India Tour: ಭಾರತದ ಪ್ರಸಿದ್ಧ ಪ್ರವಾಸಿ ತಾಣವಾದ ಕಸೋಲ್‌ನಲ್ಲಿ ಪ್ರವಾಸಿಗರ ಮೈ ಜುಮ್ಮೆನಿಸುವ ಹುಚ್ಚಾಟ!

Published : Jun 14, 2026, 07:44 PM IST
Himachal Pradesh viral video

ಸಾರಾಂಶ

ಹಿಮಾಚಲ ಪ್ರದೇಶದ ಕಸೋಲ್‌ನಲ್ಲಿ, ಚಲಿಸುತ್ತಿದ್ದ ಕಾರಿನಲ್ಲಿ ಪ್ರವಾಸಿಗರ ಗುಂಪೊಂದು ಅಪಾಯಕಾರಿ ಸ್ಟಂಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹುಡುಗರ ಬೇಜವಾಬ್ದಾರಿ ವರ್ತನೆಗೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣ ಕಸೋಲ್‌ನಿಂದ ಒಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಚಲಿಸುತ್ತಿದ್ದ ಕಾರಿನಲ್ಲಿ ಪ್ರವಾಸಿಗರ ಗುಂಪೊಂದು ತುಂಬಾನೇ ಡೇಂಜರಸ್ ಆಗಿ ವರ್ತಿಸುತ್ತಿರುವುದನ್ನು 21 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ ನೋಡಬಹುದು. ಕಾರಿನ ಒಳಗೆ ಮತ್ತು ಹೊರಗೆ ಯುವಕರು ಅರ್ಧಬೆತ್ತಲಾಗಿ ಪ್ರಯಾಣಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತೆ. ಇವರಲ್ಲಿ ಕೆಲವರು ಕಾರಿನ ಡೋರ್ ಮತ್ತು ಸನ್‌ರೂಫ್‌ನಿಂದ ಹೊರಗೆ ನೇತಾಡುತ್ತಿದ್ದಾರೆ. ಅಷ್ಟೇ ಅಲ್ಲ, ಇಬ್ಬರು ಯುವಕರು ಓಡುತ್ತಿರುವ ಕಾರಿನ ಮೇಲೆ ಹತ್ತಿ ನಿಂತು ಡ್ಯಾನ್ಸ್ ಮಾಡುತ್ತಿರುವುದು ಕೂಡ ದೃಶ್ಯದಲ್ಲಿದೆ.

ಕಾರು ಮುಂದೆ ಹೋಗುತ್ತಿದ್ದಂತೆ, ಒಬ್ಬ ಯುವಕ ಸೈಡ್ ಡೋರ್‌ನ ಮೇಲೆ ಕುಳಿತು ಭಾಗಶಃ ಹೊರಗೆ ಚಾಚಿಕೊಂಡಿರುವುದನ್ನೂ ನೋಡಬಹುದು. ತಾವು ಮಾಡುತ್ತಿರುವ ಕೆಲಸ ಎಷ್ಟು ಅಪಾಯಕಾರಿ ಅನ್ನೋ ಅರಿವೇ ಇಲ್ಲದೆ, ಇವರು ವಿಡಿಯೋ ಕೂಡ ಮಾಡುತ್ತಿದ್ದರು. 'ಸುತ್ತಮುತ್ತ ಬೇರೆ ಪ್ರವಾಸಿಗರಿದ್ದಾರೆ, ಸ್ಥಳೀಯ ಮಹಿಳೆಯರು ಓಡಾಡುತ್ತಿದ್ದಾರೆ. ಇಂಥಾ ವರ್ತನೆಯನ್ನು ಒಪ್ಪಿಕೊಳ್ಳೋಕೆ ಆಗಲ್ಲ. ಇಂತಹ ಕೆಲವರಿಂದ ಇಡೀ ರಾಜ್ಯದ ಹೆಸರು ಹಾಳಾಗುತ್ತೆ' ಎಂಬ ಕ್ಯಾಪ್ಷನ್‌ನೊಂದಿಗೆ ಈ ವಿಡಿಯೋವನ್ನು 'ಎಕ್ಸ್'ನಲ್ಲಿ ಪೋಸ್ಟ್ ಮಾಡಲಾಗಿದೆ.

ಸಾರ್ವಜನಿಕ ಜೀವಕ್ಕೆ ಅಪಾಯಕಾರಿ

ಕಸೋಲ್‌ನಂತಹ ಗಿರಿಧಾಮಗಳ ಕಿರಿದಾದ ಮತ್ತು ಅಂಕುಡೊಂಕಾದ ರಸ್ತೆಗಳಲ್ಲಿ ಇಂತಹ ಸ್ಟಂಟ್‌ಗಳನ್ನು ಮಾಡುವುದು ಅತ್ಯಂತ ಅಪಾಯಕಾರಿ ಮತ್ತು ಬೇಜವಾಬ್ದಾರಿತನದ ವರ್ತನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತೀವ್ರವಾಗಿ ಟೀಕಿಸಿದ್ದಾರೆ. ಆನ್‌ಲೈನ್‌ನಲ್ಲಿ ಗಮನ ಸೆಳೆಯಲು ಪ್ರವಾಸಿಗರು ಮಾಡುವ ಇಂತಹ ಹುಚ್ಚಾಟಗಳ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಇದು ಸ್ಟಂಟ್ ಮಾಡುವವರಿಗೆ ಮಾತ್ರವಲ್ಲ, ಆ ರಸ್ತೆಯಲ್ಲಿ ಓಡಾಡುವ ಇತರ ಪ್ರಯಾಣಿಕರ ಜೀವಕ್ಕೂ ಅಪಾಯಕಾರಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

PREV
Read more Articles on
click me!

Recommended Stories

ಭಾರತದ ಈ ಸೆಲೆಬ್ರಿಟಿ ಬಳಿ 99 ಮನೆಗಳಿವೆ; ಆದರೆ ಈ VIP ವಾಸಿಸೋದು ಯಾವ ಮನೆಯಲ್ಲಿ ಗೊತ್ತಾ?
ಭಾರತದಂತೆ ಅಮೆರಿಕಾದಲ್ಲಿ LPG ಸಿಲಿಂಡರ್ ಬಳಸಲ್ಲ! ಹಾಗಾದ್ರೆ ಅಡುಗೆ ಮಾಡೋದು ಹೇಗೆ?