ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE, ಅಷ್ಟಕ್ಕೂ ಆಕೆ ಮಾಡಿದ್ದಾದರೂ ಏನು?

Published : Jun 16, 2026, 12:08 PM IST
Viral train video

ಸಾರಾಂಶ

Viral train video: ಅರ್ಧರಾತ್ರಿ ಸಮಯ, ಹೊರಗೆ ಧೋ ಎಂದು ಸುರಿಯುತ್ತಿರುವ ಬಿರುಸಿನ ಮಳೆ.. ಇಂತಹ ಸಂದರ್ಭದಲ್ಲಿ ಆ ಒಂದೇ ಕಾರಣಕ್ಕೆ ಒಬ್ಬಂಟಿ ಯುವತಿಯನ್ನು ರೈಲ್ವೆ ಟಿಸಿ (TC) ನಿರ್ದಾಕ್ಷಿಣ್ಯವಾಗಿ ಕೆಳಗಿಳಿಸಿದ ಘಟನೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ವೈರಲ್ ವಿಡಿಯೋದ ಅಸಲಿ ಕಥೆ ಏನು? ನೆಟ್ಟಿಗರು ಈ ಬಗ್ಗೆ ಏನಂತಿದ್ದಾರೆ? ಇಲ್ಲಿದೆ ಸಂಪೂರ್ಣ ವಿವರ.

ಮೈ ನಡುಗಿಸುವ ತಡರಾತ್ರಿ.. ಜೊತೆಗೆ ಹೊರಗೆ ಧೋ ಎಂದು ಸುರಿಯುವ ಬಿರುಸಿನ ಮಳೆ. ಇಂತಹ ಪರಿಸ್ಥಿತಿಯಲ್ಲಿ ಒಬ್ಬಂಟಿ ಯುವತಿಯೊಬ್ಬಳು ರಸ್ತೆಯಲ್ಲೋ ಅಥವಾ ಸಾರ್ವಜನಿಕ ಸ್ಥಳದಲ್ಲೋ ಸಿಲುಕಿಕೊಂಡರೆ ಸಾಮಾನ್ಯವಾಗಿ ಯಾರಾದರೂ ಏನು ಮಾಡುತ್ತಾರೆ? ಆಕೆಯನ್ನು ಸುರಕ್ಷಿತವಾಗಿ ಅವರ ಮನೆಗೆ ತಲುಪಿಸಲು ಆಸರೆಯಾಗುತ್ತಾರೆ ಅಥವಾ ಮಾನವೀಯತೆಯ ದೃಷ್ಟಿಯಿಂದ ತಮಗೆ ಸಾಧ್ಯವಾದ ಸಹಾಯವನ್ನು ಮಾಡಲು ಧಾವಿಸುತ್ತಾರೆ. ಆದರೆ, ರೈಲ್ವೆ ಇಲಾಖೆಯ TTE ಇದಕ್ಕೆ ತದ್ವಿರುದ್ಧವಾಗಿ, ಅತ್ಯಂತ ಕ್ರೂರವಾಗಿ ನಡೆದುಕೊಂಡ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಅವರು ಹಾಗೆ ನಡೆದುಕೊಳ್ಳಲು ಕಾರಣವೇನು? ಜಿಟಿಜಿಟಿ ಮಳೆಯ ನಡುವೆಯೂ ತಡರಾತ್ರಿ ಯುವತಿಯೊಬ್ಬಳನ್ನು ರೈಲಿನಿಂದ ಕೆಳಗಿಳಿಸಿದ್ದೇಕೆ? ಎಂಬ ಮಾಹಿತಿ ಇಲ್ಲಿದೆ ನೋಡಿ..

ಅಸಲಿಗೆ ರೈಲಿನಲ್ಲಿ ನಡೆದಿದ್ದೇನು?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೇವಲ 13 ಸೆಕೆಂಡುಗಳ ಈ ಚಿಕ್ಕ ವಿಡಿಯೋದಲ್ಲಿ, ಚಲಿಸುವ ರೈಲಿನ ಬಾಗಿಲಿನ ಬಳಿ ಯುವತಿಯೊಬ್ಬಳು ಭಯದಿಂದ ನಿಂತಿರುವುದು ಮತ್ತು ರೈಲ್ವೆ ಟಿಕೆಟ್ ಕಲೆಕ್ಟರ್ (ಟಿಟಿಇ/ಟಿಸಿ) ಆಕೆಯ ಮುಂಭಾಗದಲ್ಲಿ ನಿಂತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ರೈಲಿನಲ್ಲಿ ಪ್ರಯಾಣಿಕರ ಟಿಕೆಟ್ ನಿಯಮಿತವಾಗಿ ಪರಿಶೀಲನೆ ನಡೆಸುತ್ತಿದ್ದಾಗ, ಈ ಯುವತಿಯು ಸೂಕ್ತವಾದ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವುದು ಟಿಸಿಯ ಗಮನಕ್ಕೆ ಬಂದಿದೆ. ನಿಯಮಗಳ ಪ್ರಕಾರ ಆಕೆಗೆ ಮುಂದಿನ ನಿಲ್ದಾಣದಲ್ಲಿ ದಂಡ ವಿಧಿಸಬೇಕಿತ್ತಾದರೂ, ಟಿಸಿ ಮಾತ್ರ ಅತ್ಯಂತ ಕಟ್ಟುನಿಟ್ಟಾಗಿ ನಡೆದುಕೊಂಡಿದ್ದಾರೆ. ರೈಲು ಮುಂದಿನ ನಿಲ್ದಾಣಕ್ಕೆ ತಲುಪಿ ನಿಲ್ಲುತ್ತಿದ್ದಂತೆ, ಆಕೆಯನ್ನು ತಕ್ಷಣವೇ ರೈಲಿನಿಂದ ಕೆಳಗೆ ಇಳಿದು ಹೋಗುವಂತೆ ಕಠಿಣವಾಗಿ ಆದೇಶಿಸಿದ್ದಾರೆ.

