25 ವರ್ಷದ ಆ ಯುವತಿಗೆ ದಯಾಮರಣದ ಹೊರತು ಬೇರೆ ದಾರಿಯೇ ಇರಲಿಲ್ಲ!

Published : Mar 27, 2026, 08:07 PM IST
euthanasia

ಸಾರಾಂಶ

ಸ್ಪೇನ್‌ನ 25 ವರ್ಷದ ಯುವತಿ ನೋಲಿಯಾ ಕ್ಯಾಸ್ಟಿಲ್ಲೋ ದಯಾಮರಣಕ್ಕೆ (Euthanasia) ತುತ್ತಾದರು. ತಂದೆ ಕಾನೂನು ಹೋರಾಟದ ಮೂಲಕ ಇದನ್ನು ವಿರೋಧಿಸಿದರೂ, ನ್ಯಾಯಾಲಯಗಳು ಆಕೆಯ ನಿರ್ಧಾರವನ್ನು ಎತ್ತಿಹಿಡಿದವು. ಏನಿದು ಈಕೆಯ ಕತೆ? 

ಇದು ಸ್ಪೇನ್‌ ದೇಶದ ಒಬ್ಬ ಯುವತಿಯ ಕತೆ. ದೀರ್ಘಕಾಲದ ಕಾನೂನು ಹೋರಾಟದ ಬಳಿಕ, 25 ವರ್ಷದ ಈ ಯುವತಿ ಇಚ್ಛಾಮರಣ (Euthanasia) ಆಯ್ಕೆ ಮಾಡಿಕೊಂಡಿದ್ದಾಳೆ. ಈ ಘಟನೆ ದೇಶದಲ್ಲೂ ಹೊರಗೂ ದೊಡ್ಡ ಚರ್ಚೆಗೆ ಕಾರಣವಾಗಿದೆ. ನೋಲಿಯಾ ಕ್ಯಾಸ್ಟಿಲ್ಲೋ ಎಂಬುದು ಈಕೆಯ ಹೆಸರು. ಹಲವು ವರ್ಷಗಳ ದೈಹಿಕ ನೋವು ಮತ್ತು ಮಾನಸಿಕ ಯಾತನೆಯಿಂದ ಬಳಲುತ್ತಿದ್ದ ನೋಲಿಯಾ ಈ ನಿರ್ಧಾರಕ್ಕೆ ಬಂದಿದ್ದಾರೆ. ಯಾಕೆ ಈ ಕಠಿಣ ನಿರ್ಧಾರ?

ಬಾರ್ಸಿಲೋನಾ ಮೂಲದ ನೋಲಿಯಾ ಅವರ ಜೀವನ 2022ರಲ್ಲಿ ನಡೆದ ಕ್ರೂರ ಗುಂಪು ದೌರ್ಜನ್ಯದಿಂದ ಸಂಪೂರ್ಣವಾಗಿ ಬದಲಾಗಿತ್ತು. ಮಾದಕ ವ್ಯಸನಿಗಳಿಗಾಗಿ ಇದ್ದ ಸರಕಾರಿ ಮೇಲ್ವಿಚಾರಣೆಯ ಕೇಂದ್ರದಲ್ಲಿ ಈಕೆ ಇದ್ದಳು. ಅಲ್ಲಿ ಮೂವರು ಪುರುಷರು ಆಕೆಯ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಿದರು. ಇದರಿಂದ ಬದುಕುಳಿದರೂ ಕ್ಯಾಸ್ಟಿಲ್ಲೊ ತೀವ್ರ ಮಾನಸಿಕ ಆಘಾತಕ್ಕೆ ತುತ್ತಾದರು. ಖಿನ್ನತೆ ಅವರನ್ನು ಆವರಿಸಿಕೊಂಡಿತು. ಬದುಕಿನಲ್ಲಿ

ಕೆಲವು ತಿಂಗಳ ಬಳಿಕ, ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದರು. ಆದರೆ ಅಲ್ಲೂ ಅವರು ಬದುಕುಳಿದರು. ಬೆನ್ನುಹುರಿಗೆ ಆದ ಭಾರೀ ಗಾಯಗಳಿಂದಾಗಿ ಆಕೆಗೆ ಸೊಂಟದಿಂದ ಕೆಳಗೆ ಶಾಶ್ವತ ಪಾರ್ಶ್ವವಾಯುವಿಗೆ (paralysis) ತುತ್ತಾದರು. ಆಗಿನಿಂದ ಅವರು ವೀಲ್‌ಚೇರ್‌ನಲ್ಲೇ ಬದುಕುತ್ತಿದ್ದಾರೆ. ನಿರಂತರ ದೈಹಿಕ ನೋವು. ಜೊತೆಗೆ ನಿದ್ರೆ ಬಾರದ ಸಮಸ್ಯೆ. ಆಹಾರ ಸೇವನೆ ಸರಿಯಾಗದ ಸಮಸ್ಯೆ, ತೆಗೆದುಕೊಂಡ ಆಹಾರ ನಿಲ್ಲುವುದಿಲ್ಲ. ನೂರಾರು ಮದ್ದು ಮಾತ್ರೆ ಔಷಧಗಳು. ಜೀವನದ ಮೇಲೆ ಆಸಕ್ತಿಯೇ ಇಲ್ಲವಾಯಿತು.

