ಮಲಗಿದ್ದ ಕುದುರೆಗೆ ಈಕೆ ಎಲ್ಲರೆದುರೇ ಇದೇನು ಮಾಡಿದ್ಲು ನೋಡಿ! ಛಂಗನೆ ಎದ್ದು ಕುಣಿದಾಡಿದ ಪ್ರಾಣಿ

Published : Mar 28, 2026, 05:20 PM IST
Traditional Belief in Tanzania

ಸಾರಾಂಶ

ಟಾಂಜಾನಿಯಾದ ವಿಚಿತ್ರ ಸಂಪ್ರದಾಯವೊಂದರ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕುದುರೆಯೊಂದನ್ನು ಗುಣಪಡಿಸಲು ಕನ್ಯೆಯೊಬ್ಬಳು ಅದರ ಮೇಲೆ ಹಾರುತ್ತಾಳೆ. ಈ ಘಟನೆಯು ಪ್ರಾಣಿ ಚಿಕಿತ್ಸೆಯ ಕುರಿತಾದ ಮೂಢನಂಬಿಕೆ ಮತ್ತು ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ.

ಭಾರತದಲ್ಲಿ ಇರುವಷ್ಟು ಸಂಪ್ರದಾಯಗಳು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ ಗುಡ್ಡುಗಾಡು ಪ್ರದೇಶಗಳಲ್ಲಿ, ಆದಿವಾಸಿಗಳಲ್ಲಿ ಇರುವಷ್ಟು ಕುತೂಹಲ, ವಿಚಿತ್ರ ಸಂಪ್ರದಾಯಗಳು ಬೇರೆಯವರಲ್ಲಿ ಇರಲು ಸಾಧ್ಯವೇ ಇಲ್ಲ. ಇವರು ವಾಸಿಸುವ ದೇಶಗಳಲ್ಲೆಲ್ಲಾ ಚಿತ್ರ, ವಿಚಿತ್ರ ಕೆಲವೊಮ್ಮ ಅಸಭ್ಯ, ಅಶ್ಲೀಲ ಎಂದು ಬೆರೆಯವರಿಗೆ ಅನ್ನಿಸುವ ಸಂಪ್ರದಾಯಗಳೂ ಇವೆ. ಆದರೆ ಅವುಗಳನ್ನು ಅವರು ನೂರಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ವೈರಲ್​

ಇದೀಗ ಅಂಥದ್ದೇ ಒಂದು ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದೆ. ಇದು ಟಾಂಜಾನಿಯಾದಿಂದ ವೈರಲ್ ಆಗಿರೋ ವಿಡಿಯೋ. ಇದು ಅಲ್ಲಿಯ ಸಾಂಪ್ರದಾಯಿಕ ನಂಬಿಕೆಯಂತೆ. ಯಾವುದೇ ಪ್ರಾಣಿ ರೋಗಗ್ರಸ್ತವಾಗಿದ್ದರೆ, ಆ ಪ್ರಾಣಿಯನ್ನು ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಿಲ್ಲ. ಬದಲಿಗೆ ಅದನ್ನು ಮಲಗಿಸುತ್ತಾರೆ. ಯಾರಾದರೂ ಒಬ್ಬ ಕನ್ಯೆ ತನ್ನ ಡ್ರೆಸ್​ ಮೇಲೆ ಮಾಡಿ ಅದನ್ನು ದಾಟಬೇಕು. ಇಷ್ಟು ಮಾಡಿದರೆ ಆ ಪ್ರಾಣಿ ಆರೋಗ್ಯವಂತವಾಗುತ್ತದೆಯಂತೆ. ಈ ವೈರಲ್​ ವಿಡಿಯೋದಲ್ಲಿಯೂ ಅದೇ ಆಗಿರೋದು!

