
ಲಾಹೋರ್: ಸಾಮಾನ್ಯವಾಗಿ ಬೆಳಗಿನ ಜಾವ 3 ಗಂಟೆ ಅಂದರೆ ಇಡೀ ಜಗತ್ತೇ ಗೊರಕೆ ಹೊಡೆಯುತ್ತಾ ಮಲಗಿರುತ್ತದೆ. ಆದರೆ ನೆರೆಯ ರಾಷ್ಟ್ರ ಪಾಕಿಸ್ತಾನದ ಲಾಹೋರ್‌ನಲ್ಲಿ ಮಾತ್ರ ಕಥೆಯೇ ಬೇರೆ! ಅಲ್ಲಿನ ಜನರು ನಿದ್ದೆ ಬಿಟ್ಟು, ರಸ್ತೆಯಲ್ಲಿ ಸರತಿ ಸಾಲು ನಿಂತು ಮೈಕೈ ಜಜ್ಜಿಸಿಕೊಂಡು ಲಸ್ಸಿ ಕುಡಿಯಲು ಮುಗಿಬೀಳುತ್ತಿದ್ದಾರೆ. ಈ ವಿಚಿತ್ರ 'ಲಸ್ಸಿ ಪುರಾಣ'ದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗ್ತಿದೆ.
ಲಾಹೋರ್‌ನ ಪ್ರಸಿದ್ಧ 'ಜೆಡ್ಡಾ ಲಸ್ಸಿ' ಅಂಗಡಿ ಮುಂದೆ ಈ ದೃಶ್ಯ ಕಂಡುಬಂದಿದೆ. ವಿಡಿಯೋ ಮಾಡಿರುವ ವ್ಯಕ್ತಿ 'ಇದು ಬೆಳಗಿನ ಜಾವ 3 ಗಂಟೆ' ಎಂದು ಪದೇ ಪದೇ ಹೇಳುತ್ತಿದ್ದರೂ, ಅಲ್ಲಿನ ಜನಜಂಗುಳಿ ನೋಡಿದರೆ ಯಾವುದೋ ಜಾತ್ರೆ ನಡೆದ ಹಾಗಿದೆ. ನಿದ್ದೆ ಮಾಡುವುದು ಬಿಟ್ಟು ಅಷ್ಟೊತ್ತಲ್ಲಿ ಲಸ್ಸಿಗಾಗಿ ಕಾಯುತ್ತಾರೆಂದರೆ ಎಂಥ ವಿಚಿತ್ರ ಜನರು ಇದ್ದಾರಲ್ಲ ಅಂತಾ ಅನಿಸದೆ ಇರದು. ಅಲ್ಲಿ ಸುಮ್ಮನೆ ಹೋಗಿ ದುಡ್ಡು ಕೊಟ್ಟರೆ ಲಸ್ಸಿ ಸಿಗೋಲ್ಲ. ಮೊದಲು ಟೋಕನ್ ಪಡೆಯಬೇಕು, ಆಮೇಲೆ ನೂಕುನುಗ್ಗಲಿನಲ್ಲಿ ನುಗ್ಗಿ ಯುದ್ಧ ಗೆದ್ದಂತೆ ಲಸ್ಸಿ ಗ್ಲಾಸ್ ಹಿಡ್ಕೊಂಡೇ ಹೊರಬರಬೇಕು. ಲಸ್ಸಿ ಕುಡಿಯುವ ಆಸೆಯೋ ಅಥವಾ ಒಬ್ಬರನ್ನೊಬ್ಬರು ತಳ್ಳಾಡುವ ಮಜವೋ ಗೊತ್ತಿಲ್ಲ, ಒಟ್ಟಿನಲ್ಲಿ ಅಲ್ಲಿ ಮಾತ್ರ ಫುಲ್ ರಶ್!
ಈ ವಿಡಿಯೋ ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರು ಕಾಲೆಳೆಯಲು ಶುರು ಮಾಡಿದ್ದಾರೆ. ಕೆಲವರು ಇದನ್ನು 'ಲಸ್ಸಿನ ಮೇಲಿನ ಪ್ರೀತಿ' ಎಂದರೆ, ಇನ್ನು ಕೆಲವರು 'ಇವರಿಗೆ ಬೇರೆ ಕೆಲಸವೇ ಇಲ್ಲವೇ?' ಎಂದು ಪ್ರಶ್ನಿಸುತ್ತಿದ್ದಾರೆ.
ಒಬ್ಬ ಬಳಕೆದಾರರಂತೂ, 'ಪಾಕಿಸ್ತಾನಿಗಳು ಅವಮಾನ ಮಾಡಿಸಿಕೊಳ್ಳುವುದಾಗಿ ಪ್ರಮಾಣ ಮಾಡಿದಂತಿದೆ' ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, 'ಬೆಳಗಿನ ಜಾವ 3 ಗಂಟೆಗೆ ಲಸ್ಸಿಗಾಗಿ ಸಾಲಿನಲ್ಲಿ ನಿಲ್ಲುವಷ್ಟು ಹುಚ್ಚುತನ ಬೇಕಾ? ಮನೆಯಲ್ಲೇ ಮಾಡಿಕೊಂಡು ಕುಡಿಯಬಾರದೇ?' ಎಂದು ಕ್ಲಾಸ್ ತಗೊಂಡಿದ್ದಾರೆ.
ಇನ್ನು ಲಾಹೋರ್ ನಿವಾಸಿಗಳ ಪರವಾಗಿ ಬ್ಯಾಟ್ ಬೀಸಿದ ಒಬ್ಬರು, 'ಲ್ಲಿ ಸಾಲಿನಲ್ಲಿ ನಿಂತಿರೋರಲ್ಲಿ 50 ಪರ್ಸೆಂಟ್ ಜನ ಹೊರಗಿನವರು, ಪಾಪ ಲಾಹೋರ್‌ನವರನ್ನು ಸುಮ್ಮನೆ ಬೈಬೇಡಿ'ಎಂದು ಸಬೂಬು ನೀಡಿದ್ದಾರೆ. ಮತ್ತೊಬ್ಬ ನೆಟ್ಟಿಗನಂತೂ ನೇರವಾಗಿ, 'ಕಿಸ್ತಾನದಲ್ಲಿ ಹುಚ್ಚರಿಗೇನು ಕೊರತೆಯಿಲ್ಲ' ಕಮೆಂಟ್ ಮಾಡಿ ಚರ್ಚೆಗೆ ಕಿಡಿ ಹಚ್ಚಿದ್ದಾರೆ.
ಒಟ್ಟಿನಲ್ಲಿ, ದೇಶದಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ ಲಾಹೋರ್ ಮಂದಿ ಮಾತ್ರ ನಡುರಾತ್ರಿಯಲ್ಲೂ 'ಲಸ್ಸಿ' ಹೀರುತ್ತಾ ಮಜಾ ಮಾಡುತ್ತಿರುವುದು ಈಗ ಇಂಟರ್ನೆಟ್‌ನ ಹಾಟ್ ಟಾಪಿಕ್!