ಇಚ್ಛಾಮರಣಕ್ಕೆ ಅರ್ಜಿ

ಸ್ಪೇನ್‌ನಲ್ಲಿ 2021ರಲ್ಲಿ ಇಚ್ಛಾಮರಣ ಕಾನೂನುಬದ್ಧಗೊಂಡ ನಂತರ, ನೋಲಿಯಾ 2024ರಲ್ಲಿ ಮರಣಕ್ಕಾಗಿ ಅರ್ಜಿ ಸಲ್ಲಿಸಿದರು. ವೈದ್ಯರ ಸಮಿತಿ ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಪರಿಶೀಲಿಸಿ, ಅಂತಿಮವಾಗಿ ಅವರ ಅರ್ಜಿಗೆ ಅನುಮೋದನೆ ನೀಡಿತು. ನೋಲಿಯಾ ಅವರು ತಮ್ಮ ಕೊನೆಯ ಕ್ಷಣಗಳು ಹೇಗಿರಬೇಕು ಎಂಬ ಬಗ್ಗೆ ಕೂಡ ಮಾತನಾಡಿದ್ದಾರೆ. ತಮ್ಮ ಇಷ್ಟದ ಉಡುಪು ಮತ್ತು ಮೇಕಪ್‌ನಲ್ಲಿ ಶಾಂತಿಯುತವಾಗಿ ಬದುಕಿಗೆ ವಿದಾಯ ಹೇಳಲು ಬಯಸುತ್ತೇನೆ ಎಂದಿದ್ದಾರೆ.

ನೋಲಿಯಾ ಅವರ ತಂದೆ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ನೋಲಿಯಾಳ ಮಾನಸಿಕ ಸ್ಥಿತಿ ಇಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಸೂಕ್ತವಲ್ಲ ಎಂದು ವಾದಿಸಿ, ಕಾನೂನು ಕ್ರಮ ಕೈಗೊಂಡರು. ಧಾರ್ಮಿಕ ಸಂಘಟನೆಯ ಸಹಾಯದಿಂದ ಅವರು ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದರು. ಆದರೆ, ಸ್ಪೇನ್ ನ್ಯಾಯಾಲಯಗಳು ತಂದೆಯ ಎಲ್ಲಾ ವಾದಗಳನ್ನು ತಳ್ಳಿಹಾಕಿ, ನೋಲಿಯಾ ಅವರ ನಿರ್ಧಾರವನ್ನು ಮಾನ್ಯಗೊಳಿಸಿವೆ. ಕೊನೆಗೆ, ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯವೂ ತಂದೆಯ ಅಪೀಲನ್ನು ತಿರಸ್ಕರಿಸಿತು. ಇದರಿಂದ ಇಚ್ಛಾಮರಣಕ್ಕೆ ಎಲ್ಲಾ ಕಾನೂನು ಅಡೆತಡೆಗಳು ದೂರವಾದವು.

ಇದಕ್ಕೆ ವಿರುದ್ಧವಾಗಿ ನೋಲಿಯಾ ಅವರ ತಾಯಿ ವಿಭಿನ್ನ ನಿಲುವು ತಾಳಿದ್ದು, ಇಚ್ಛಾಮರಣವನ್ನು ಒಪ್ಪದಿದ್ದರೂ, ತನ್ನ ಮಗಳೊಂದಿಗೆ ಕೊನೆಯ ಕ್ಷಣದವರೆಗೂ ಇರುತ್ತೇನೆ ಎಂದು ಹೇಳಿದರು. ಕೊನೆಗೂ ನೋಲಿಯಾ ಕ್ಯಾಸ್ಟಿಲ್ಲೋ ಅವರು ಗುರುವಾರ ಆರೈಕೆ ಕೇಂದ್ರದಲ್ಲಿ ಇಚ್ಛಾಮರಣಕ್ಕೆ ಒಳಗಾದರು. ತಮ್ಮ ನೋವಿನಿಂದ ಮುಕ್ತರಾಗಲು ಮತ್ತು ಶಾಂತಿಯನ್ನು ಕಂಡುಕೊಳ್ಳಲು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಅಂತಿಮ ಸಂದೇಶ ನೀಡಿದರು. ಈ ಘಟನೆ, ಇಚ್ಛಾಮರಣದ ಬಗ್ಗೆ ಜಗತ್ತಿನಾದ್ಯಂತ ಮತ್ತೆ ಚರ್ಚೆಗೆ ಕಾರಣವಾಗಿದೆ. ವ್ಯಕ್ತಿಯ ಸ್ವತಂತ್ರ ಆಯ್ಕೆ ಮತ್ತು ನೈತಿಕ ಪ್ರಶ್ನೆಗಳ ನಡುವಿನ ಸಂಘರ್ಷವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.

PREV
Read more Articles on
click me!

Recommended Stories

ಪಾನಿಪುರಿ ವ್ಯಾಪಾರಿಯ ಸಂಪಾದನೆ ದಿನಕ್ಕೆ 3,000, ತಿಂಗಳಿಗೆ 90,000! ವರ್ಷದ ಲೆಕ್ಕ ಹಾಕಿದ ನೆಟ್ಟಿಗರು ಶಾಕ್!
ಬ್ಯೂಟಿ ಸ್ಪರ್ಧೆಯಲ್ಲಿ ಹೂನಗೆ ಬೀರಿದ ಸುಂದ್ರಿಯ ಹಲ್ಲು ಸೆಟ್ಟೇ ಬಿದ್ದೋಯ್ತು! ವಿಡಿಯೋ ವೈರಲ್​ ಆಗೋಯ್ತು