ವೇದಿಕೆ ಮೇಲೆಯೇ ಪಾಕಿಸ್ತಾನಿ ಎದುರಾಳಿಗೆ ತಪರಾಕಿಗೆ ಕೊಟ್ಟ ಭಾರತದ ಬಾಕ್ಸರ್, ವೈರಲ್ ವಿಡಿಯೋ

Published : Nov 05, 2026, 08:18 PM IST
Boxing Adds New Chapter To India-Pak Rivalry

ಸಾರಾಂಶ

ದುಬೈನಲ್ಲಿ ನಡೆದ MUKA ಬಾಕ್ಸಿಂಗ್‌ನ ಪ್ರೀ-ಫೈಟ್ ವೇಳೆ ಭಾರತೀಯ ಬಾಕ್ಸರ್ ಮನೀಶ್ ಶರ್ಮಾ ಪಾಕಿಸ್ತಾನಿ ಬಾಕ್ಸರ್ ರಹೀಮ್ ಪರ್ದೇಸಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದೆ.

ನವದೆಹಲಿ: ಭಾರತದ ಬಾಕ್ಸರ್‍‌ ಪಾಕಿಸ್ತಾನದ ಬಾಕ್ಸರ್‍‌ಗೆ ಕಪಾಳಮೋಕ್ಷ ಮಾಡಿ ಹೈಡ್ರಾಮಾ ಸೃಷ್ಟಿಸಿದ ಘಟನೆ ದುಬೈನಲ್ಲಿ ನಡೆದಿದೆ. MUKA ಬಾಕ್ಸಿಂಗ್‌ನ ಪ್ರೀ-ಫೈಟ್ ವೇಳೆ ಈ ಹೈಡ್ರಾಮಾ ನಡೆದಿದೆ.

ಭಾರತೀಯ ಬಾಕ್ಸರ್, ಸೋಶಿಯಲ್ ಮೀಡಿಯಾ ಸ್ಟಾರ್ ಮನೀಶ್ ಶರ್ಮಾ ವೇದಿಕೆಯಲ್ಲಿ ಪಾಕಿಸ್ತಾನಿ ಎದುರಾಳಿ ರಹೀಮ್ ಪರ್ದೇಸಿಯ ಕಿವಿಗೆ ಹೊಡೆದು ಅದ್ವಾನ ಸೃಷ್ಟಿಸಿದರು. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಪರ ವಿರೋಧಗಳ ಚರ್ಚೆ ನಡೆಯುತ್ತಿದೆ. ಇಬ್ಬರು ಬಾಕ್ಸರ್‍‌ಗಳು ಪ್ರೀ-ಫೈಟ್‌ನಲ್ಲಿ ಭಾಗಿಯಾಗಿದ್ದರು. ವೇದಿಕೆ ಮೇಲೆ ಆಗಿಮಿಸಿದ್ದ ವೇಳೆ ಇಬ್ಬರು ಮುಖಾಮುಖಿ ಆಗಿದ್ದಾರೆ. ಆಗ ಮನೀಶ್ ಪಾಕಿಸ್ತಾನಿ ಬಾಕ್ಸರ್‍‌ನ ಇಯರ್‌ಪೀಸ್‌ಗೆ ಹೊಡೆದಿದ್ದಾರೆ. ಒಂದು ಕ್ಷಣ ಕಾರ್ಯಕ್ರಮದಲ್ಲಿದ್ದವರು ಆಘಾತಕ್ಕೊಳಗಾದರು. ಕೊನೆಗೆ ಪರಿಸ್ಥಿತಿ ಬಿಗಡಾಯಿಸ್ತಿದ್ದಂತೆಯೇ ಭದ್ರತಾ ಸಿಬ್ಬಂದಿ ತಕ್ಷಣವೇ ಇಬ್ಬರನ್ನು ಪಕ್ಕಕ್ಕೆ ಸರಿಸಿದರು.

ಮನೀಶ್ ಶರ್ಮಾ ಯಾರು?

ಮನೀಶ್ ಶರ್ಮಾ ಸೋಶಿಯಲ್ ಮೀಡಿಯಾ ಸ್ಟಾರ್. ಯೂಟ್ಯೂಬ್ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರನ್ನು 'ಹಾಫ್ ಎಂಜಿನಿಯರ್' ಎಂದು ಕರೆಯಲಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಜೊತೆಗೆ ಬಾಕ್ಸಿಂಗ್‌ನಲ್ಲೂ ಹೆಸರು ಮಾಡಿದ್ದಾರೆ. ಬೈ ದಿ ಸೀ -ಮುಕಾ ಬಾಕ್ಸಿಂಗ್‌ನ ಪ್ರಚಾರ ಕಾರ್ಯಕ್ರಮದಲ್ಲಿ ಸಂಭವಿಸಿದೆ. ಫೈಟ್‌ಗೂ ಮೊದಲು ಇಬ್ಬರನ್ನು ಮುಖಾಮುಖಾ ಮಾಡಿಸೋದು ಕಾರ್ಯಕ್ರಮದ ಉದ್ದೇಶ ಆಗಿತ್ತು. ನವೆಂಬರ್ 6 ರಂದು ಇಬ್ಬರು ಬಾಕ್ಸರ್‍‌ಗಳು ಮುಖಾಮುಖಿ ಆಗಲಿದ್ದಾರೆ. ಪಂದ್ಯಕ್ಕೂ ಮುನ್ನವೇ ಇಬ್ಬರ ನಡುವಿನ ಘರ್ಷಣೆ ಎಲ್ಲರ ಗಮನ ಸೆಳೆದಿದೆ.

ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ..

ಈ ವೀಡಿಯೊ ಆನ್‌ಲೈನ್‌ನಲ್ಲಿ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮದೇ ರೀತಿಯಲ್ಲಿ ಅರ್ಥೈಸಿಕೊಂಡು ಕಾಮೆಂಟ್ ಮಾಡುತ್ತಿದ್ದರು. ಒಬ್ಬ ಬಳಕೆದಾರ.. ಅಲ್ಲಿದ್ದ ಅಂಗರಕ್ಷಕ ಏನು ಮಾಡುತ್ತಿದ್ದಾನೆ ಎಂದು ಪ್ರಶ್ನಿಸಿದ್ದಾನೆ.

ಸರ್ಜಿಕಲ್ ಸ್ಟ್ರೈಕ್ - ಭಾರತೀಯ ಪ್ರಭಾವಿ ಬಾಕ್ಸರ್ ಮನೀಶ್ ಶರ್ಮಾ (ಅಕಾ ಹಾಫ್ ಎಂಜಿನಿಯರ್) ಪಾಕಿಸ್ತಾನಿ ಬಾಕ್ಸರ್ ರಹೀಮ್ ಪರದೇಸಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಮತ್ತೊಬ್ಬ ಬಳಕೆದಾರ ಬರೆದಿದ್ದಾರೆ. ಮೂರನೇ ಬಳಕೆದಾರರು ಭಾರತದ ಮಿಲಿಟರಿ ಕಾರ್ಯಾಚರಣೆಯೊಂದಿಗೆ ಹೋಲಿಕೆ ಮಾಡಿ, ಭಾರತೀಯ ಪ್ರಭಾವಿ ಬಾಕ್ಸರ್ ಮನೀಶ್ ಶರ್ಮಾ ತನ್ನ ಬಾಲಿಶ ವರ್ತನೆಗಾಗಿ ಪಾಕಿಸ್ತಾನಿ ಬಾಕ್ಸರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಅದು ನನಗೆ ಸರ್ಜಿಕಲ್ ಸ್ಟ್ರೈಕ್ ಅನ್ನು ತಕ್ಷಣ ನೆನಪಿಸಿತು ಎಂದು ಬರೆದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ತೀರಾ ಹದಗೆಟ್ಟಿದೆ. ಪೆಹಲ್ಗಾಮ್ ದಾಳಿ ಬಳಿಕ ನಡೆದ ಬೆಳವಣಿಗೆಗಳಿಂದಾಗಿ ಸಂಬಂಧ ಬಿಗಡಾಯಿಸಿದೆ. ಇದು ಕ್ರೀಡೆಯ ಮೇಲೂ ಪರಿಣಾಮ ಬೀರಿದೆ. ಭಾರತದ ಕ್ರೀಡಾಪಟುಗಳು ಪಾಕಿಸ್ತಾನಿ ಕ್ರೀಡಾಪಟುಗಳನ್ನ ಮಾತನ್ನಾಡಿಸುವುದು, ಹ್ಯಾಂಡ್‌ ಶೇಕ್ ನಡೆಯುತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾ ಸ್ಟಾರ್‍‌ಗಳ ಬಾಕ್ಸಿಂಗ್‌ ಇನ್ನೊಂದು ಹಂತಕ್ಕೆ ಹೋಗಿದೆ.

PREV
Read more Articles on
click me!

Recommended Stories

ಮಗ ಗೆಳತಿ ಜೊತೆ ಇದ್ದಾಗ 'ಡೆಲಿವರಿ ಬಾಯ್' ಅಪ್ಪ ಎಂಟ್ರಿ; ಹೃದಯ ಗೆದ್ದ ಪುತ್ರ! ಆಗಿದ್ದೇನು?
ಕುರ್ಚಿಯಿಲ್ಲದೇ ಬಿಜೆಪಿ ಮಾಜಿ ಸಂಸದ ಬ್ರಿಜ್‌ಭೂಷಣ್ ಸಿಂಗ್ ತೊಡೆಯ ಮೇಲೆ ಕುಳಿತ ಶಾಸಕಿ..! ವಿಡಿಯೋ ವೈರಲ್