಭಿನ್ನವಾಗಿದ್ದರೆ ಸರಳ ಘಟನೆಯೂ ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ವೈರಲ್ ಆಗುತ್ತದೆ ಎಂಬುದನ್ನು ತೋರಿಸಿದೆ. ಇಂತಹ ವಿಷಯವು ಜನರನ್ನು ನಗಿಸುವುದಲ್ಲದೆ, ಅವರನ್ನು ಆಶ್ಚರ್ಯಗೊಳಿಸುತ್ತದೆ. ಈ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಗಮನ ಸೆಳೆಯಲು ಇದೇ ಕಾರಣ.

ಈ ಹಿಂದೆಯೂ ವೈರಲ್ ಆಗಿತ್ತು
ಇದೇ ರೀತಿಯ ತಮಾಷೆಯಾದ ವಿಡಿಯೋವೊಂದು ಈ ಹಿಂದೆಯೂ ವೈರಲ್ ಆಗಿತ್ತು. ವೈರಲ್ ವೀಡಿಯೊದಲ್ಲಿ ವಧು-ವರರು ವೇದಿಕೆಯ ಮೇಲೆ ನಿಂತಿರುವುದು ಕಂಡುಬರುತ್ತದೆ. ನಂತರ ಬುರ್ಖಾ ಧರಿಸಿದವರೊಬ್ಬರು ವೇದಿಕೆಯ ಮೇಲೆ ಬಂದು ನೇರವಾಗಿ ವರನನ್ನು ಅಪ್ಪಿಕೊಳ್ಳಲು ಪ್ರಾರಂಭಿಸುತ್ತಾರೆ. ಇದನ್ನು ನೋಡಿ ವಧು ಶಾಕ್ ಆಗುತ್ತಾಳೆ. ಇನ್ನೇನು ಆಕೆ ಅಳುವುದೊಂದು ಬಾಕಿ. ಇತರರು ಬಂದು ಬುರ್ಖಾ ತೆಗೆಯುತ್ತಾರೆ. ಆಗ ಬುರ್ಖಾ ಧರಿಸಿರುವುದು ಹುಡುಗಿ ಇಲ್ಲ. ಮದುವೆಗೆ ಬಂದು ತಮಾಷೆ ಮಾಡುತ್ತಿದ್ದ ವರನ ಸ್ನೇಹಿತ ಎಂದು ಗೊತ್ತಾಗುತ್ತದೆ. ಸತ್ಯ ಬಹಿರಂಗವಾದ ನಂತರ ವರನ ಸ್ನೇಹಿತ ವಧುವಿಗೆ ಹೂಗುಚ್ಛವನ್ನು ನೀಡುತ್ತಾನೆ. ಇದನ್ನು ನೋಡಿ ವಧು ನಗುತ್ತಾಳೆ. ಈ ವಿಡಿಯೋ ಕೂಡ ಹೆಚ್ಚು ವೈರಲ್ ಆಗಿತ್ತು. ಪೋಸ್ಟ್ ಮಾಡಿದಾಗಿನಿಂದ, ಲಕ್ಷಾಂತರ ಬಳಕೆದಾರರು ವೀಕ್ಷಿಸಿದ್ದಲ್ಲದೆ, 88 ಸಾವಿರಕ್ಕೂ ಹೆಚ್ಚು ಬಳಕೆದಾರರು ಇಷ್ಟಪಟ್ಟಿದ್ದರು.

PREV
Read more Articles on
click me!

Recommended Stories

ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!
ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!