ಕುದುರೆ ಮೇಲೆ

ಇದರಲ್ಲಿ ಮಹಿಳೆಯೊಬ್ಬಳು ತೀವ್ರವಾಗಿ ಅಸ್ವಸ್ಥಗೊಂಡ ಕುದುರೆಯ ಮೇಲೆ ಮೂರು ಬಾರಿ ಹಾರಿರುವುದನ್ನು ತೋರಿಸಲಾಗಿದೆ. ಕೆಲವೇ ಕ್ಷಣಗಳ ನಂತರ, ಆ ಪ್ರಾಣಿ ಮತ್ತೆ ಚಲನೆಯನ್ನು ಮರಳಿ ಪಡೆದಂತೆ ಕಂಡುಬಂದಿದೆ, ಇದು ಆನ್‌ಲೈನ್‌ನಲ್ಲಿ ವ್ಯಾಪಕ ಪ್ರತಿಕ್ರಿಯೆಗಳನ್ನು ಉಂಟುಮಾಡಿದೆ. ಕನ್ಯೆಯಾಗಿದ್ದಳು ಗುಣಪಡಿಸುವ ಶಕ್ತಿಯನ್ನು ಹೊಂದಿದ್ದಾಳೆ ಎನ್ನುವುದು ಅವರ ನಂಬಿಕೆ. ಅದೇ ರೀತಿ ಇಲ್ಲಿ ಕೂಡ ಇನ್ನೂ ಕನ್ಯೆಯಾಗಿರುವಾಕೆ ಡ್ರೆಸ್​ ಮೇಲಕ್ಕೆ ಎತ್ತಿಕೊಂಡು ಕುದುರೆ ಮೇಲೆ ಅತ್ತ ಇತ್ತ ಹಾರುತ್ತಿದ್ದಂತೆಯೇ ಕುದುರೆ ಛಂಗನೆ ಎದ್ದು ಕುಣಿದಾಡಿದೆ. ಅಲ್ಲಿ ಇದ್ದವರು ಖುಷಿಯಿಂ ಕುಣಿದು ಕುಪ್ಪಳಿಸಿದ್ದಾರೆ. ಇದು ಆಕೆ ಕನ್ಯೆ ಎನ್ನುವುದನ್ನೂ ಸಾಬೀತು ಮಾಡಿದ್ದು, ಕುದುರೆಯೂ ಹುಷಾರಾಗಿದೆ.

ಮಿಶ್ರ ಪ್ರತಿಕ್ರಿಯೆ

ಆದರೆ ಇದರ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ರೀತಿಯಾಗಿ ಪ್ರಾಣಿಗಳನ್ನು ಹಿಂಸಿಸುವುದು ಸರಿಯಲ್ಲ. ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವುದನ್ನು ಬಿಟ್ಟು ಈ ರೀತಿ ಮೂಢ ನಂಬಿಕೆಗೆ ಬಲಿಯಾಗುವುದು ಸರಿಯಲ್ಲ ಎಂದು ಕೆಲವರು ಹೇಳಿದ್ದರೆ, ಮತ್ತೆ ಕೆಲವರು ಕುದುರೆ ಆರೋಗ್ಯವಂತವಾಗಿದೆಯಲ್ಲ, ಇನ್ನೇನು ಬೇಕು ಎಂದು ಕೇಳುತ್ತಿದ್ದಾರೆ.

 

 

 

PREV
Read more Articles on
click me!

Recommended Stories

ಮೊನಾಲಿಸಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಗುಡುಗಿದ ಸನೋಜ್ ಮಿಶ್ರಾ; ರುದ್ರಾಕ್ಷಿ ಹುಡುಗಿ ಕಥೆ ಏನಾಗ್ತಿದೆ?
Viral : ಪರೀಕ್ಷಾ ಕೊಠಡಿಯಲ್ಲೂ 'ಧುರಂಧರ್' ಹವಾ.. ವೈರಲ್ ಆಯ್ತು ಪ್ರಶ್ನೆ ಪತ್ರಿಕೆಯಲ್ಲಿ ಈ ಸಿನಿಮಾ ಮಾಡಿರೋ ಕಮಾಲ್!