
ಗಾಲ್ಫ್ ಆಟವು ಯಾವಾಗಲೂ ಅದರ ತಂತ್ರ, ಕಠಿಣ ಪರಿಶ್ರಮ ಮತ್ತು ಸ್ಟ್ರಾಟರ್ಜಿಗೆ ಹೆಸರುವಾಸಿಯಾಗಿದೆ. ಆದರೆ ಇತ್ತೀಚೆಗೆ ಕ್ರೀಡಾ ಜಗತ್ತನ್ನು ಅಚ್ಚರಿಗೊಳಿಸಿದ ಒಂದು ಘಟನೆ ಬೆಳಕಿಗೆ ಬಂದಿದೆ. ಒಂದು ಸಣ್ಣ ನೊಣವು ಗಾಲ್ಫ್ ಆಟಗಾರನ ಭವಿಷ್ಯವನ್ನೇ ಬದಲಾಯಿಸಿದ್ದು, ಆತ ಪಂದ್ಯವನ್ನು ಗೆಲ್ಲುವಂತೆ ಮಾಡಿದೆ. ಅಷ್ಟು ಮಾತ್ರವಲ್ಲದೆ 8 ಕೋಟಿ ರೂ.ಗಳ ಬಹುಮಾನದ ಹಣವನ್ನೂ ಗೆಲ್ಲುವಂತೆ ಮಾಡಿದೆ.
ಚೆಂಡನ್ನು ರಂಧ್ರಕ್ಕೆ ಹಾಕಿದ ನೊಣ
ಪಂದ್ಯದ ಸಮಯದಲ್ಲಿ, ಒಬ್ಬ ಗಾಲ್ಫ್ ಆಟಗಾರನು ಒಂದು ಶಾಟ್ ಹೊಡೆದನು, ಆದರೆ ಚೆಂಡು ರಂಧ್ರದಿಂದ ಕೆಲವು ಇಂಚುಗಳಷ್ಟು ದೂರದಲ್ಲಿ ನಿಂತಿತು. ಪ್ರೇಕ್ಷಕರು ಮತ್ತು ಆಟಗಾರರು ಚೆಂಡು ಈಗ ಹೊರಗೆ ಉಳಿಯುತ್ತದೆ ಎಂದು ಭಾವಿಸಿದ್ದರು. ನಂತರ ಇದ್ದಕ್ಕಿದ್ದಂತೆ, ಒಂದು ನೊಣ ಬಂದು ಚೆಂಡಿನ ಮೇಲೆ ಕುಳಿತಿತು. ನೊಣದ ಸ್ವಲ್ಪ ತೂಕ ಮತ್ತು ಚಲನೆಯಿಂದಾಗಿ, ಚೆಂಡು ನಿಧಾನವಾಗಿ ಜಾರಲು ಪ್ರಾರಂಭಿಸಿತು ಮತ್ತು ನೇರವಾಗಿ ರಂಧ್ರಕ್ಕೆ ಬಿದ್ದಿತು. ಅಲ್ಲಿದ್ದ ಎಲ್ಲರೂ ಈ ದೃಶ್ಯವನ್ನು ನೋಡಿ ಆಶ್ಚರ್ಯಚಕಿತರಾದರು. ಗಾಲ್ಫ್ ಆಟಗಾರ ಕೂಡ ನಿರಾಶೆಗೊಂಡಿದ್ದನು. ಆದರೆ ನಿಯಮಗಳ ಪ್ರಕಾರ ಚೆಂಡು ರಂಧ್ರದಲ್ಲಿತ್ತು ಮತ್ತು ಅದನ್ನು ಸ್ಕೋರ್‌ನಲ್ಲಿ ಸೇರಿಸಲಾಯಿತು, ನಂತರ ಗಾಲ್ಫ್ ಆಟಗಾರನ ಅದೃಷ್ಟ ಬದಲಾಯಿತು. ಕೊನೆಗೆ ಗಾಲ್ಫ್ ಆಟಗಾರ ಸಂತೋಷದಿಂದ ಸಲೆಬ್ರೇಟ್ ಮಾಡಲು ಪ್ರಾರಂಭಿಸಿದನು.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಈ ಅಸಾಧಾರಣ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದು, ಜನರು ಇದನ್ನು ಅದೃಷ್ಟ, ಪವಾಡ ಎಂದೇ ಕರೆಯುತ್ತಿದ್ದಾರೆ. ಕೆಲವರು ನೊಣಕ್ಕೂ ಬಹುಮಾನದ ಪಾಲು ಸಿಗಬೇಕು ಎಂದು ತಮಾಷೆ ಮಾಡಿದ್ದಾರೆ. ಏಕೆಂದರೆ ಅದರಿಂದಾಗಿ ಗಾಲ್ಫ್ ಆಟಗಾರ ವಿಜೇತರಾದರೆಂದು. ಈ ವಿಡಿಯೋದ ಸತ್ಯಾಸತ್ಯತೆಯನ್ನು ದೃಢೀಕರಿಸಲು ಸಾಧ್ಯವಾಗದಿದ್ದರೂ, ಇದು ಹೆಚ್ಚಿನ ಗಮನ ಸೆಳೆಯಿತು. ಈ ವಿಡಿಯೋವನ್ನು ಸಾಮಾಜಿಕ ತಾಣ X ನಲ್ಲಿ @ashfaque80035 ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಸುದ್ದಿ ಬರೆಯುವವರೆಗೆ, ಇದನ್ನು 2.5 ಲಕ್ಷ ಜನರು ವೀಕ್ಷಿಸಿದ್ದಾರೆ ಮತ್ತು 1700 ಜನರು ಇಷ್ಟಪಟ್ಟಿದ್ದಾರೆ.
