ನೇಪಾಳದ ಗುಡ್ಡಗಾಡು ಪ್ರದೇಶದಲ್ಲಿ ಸೆರೆಹಿಡಿಯಲಾದ ಪುಟ್ಟ ಮಕ್ಕಳ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನಗೆಲ್ಲುತ್ತಿದೆ. ಮುಖ ತೋರಿಸದೆಯೇ ತಮ್ಮ ಮುಗ್ಧತೆಯಿಂದ ಜಗತ್ತಿನ ಗಮನ ಸೆಳೆಯುವುದು ಹೇಗೆಂಬುದಕ್ಕೆ ಈ ಪುಟಾಣಿಗಳೇ ಸಾಕ್ಷಿ.
ಮಳೆಯಿಂದ ಕೂಡಿದ ಗುಡ್ಡದ ದಾರಿಯಲ್ಲಿ ಮಕ್ಕಳ ಮೆರವಣಿಗೆಯಂತೆ ಈ ದೃಶ್ಯ ಕಂಡುಬರುತ್ತದೆ. ನೇಪಾಳದ ಸುಂದರ ಬೆಟ್ಟಗಳ ನಡುವೆ ನೀರು ತುಂಬಿದ ರಸ್ತೆಯಲ್ಲಿ ಈ ಮಕ್ಕಳು ಸಾಗುತ್ತಿರುವ ರೀತಿ ನಿಜಕ್ಕೂ ಅದ್ಭುತವಾಗಿದೆ. ವಿಡಿಯೋದಲ್ಲಿ ಮಕ್ಕಳು ಗುಲಾಬಿ, ಹಳದಿ ಮತ್ತು ಹಸಿರು ಬಣ್ಣದ ರೇನ್‌ಕೋಟ್‌ಗಳನ್ನು ಧರಿಸಿದ್ದಾರೆ. ದೂರದಿಂದ ನೋಡಲು ಇವರು ಪುಟಾಣಿ 'ಟೆಡ್ಡಿ ಬೇರ್'ಗಳಂತೆ (Teddy Bears) ಕಾಣುತ್ತಿದ್ದಾರೆ.
ಇದನ್ನೂ ಓದಿ: ಅದೃಷ್ಟ ಅಂದ್ರೆ ಇದೇ! ನಿದ್ದೆ ಬರ್ತಿಲ್ಲ ಎಂದು ಟೈಮ್‌ಪಾಸ್‌ಗಾಗಿ ಗೇಮ್ ಆಡಿದ ಮಹಿಳೆ ಈಗ ಕೋಟ್ಯಧಿಪತಿ
ಮಳೆಯಿಂದಾಗಿ ರಸ್ತೆ ಜಾರುವಂತಿದ್ದರೂ, ಈ ಮಕ್ಕಳು ತೋರುತ್ತಿರುವ ಸಂಯಮ ಮತ್ತು ಜಾಗರೂಕತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ವಿಡಿಯೋದ ಅತ್ಯಂತ ಆಕರ್ಷಕ ಭಾಗವೆಂದರೆ ಮಕ್ಕಳ ಏಕಾಗ್ರತೆ. ಗುಡ್ಡದ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಎಲ್ಲಿ ಜಾರಿ ಬೀಳುತ್ತೇವೆಯೋ ಎಂಬ ಭಯ ಇವರಲ್ಲಿ ಕಾಣಿಸುತ್ತದೆ. ಅದಕ್ಕಾಗಿಯೇ ಮಕ್ಕಳು ಒಬ್ಬರ ಕೈಯನ್ನು ಮತ್ತೊಬ್ಬರು ಬಹಳ ಬಲವಾಗಿ ಹಿಡಿದುಕೊಂಡಿದ್ದಾರೆ. ಯಾರೂ ಕೈ ಬಿಡದಂತೆ ಸಾಲಾಗಿ ಸಾಗುತ್ತಿರುವ ಇವರ ಶಿಸ್ತು ನೋಡಲು ಕಣ್ಣಿಗೆ ಹಬ್ಬದಂತಿದೆ.
ವಿಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಹಿಂದಿನಿಂದ "ಅರೇ ಹೋ ಸಾಥಿಯೋ" (ಓ ಗೆಳೆಯರೇ) ಎಂದು ಎಷ್ಟು ಬಾರಿ ಕೂಗಿ ಕರೆದರೂ, ಈ ಮಕ್ಕಳು ಮಾತ್ರ ಅಪ್ಪಿತಪ್ಪಿಯೂ ಹಿಂದಿರುಗಿ ನೋಡುವುದಿಲ್ಲ. ಅವರು ತಮ್ಮ ದಾರಿಯ ಮೇಲೆ ಮಾತ್ರ ಗಮನ ಹರಿಸಿದ್ದಾರೆ. ಈ ಮುಗ್ಧತೆಯೇ ವಿಡಿಯೋದ ಅಸಲಿ ಜೀವಾಳ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೆಯಾದ ಕ್ಷಣದಿಂದ ಲಕ್ಷಾಂತರ ಲೈಕ್ಸ್ ಮತ್ತು ಕಾಮೆಂಟ್‌ಗಳು ಹರಿದು ಬರುತ್ತಿವೆ. "ಮುಖ ಕಾಣದಿದ್ದರೂ ಇವರ ಕ್ಯೂಟ್‌ನೆಸ್ ಮಿತಿ ಮೀರಿದೆ" ಎಂದು ಬಳಕೆದಾರರು ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಇವರ ಬಣ್ಣದ ರೇನ್‌ಕೋಟ್‌ಗಳನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಮಕ್ಕಳಲ್ಲಿರುವ ಆ ಪರಸ್ಪರ ನಂಬಿಕೆ ಮತ್ತು ಒಬ್ಬರಿಗೊಬ್ಬರು ಸಾಥ್ ನೀಡುವ ಗುಣವನ್ನು ಕೊಂಡಾಡುತ್ತಿದ್ದಾರೆ.
ಇದನ್ನೂ ಓದಿ: ರಜೆಯ ದಿನ ಕಚೇರಿಗೆ ಬಾ ಎಂದ ಮ್ಯಾನೇಜರ್.. ಪಂಚ್ ಡೈಲಾಗ್ ಹೊಡೆದ ಮಹಿಳಾ ಉದ್ಯೋಗಿಯ ವಿಡಿಯೋ ವೈರಲ್
ಕಷ್ಟದ ಹಾದಿಯಲ್ಲೂ ಎತ್ತಲೂ ಗಮನ ಹರಿಸದೆ, ಜೊತೆಗಿರುವವರ ಕೈ ಹಿಡಿದು ಮುನ್ನಡೆದರೆ ಗುರಿ ತಲುಪುವುದು ಸುಲಭ ಎಂಬ ಜೀವನದ ದೊಡ್ಡ ಪಾಠವನ್ನು ಈ ಪುಟ್ಟ ಮಕ್ಕಳು ಮಾತಿಲ್ಲದೆಯೇ ಕಲಿಸಿದ್ದಾರೆ. ಮಳೆ ಹನಿಗಳ ನಡುವೆ ಸಾಗುವ ಈ 'ಬಣ್ಣದ ಟೆಡ್ಡಿ ಬೇರ್'ಗಳ ನಡಿಗೆ ಸದ್ಯ ಇಂಟರ್ನೆಟ್ ಲೋಕದ 'ಕ್ಯೂಟೆಸ್ಟ್' ವಿಡಿಯೋ ಆಗಿ ಹೊರಹೊಮ್ಮಿದೆ.
ಇಲ್ಲಿದೆ ನೋಡಿ ವಿಡಿಯೋ