ಆರಂಭದಲ್ಲಿ ಆ ಯುವತಿ ಅಧಿಕಾರಿ ಹೇಳಿದ ಮಾತಿಗೆ ಹೆದರಿ ರೈಲಿನಿಂದ ಕೆಳಗೆ ಇಳಿದಿದ್ದಾಳೆ. ಆದರೆ ಹೊರಗೆ ಭಾರಿ ಮಳೆ ಸುರಿಯುತ್ತಿರುವುದನ್ನು ಮತ್ತು ತಡರಾತ್ರಿಯ ಕತ್ತಲೆಯನ್ನು ಕಂಡು ಭಯಗೊಂಡು, ಆಶ್ರಯಕ್ಕಾಗಿ ಆಕೆ ಮತ್ತೆ ರೈಲು ಹತ್ತಲು ಪ್ರಯತ್ನಿಸಿದ್ದಾಳೆ. ಆದರೆ ಅಲ್ಲಿಯೇ ಬಾಗಿಲಿನಲ್ಲಿ ಕಾವಲು ನಿಂತಿದ್ದ ಟಿಸಿ ಮಾತ್ರ ಆಕೆಯ ಮೇಲೆ ಸ್ವಲ್ವವೂ ದಯೆ ತೋರದೆ, ಮತ್ತೊಮ್ಮೆ ರೈಲು ಹತ್ತದಂತೆ ತಡೆದಿದ್ದಾರೆ. ಬೇರೆ ಯಾವುದೇ ದಾರಿಯಿಲ್ಲದೆ ಆ ಯುವತಿ ಮಳೆಯಲ್ಲೇ ನೆನೆಯುತ್ತಾ ತನ್ನ ಬ್ಯಾಗ್ ಹಾಗೂ ಸಾಮಗ್ರಿಗಳನ್ನು ಹಿಡಿದುಕೊಂಡು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿಯೇ ಇಳಿದು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.

ನೆಟ್ಟಿಗರಿಂದ ಪರ-ವಿರೋಧ ಚರ್ಚೆ

ಅಲ್ಲೇ ಪಕ್ಕದಲ್ಲಿದ್ದ ಕೆಲವು ಸಹ-ಪ್ರಯಾಣಿಕರು ಈ ಇಡೀ ದೃಶ್ಯವನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಟಿಸಿಯ ವರ್ತನೆಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು, "ನಿಯಮದ ಪ್ರಕಾರ ನಡೆದುಕೊಳ್ಳುವುದು ಟಿಸಿಯ ಕರ್ತವ್ಯ. ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಕಾನೂನುಬಾಹಿರ, ಹಾಗಾಗಿ ಅವರು ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ" ಎಂದು ಟಿಟಿಇ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಆದರೆ ಬಹುತೇಕ ಸಾರ್ವಜನಿಕರು ಈ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ಹೊರಗಿನ ವಾತಾವರಣ ಮತ್ತು ತಡರಾತ್ರಿಯ ಸಮಯವನ್ನು ಪರಿಗಣಿಸಿ, ಒಬ್ಬಂಟಿ ಮಹಿಳೆಯ ಸುರಕ್ಷತೆಯ ದೃಷ್ಟಿಯಿಂದ ಟಿಸಿ ಕೊಂಚ ಮಾನವೀಯತೆ ತೋರಿಸಬೇಕಿತ್ತು. ನಿಯಮಗಳಿಗಿಂತ ಮನುಷ್ಯನ ಜೀವ ಮತ್ತು ಸುರಕ್ಷತೆ ಮುಖ್ಯ" ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯಕ್ಕೆ ಈ ಘಟನೆ ಭಾರತದ ಯಾವ ಭಾಗದಲ್ಲಿ ನಡೆದಿದೆ ಮತ್ತು ಈ ರೈಲು ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಿತ್ತು ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲದಿದ್ದರೂ, ಈ ವಿಡಿಯೋ ಮಾತ್ರ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ.

PREV
Read more Articles on
click me!

Recommended Stories

3 ದಶಕದಲ್ಲಿಯೇ ಕಂಡರಿಯದ ನೇರಳೆ ಹಣ್ಣಿನ ರಾಶಿ: ಭೀಕರ ಬರಗಾಲದ ಮುನ್ಸೂಚನೆ? ವಿಜ್ಞಾನಿಗಳು ಹೇಳೋದೇನು
ಚೆಂದದ ಪೆನ್​ ಸಿಕ್ಕಿತೆಂದು ಎತ್ತಿಕೊಂಡ್ರೆ ಹುಷಾರ್​; ಬ್ಲಾಸ್ಟ್​ ಆಗಿ ನಿಮ್ಮ ಕಥೆ ಫಿನಿಷ್- ಏನಿದು​ ವೈರಲ್​ ಸುದ್ದಿ