ಚೀನಾದಲ್ಲೂ ನಡೆದಿತ್ತು ಮಾಂತ್ರಿಕ ಘಟನೆ
ಇಂತಹುದೇ ಘಟನೆ ಇತ್ತೀಚೆಗಷ್ಟೇ ನಡೆದಿತ್ತು. ಈ ಮಾಂತ್ರಿಕ ಘಟನೆ ನಡೆದಿರುವುದು ಚೀನಾದಲ್ಲಿ. ಅಲ್ಲಿ ಒರ್ವ ಮಹಿಳೆ ಸರಕುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದಳು. ಆದರೆ ತಾನು ಮನೆಗೆ ಹಿಂದಿರುಗಿದಾಗ ಕೋಟ್ಯಾಧಿಪತಿಯಾಗಿ ಹಿಂತಿರುಗುತ್ತೇನೆಂದು ಸ್ವತಃ ಆಕೆಗೆ ಗೊತ್ತಿರಲಿಲ್ಲ. ಮಹಿಳೆ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮಳೆ ಬರಲು ಪ್ರಾರಂಭಿಸಿತು. ಮಳೆ ಬಂತೆಂದು ಆಕೆ ತಕ್ಷಣ ಅಂಗಡಿಗೆ ಹೋದಳು. ಅಲ್ಲಿ ಆಕೆ ಸಮಯ ಕಳೆಯಲು ಲಾಟರಿ ಟಿಕೆಟ್ ಖರೀದಿಸಿದಳು. ನಂತರ ಏನಾಗುತ್ತೆಂದು ಆಕೆಗೇ ಗೊತ್ತಿರಲಿಲ್ಲ ಬಿಡಿ.
ವರದಿಯ ಪ್ರಕಾರ, ಅದು ಆಗಸ್ಟ್ 8. ನೈಋತ್ಯ ಚೀನಾದ ಯುನ್ನಾನ್ ಪ್ರಾಂತ್ಯದ ಯುಕ್ಸಿಯಲ್ಲಿ ಮಹಿಳೆಯೊಬ್ಬರು ಮಳೆಯಲ್ಲಿ ಸಿಲುಕಿಕೊಂಡರು. ಮಳೆಯಿಂದ ತಪ್ಪಿಸಿಕೊಳ್ಳಲು ಹತ್ತಿರದ ಲಾಟರಿ ಅಂಗಡಿಗೆ ಹೋದಳು. ಅಲ್ಲಿ ಅಂಗಡಿಯವರ ಬಳಿ "ನಿಮ್ಮ ಬಳಿ ಸ್ಕ್ರ್ಯಾಚ್ ಕಾರ್ಡ್‌ಗಳಿವೆಯೇ? ಮಳೆ ನಿಲ್ಲುವವರೆಗೆ, ನಾನು ಸ್ವಲ್ಪ ಆಟವಾಡುತ್ತೇನೆ" ಎಂದಳು.
ನಂತರ ಏನಾಯಿತು...ಆ ಮಹಿಳೆ ಸುಮಾರು 30 ಟಿಕೆಟ್‌ಗಳಿದ್ದ ಒಂದು ಸಂಪೂರ್ಣ ಕಿರುಪುಸ್ತಕವನ್ನು ಖರೀದಿಸಿದಳು. ಪ್ರತಿ ಟಿಕೆಟ್‌ನ ಬೆಲೆ 30 ಯುವಾನ್ (ಸುಮಾರು 250 ರೂ.). ಅಂದರೆ ಅವಳು ಟಿಕೆಟ್‌ಗಳಿಗಾಗಿ ಒಟ್ಟು 900 ಯುವಾನ್ (ಸುಮಾರು 12,500 ರೂ.) ಖರ್ಚು ಮಾಡಿದಳು. ಆದರೆ ಆರನೇ ಟಿಕೆಟ್ ಅನ್ನು ಸ್ಕ್ರಾಚ್ ಮಾಡಿದ ತಕ್ಷಣ ಬಂತು ನೋಡಿ ಅದೃಷ್ಟ . ಹೌದು, ಅವಳು 10 ಲಕ್ಷ ಯುವಾನ್ (ಸುಮಾರು 1.4 ಕೋಟಿ ರೂ. ಅಥವಾ US$ 140,000) ಬಹುಮಾನವನ್ನು ಗೆದ್ದಳು.